ಮದುವೆ ಮಂಟಪದಲ್ಲಿ ಸುನಿ ರಹಸ್ಯ ಬಯಲು – ಕೇಡಿ ಜೈದೇವ್ ಪಾಲಿಕೆ ಬೆಂಕಿಯಾದ ಭೂಮಿಕಾ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮದುವೆ ಆಗುತ್ತಾ?, ಕೇಡಿ ಜೈದೇವ್ ಪ್ಲ್ಯಾನ್ ಪ್ರಕಾರವೇ ಎಲ್ಲಾ ನಡೆಯುತ್ತಾ?, ಸುನಿಯ ಮೋಸ ಮಲ್ಲಿಗೆ ಗೊತ್ತಾಗುವುದೇ ಇಲ್ಲವೇ ಎಂಬ ಪ್ರಶ್ನೆಗಳಿಗೆ ಈ ವಾರ ಉತ್ತರ ಸಿಗಲಿದೆ.
ಇದನ್ನೂ ಓದಿ: ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಸಮಾರಂಭ – ಮುದ್ದಿನ ಮಗಳಿಗೆ ಅಜ್ಜಿಯ ಹೆಸರಿಟ್ಟ ನಟಿ!
ಅಮೃತಧಾರೆ ಸೀರಿಯಲ್‌ನಲ್ಲಿ ಕೇಡಿಗಳಿಗೆ ತಕ್ಕ ಶಾಸ್ತಿಯಾಗುವ ಸಮಯ ಬಂದಿದೆ. ಇದೀಗ ಮಲ್ಲಿ ಮದುವೆ ಮೆಹಂದಿ ಶಾಸ್ತ್ರದವರೆಗೆ ಬಂದು ನಿಂತಿದೆ. ಆದರೆ, ಕೇಡಿಗಳ ಮುಖವಾಡ ಕೊನೇ ಕ್ಷಣದಲ್ಲಿ ಬಯಲಾಗಿದೆ. ಹೀಗಾಗಿ ಅಮೃತಧಾರೆಯಲ್ಲಿ ಅಸಲಿ ಆಟ ಶುರುವಾಗಿದೆ. ಸುನಿಲ್ ಯಾರು ಅನ್ನೋ ಸತ್ಯ ಭೂಮಿಕಾ ಮತ್ತು ಗೌತಮ್ ಎದುರು ಬಯಲಾಗಿದೆ. ಸುನಿಲ್ನನ್ನು ನೋಡಿದ ಪಾರ್ಥ ಈತ ಜೈದೇವನ ಶಿಷ್ಯ ಎಂದು ಅಣ್ಣನ ಬಳಿ ಹೇಳುತ್ತಾನೆ. ಇದರಿಂದ ಗೌತಮ್‌ಗೆ ಇಲ್ಲೇನೋ ಆಗಬಾರದ್ದು ಆಗುತ್ತಿದೆ ಎಂಬ ಭಾವನೆ ಬರುತ್ತದೆ. ತಕ್ಷಣವೇ ಗೌತಮ್ ಅಲರ್ಟ್ ಆಗುತ್ತಾನೆ. ಮತ್ತೊಂದೆಡೆ ಮಗ ಆಕಾಶ್ ಸುನೀಲ್ನ ಅಸಲಿಯತ್ತನ್ನು ಪತ್ತೆ ಮಾಡಿ ಅಮ್ಮನಿಗೆ ತಿಳಿಸಿದ್ದಾನೆ. ಸುನಿಲ್ ಮೋಸದಾಟ ತಿಳಿದು ಭೂಮಿಕಾ ಬೆಂಕಿಯಾಗಿದ್ದಾಳೆ. ಸುನಿಲ್ ಮುಂದೆ ಬಿಟ್ಟು ಹಿಂದಿನಿಂದ ಮಲ್ಲಿ ಬದುಕನ್ನು ಹಾಳು ಮಾಡಲು ನೋಡಿದ ಜೈದೇವನ ಬಳಿ ಹೋಗಿ ಭೂಮಿಕಾ ನೀನೊಬ್ಬ ಗಂಡಸೇ ಅಲ್ಲ ಎಂದು ಹೇಳಿದ್ದಾಳೆ.
ಇನ್ನೊಬ್ಬ ಗಂಡಸನ್ನು ಹೆಂಡತಿಯ ಹಿಂದೆ ಬಿಟ್ಟವ ನಿನ್ನಂಥವರನ್ನು ಗಂಡಸು ಅನ್ನುವುದಿಲ್ಲ ಎಂದು ಕೆಂಡ ಕಾರಿದ್ದಾಳೆ. ಜೈದೇವ ಎದುರಾಡಲು ಹೋದಾಗ, ಏ.. ನೀನೇನು ಅವಳ ಮದುವೆ ನಿಲ್ಲಿಸುತ್ತಿ, ನಾನೇ ನಿಲ್ಲಿಸುತ್ತೇನೆ ಎಂದು ಹೋಗಿದ್ದಾಳೆ. ಜೈದೇವನ ಕೆಟ್ಟ ದಿನ ಅಂತೂ ಬಂದಾಯ್ತು. ಆದರೆ ಮಲ್ಲಿಯ ಗತಿ ಏನು? ಸುನಿಲ್ ಈಗಾದ್ರೂ ಬಾಯಿ ಬಿಟ್ಟು ನಾನು ಮಲ್ಲಿಯನ್ನು ನಿಜವಾಗಿಯೂ ಪ್ರೀತಿಸ್ತೇನೆ ಎಂದು ಹೇಳ್ತಾನಾ? ಒಂದು ವೇಳೆ ಈ ಮದುವೆ ನಿಂತರೆ ಮಲ್ಲಿಯ ಸ್ಥಿತಿ ಏನು ಎನ್ನುವುದು ಸದ್ಯಕ್ಕಿರುವ ಕುತೂಹಲ.

ನೋಡಿರಿ

