ಲಕ್ನೋ ತಂಡಕ್ಕೆ ಪ್ಲೇ ಆಫ್ ರೇಸ್‌ನಲ್ಲಿ ಗೆಲುವು ಸಿಗುತ್ತಾ?- ನಾಯಕ ಕೆ.ಎಲ್ ರಾಹುಲ್ ಸಾಮರ್ಥ್ಯವೇ ಪ್ಲಸ್ ಆಗುತ್ತಾ?

ಲಕ್ನೋ ತಂಡಕ್ಕೆ ಪ್ಲೇ ಆಫ್ ರೇಸ್‌ನಲ್ಲಿ ಗೆಲುವು ಸಿಗುತ್ತಾ?- ನಾಯಕ ಕೆ.ಎಲ್ ರಾಹುಲ್ ಸಾಮರ್ಥ್ಯವೇ ಪ್ಲಸ್ ಆಗುತ್ತಾ?

ಪ್ಲೇ-ಆಫ್‌ ರೇಸ್‌ನಲ್ಲಿ ಸಾಕಷ್ಟು ಪೈಪೋಟಿ ನೀಡುತ್ತಿರುವ 2 ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ಪರಸ್ಪರ ಸೆಣಸಾಡಲಿವೆ. ಎರಡೂ ತಂಡಕ್ಕೂ ಈ ಪಂದ್ಯ ನಿರ್ಣಾಯಕವೆನಿಸಿದೆ. ಅದ್ರಲ್ಲೂ ಲಕ್ನೋ ಟೀಮ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈಗಾಗಲೇ ಲಕ್ನೋ 12ರಲ್ಲಿ 6 ಪಂದ್ಯ ಗೆದ್ದು 12 ಅಂಕ ಸಂಪಾದಿಸಿದೆ. ಉಳಿದಿರುವ 2 ಪಂದ್ಯ ಗೆದ್ದರೆ ನಾಕೌಟ್‌ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. 1 ಪಂದ್ಯ ಸೋತರೂ ತಂಡಕ್ಕೆ ಹಿನ್ನಡೆಯಾಗಲಿದೆ.

ಇದನ್ನೂ ಓದಿ: ಡಿಸಿ ವಿರುದ್ಧದ ಪಂದ್ಯ ಕೆ.ಎಲ್ ರಾಹುಲ್ ಪಾಲಿಗೆ ಮಹತ್ವ ಯಾಕೆ? – ಲಕ್ನೋ ಮಾಲೀಕರ ವಿರುದ್ಧ ಕನ್ನಡಿಗನ ಹಠ?

ಕೊಲ್ಕತ್ತಾ ನೈಟ್ ರೈಡರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 18 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಮತ್ತೊಂದೆಡೆ 12 ಪಂದ್ಯಗಳ ಪೈಕಿ 8 ಪಂದ್ಯ ಗೆದ್ದಿರುವ ಆರ್​ಆರ್ ಎರಡನೇ ಸ್ಥಾನದಲ್ಲಿದೆ. ಉಳಿದಂತೆ 2 ಸ್ಥಾನಗಳಿಗಾಗಿ ತೀವ್ರ ಜಿದ್ದಾಜಿದ್ದಿನ ಹಣಾಹಣಿ ನಡೆಯುತ್ತಿದೆ. ಸಿಎಸ್​ಕೆ ಮೂರು, ಎಸ್​ಆರ್​ಹೆಚ್ ನಾಲ್ಕನೇ ಸ್ಥಾನದಲ್ಲಿದ್ರೆ ಆರ್​ಸಿಬಿ 5 ಪ್ಲೇಸ್​ನಲ್ಲಿದೆ. ಆರನೇ ಸ್ಥಾನದಲ್ಲಿ ಡಿಸಿ ಇದ್ದು ಏಳನೇ ಸ್ಥಾನದಲ್ಲಿ ಎಲ್​ಎಸ್​ಜಿ ಇದೆ. ಆರು ಮತ್ತು ಏಳನೇ ಸ್ಥಾನದಲ್ಲಿರುವ ಡಿಸಿ ಮತ್ತು ಎಲ್​ಎಸ್​ಜಿ ಟೀಮ್​ಗಳಿಗೆ ಈ ಮ್ಯಾಚ್ ತುಂಬಾನೇ ಮಹತ್ವದ್ದಾಗಿದೆ. ಲಕ್ನೋ ತಂಡ ಕೂಡ ಪ್ಲೇ ಆಫ್​ ರೇಸ್​ನಲ್ಲಿದ್ದು ಈಗಾಗ್ಲೇ 12 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಲಕ್ನೋ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ 16 ಅಂಕಗಳ ಮೂಲಕ ಪ್ಲೇಆಫ್​ಗೇರುವ ಸಾದ್ಯತೆ ಇರಲಿದೆ. ಡಿಸಿಗೂ ಕೂಡ ಪ್ಲೇಆಫ್​ ಗೇರಲು ಲಕ್ನೋ ಮಣಿಸಬೇಕಾದ ಅನಿವಾರ್ಯತೆ ಇದೆ.

ಲಕ್ನೋ ತಂಡದ ನಾಯಕನಾಗಿರುವ ಕೆ.ಎಲ್ ರಾಹುಲ್ ಈ ಬಾರಿ 12 ಪಂದ್ಯಗಳಿಂದ 136ರ ಸ್ಟ್ರೈಕ್ ರೇಟ್​ನಲ್ಲಿ 460 ರನ್ ಕಲೆ ಹಾಕಿದ್ದಾರೆ. ಆದ್ರೆ ಇಷ್ಟು ದಿನ ತಂಡಕ್ಕಾಗಿ ಆಡಿದ್ದ ರಾಹುಲ್​ಗೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ತನ್ನ ಸಾಮರ್ಥ್ಯವನ್ನ ತೋರಿಸಬೇಕಾದ ಅನಿವಾರ್ಯತೆಯಲ್ಲಿದೆ. ಹೀಗಾಗಿ ಈ ಚಾಲೆಂಜ್ ಅನ್ನ ರಾಹುಲ್ ಹೇಗೆ ಸ್ವೀಕರಿಸ್ತಾರೆ. ತಂಡವನ್ನ ಗೆಲ್ಲಿಸೋದ್ರ ಜೊತೆಗೆ ತನ್ನನ್ನ ತಾನು ಪ್ರೂವ್ ಮಾಡಿಕೊಳ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.

Sulekha