ವಿಶ್ವಕಪ್ ಗೆದ್ದರೆ ಕೊಹ್ಲಿ ನಿವೃತ್ತಿ ? – ವಿರಾಟ್ ಬಗ್ಗೆ ಆಪ್ತ ಮಾಜಿ ಕ್ರಿಕೆಟರ್ ಎಬಿಡಿ ವಿಲಿಯರ್ಸ್ ಹೀಗೆ ಹೇಳಿದ್ಯಾಕೆ?

ವಿಶ್ವಕಪ್ ಗೆದ್ದರೆ ಕೊಹ್ಲಿ ನಿವೃತ್ತಿ ? – ವಿರಾಟ್ ಬಗ್ಗೆ ಆಪ್ತ ಮಾಜಿ ಕ್ರಿಕೆಟರ್ ಎಬಿಡಿ ವಿಲಿಯರ್ಸ್ ಹೀಗೆ ಹೇಳಿದ್ಯಾಕೆ?

ಟೀಮ್ ಇಂಡಿಯಾ ತನ್ನ ತವರು ನೆಲದಲ್ಲಿ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಕೂಡಾ ಉತ್ತಮ ಲಯದಲ್ಲಿದ್ದಾರೆ. ಹೀಗಿರುವಾಗ ಕೊಹ್ಲಿ ಆಪ್ತ ಎನಿಸಿಕೊಂಡಿರುವ ಮಿ.360 ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅವರು ಕೊಹ್ಲಿ ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದು ಕೊಹ್ಲಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ನೇಪಾಳ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಟೀಂ ಇಂಡಿಯಾ – ಪದಕ ತೊಡಿಸಿದ ವಿರಾಟ್ ಕೊಹ್ಲಿ!

ಈ ಬಾರಿ ವರ್ಲ್ಡ್​​ಕಪ್​ ಗೆದ್ದರೆ ಏಕದಿನ ಕ್ರಿಕೆಟ್​​ನಿಂದ ವಿರಾಟ್​ ಕೊಹ್ಲಿ ನಿವೃತ್ತಿಯಾಗಲು ಒಳ್ಳೆಯ ಟೈಮ್ ಅಂತಾ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ. ಮುಂದಿನ ವಿಶ್ವಕಪ್​ನಲ್ಲಿ ಕೊಹ್ಲಿ ಆಡುವುದು ಕಷ್ಟ. ಒಂದು ವೇಳೆ 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ವರ್ಲ್ಡ್​ಕಪ್​ನಲ್ಲಿ ಆಡುವ ಗುರಿಯನ್ನ ಕೊಹ್ಲಿ ಹೊಂದಿಲ್ಲ. ಈ ಬಾರಿ ವಿಶ್ವಕಪ್​​ ಗೆದ್ದಿದ್ದೇ ಆದಲ್ಲಿ, ತಮ್ಮ ಕೆರಿಯರ್​​ ಪೀಕ್​​ನಲ್ಲಿರೋವಾಗ್ಲೇ ಏಕದಿನ ಕ್ರಿಕೆಟ್​​ಗೆ ರಿಟೈರ್​ಮೆಂಟ್​ ಘೋಷಿಸಬಹುದು ಅಂತಾ ಎಬಿಡಿ ವಿಲಿಯರ್ಸ್​ ಅಭಿಪ್ರಾಯ ಪಟ್ಟಿದ್ದಾರೆ.

ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ, ವಿರಾಟ್‌ಗೆ ಏಕದಿನ ಮತ್ತು ಟಿ20 ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯ ಸಿಗುವುದಿವಿಲ್ಲ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮುಂದಿನ ಕೆಲವು ವರ್ಷಗಳವರೆಗೆ ಟೆಸ್ಟ್ ಕ್ರಿಕೆಟ್ ಮತ್ತು ಐಪಿಎಲ್ ಆಡಬಹುದು ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 47 ಶತಕ ಬಾರಿಸಿದ್ದಾರೆ. ಇನ್ನು 3 ಶತಕಗಳಾದ್ರೆ ಸಚಿನ್​ ತೆಂಡೂಲ್ಕರ್​ ಹೆಸರಲ್ಲಿರುವ ದಾಖಲೆಯನ್ನೂ ಬ್ರೇಕ್​ ಮಾಡಿದಂತಾಗುತ್ತೆ. ವಿಶ್ವಕಪ್​​ ಗೆದ್ದು ಏಕದಿನ ಕ್ರಿಕೆಟ್​​ನಿಂದ ರಿಟೈರ್ ಆದ್ರೆ, ನಂತರ ಟೆಸ್ಟ್​ ಕ್ರಿಕೆಟ್​ನಲ್ಲಿ ಕಂಟಿನ್ಯೂ ಆಗಬಹುದು. ಜೊತೆಗೆ ಕೊಹ್ಲಿ ಇದುವರೆಗೂ ಟಿ-20 ವರ್ಲ್ಡ್​​ಕಪ್ ಗೆದ್ದಿಲ್ಲ. 2024ರಲ್ಲಿ ನಡೆಯುವ ಟಿ-20 ವಿಶ್ವಕಪ್​ನಲ್ಲಿ ಕೂಡ ಆಡಬಹುದು ಅನ್ನೋ ಬಗ್ಗೆಯೂ ಒಂದಷ್ಟು ಚರ್ಚೆಗಳಾಗುತ್ತಿವೆ.

 

Sulekha