ವೆಂಕಟೇಶ್ ಅಯ್ಯರ್ ಗೆ KKR ಗೇಟ್ ಪಾಸ್ – ₹23.50 ಕೋಟಿ.. RCB ಜಸ್ಟ್ ಮಿಸ್!
ಯಾವ ತಂಡ ಸೇರ್ತಾರೆ ದುಬಾರಿ ಸ್ಟಾರ್?

18ನೇ ಸೀಸನ್ ಐಪಿಎಲ್ಗೂ ಮುನ್ನ ವೆಂಕಟೇಶ್ ಅಯ್ಯರ್ ಮೇಲೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಹಣದ ರಾಶಿಯನ್ನೇ ಸುರಿದಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 23.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಅಷ್ಟೊಂದು ಹಣ ಕೊಟ್ಟ ಮೇಲೆ ಉತ್ತಮ ಪ್ರದರ್ಶನ ಬರುತ್ತೆ ಅನ್ನೋದು ಫ್ರಾಂಚೈಸಿ ನಿರೀಕ್ಷೆಯಾಗಿತ್ತು. ಆದ್ರೆ ಅಯ್ಯರ್ ಕೆಕೆಆರ್ ಪರ 11 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದು ಕೇವಲ 142 ರನ್ಗಳನ್ನಷ್ಟೇ ಕಲೆ ಹಾಕಿದ್ರು. ತಂಡದ ಪರ ಬೇರೆ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಅಂತಿಮವಾಗಿ ತಂಡ 8ನೇ ಸ್ಥಾನದ ಮೂಲಕ ಟೂರ್ನಿ ಮುಗಿಸಿತ್ತು. 2024ರಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ಇದೀಗ 2026ರ ಐಪಿಎಲ್ಗೆ ಮತ್ತೊಮ್ಮೆ ಸೂಪರ್ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡೋಕೆ ಬಿಗ್ ಡಿಸಿಷನ್ಸ್ ತಗೊಳ್ತಿದೆ. ಅದ್ರಲ್ಲಿ ವೆಂಕಟೇಶ್ ಅಯ್ಯರ್ಗೆ ಗೇಟ್ ಪಾಸ್ ಕೂಡ ಒಂದು.
ಇದನ್ನೂ ಓದಿ : ಇಂಡಿಯಾ-ಪಾಕ್ ಪಂದ್ಯ ನಡೆಯುತ್ತಾ – 2ನೇ ಆವೃತ್ತಿ ಏಷ್ಯಾಕಪ್ ಬಹಿಷ್ಕರಿಸಿದ್ದೇಕೆ ಭಾರತ?
ಕಳೆದ ನವೆಂಬರ್ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಸಂಭಾವನೆ ಮೂಲಕ ಹೆಚ್ಚು ಸೌಂಡ್ ಮಾಡಿದ್ದು ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್. ಪಂತ್ರನ್ನ ಲಕ್ನೋ ಸೂಪರ್ ಜೇಂಟ್ಸ್ 27 ಕೋಟಿ ರೂಪಾಯಿಗೆ ಖರೀದಿ ಮಾಡಿದ್ರೆ ಶ್ರೇಯಸ್ ಮೇಲೆ ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ಬಿಡ್ ಮಾಡಿತ್ತು. ಇವ್ರ ಬಳಿಕ ವೆಂಕಟೇಶ್ ಅಯ್ಯರ್ ಕೂಡ ಸಾಕಷ್ಟು ಸುದ್ದಿಯಲ್ಲಿದ್ರು. ಯಾಕಂದ್ರೆ ವೆಂಕಿ ಮೇಲೆ ಕೆಕೆಆರ್ 23.75 ಕೋಟಿ ರೂಪಾಯಿ ಸುರಿದಿತ್ತು.. ಹೀಗೆ ಹೆಚ್ಚು ಮೊತ್ತ ಪಡೆದು ಕೊಲ್ಕತ್ತಾ ಸೇರಿರೋ ವೆಂಕಿ ಕಂಪ್ಲೀಟ್ ಫ್ಲ್ಯಾಪ್ ಆಗಿದ್ದಾರೆ. ಅವ್ರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ 2026ರ ಐಪಿಎಲ್ ಗೂ ಮುನ್ನ ಟ್ರೇಡ್ ವಿಂಡೋ ಮೂಲಕ ಅವ್ರನ್ನ ಹೊರಗೆ ಕಳಿಸೋಕೆ ಕೆಕೆಆರ್ ಪ್ಲ್ಯಾನ್ನಲ್ಲಿದೆ. ವೆಂಕಿ ಹೊರಗೆ ಬಂದ್ರೆ ಕೆಕೆಆರ್ಗೆ ದೊಡ್ಡ ಮೊತ್ತದಲ್ಲಿ ಹಣ ಉಳಿತಾಯ ಆಗುತ್ತೆ. ನಂತ್ರ ಅದನ್ನ ಮತ್ತೊಬ್ಬ ಸ್ಟಾರ್ ಪ್ಲೇಯರ್ ಮೇಲೆ ಇನ್ವೆಸ್ಟ್ ಮಾಡೋದು ಫ್ರಾಂಚೈಸಿಯ ಲೆಕ್ಕಾಚಾರ.
ಇಲ್ಲಿ ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ ಆರ್ಸಿಬಿ ಫ್ರಾಂಚೈಸಿ ಇದೇ ವೆಂಕಿ ಮೇಲೆ ಬರೋಬ್ಬರಿ 23.50 ಕೋಟಿ ರೂಪಾಯಿವರೆಗೂ ಬಿಡ್ ಮಾಡಿತ್ತು. ವೆಂಕಟೇಶ್ ಅಯ್ಯರ್ ಹೆಸರು ಹರಾಜಿಗೆ ಕರೆದಾಗ ಆರ್ಸಿಬಿ ಫ್ರಾಂಚೈಸಿಯು ಸಖತ್ ಪೈಪೋಟಿ ನೀಡಿತ್ತು. 23.50 ಕೋಟಿ ರೂಪಾಯಿಗಳವರೆಗೆ ಹರಾಜು ಕರೆದಿತ್ತು. ಈ ಹರಾಜಿನಲ್ಲಿ ಆರ್ಸಿಬಿ ಹಾಗೂ ಕೋಲ್ಕತ್ತಾ ನಡುವೆ ಭಾರೀ ಬಿಡ್ ನಡೆದಿತ್ತು. ಆರ್ ಸಿಬಿ ಕರೆದ ಬಿಡ್ ಮೇಲೆ ಕೆಕೆಆರ್ ಇನ್ನು 25 ಲಕ್ಷ ಹೆಚ್ಚು ಮಾಡಿ ಹರಾಜು ಕರೆಯಿತು. ಈ ವೇಳೆ ಆರ್ಸಿಬಿ ಹಿಂದೆ ಸರಿದ ಕಾರಣ ವೆಂಕಟೇಶ್ ಅಯ್ಯರ್ಗೆ ಒಟ್ಟು 23.75 ಕೋಟಿ ರೂಪಾಯಿಗಳನ್ನು ನೀಡಿ ಕೋಲ್ಕತ್ತಾ ಖರೀದಿ ಮಾಡಿತು. ಇದರಿಂದ ವೆಂಕಟೇಶ್ ಅಯ್ಯರ್ ಮತ್ತೆ ತಮ್ಮ ತಂಡವನ್ನೇ ಸೇರಿಕೊಂಡಿದ್ರು. ಆದ್ರೆ ಇಷ್ಟೊಂದು ಹಣ ಪಡೆದ್ರೂ ಅವ್ರಿಂದ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ಬರಲಿಲ್ಲ. ಹೀಗಾಗಿ ನೆಕ್ಸ್ಟ್ ಸೀಸನ್ಗೆ ಬೇರೆ ಫ್ರಾಂಚೈಸಿಯ ಜೆರ್ಸಿ ತೊಟ್ಟು ಕಣಕ್ಕಿಳಿಯೋ ಸಾಧ್ಯತೆ ಇದೆ.
ಇನ್ನು ವೆಂಕಟೇಶ್ ಅಯ್ಯರ್ ಐಪಿಎಲ್ ಜರ್ನಿ ನೋಡೋದಾದ್ರೆ ಸೀಮ್-ಬೌಲಿಂಗ್ ಆಲ್‌ರೌಂಡರ್ ಆಗಿರುವ ವೆಂಕಟೇಶ್ ಅಯ್ಯರ್ 2021 ರಿಂದ ಕೆಕೆಆರ್‌ನಲ್ಲಿದ್ದಾರೆ. ಇಲ್ಲಿಯವರೆಗೆ 62 ಐಪಿಎಲ್ ಪಂದ್ಯಗಳಿಂದ 137.32 ಸ್ಟ್ರೈಕ್ ರೇಟ್‌ನಲ್ಲಿ 1,468 ರನ್ ಗಳಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಮತ್ತು 12 ಅರ್ಧಶತಕಗಳು ಸೇರಿವೆ. ಅಯ್ಯರ್ 2024 ಮತ್ತು 2023 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದ್ರೆ ಲಾಸ್ಟ್ ಸೀಸನ್ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ಬಂದಿಲ್ಲ.

ನೋಡಿರಿ

