ಪಂಜಾಬ್ ವಿರುದ್ಧ ಕನ್ನಡಿಗ ಕೆ.ಎಲ್ ಆಗ್ತಾರಾ ಕಿಂಗ್? – ಗೆದ್ದರೂ ಡಿಸಿಗೆ ಪ್ಲೇಆಫ್ ಎಂಟ್ರಿ ಕಷ್ಟ

ಪಂಜಾಬ್ ವಿರುದ್ಧ ಕನ್ನಡಿಗ ಕೆ.ಎಲ್ ಆಗ್ತಾರಾ ಕಿಂಗ್? – ಗೆದ್ದರೂ ಡಿಸಿಗೆ ಪ್ಲೇಆಫ್ ಎಂಟ್ರಿ ಕಷ್ಟ

ಪಂಜಾಬ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಿನ ಕಾದಾಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ಗೆ ಹತ್ತರವಾಗುವ ಕನಸು ಉಭಯ ತಂಡಗಳದ್ದಾಗಿದೆ. ಆದರೆ, ಡಿಸಿಗೆ ಗೆಲುವು ಸಿಕ್ಕರೂ ಪ್ಲೇಆಫ್ ಎಂಟ್ರಿ ಕಷ್ಟ ಅಂತಾನೇ ಹೇಳಬಹುದು.

ಇದನ್ನೂ ಓದಿ:ಅರ್ಧಶತಕ ಸಿಡಿಸಿ ಚೀಟಿ ತೋರಿಸಿದ ಉರ್ವಿಲ್ ಪಟೇಲ್- ತಂದೆಯ ಕನಸು ನನಸು ಮಾಡಿದ ಚೆನ್ನೈ ಆಟಗಾರ

ಪಂಜಾಬ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಧರ್ಮಶಾಲಾದಲ್ಲಿ ಸೆಣಸಾಟ ನಡೆಸಲಿವೆ. ಉಭಯ ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲಿನ ನಿರಾಶೆ ಎದುರಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಕೆಆರ್ ವಿರುದ್ಧ ಸೋಲಿನ ಆಘಾತ ಅನುಭವಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕರಾಗಿ ಪತುಮ್ ನಿಸ್ಸಾಂಕ ಹಾಗೂ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ. ಇವರಿಬ್ಬರು ಜೊತೆಯಾಟ ಆಡಿದರೆ ಮಾತ್ರ ಡಿಸಿ ತಂಡ ಉತ್ತಮ ಸ್ಕೋರ್ ಕಲೆ ಹಾಕಬಹುದು. ಇತ್ತೀಚಿನ ಪಂದ್ಯಗಳಲ್ಲಿ ಡಿಸಿ ಪಟಪಟನೇ ವಿಕೆಟ್ ಕಳೆದುಕೊಂಡಿದ್ದೇ ಜಾಸ್ತಿ. ಆರಂಭಿಕರು ಅಬ್ಬರಿಸಿದರೆ ಮಾತ್ರ ಡಿಸಿ ತಂಡ ಗೆಲುವು ಸಾಧಿಸಬಹುದು. ಕೆಎಲ್ ರಾಹುಲ್ ಮತ್ತೆ ಲಯಕ್ಕೆ ಮರಳುವುದು ಅವಶ್ಯಕವಾಗಿದೆ. ಮಧ್ಯದ ಕ್ರಮಾಂಕದಲ್ಲಿ ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟನ್‌ ಸ್ಟಬ್ಸ್‌, ಆಶುತೋಶ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ವಿಭಾಗವನ್ನು ಅನುಭವಿ ಮಿಚೆಲ್‌ ಸ್ಟಾರ್ಕ್‌ ಮುನ್ನಡೆಸಲಿದ್ದಾರೆ. ಇವರಿಗೆ ಲುಂಗಿ ಎನ್‌ಗಿಡಿ, ಮುಕೇಶ್ ಕುಮಾರ್ ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ. ಸ್ಪಿನ್ ಬೌಲಿಂಗ್ ಭಾರವನ್ನು ಅಕ್ಷರ್ ಪಟೇಲ್‌, ಕುಲ್‌ದೀಪ್ ಯಾದವ್ ಹೊರಲಿದ್ದಾರೆ. ಕುಲ್‌ದೀಪ್‌ ಕೆಲವು ಪಂದ್ಯಗಳಲ್ಲಿ ಬಿಗುವಿನ ದಾಳಿ ನಡೆಸುವಲ್ಲಿ ವಿಫಲವಾಗಿದ್ದು, ಒತ್ತಡದಲ್ಲಿದ್ದಾರೆ.

ಮತ್ತೊಂದೆಡೆ ಶ್ರೇಯಸ್ ಪಡೆಗೂ ಡಿಸಿ ವಿರುದ್ಧ ಗೆಲುವು ಅನಿವಾರ್ಯವಾಗಿದೆ.

Sulekha