ಗಂಭೀರ್ ಮಾನ ಮತ್ತೆ ಹರಾಜು -ರಾತ್ರೋರಾತ್ರಿ ಜಾಗ ಬೇಡಿದ ರಿಷಭ್

ಗಂಭೀರ್ ಮಾನ ಮತ್ತೆ ಹರಾಜು -ರಾತ್ರೋರಾತ್ರಿ ಜಾಗ ಬೇಡಿದ ರಿಷಭ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಸ್ಟಾರ್​ ವಿಕೆಟ್​ ಕೀಪರ್​ ಮತ್ತು ಬ್ಯಾಟರ್​ ರಿಷಭ್​ ಪಂತ್​ ತಡರಾತ್ರಿ ಮಾಡಿರುವ ಎಕ್ಸ್ ಪೋಸ್ಟ್​​ ಸಂಚಲನ ಸೃಷ್ಟಿಸಿದೆ. ರಿಷಭ್ ಪಂತ್ ಮನೆ ಕಟ್ಟಲು ಭೂಮಿ ಹಂಚಿಕೆ ಮಾಡುವಂತೆ ಕೋರಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸೂಕ್ತವಾದ, ವಿಶಾಲವಾದ ಭೂಮಿಯನ್ನು ಹುಡುಕಲು ನಾನು ಪ್ರಯತ್ನಿಸುತ್ತಿದ್ದೇನೆ, ಆದರೆ ನನಗೆ ಇನ್ನೂ ಸರಿಯಾದ ಭೂಮಿ ಸಿಕ್ಕಿಲ್ಲ. ಸರ್ಕಾರದಿಂದ ಕೊಡಿ ಎಂದು ಮನವಿ ಮಾಡಿದ್ದಾರೆ.

ಪಂತ್‌ ಪೋಸ್ಟ್‌ ಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ರಿಪ್ಲೈ ಮಾಡಿದ್ದಾರೆ. ರಿಷಭ್ ಪಂತ್, ನೀವು ಉತ್ತರಾಖಂಡ ರಾಜ್ಯಕ್ಕೆ ಹೆಮ್ಮೆ ತಂದಿದ್ದೀರಿ ನಿಮ್ಮ ಅದ್ಭುತ ಪ್ರದರ್ಶನ ಮತ್ತು ವಿಜಯಗಳ ಮೂಲಕ ನೀವು ‘ದೇವಭೂಮಿ’ಯ ಜಾಗತಿಕ ಖ್ಯಾತಿಯನ್ನು ಹೆಚ್ಚಿಸಿದ್ದೀರಿ. ಮಾತೃಭೂಮಿಯ ಮೇಲಿನ ನಿಮ್ಮ ಪ್ರೀತಿ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ನಿಮ್ಮ ಬಯಕೆ ನಿಜಕ್ಕೂ ಶ್ಲಾಘನೀಯ. ನಿಮ್ಮ ವಿಷಯದ ಕುರಿತು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಅವರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಕನ್ನಡಿಗನ ಆಸರೆ – ಸೆಂಚುರಿ ಸಿಡಿಸಿ ಖದರ್ ತೋರಿಸಿದ ಪಡಿಕ್ಕಲ್

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತನ್ನ ಕಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಶ್ರೀಲಂಕಾ ಮತ್ತು ಭಾರತ ನಡುವಿನ ಮುಂಬರುವ ಟೆಸ್ಟ್ ಸರಣಿಗೆ ಪ್ರೇಕ್ಷಕರ ಪ್ರವೇಶ ಉಚಿತವಾಗಿರುತ್ತದೆ ಎಂದು ಘೋಷಿಸಲು ಶ್ರೀಲಂಕಾ ಕ್ರಿಕೆಟ್ ಬಯಸುತ್ತದೆ ಎಂದು ಘೋಷಿಸಿದ್ದಾರೆ. ಮೊದಲನೇ ಪಂದ್ಯ ಆಗಸ್ಟ್‌ 15 ರಂದು ಗಾಲೆಯಲ್ಲಿ ಆರಂಭವಾದರೆ, ಎರಡನೇ ಪಂದ್ಯ ರಾಜಧಾನಿ ಕೊಲಂಬೊದಲ್ಲಿ ಆಗಸ್ಟ್‌ 23 ರಂದು ಆರಂಭವಾಗಲಿದೆ. ಎರಡು ಪಂದ್ಯಕ್ಕೂ ಉಚಿತ ಪ್ರವೇಶವನ್ನ ಲಂಕಾ ಕ್ರಿಕೆಟ್ ಘೋಷಿಸಿದೆ.

ಟೀಂ ಇಂಡಿಯಾ ಬೌಲರ್‌ಗಳು ಕೋಚ್ ಗೌತಮ್ ಗಂಭೀರ್ ಮಾನ ಮತ್ತೆ ತೆಗೆದಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗ್ತಿದೆ.  ‘ಆ.15ನೇ ತಾರೀಖು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದೇವೆ. ಎಲ್ಲದ್ದಕ್ಕೂ ಉತ್ತರ ಕಂಡುಕೊಂಡಿದ್ದೇವೆ’ ಎಂದು ಗಂಭೀರ್‌ ಲಂಕಾ ಪ್ರವಾಸದ ಆರಂಭದಲ್ಲಿ ಹೇಳಿದ್ದರು. ಆದ್ರೆ ಟೀಂ ಇಂಡಿಯಾ ಆಟಗಾರರು ಲಂಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಎಡವಿದ್ದು, ಲಂಕಾಗೆ ರನ್‌ ಬಿಟ್ಟು ಕೊಟ್ಟಿದ್ದಾರೆ. ಕಳಪೆ ಫೀಲ್ಡಿಂಗ್ ಮಾಡಿದ್ದಾರೆ. ಹೀಗಾಗಿ ಗಂಭೀರ್ ಅವರೇ ಇದೇನಾ ನಿಮ್ಮ ಉತ್ತರ, ನಿಮ್ಮ ಮಾನ ಬೌಲರ್‌ ತೆೆೆಗೆದಿದ್ದಾರೆ ಅಂತ ಟ್ರೋಲ್ ಮಾಡುತ್ತಿದ್ದಾರೆ.

ಕೊಲಂಬೋದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್  ಸೆಂಚುರಿ ಸಿಡಿಸಿ ಮಿಂಚಿದ್ದಾರೆ.  ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ ಮುನ್ನವೇ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್ ಹೊಡಿಬಡಿ ಆಟವಾಡಿ 121 ಎಸೆತದಲ್ಲಿ ಸೆಂಚುರಿ ಬಾರಿಸಿ ಟೆಸ್ಟ್‌ಗೆ ನಾನು ಸಿದ್ದ ಅನ್ನೋದ್ದನ್ನ ತೋರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡವನ್ನು ಸೇರಿಕೊಂಡಿದ್ದಾರೆ.  ಐಪಿಎಲ್‌ಗೂ ಗುಡ್‌ಬಾಯಿ ಹೇಳಿರುವುದ್ದರಿಂದ ಕೆಕೆಆರ್‌ ಹೊಸ ನಾಯಕನ ಹುಡುಕಾಟದಲ್ಲಿದೆ.

 ರಾಷ್ಟ್ರೀಯ ತಂಡದಿಂದ ಸತತವಾಗಿ ಕಡೆಗಣಿಸಲ್ಪಟ ನಂತರ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರು ನಿಗೂಢ ಪೋಸ್ಟ್ ಮಾಡಿ ಆಯ್ಕೆ ಸಮಿತಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.   ಸರ್ಫರಾಜ್ 2019 ರ ತೆಲುಗು ಚಿತ್ರ ‘ಜೆರ್ಸಿ’ಯ ಫೋಟೋವನ್ನು ಹಂಚಿಕೊಂಡು “ನಾನು ಫಿಟ್‌ ಆಗದಿರಬಹುದು, ಆದರೆ ನನ್ನಲ್ಲಿರುವ ಎಲ್ಲದರೊಂದಿಗೆ ಹೋರಾಡುತ್ತೇನೆ”   ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‌ ನೋಡುವಾಗ ಪರೋಕ್ಷವಾಗಿ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ತಿರುಗೇಟು ನೀಡಿದಂತಿದೆ.

ಮಾಜಿ ಆಟಗಾರ ರಾಬಿನ್ ಉತ್ತಪ್ಪ ವೈಭವ್ ಸೂರ್ಯವಂಶಿಗೆ ಕೇವಲ ಆಟದತ್ತಲೇ ಗಮನಹರಿಸಬೇಕು ಎಂದಿದ್ದಾರೆ. ವೈಭವ್‌ನ  ಅವನನ್ನು ಈಗ ಒಂದು ಮಗುವಿನಂತೆಯೇ ನೋಡಲಾಗುತ್ತಿದೆ. ಆದರೆ 18 ವರ್ಷ ವಯಸ್ಸಾದಾಗ ಆತನನ್ನು ಒಬ್ಬ ಯುವಕನಾಗಿ ನೋಡಲಾಗುತ್ತದೆ. ಯುವತಿಯರ ಗಮನ ಅವನತ್ತ ಹರಿಯಬಹುದು. ಅಂತಹ ವಿಷಯಗಳು ವ್ಯಕ್ತಿಯ ಗಮನವನ್ನು ಬೇರೆಡೆಗೆ ಸೆಳೆಯುವ ಸಾಧ್ಯತೆ ಇರುತ್ತೆ. ಹೀಗಾಗಿ ವೈಭವ್ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ, ಆಫ್ಘಾನಿಸ್ತಾನ್ ತಂಡವು 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. 2027ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಬೇಕಿದ್ದರೆ ಐರ್ಲೆಂಡ್ ತಂಡವು ಆಫ್ಘಾನಿಸ್ತಾನ್ ವಿರುದ್ಧದ ಎಲ್ಲಾ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಪಂದ್ಯ ಮಳೆಗೆ ಆಹುತಿಯಾಗುತ್ತಿದ್ದಂತೆ ಐರ್ಲೆಂಡ್ ಕನಸು ಭಗ್ನಗೊಂಡಿದ್ದು,  ಆಫ್ಘಾನಿಸ್ತಾನ್ ಸ್ಥಾನ ಪಡೆದಿದೆ.

ಲಾರ್ಡ್ಸ್ ಮೈದಾನದಲ್ಲಿ ನಡೆದ ಲಂಡನ್ ಸ್ಪಿರಿಟ್ ಮತ್ತು ಎಂಐ ಲಂಡನ್ ನಡುವಿನ ರೋಚಕ ಹೈ-ವೋಲ್ಟೇಜ್ ಪಂದ್ಯವು ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಫೀಲ್ಡಿಂಗ್ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ.  ಸ್ಪಿರಿಟ್ ತಂಡದ ಆರಂಭಿಕ ಆಟಗಾರ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಬಾರಿಸಿ ಬೌಲ್‌ನನ್ನ  ಬೌಂಡರಿ ಲೈನ್‌ನಲ್ಲಿ ನಿಂತಿದ್ದ ವಿಲ್ ಜಾಕ್ಸ್ ಗಾಳಿಯಲ್ಲಿ ಅದ್ಭುತವಾಗಿ ಜಂಪ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆದರು. ಬೌಂಡರ್‌ ಲೈನ್‌ನಲ್ಲಿ ಲಯ ತಪ್ಪಿಗ ಅವರು ಬಾಲ್‌ನನ್ನ ಒಳಕ್ಕೆ ಎಸೆದು ಮತ್ತೆ ಎಡಗೈಯಿಂದ ಸಿಂಗಲ್ ಹ್ಯಾಂಡ್ ಮೂ

Kishor KV