10 ಬಾಲ್.. 50 ರನ್.. ಸಿಡಿಲಬ್ಬರ! – ವಿಲ್ ಜಾಕ್ಸ್ 6 ನಿಮಿಷದ ಸೀಕ್ರೆಟ್

10 ಬಾಲ್.. 50 ರನ್.. ಸಿಡಿಲಬ್ಬರ! – ವಿಲ್ ಜಾಕ್ಸ್ 6 ನಿಮಿಷದ ಸೀಕ್ರೆಟ್

ಟಚ್ ಮಾಡಿದ್ರೆ ಫೋರ್.. ಬೀಸಿದ್ರೆ ಸಿಕ್ಸ್.. ಭಾನುವಾರ ವಿಲ್ ಜಾಕ್ಸ್ ಮುಟ್ಟಿದ್ದೆಲ್ಲಾ ಚಿನ್ನ. ಒಂದೊಂದು ಬಾಲ್ ಗ್ಯಾಲರಿಯತ್ತ ಹಾರುತ್ತಿದ್ರೆ ಅಭಿಮಾನಿಗಳು ಹುಚ್ಚೆದ್ದು ಕುಣೀತಿದ್ರು. ವೀಕೆಂಡ್ ಮೂಡ್​ನಲ್ಲಿ ಮಸ್ತ್ ಎಂಜಾಯ್ ಮಾಡ್ತಿದ್ರು. ಅಹ್ಮದಾಬಾದ್​ನ ನಮೋ ಅಂಗಳದಲ್ಲಿ ಆರ್​​​ಸಿಬಿಯ ಅಬ್ಬರದ ಆಟಕ್ಕೆ ಗುಜರಾತ್​ ಟೈಟನ್ಸ್​ ಥಂಡಾ ಹೊಡೆದು ಹೊಯ್ತು. ವಿಲ್​ ಜಾಕ್ಸ್​  ಮತ್ತು ವಿರಾಟ್​ ಕೊಹ್ಲಿ ಜಿಟಿ ಬೌಲರ್​ಗಳನ್ನ ಸಿಕ್ಸ್ ಫೋರ್​ಗಳ ಮೂಲಕವೇ ಬೆಂಡೆತ್ತಿದ್ರು. ಆರ್​ಸಿಬಿಯ ಮತ್ತೊಂದು ರಣರೋಚಕ ಗೆಲುವಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪತಿರಾನ ಸೆಲೆಬ್ರೇಷನ್ ಸೀಕ್ರೆಟ್ – ಬೇಬಿ ಮಾಲಿಂಗನಿಗೆ ಧೋನಿಯೇ ಪವರ್ – CSK ಬೌಲರ್ ಸಕ್ಸಸ್ ಸ್ಟೋರಿ

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆರ್​ಸಿಬಿ ಮ್ಯಾಚ್​ ಅಭಿಮಾನಿಗಳಿಗೆ ಫುಲ್ ಮೀಲ್ಸ್ ಬಡಿಸಿದಂತಿತ್ತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್​ಸಿಬಿ ಬೌಲಿಂಗ್​ನಲ್ಲಿ ಅಷ್ಟೇನು ಮ್ಯಾಜಿಕ್ ಮಾಡಲಿಲ್ಲ. ಮೊದಲು ಬ್ಯಾಟ್ ಬೀಸಿದ ಗುಜರಾತ್​ ತಂಡಕ್ಕೆ ಆರಂಭದಲ್ಲೇ ಆರ್​ಸಿಬಿ ಬೌಲರ್ಸ್ ಶಾಕ್ ಕೊಟ್ಟಿದ್ರು. ಫಸ್ಟ್ ಓವರ್​ನಲ್ಲೇ ಸ್ವಪ್ನಿಲ್ ಸಿಂಗ್ ಬೌಲಿಂಗ್ ದಾಳಿಗೆ ವೃದ್ಧಿಮಾನ್ ಸಹ ಕರ್ಣ್ ಶರ್ಮಾ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಬಳಿಕ ಕ್ಯಾಪ್ಟನ್ ಶುಭ್​ಮನ್ ಗಿಲ್ ಕೂಡ 19 ಬಾಲ್​ಗಳಲ್ಲಿ ಜಸ್ಟ್ 16 ರನ್ ಹೊಡೆದು ಮ್ಯಾಕ್ಸ್​ವೆಲ್ ಬೌಲಿಂಗ್​ನಲ್ಲಿ ಔಟಾದ್ರು. ಸಂಕಷ್ಟದಲ್ಲಿದ್ದ ಜಿಟಿಗೆ ಆಸರೆಯಾಗಿದ್ದು ಸಾಯಿ ಸುದರ್ಶನ್. 49 ಬಾಲ್​ಗಳಲ್ಲಿ 8 ಫೋರ್, 4 ಸಿಕ್ಸರ್​ ಸಮೇತ 84 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಇನ್ನು ಶಾರುಖ್ ಖಾನ್ 30 ಬಾಲ್​ಗಳಲ್ಲಿ 58 ರನ್ ಬಾರಿಸಿದ್ರು. ಇನ್ನು ಡೇವಿಡ್ 26 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಹೀಗೆ ಜಿಟಿ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್​ ಗಳಿಸುವ ಮೂಲಕ 201 ರನ್​ ಗಳ ಟಾರ್ಗೆಟ್ ನೀಡಿತು. ಈ ಬೃಹತ್​ ಟಾರ್ಗೆಟ್ ಬೆನ್ನತ್ತಿದ ಬೆಂಗಳೂರು ತಂಡದ ಪರ ವಿಲ್ ಜಾಕ್ಸ್ ಸಿಡಿಲಿನಂತೆ ಅಬ್ಬರಿಸಿದ್ರು. ಜಸ್ಟ್ 16 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್​ ಗಳಿಸುವ ಮೂಲಕ 9 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿದರು.

ಆರ್​ಸಿಬಿ ಪರ ಓಪನರ್ ಆಗಿ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಕಿಂಗ್ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ಫಾಫ್ 12 ಬಾಲ್​ಗಳಲ್ಲಿ 24 ರನ್ ಸಿಡಿಸಿ ಔಟಾದ್ರು. ಬಳಿಕ ಕ್ರೀಸ್​ಗೆ ಬಂದ ವಿಲ್ ಜಾಕ್ಸ್ ಸುನಾಮಿಯಂತೆ ಅಬ್ಬರಿಸಿದ್ರು. ಜಸ್ಟ್ 41 ಎಸೆತಗಳಲ್ಲಿ 10 ಸಿಕ್ಸ್​ ಮತ್ತು 5 ಬೌಂಡರಿ ಮೂಲಕ 243.90 ಸ್ಟ್ರೈಕ್​ ರೇಟ್​​ನಲ್ಲಿ ಭರ್ಜರಿ 100 ರನ್​ ಸಿಡಿಸಿ ಅಜೇಯರಾಗಿ ಉಳಿದ್ರು. ಜಾಕ್ಸ್​ಗೆ ಕಿಂಗ್ ಕೊಹ್ಲಿ ಕೂಡ ಉತ್ತಮ ಸಾಥ್​ ನೀಡಿದರು. ಕೊಹ್ಲಿ ಅಂತಿಮವಾಗಿ 44 ಎಸೆತದಲ್ಲಿ 3 ಸಿಕ್ಸ್​ ಮತ್ತು 6 ಫೋರ್​ ಮೂಲಕ 70 ರನ್​ ಸಿಡಿಸಿ ಅಜೇಯರಾಗಿ ಉಳಿದರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿಲ್ ಜಾಕ್ಸ್ ಆಟದ ಬಗ್ಗೆ ಹೇಳಲೇಬೇಕು.

ವಿಲ್ ಜಾಕ್ಸ್ ಮೊದಲ 17 ಎಸೆತಗಳಲ್ಲಿ ಕೇವಲ 17 ರನ್​ ಮಾತ್ರ ಗಳಿಸಿದ್ರು. ಈ ವೇಳೆ ಆರ್​ಸಿಬಿ ಫ್ಯಾನ್ಸ್ ಈ ಮ್ಯಾಚ್​ನೂ ದೇವ್ರಿಗೇ ಬಿಡ್ತಾರೇನೋ ಅಂತಾ ಬೇಸರಗೊಂಡಿದ್ರು. ಆದ್ರೆ, ನಂತರದ 24 ಎಸೆತಗಳಲ್ಲಿ ಗುಜರಾತ್​ ಬೌಲರ್ಸ್​ಗೆ ಜಾಕ್ಸ್ ಅಕ್ಷರಶಃ ನರಕ ದರ್ಶನ ಮಾಡಿಸಿಬಿಟ್ರು. ಬೌಂಡರಿ, ಸಿಕ್ಸರ್​​ಗಳಲ್ಲಿ ರನ್​ ಡೀಲ್​ ಮಾಡಿ 83 ರನ್​ ಚಚ್ಚಿದ್ರು. ಗಳಿಸಿದ 100 ರನ್​ಗಳ ಪೈಕಿ 60 ರನ್​ ಬಂದಿದ್ದು ಬರೀ ಸಿಕ್ಸರ್​ಗಳಿಂದ. ರಶೀದ್ ಖಾನ್ ಟಿ20 ಕ್ರಿಕೆಟ್​ ಲೋಕ ಕಂಡ ಲೆಜೆಂಡರಿ ಬೌಲರ್. ಆದ್ರೆ ಇಂಥಾ ಲೆಜೆಂಡ್​ಗೆ 25 ವರ್ಷದ ವಿಲ್​ ಜಾಕ್ಸ್​ ನರಕ ದರ್ಶನ ಮಾಡಿಸಿದ್ರು. 4 ಸಿಕ್ಸರ್​​, 5 ಬೌಂಡರಿ ಸಿಡಿಸಿ ರಶೀದ್​ ಖಾನ್​ಗೆ ಶಾಕ್​ ಕೊಟ್ರು. ಅದಕ್ಕೂ ಹಿಂದಿನ ಮೋಹಿತ್​ ಶರ್ಮಾ ಓವರ್​ನಲ್ಲಿ 29 ರನ್​ ಚಚ್ಚಿದ್ರು. ಭಾನುವಾರ ಸಂಜೆ 6.41ಕ್ಕೆ ಅರ್ಧಶತಕ ಪೂರೈಸಿದ ವಿಲ್​ಜಾಕ್ಸ್​​, 6.47ಕ್ಕೆ ಸೆಂಚುರಿ ಸಿಡಿಸಿದ್ರು. ಜಸ್ಟ್​ ಆರೇ ನಿಮಿಷದಲ್ಲಿ ಇಡೀ ಗೇಮ್​ ಬದಲಾಯಿಸಿದ್ರು. ಒಂದ್ಕಡೆ ವಿಲ್​ ಜಾಕ್ಸ್​ ಬೌಲರ್​​ಗಳನ್ನ ಬೆಂಡೆತ್ತುತ್ತಾ ಇದ್ರೆ ಅತ್ತ ಕಿಂಗ್​ ಕೊಹ್ಲಿ ಕೂಡ ದಂಗಾಗಿದ್ರು. ವಿಲ್​ ಜಾಕ್ಸ್​​ ಸಿಡಿಸಿದ ಒಂದೊಂದು ಸಿಕ್ಸರ್​​ಗಳನ್ನ ವಿರಾಟ್​​ ಕೊಹ್ಲಿ ಸಖತ್​ ಎಂಜಾಯ್​ ಮಾಡಿದ್ರು. ಶತಕ ಸಿಡಿಸಿದ ಬೆನ್ನಲ್ಲೇ ಜಾಕ್ಸ್​ನ ತಬ್ಬಿಕೊಂಡು ಸಂಭ್ರಮಿಸಿದ್ರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ವಿಲ್ ಜಾಕ್ಸ್, ಆರಂಭದಲ್ಲಿ ನಾನು ತುಂಬಾ ಕಷ್ಟಪಟ್ಟೆ. ಮೊದಲ 15 ಬಾಲ್​ಗಳನ್ನು ಎದುರಿಸುವಾಗ ನರ್ವಸ್ ಆಗಿದ್ದೆ. ವಿರಾಟ್ ಕೊಹ್ಲಿ ಜೊತೆಯಲ್ಲಿದ್ದರು, ಅವರು ಸಾಕಷ್ಟು ಸಹಾಯ ಮಾಡಿದ್ದರು. ಕೊಹ್ಲಿ ಸ್ಪಿನ್ ಬಾಲ್​ಗೆ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ನನಗೆ ಮಾರ್ಗದರ್ಶನ ಮಾಡಿ ಪಿಚ್​​ ಬಗ್ಗೆ ಆಗಾಗ ಮಾಹಿತಿ ನೀಡುತ್ತಿದ್ದರು. ಅವರಲ್ಲಿರುವ ಅನುಭವವನ್ನು ಹಂಚಿಕೊಂಡರು. ನಿರಂತರವಾಗಿ ನನ್ನ ಬಳಿ ಮಾತನಾಡುತ್ತಲೇ ಇದ್ದರು ಜೊತೆಗೆ ವಿರಾಟ್​ ಬೆನ್ನು ತಟ್ಟಿದ್ರು. ಕೊಹ್ಲಿ ಅವರಿಂದ ನಾನು ಬಹಳ ಕಲಿತಿದ್ದೇನೆ ಎಂದು ಕಿಂಗ್ ಕೊಹ್ಲಿಯನ್ನ ಕೊಂಡಾಡಿದ್ರು. ಇನ್ನು ಗುಜರಾತ್​​ ವಿರುದ್ಧ ಗೆದ್ದ ಬಳಿಕ ಕೊಹ್ಲಿ ಎಮೋಷನಲ್​ ಆಗಿ ಕಣ್ಣೀರಿಟ್ಟಿದ್ದಾರೆ. ಫಾಫ್​ ಔಟಾದ ಬಳಿಕ ನಾನು ಸ್ಟ್ರೈಕ್​ ರೇಟ್​ ರೊಟೇಟ್​ ಮಾಡುತ್ತಿದ್ದೆ. ವಿಲ್​ ಜಾಕ್ಸ್​ ಕ್ರೀಸ್​ಗೆ ಬಂದಾಗಲೂ ಮಿಡಲ್​ನಲ್ಲಿ ಪ್ರತಿ ಬಾಲ್​ ಹೇಗೆ ಆಡೋದು? ಎಂದು ಡಿಸ್ಕಸ್​​ ಮಾಡುತ್ತಿದ್ದೆವು. ಜಾಕ್ಸ್​ ಆಟ ನೋಡಿ ಸಖತ್​​ ಖುಷಿ ಆಯ್ತು. ಎಲ್ಲರೂ ನನ್ನ ಸ್ಟ್ರೈಕ್​ ರೇಟ್​ ಬಗ್ಗೆ ಮಾತಾಡುತ್ತಾರೆ. ಯಾವಾಗಲೂ ಒಂದೇ ರೀತಿ ಆಡಲು ಆಗುವುದಿಲ್ಲ. ರಿಯಾಲಿಟಿಗೆ ಹತ್ತಿರವಾಗಿರಬೇಕು. ಸಂದರ್ಭಕ್ಕೆ ತಕ್ಕಂತೆ ಸ್ಟ್ರೈಕ್​ ರೊಟೇಟ್​​ ಮಾಡಬೇಕು. ಕಳೆದ 15 ವರ್ಷದಿಂದ ಆರ್​​ಸಿಬಿಗಾಗಿ ಆಡಿದ್ದೇನೆ. ಎಷ್ಟೋ ಪಂದ್ಯಗಳು ಗೆಲ್ಲಿಸಿದ್ದೇನೆ. ಗೆಲ್ಲೋದೊಂದೇ ನಮ್ಮ ಗುರಿ. ನಾನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಲ್ಲ ಎಂದು ಭಾವುಕರಾದ್ರು.

ಗುಜರಾತ್ ಎದುರು ಆರ್​ಸಿಬಿ ಗೆಲ್ತು ಅನ್ನೋದಕ್ಕಿಂತ ಅಭಿಮಾನಿಗಳನ್ನ ಅತೀ ಹೆಚ್ಚು ರಂಜಿಸಿದ್ದು ವಿಲ್​ ಜಾಕ್ಸ್​ ಬ್ಯಾಟಿಂಗ್. ಬ್ಯಾಟಿಂಗ್​ ಅಂದ್ರೆ ಹಿಂಗಿರಬೇಕು. ಬೌಲರ್​​ ಯಾರು ಅನ್ನೋ ಉಸಾಬರಿ ಬೇಡ. ಬಾಲ್ ಬಂತಾ ಸಿಕ್ಸರ್, ಬೌಂಡರಿಗೆ ಅಟ್ಟೋದಷ್ಟೇ ಕೆಲಸ ಎನ್ನುವಂತೆ ಆಡಿದ್ದು ವಿಲ್ ಜಾಕ್ಸ್. ಒಂದೊಂದು ಏಟು ಕೂಡ ಸೂಪರ್​​.. ಸ್ವತಃ ಕಿಂಗ್​ ಕೊಹ್ಲಿ ಕೂಡ ಜಾಕ್ಸ್​ ಜಬರ್ದಸ್ತ್​ ಆಟವನ್ನ ಕಂಡು ವಾರೆ ವ್ಹಾ ಅಂತಾ ಬೆನ್ನು ತಟ್ಟಿದ್ರು. ಸತತ ಸೋಲನ್ನ ಕಂಡು ಬೇಸತ್ತಿದ್ದ ಫ್ಯಾನ್ಸ್ ಸಖತ್​ ಥ್ರಿಲ್​ ಆದ್ರು.

ಇನ್ನು ಜಿಟಿ ವಿರುದ್ಧದ ಗೆಲುವಿನ ಮೂಲಕ ಆರ್​ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ. ಮುಂದಿನ 4 ಪಂದ್ಯಗಳು ಹೇಗಾದ್ರೂ ಮಾಡಿ ​​ಗೆಲ್ಲಲೇಬೇಕಿದೆ. ಭಾರೀ ರನ್​ಗಳ ಅಂತರದಿಂದ ಗೆದ್ದು ರನ್​ ರೇಟ್​ ಹೆಚ್ಚಿಸಿಕೊಂಡರೆ ಪ್ಲೇ ಆಫ್​ಗೆ ಹೋಗೋ ಅವಕಾಶ ಇನ್ನೂ ಇದೆ. ಸದ್ಯ ಆರ್​ಸಿಬಿ 10 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕ ಪಡೆದುಕೊಂಡಿದೆ. ತಂಡದ ರನ್​ ರೇಟ್​ ಕೂಡ ಸುಧಾರಿಸಿದೆ. ಆರ್​​ಸಿಬಿ ಇನ್ನೂ 4 ಪಂದ್ಯಗಳನ್ನ ಆಡಲಿದ್ದು 4ಕ್ಕೆ 4 ಗೆಲ್ಲಬೇಕಿದೆ. ಆಗ ಆರ್​​ಸಿಬಿಗೆ ಮತ್ತೆ 8 ಅಂಕ ದೊರೆಯಲಿದ್ದು, ಟೋಟಲ್​​ 14 ಪಾಯಿಂಟ್ಸ್​ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್​​ ಕನ್ಫರ್ಮ್​​. 14 ಅಂಕ ಪಡೆದ್ರೂ ಪ್ಲೇ ಆಫ್​ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್​ ಆಗಿರಲಿದೆ.

Sulekha