ಕೇಂದ್ರದ ಖಾತೆ ಮೇಲೆ ಹೆಚ್ಡಿಕೆ ಕಣ್ಣು – ಮಂತ್ರಿಯಾಗೋದು ಬಹುತೇಕ ಫಿಕ್ಸ್!
ಈ ಬಾರಿಯ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದೆ. ಜೆಡಿಎಸ್ 2 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಂಡ್ಯದಿಂದ ಸ್ಫರ್ಧೆ ಮಾಡಿ ಭರ್ಜರಿ ಗೆಲುವು ಸಾಧಿಸಿರುವ ಎಚ್‌ಡಿ ಕುಮಾರಸ್ವಾಮಿ ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ಪಡೆಯಲು ಆಸಕ್ತಿ ಹೊಂದಿದ್ದಾರೆ. ಇದೀಗ ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗೋದು ಬಹುತೇಕ ಪಕ್ಕಾ ಆಗಿದೆ. ಅದರಲ್ಲೂ ಪವರ್‌ಫುಲ್ ಖಾತೆಗಳ ಮೇಲೆ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಸಚಿವ ಬಿ. ನಾಗೇಂದ್ರ ರಾಜೀನಾಮೆ ಕೊಡ್ತಾರಾ? – ಸಿಎಂ, ಡಿಸಿಎಂ ಕೊಟ್ಟ ಸೂಚನೆಯೇನು?
ಜೆಡಿಎಸ್ ಭದ್ರಕೋಟೆಯಲ್ಲಿ ನೆಲಕಚ್ಚಿದ್ದ ಪಕ್ಷಕ್ಕೆ ಹೆಚ್‌ಡಿಕೆ ಮತ್ತೆ ಆಸರೆಯಾಗಿದ್ದಾರೆ.. ಚಕ್ರವ್ಯೂಹ ಭೇಧಿಸಲು ಆಗದೇ ಪುತ್ರನ ಸೋಲನ್ನಪ್ಪಿದ್ದ ಜಾಗದಲ್ಲೇ ಗೆದ್ದು ಹೆಚ್‌ಡಿಕೆ ಹಿರಿಹಿರಿ ಹಿಗ್ಗಿದ್ದಾರೆ.. ಮೊದಲ ಬಾರಿಗೆ ಹೊರಗಿನಿಂದ ಬಂದು ಮಂಡ್ಯದಲ್ಲಿ ಗೆದ್ದು ಸಾಧನೆಗೈದಿದ್ದಾರೆ.. ಇದೀಗ ಚುನಾವಣೆಯಲ್ಲಿ ಗೆದ್ದು ದೆಹಲಿ ರಾಜಕೀಯಕ್ಕೆ ಎಂಟ್ರಿಕೊಟ್ಟಿರೋ ದಳಪತಿ ಕೇಂದ್ರ ಸಚಿವ ಸ್ಥಾನಕ್ಕೆ ಏರಲು ಸಜ್ಜಾಗಿದ್ದಾರೆ. ಇದೀಗ ಕೇಂದ್ರದ ಕ್ಯಾಬಿನೆಟ್‌ನಲ್ಲಿ ಪ್ರಬಲ ಹುದ್ದೆ ಪಡೆಯಲು ದಳಪತಿ ಸರ್ಕಸ್ ಮಾಡ್ತಿದ್ದಾರೆ.. ಈಗಾಗಲೇ ಹೆಚ್‌ಡಿಕೆ ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ.
ಕೇಂದ್ರದಲ್ಲಿ ಕೃಷಿ ಇಲಾಖೆ ಖಾತೆ ಪಡೆಯಲು ಹೆಚ್ಡಿಕೆ ಪ್ಲಾನ್ ಮಾಡಿದ್ದಾರೆ. ಕುಮಾರಸ್ವಾಮಿ ಈಗಾಗಲೇ ಇಸ್ರೇಲ್ ಮಾದರಿ ಕೃಷಿಗೆ ಮಾರುಹೋಗಿದ್ದಾರೆ. ಅಷ್ಟೇ ಅಲ್ಲದೇ ಜಲಶಕ್ತಿ ಸಚಿವರಾದ್ರೆ ರಾಜ್ಯದ ನೀರಾವರಿ ಸರಿಪಡಿಸಲು ಪ್ಲಾನ್ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೆಚ್‌ಡಿಕೆ ಎರಡು ಖಾತೆಗಳಿಗೆ ಡಿಮ್ಯಾಂಡ್ ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.