ಗೆಲ್ಲಲೇಬೇಕಾದ ಪಂದ್ಯಕ್ಕೆ ಅಹಂ ಬಿಡ್ತಾರಾ? – 2ನೇ ಟೆಸ್ಟ್ ಪಂದ್ಯಕ್ಕೆ DSP ಸಿರಾಜ್?
ಗಂಭೀರ್ & ಗಿಲ್ ಕೈಯಲ್ಲಿದೆ ವಿಕ್ಟರಿ!

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನ ಗೆಲ್ಲೋ ಅವಕಾಶವಿದ್ರೂ ಕೈಚೆಲ್ಲಿರೋ ಭಾರತ ಈಗ ಎರಡನೇ ಟೆಸ್ಟ್ ಪಂದ್ಯಕ್ಕೆ ಸಿದ್ಧವಾಗ್ತಿದೆ. ನವೆಂಬರ್ 27 ಅಂದ್ರೆ ಶುಕ್ರವಾರ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಪಾರ್ಕ್ ಸೌತ್ ಕ್ರೀಡಾಂಗಣದಲ್ಲಿ ಇಂಡಿಯನ್ ಟೈಮಿಂಗ್ ಪ್ರಕಾರ ಮುಂಜಾನೆ 3:30ಕ್ಕೆ ಪಂದ್ಯ ಸ್ಟಾರ್ಟ್ ಆಗಲಿದೆ. 2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಭಾರತ ಉಳೀಬೇಕು ಅಂದ್ರೆ ಶತಾಯ ಗತಾಯ ಎರಡನೇ ಟೆಸ್ಟ್ ಮ್ಯಾಚ್ ವಿನ್ ಆಗ್ಬೇಕು. ಆದ್ರೆ ಈ ಪಂದ್ಯ ಗೆಲ್ಲೋದು ಬಿಡೋದು ಹೆಡ್ಕೋಚ್ ಗೌತಮ್ ಗಂಭೀರ್ ಹಾಗೇ ಕ್ಯಾಪ್ಟನ್ ಶುಭ್ಮನ್ ಕೈಯಲ್ಲಿದೆ.
ಇದನ್ನೂ ಓದಿ : 53 ಬಾಲ್.. 28 ಸಿಕ್ಸರ್ಸ್.. 204 ರನ್ಸ್ – ಯುಎಇ ಬೌಲರ್ ಗಳನ್ನ ಚೆಂಡಾಡಿದ ಸೂರ್ಯವಂಶಿ!
ನ್ಯೂಜಿಲೆಂಡ್ ವಿರುದ್ಧ ಫಸ್ಟ್ ಇನ್ನಿಂಗ್ಸ್ನಲ್ಲಿ 720 ರನ್ಸ್ ಹೊಡೆದು 352 ರನ್ಗಳ ಲೀಡ್ ಪಡೆದ ಮೇಲೂ ಭಾರತ ಪಂದ್ಯವನ್ನ ಸೋಲಬೇಕಾಯ್ತು. ಌಂಡ್ ಇನ್ನೂ 15 ಓವರ್ ಬಾಕಿ ಇದ್ದಾಗ್ಲೇ ನಾವು ಮ್ಯಾಚ್ ಡ್ರಾ ಮಾಡಿಕೊಳ್ತೇವೆ ಎನ್ನುವಂಥ ಶೇಮ್ಫುಲ್ ಡಿಸಿಷನ್ ಬೇರೆ. ಌಂಡ್ ಈ ಪಂದ್ಯ ಡ್ರಾನಲ್ಲಿ ಕೊನೆಯಾಗೋಕೆ ಒನ್ ಆಫ್ ದಿ ಮೇನ್ ರೀಸನ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಶುಭ್ಮನ್ ಗಿಲ್ ಟೀಂ ಸೆಲೆಕ್ಷನ್. ಪ್ಲೇಯಿಂಗ್ 11 ಫೇಲ್ಯೂರ್ನಿಂದಲೇ ಪಂದ್ಯ ಕೈಚೆಲ್ಲಿದ್ದು ಅನ್ನೋ ಗಂಭೀರ ಆರೋಪಗಳಿವೆ. ಬಟ್ ಸೆಕೆಂಡ್ ಮ್ಯಾಚ್ಗೆ ಶತಾಯ ಗತಾಯ ಗೆಲ್ಲುವಂಥ ಪಡೆಯನ್ನೇ ಕಣಕ್ಕಿಳಿಸಬೇಕಿದೆ. ಅದ್ರಲ್ಲೂ ಮೊಹಮ್ಮದ್ ಸಿರಾಜ್ ಆಯ್ಕೆ ಬಗ್ಗೆ ಚರ್ಚೆಗಳು ಜೋರಾಗಿವೆ.
ವೆಲ್ಲಿಂಗ್ಟನ್ನ ಮೊದಲ ಮ್ಯಾಚಲ್ಲಿ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಅಂಶುಲ್ ಕಾಂಬೋಜ್ ಮತ್ತು ಆಕಾಶ್ ದೀಪ್ ಅವರನ್ನೊಳಗೊಂಡ ಭಾರತದ ವೇಗದ ಬೌಲರ್ಗಳು ಎರಡನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ ಅನ್ನು ಆಲೌಟ್ ಮಾಡಲು ಹೆಣಗಾಡಿದರು. ಪಂದ್ಯದ ಬಳಿಕ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿದ್ದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ರವೀಂದ್ರ ಜಡೇಜಾ ಕೈಬಿಟ್ಟದ್ದು ಕೂಡ ಕೆಲವರ ಸಿಟ್ಟಿಗೆ ಕಾರಣವಾಗಿದ್ರೂ ಕೂಡ ಎರಡನೇ ಪಂದ್ಯದಲ್ಲಿ ಅವ್ರನ್ನ ಪಿಕ್ ಮಾಡೋದು ಕಷ್ಟ ಇದೆ. ಯಾಕಂದ್ರೆ ಈ ಪಿಚ್ ಸೀಮ್ ಬೌಲರ್ಗಳ ಪ್ಯಾರಡೈಸ್ ಆಗಿರೋದ್ರಿಂದ ಸೀಮ್ ಬೌಲರ್ಗಳಿಗೆ ಹೆಚ್ಚಿನ ಪ್ರಿಪರೆನ್ಸ್ ನೀಡ್ತಾರೆ. ಅನ್ಶುಲ್ ಕಾಂಬೋಜ್ರನ್ನ ಹೊರಗಿಟ್ಟು ಮೊಹಮ್ಮದ್ ಸಿರಾಜ್ಗೆ ಚಾನ್ಸ್ ನೀಡಿ ಎನ್ನುವಂಥ ಅಭಿಪ್ರಾಯಗಳು ವ್ಯಕ್ತವಾಗ್ತಿದೆ. ಅದೂ ಅಲ್ದೇ 2027 ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಭಾರತಕ್ಕೆ ಈ ಗೆಲುವು ತುಂಬಾನೇ ಮುಖ್ಯ.
ಗೆಲ್ಲಲೇಬೇಕಿರೋ ಪಂದ್ಯಕ್ಕೆ ಅಹಂ ಬಿಡ್ತಾರಾ?
ಟೀಂ ಇಂಡಿಯಾದಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಆಡ್ತಿರೋ ರೀತಿ ನೋಡಿದ್ರೆ ಮೊಹಮ್ಮದ್ ಸಿರಾಜ್ ವಿಚಾರದಲ್ಲಿ ಶಾಕಿಂಗ್ ಎನ್ನುವಂತೆಯೇ ಇದೆ. ಜಸ್ಪ್ರೀತ್ ಬುಮ್ರಾ ಬಳಿಕ ತಂಡದ ಸ್ಟಾರ್ ಬೌಲರ್ ಆಗಿದ್ರೂ ಟಿ-20ಐನಲ್ಲಿ ಆಡಿಸ್ತಿಲ್ಲ. ಏಕದಿನಕ್ಕೆ ಸೆಲೆಕ್ಟ್ ಮಾಡಿದ್ರೂ ಪ್ಲೇಯಿಂಗ್ 11 ಚಾನ್ಸ್ ಕೊಡ್ತಿಲ್ಲ. ಈಗ ಟೆಸ್ಟ್ನಲ್ಲೂ ಅವಕಾಶವೇ ಇಲ್ಲದಾಗಿದೆ. ಇದಕ್ಕೆಲ್ಲಾ ಕಾರಣ ಗೌತಮ್ ಗಂಭೀರ್ ಮತ್ತು ಶುಭ್ಮನ್ ಗಿಲ್ ತಂಡದ ಸೆಲೆಕ್ಷನ್. ಆದ್ರೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಉಳೀಬೇಕಿದ್ರೆ ಎರಡನೇ ಪಂದ್ಯ ಗೆಲ್ಲಲೇಬೇಕಿದೆ. ಹೀಗಾಗಿ ತಮ್ಮ ಅಹಂ ಬಿಟ್ಟು ಸಿರಾಜ್ಗೆ ಚಾನ್ಸ್ ಕೊಡ್ತಾರಾ ಅನ್ನೋ ಕುತೂಹಲ ಮೂಡಿದೆ. ಅಷ್ಟೇ ಅಲ್ಲದೆ ಬೂಮ್ರಾ ಒಬ್ಬರೇ ಎದುರಾಳಿ ಬ್ಯಾಟರ್ಗಳ ಮೇಲೆ ಒತ್ತಡ ಸೃಷ್ಟಿಸುವುದು ಕಷ್ಟ. ಸಿರಾಜ್ ಹೊಸ ಚೆಂಡಿನಲ್ಲಿ ಉತ್ತಮ ಲೈನ್ ಮತ್ತು ಲೆಂಗ್ತ್ನೊಂದಿಗೆ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇಬ್ಬರೂ ಒಟ್ಟಿಗೆ ಆಡಿದರೆ ವೇಗದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಸಿಗಬಹುದು. ಌಂಡ್ ಇನ್ನೊಂದು ಸಾಲಿಡ್ ರೀಸನ್ ಕೂಡ ಇದೆ. ಪ್ರಸ್ತುತ WTC 2025-27 ಡಬ್ಲ್ಯೂಟಿಸಿ ಸೈಕಲ್ನಲ್ಲಿ ಭಾರತದ ಪರ 11 ಟೆಸ್ಟ್ ಪಂದ್ಯಗಳಿಂದ 43 ವಿಕೆಟ್ ಗಳನ್ನ ಪಡೆದಿದ್ದಾರೆ. ಇಲ್ಲೇ ಗೊತ್ತಾಗುತ್ತೆ ಸಿರಾಜ್ ಬೌಲಿಂಗ್ ಎಷ್ಟು ಎಫೆಕ್ಟೀವ್ ಆಗಿದೆ ಅನ್ನೋದು. ಅದೂ ಅಲ್ದೇ ಪಂದ್ಯ ನಡೆಯಲಿರೋ ಪಿಚ್ ಕೂಡ ಇದನ್ನೇ ಹೇಳ್ತಿದೆ.
ಸೀಮ್ ಬೌಲರ್ ಗಳ ಸ್ವರ್ಗ ಕ್ರೈಸ್ಟ್ ಚರ್ಚ್ ಮೈದಾನ!
ಇನ್ನು ಈ ಪಂದ್ಯಕ್ಕೂ ಮುನ್ನ ಸಿರಾಜ್ ಪರ ಯಾಕೆ ಈ ಮಟ್ಟಿಗಿನ ಸಪೋರ್ಟ್ ಸಿಗ್ತಿದೆ ಅಂದ್ರೆ ಪಂದ್ಯ ನಡೆಯಲಿರೋ ಕ್ರೈಸ್ಟ್ ಚರ್ಚ್ ಮೈದಾನ ಸೀಮ್ ಬೌಲರ್ಗಳ ಸ್ವರ್ಗವಾಗಿದೆ. ಹಿಂದಿನ ಪಂದ್ಯಗಳ ರೆಕಾರ್ಡ್ಸ್ ಕೂಡ ಇದನ್ನೇ ಹೇಳ್ತಿದೆ. ಇಲ್ಲಿ ನಡೆದಿರುವ 9 ಟೆಸ್ಟ್ ಪಂದ್ಯಗಳಲ್ಲಿ, ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 303.2 ಮತ್ತು ಪಂದ್ಯದ ಸರಾಸರಿ ಒಟ್ಟು 1070.9 ಆಗಿದೆ. ಸೀಮ್ ಬೌಲರ್ಗಳು 3.31 ಎಕಾನಮಿಯಲ್ಲಿ 90.8% ವಿಕೆಟ್ಗಳನ್ನು ಪಡೆದಿದ್ದಾರೆ, ಆದರೆ ಸ್ಪಿನ್ನರ್ಗಳು 3.9 ಎಕಾನಮಿಯಲ್ಲಿ ಕೇವಲ 7.8% ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ. ಸೋ ಅಲ್ಲಿಗೆ ಈ ಪಿಚ್ನಲ್ಲಿ ಸೀಮರ್ಗಳೇ ಮ್ಯಾಚ್ ವಿನ್ನರ್ಸ್ ಅನ್ನೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಹಾಗೇ ಈ ಮೈದಾನದಲ್ಲಿ ಟಾಸ್ ಗೆದ್ದ ನಾಯಕ ಬಹುತೇಕ ಬೌಲಿಂಗ್ನೇ ಪ್ರಿಫರ್ ಮಾಡಿದ್ದಾರೆ. 2021 ರಿಂದ ನ್ಯೂಜಿಲೆಂಡ್ ಹ್ಯಾಗ್ಲಿ ಓವಲ್ನಲ್ಲಿ 7 ಟೆಸ್ಟ್ಗಳನ್ನು ಆಡಿದೆ, 3 ಗೆದ್ದಿದೆ, 3 ಸೋತಿದೆ ಮತ್ತು 1 ಡ್ರಾ ಆಗಿದೆ. ಹೀಗಾಗಿ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಪಿಚ್ನಲ್ಲಿ ವೇಗದ ಬೌಲರ್ಗಳಿಗೆ ಸೀಮ್ ಮೂವ್ಮೆಂಟ್ ಮತ್ತು ಬೌನ್ಸ್ ಸಿಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಿರಾಜ್ ಅವರಂತಹ ಅನುಭವಿ ವೇಗಿಯನ್ನು ಆಡಿಸುವುದು ಸೂಕ್ತ ಆಯ್ಕೆಯಾಗಬಹುದು. ಹೀಗೆ ಸಿರಾಜ್ರನ್ನ ಆಡಿಸಬೇಕು ಅನ್ನೋಕೆ ಸಾಕಷ್ಟು ರೀಸನ್ಸ್ ಇದೆ. ಆದ್ರೆ ಬೇಡ ಅಂತಿರೋ ಶುಭ್ಮನ್ ಗಿಲ್ ಹೇಳ್ತಿರೋದು ಸಿರಾಜ್ ಇತ್ತೀಚಿನ ಫಾರ್ಮ್ ನೋಡಿ ಬೇರೆಯವ್ರಿಗೆ ಚಾನ್ಸ್ ಕೊಡ್ತಿದ್ದೇವೆ ಅಂತಾ. ಒಟ್ನಲ್ಲಿ ಗಂಭೀರ್ ತಾಳಕ್ಕೆ ಕುಣಿಯೋ ಗಿಲ್ ಪ್ಲೇಯಿಂಗ್ 11ನಲ್ಲೂ ಫೇವರಿಸಂ ಮಾಡಿದ್ರೆ ಆನ್ಫೀಲ್ಡ್ನಲ್ಲಿ ಅದ್ರ ಎಫೆಕ್ಟ್ ಗೊತ್ತಾಗುತ್ತೆ ಅಷ್ಟೇ.

ನೋಡಿರಿ

