ವಿಶ್ವಕಪ್ ಬಗ್ಗೆ ಧೋನಿ ಭವಿಷ್ಯ ನಿಜವಾಗುತ್ತಾ? – ಟೀಮ್ ಇಂಡಿಯಾ ಈ ಬಾರಿ ಚಾಂಪಿಯನ್ ಗ್ಯಾರಂಟಿನಾ?

ವಿಶ್ವಕಪ್ ಬಗ್ಗೆ ಧೋನಿ ಭವಿಷ್ಯ ನಿಜವಾಗುತ್ತಾ? – ಟೀಮ್ ಇಂಡಿಯಾ ಈ ಬಾರಿ ಚಾಂಪಿಯನ್ ಗ್ಯಾರಂಟಿನಾ?

2011ರ ವರ್ಲ್ಡ್​​ಕಪ್ ವಿನ್ನಿಂಗ್ ಕ್ಯಾಪ್ಟನ್ ಎಂ.ಎಸ್. ಧೋನಿ ಈ ಬಾರಿಯ ವಿಶ್ವಕಪ್​ ಟೂರ್ನಿ ವೇಳೆ ಯಾವುದೇ ಸ್ಟೇಡಿಯಂಗಳಲ್ಲೂ ಇದುವರೆಗೆ ಕಾಣಿಸಿಕೊಂಡಿಲ್ಲ. ಟೀಂ ಇಂಡಿಯಾದ ಯಾವ ಪಂದ್ಯವನ್ನ ನೋಡೋಕೂ ಸ್ಟೇಡಿಯಂಗೆ ಆಗಮಿಸಿಲ್ಲ. ಅಷ್ಟೇ ಯಾಕೆ, ವರ್ಲ್ಡ್​​ಕಪ್​ನಲ್ಲಿ ಯಾರು ಗೆಲ್ಲಬಹುದು? ಸೆಮಿಫೈನಲ್​​ಗೆ ಯಾರೆಲ್ಲಾ ಎಂಟ್ರಿಯಾಗಬಹುದು ಅನ್ನೋ ಬಗ್ಗೆಯೂ ಧೋನಿ ಮಾತನಾಡಿರಲಿಲ್ಲ. ಆದ್ರೆ ಇದೇ ಮೊದಲ ಬಾರಿಗೆ ಧೋನಿ ಟೀಂ ಇಂಡಿಯಾದ ಕುರಿತು ಮೌನ ಮುರಿದಿದ್ದಾರೆ. ವರ್ಲ್ಡ್​ಕಪ್​ನಲ್ಲಾಡ್ತಿರೋ ರೋಹಿತ್ ಟೀಂ ಬಗ್ಗೆ ಧೋನಿ ಮಾತನಾಡಿದ್ದಾರೆ. ಜೊತೆಗೆ 2011ರ ವಿಶ್ವಕಪ್​ ಗೆಲುವಿನ ಕುರಿತು ಕೆಲ ಇಂಟ್ರೆಸ್ಟಿಂಗ್​ ಸಂಗತಿಗಳನ್ನ ಈಗ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಐಸಿಸಿ ಏಕದಿನ Ranking ಪಟ್ಟಿ ರಿಲೀಸ್ -ನಂಬರ್ 1 ರೇಸ್‌ನಿಂದ ಗಿಲ್ ಜಸ್ಟ್ ಮಿಸ್

ಈ ಬಾರಿಯ ವರ್ಲ್ಡ್​​ಕಪ್ ನಲ್ಲಿ  ಟೀಂ ಇಂಡಿಯೂ ಅದ್ಭುತವಾಗಿಯೇ ಆಡುತ್ತಿದೆ. ನಿರಂತರವಾಗಿ ಗೆಲುವು ದಾಖಲಿಸುತ್ತಿದೆ. ರೋಹಿತ್​ ಪಡೆ ಆಡುವ ಆಟ ನೋಡಿದರೆ 2011ರ ವರ್ಲ್ಡ್​​ಕಪ್​ ನೆನಪಿಗೆ ಬರುತ್ತದೆ. ಆ ಟೂರ್ನಿಯಲ್ಲೂ ಅಷ್ಟೇ ಟೀಂ ಇಂಡಿಯಾ ಆರಂಭದಿಂದಲೂ ಪಂದ್ಯಗಳನ್ನ ಗೆಲ್ಲುತ್ತಾ ಸಾಗಿತ್ತು. ಕೊನೆಗೆ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದುಕೊಂಡಿತ್ತು. ಈಗ ರೋಹಿತ್ ಕ್ಯಾಪ್ಟನ್ಸಿಯಲ್ಲೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಟೀಮ್ ಬಗ್ಗೆ ವರ್ಲ್ಡ್​​ಕಪ್​ ವಿನ್ನಿಂಗ್​ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮಾತನಾಡಿದ್ದಾರೆ. ಧೋನಿಯ ಮಾತಿಗೆ ಬೇರೆಯದ್ದೇ ತೂಕ ಇದೆ. ಇದೀಗ ಧೋನಿ ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ವಿನ್ನಿಂಗ್ ಚಾನ್ಸ್ ಬಗ್ಗೆ ಮಾತನಾಡಿದ್ದಾರೆ.

(It’s a very good team.  The team’s balance is extremely good. All the players are playing well. So everything is looking very good. I won’t say anything more than this. For the wise, the signal is enough)

(‘ಇದು ತುಂಬಾ ಒಳ್ಳೆಯ ಟೀಂ. ಟೀಂ ಬ್ಯಾಲೆನ್ಸ್ ತುಂಬಾ ಚೆನ್ನಾಗಿದೆ. ಎಲ್ಲಾ ಆಟಗಾರರು ಕೂಡ ಉತ್ತಮವಾಗಿಯೇ ಆಡುತ್ತಿದ್ದಾರೆ. ಹೀಗಾಗಿ ಎಲ್ಲವೂ ಸರಿಯಾದ ರೀತಿಯಲ್ಲೇ ಇದೆ. ಇದಕ್ಕಿಂತ ಹೆಚ್ಚೇನೂ ಹೇಳೋಕೆ ಬಯಸೋದಿಲ್ಲ. ಬುದ್ಧಿವಂತರಿಗೆ ಅರ್ಥ ಮಾಡಿಕೊಳ್ಳಲು ಇಷ್ಟು ಸಾಕು’ – ಎಂ.ಎಸ್.ಧೋನಿ)

ಈ ಸ್ಟೇಟ್​ಮೆಂಟ್​ ಮೂಲಕ ರೋಹಿತ್​ ಪಡೆ ವಿಶ್ವಕಪ್​ ಗೆಲ್ಲುವ ಸಾಧ್ಯತೆ ಇದೆ ಅಂತಾ ಧೋನಿ ಹೇಳಿದ್ದಾರೆ. ಯಾಕಂದ್ರೆ ಇದ್ರಲ್ಲಿ ಧೋನಿ ಕೆಲವು ವರ್ಡ್ಸ್​​ನ್ನ ನೋಟ್ ಮಾಡಿಕೊಳ್ಳಲೇಬೇಕು. ಒಂದು ಬ್ಯಾಲೆನ್ಸ್ ಟೀಂ ಅನ್ನೋದು.. 2011ರಲ್ಲೂ ಟೀಂ ಇಂಡಿಯಾ ಎಲ್ಲಾ ವಿಭಾಗದಲ್ಲೂ ಅತ್ಯಂತ ಬ್ಯಾಲೆನ್ಸ್ಡ್ ತಂಡವಾಗಿತ್ತು. ಜೊತೆಗೆ ಎಲ್ಲರೂ ಉತ್ತಮವಾಗಿ ಆಡ್ತಿದ್ದಾರೆ ಅಂತಾ ಧೋನಿ ಹೇಳಿದ್ದಾರೆ. 2011ರಲ್ಲೂ ಅಷ್ಟೇ. ಟೀಂ ಇಂಡಿಯಾದ ಎಲ್ಲಾ ಪ್ಲೇಯರ್ಸ್​ಗಳು ತಮ್ಮ ತಮ್ಮ ರೋಲ್​ನ್ನ ನಿಭಾಯಿಸಿದ್ದರು. ಹೀಗಾಗಿ ರೋಹಿತ್ ಪಡೆ ಕೂಡ 2011ರ ಟೀಂನಂತೆ ಪರ್ಫಾಮ್​ ಮಾಡ್ತಿದೆ ಅನ್ನೋ ಅಭಿಪ್ರಾಯವನ್ನ ಧೋನಿ ವ್ಯಕ್ತಪಡಿಸಿದ್ದಾರೆ.

‘2011ರ ಟೀಂ ಹೆಚ್ಚು ಒಗ್ಗಟ್ಟಾಗಿತ್ತು’

ಇಲ್ಲಿ ಎಂ.ಎಸ್. ಧೋನಿ ಇನ್ನೊಂದು ಪ್ರಮುಖ ಅಂಶವನ್ನ ಕೂಡ ಪ್ರಸ್ತಾಪಿಸಿದ್ದಾರೆ. 2011ರ ವರ್ಲ್ಡ್​ಕಪ್​ ಟೀಂ ಈಗಿನ ತಂಡಕ್ಕಿಂತ ಹೆಚ್ಚು ಒಗ್ಗಟ್ಟಾಗಿತ್ತು ಅಂತಾ ಧೋನಿ ಹೇಳಿದ್ದಾರೆ. ಅದಕ್ಕೆ ಕಾರಣ ಸಚಿನ್ ತೆಂಡೂಲ್ಕರ್. ತಂಡದ ಎಲ್ಲಾ ಪ್ಲೇಯರ್ಸ್​ಗಳು ಕೂಡ ಈ ಬಾರಿಯ ವರ್ಲ್ಡ್​​ಕಪ್​ನ್ನ ದೇಶದ ಜೊತೆಗೆ ಸಚಿನ್​ ತೆಂಡೂಲ್ಕರ್​​ಗಾಗಿ ಗೆಲ್ಲಲೇಬೇಕು ಅನ್ನೋ ಭಾವನೆಯನ್ನು ಹೊಂದಿದ್ದರು. ಸಚಿನ್​ಗೋಸ್ಕರ ತಂಡ ಇನ್ನಷ್ಟು ಒಗ್ಗಟ್ಟಾಗಿತ್ತು. ಆದ್ರೆ ಈಗಿನ ತಂಡದ ಬಗ್ಗೆ ನನಗೆ ಗೊತ್ತಿಲ್ಲ. ವಿರಾಟ್ ಕೊಹ್ಲಿಗಾಗಿ ಗೆಲ್ಲಬೇಕು ಅಂತಾ ಇದ್ದಾರಾ ಅನ್ನೋದು ಗೊತ್ತಿಲ್ಲ. ಆದ್ರೆ ದೇಶಕ್ಕಾಗಿಯಂತೂ ಗೆಲ್ಲಬೇಕು ಅನ್ನೋ ಉದ್ದೇಶ ಹೊಂದಿದ್ದಾರೆ ಅಂತಾನೂ ಧೋನಿ ಹೇಳಿದ್ದಾರೆ. ಇದೇ ಅಭಿಪ್ರಾಯವನ್ನ ಈ ಹಿಂದೆ ಹರ್ಭಜನ್ ಸಿಂಗ್ ಕೂಡ ವ್ಯಕ್ತಪಡಿಸಿದ್ದರು.

ಇಲ್ಲಿ ಒಂದಂತೂ ನಿಜ.. 2011ರ ಟೀಂನಲ್ಲಿ ಸಚಿನ್​ ತೆಂಡೂಲ್ಕರ್ ಟೀಂ ಇಂಡಿಯಾದ ಬೂಸ್ಟರ್​​ನಂತಿದ್ರು. ತಂಡದ ಕೀ ಫ್ಯಾಕ್ಟರ್ ಆಗಿದ್ರು. ಸಚಿನ್ ಕೊನೆಯ ವರ್ಲ್ಡ್​ಕಪ್ ಕೂಡ ಆಗಿದ್ರಿಂದ ತಮ್ಮ ರೋಲ್​ಮಾಡೆಲ್​ಗೆ ವಿಶ್ವಕಪ್​​ ಗೆಲ್ಲಿಸಲೇಬೇಕು ಅನ್ನೋ ಹಠ ಎಲ್ಲಾ ಆಟಗಾರರಲ್ಲೂ ಇತ್ತು. ಹೀಗಾಗಿ ಎಲ್ಲಾ ಪ್ಲೇಯರ್ಸ್​ಗಳು ಕೂಡ ತಮ್ಮ 100 ಪರ್ಸೆಂಟ್ ಎಫರ್ಟ್ ಹಾಕಿದ್ದರು. ಆದ್ರೆ ಈ ಬಾರಿಯ ಟೂರ್ನಿ​​ ಕ್ಯಾಪ್ಟನ್​​ ರೋಹಿತ್ ಶರ್ಮಾ ಮತ್ತು ವಿರಾಟ್​​ ಕೊಹ್ಲಿಗೆ ಕೊನೆಯ ವರ್ಲ್ಡ್​ಕಪ್​​ ಆದ್ರೂ​ ಆಶ್ಚರ್ಯ ಇಲ್ಲ. ಅದ್ರಲ್ಲೂ ರೋಹಿತ್​ ಶರ್ಮಾಗಂತೂ ಇದೇ ಫೈನಲ್​ ವಿಶ್ವಕಪ್​​ ಟೂರ್ನಿಯಾಗಲಿದೆ. ಆದ್ರೆ, ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿಗಾಗಿ ವಿಶ್ವಕಪ್​ ಗೆಲ್ಲಲೇಬೇಕು ಅನ್ನೋ ಹಠ, ಭಾವನೆ ತಂಡದ ಇತರೆ ಆಟಗಾರರಲ್ಲಿ ಇದ್ಯಾ ಅನ್ನೋದು ಗೊತ್ತಿಲ್ಲ. ಅದ್ರೆ ರೋಹಿತ್​ ಮತ್ತು ಕೊಹ್ಲಿ ಅಂತೂ ಈ ಬಾರಿ ಗೆಲ್ಲಲೇಬೇಕು ಅನ್ನೋ ಹಠದಲ್ಲೇ ಆಡ್ತಿರೋದಂತೂ ಸ್ಪಷ್ಟ. ಇವರಿಬ್ಬರು ಮಾತ್ರ ಎಲ್ಲಾ ಪ್ಲೇಯರ್ಸ್​ಗಳಿಗೂ ದೇಶಕ್ಕಾಗಿ ಗೆಲ್ಲಬೇಕು ಅನ್ನೋ ಭಾವನೆ ಇದ್ದೇ ಇದೆ. ಅದ್ರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೆ 2011ರಲ್ಲಿ ತಂಡದ ಒಗ್ಗಟ್ಟಿಗೆ ತೆಂಡೂಲ್ಕರ್​​ ಕೀ ಫ್ಯಾಕ್ಟರ್ ಆಗಿದ್ರು. ಅಂದು ಮಾತ್ರ ಅದು ತಂಡಕ್ಕೆ ತುಂಬಾನೆ ಅಡ್ವಾಂಟೇಜ್ ಆಗಿತ್ತು.

Sulekha