ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಟೀಂನ ಕ್ಯಾಪ್ಟನ್ ಆಗಿರ್ತಾರಾ? – ಮಾಹಿ ನಿವೃತ್ತಿ ಘೋಷಿಸಿದರೆ ಸಿಎಸ್‌ಕೆಯನ್ನು ಯಾರು ಲೀಡ್ ಮಾಡ್ತಾರೆ?

ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಟೀಂನ ಕ್ಯಾಪ್ಟನ್ ಆಗಿರ್ತಾರಾ? – ಮಾಹಿ ನಿವೃತ್ತಿ ಘೋಷಿಸಿದರೆ ಸಿಎಸ್‌ಕೆಯನ್ನು ಯಾರು ಲೀಡ್ ಮಾಡ್ತಾರೆ?

ಮುಂದಿನ ಐಪಿಎಲ್​​ ಟೂರ್ನಿಯಲ್ಲಿ ಎಂ.ಎಸ್.ಧೋನಿ ಚೆನ್ನೈ ಸೂಪರ್​ ಕಿಂಗ್ಸ್ ಟೀಂನ ಕ್ಯಾಪ್ಟನ್ ಆಗಿರ್ತಾರಾ? ಇಲ್ವಾ?. ಯಾಕೆಂದರೆ, ತಮ್ಮ ಕ್ಯಾಪ್ಟನ್ಸಿಯಲ್ಲಿ ಸಿಎಸ್​​ಕೆಯನ್ನ 5 ಬಾರಿ ಚಾಪಿಂಯನ್​ ಮಾಡಿರೋ ಎಂಎಸ್​​ಡಿ ಈ ಬಾರಿ ಆಡ್ತಾರೆ ಅನ್ನೋ ಗ್ಯಾರಂಟಿ ಯಾರಿಗೂ ಸಿಕ್ಕಿಲ್ಲ. ಮಾಹಿಗೆ ಈಗ 42 ವರ್ಷ. ಫಿಟ್ನೆಸ್ ನೋಡಿದ್ರೆ 2024ರ ಐಪಿಎಲ್​​ನಲ್ಲಿ ಆಡಿದ್ರೂ ಆಶ್ಚರ್ಯ ಇಲ್ಲ. ಈ ಬಾರಿಯ ಐಪಿಎಲ್​​ನಲ್ಲಿ ಆಡಿಯೇ ಆಡ್ತೇನೆ ಅಂತಾ ಧೋನಿ ಎಲ್ಲೂ ಹೇಳಿಲ್ಲ. ಜೊತೆಗೆ ಆಡೋದೇ ಇಲ್ಲ ಅಂತಾನೂ ಹೇಳಿಲ್ಲ. ಒಂದು ವೇಳೆ ಧೋನಿ ಇನ್ಮುಂದೆ ಐಪಿಎಲ್​ ಆಡೋದಿಲ್ಲ ಅನ್ನೋದಾದ್ರೆ, ಸಿಎಸ್​​ಕೆಯನ್ನ ಯಾರು ಲೀಡ್ ಮಾಡ್ತಾರೆ? ಕ್ಯಾಪ್ಟನ್ ಯಾರಗಬಹುದು ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ:ಸೈಡ್‌ಲೈನ್ ಆದ್ರಾ ಸಂಜು ಸ್ಯಾಮ್ಸನ್, ಯುಜುವೇಂದ್ರ ಚಹಾಲ್ – ಇಂಡಿಯನ್ ಕ್ರಿಕೆಟ್‌ನ ನತದೃಷ್ಟ ಪ್ಲೇಯರ್ಸ್

2008ರಲ್ಲಿ ಫಸ್ಟ್ ಐಪಿಎಲ್​​ ಸೀಸನ್​​ನಿಂದಲೂ ಎಂ.ಎಸ್.ಧೋನಿ ಚೆನ್ನೈ ಸೂಪರ್​ ಕಿಂಗ್ಸ್​ ಕ್ಯಾಪ್ಟನ್ ಆಗಿದ್ದರು. 200ಕ್ಕೂ ಹೆಚ್ಚು ಮ್ಯಾಚ್​​ಗಳಲ್ಲಿ ಟೀಂನ್ನ ಲೀಡ್ ಮಾಡಿದ್ದಾರೆ. ತಮ್ಮ ಸ್ಮಾರ್ಟ್ ಕ್ಯಾಪ್ಟನ್ಸಿಯಿಂದಲೇ ಅದೆಷ್ಟೋ ಮ್ಯಾಚ್​​ಗಳನ್ನ ಧೋನಿ ಗೆಲ್ಲಿಸಿಕೊಟ್ಟಿದ್ದಾರೆ. ಧೋನಿ ಥರಾ ಮತ್ತೊಬ್ಬ ಕ್ಯಾಪ್ಟನ್​ ಸಿಎಸ್​ಕೆಗೆ ಸಿಗೋಕೆ ಚಾನ್ಸೇ ಇಲ್ಲ. ಹೀಗಾಗಿಯೇ ಧೋನಿ ಕ್ಯಾಪ್ಟನ್ಸಿ ರಿಪ್ಲೇಸ್ ಮಾಡೋದು ಫ್ರಾಂಚೈಸಿಗೆ ಎದುರಾಗಲಿರುವ ಅತ್ಯಂತ ದೊಡ್ಡ ಚಾಲೆಂಜ್ ಆಗಿರಲಿದೆ. ಹೀಗಾಗಿ ಧೋನಿ ರಿಟೈರ್ ಆದ್ರೆ ಯಾರಿಗೆ ಚೆನ್ನೈ ಸೂಪರ್​ ಕಿಂಗ್ಸ್ ಕ್ಯಾಪ್ಟನ್ಸಿ ಪಟ್ಟ ಸಿಗಬಹುದು ಎಂಬ ಪ್ರಶ್ನೆ ಎದುರಾಗಿದೆ.

2022ರ ಐಪಿಎಲ್​ ಟೂರ್ನಿಗೂ ಮುನ್ನ ಧೋನಿ ಸಿಎಸ್​ಕೆ ಕ್ಯಾಪ್ಟನ್ಸಿಯಿಂದ ಹಿಂದೆ ಸರಿದಿದ್ದರು. ಟೂರ್ನಿಯಲ್ಲಿ ಟೀಂನ್ನ ಲೀಡ್ ಮಾಡೋದಿಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದರು. ಆಗ ರವೀಂದ್ರ ಜಡೇಜಾರನ್ನ ಸಿಎಸ್​​ಕೆ ಕ್ಯಾಪ್ಟನ್ ಮಾಡಲಾಗಿತ್ತು. ಆದ್ರೆ ಜಡೇಜಾಗೆ ಕ್ಯಾಪ್ಟನ್ಸಿಯನ್ನ ಹ್ಯಾಂಡಲ್ ಮಾಡೋಕೆ ಆಗಿರಲಿಲ್ಲ. ಇಡೀ ಟೂರ್ನಿಯಲ್ಲಿ ಟೀಂ ಕೂಡ ಫೇಲ್ ಆಗಿತ್ತು. ಜಡೇಜಾ ಕೂಡ ಪರ್ಫಾಮ್​ ಮಾಡಿರಲಿಲ್ಲ. 2022ರ ಟೂರ್ನಿಯಲ್ಲಿ ಒಟ್ಟು 8 ಮ್ಯಾಚ್​​ಗಳಲ್ಲಿ ಜಡೇಜಾ ಕ್ಯಾಪ್ಟನ್ ಆಗಿದ್ರು. ಈ ಪೈಕಿ 6 ಪಂದ್ಯಗಳನ್ನ ಸಿಎಸ್​ಕೆ ಸೋತಿತ್ತು. ಕ್ಯಾಪ್ಟನ್ ಆಗಿ ಜಡ್ಡು ಕಂಪ್ಲೀಟ್ ಫೇಲ್ ಆಗಿದ್ರು. ಬಳಿಕ ಜಡೇಜಾ ಕ್ಯಾಪ್ಟನ್ಸಿಯಿಂದ ಹಿಂದೆ ಸರಿದ್ರು, ಸಿಎಸ್​​ಕೆ ಮ್ಯಾನೇಜ್ಮೆಂಟ್ ಮತ್ತೆ ಮಾಹಿಯನ್ನೇ ಕ್ಯಾಪ್ಟನ್ ಮಾಡಿತ್ತು. 2023ರಲ್ಲಿ 5ನೇ ಬಾರಿಗೆ ಸಿಎಸ್​​ಕೆ ಟ್ರೋಫಿ ಗೆಲ್ಲುತ್ತೆ. ಆದ್ರೆ ಈ ಮಧ್ಯೆ ಸಿಎಸ್​ಕೆಯಲ್ಲಿ ಒಂದು ಡೆವಲಪ್​ಮೆಂಟ್ ಕೂಡ ಆಗುತ್ತೆ. 2023ರ ಐಪಿಎಲ್​ ಆಕ್ಷನ್ ವೇಳೆ 16.25 ಕೋಟಿ ರೂಪಾಯಿ ಕೊಟ್ಟು ಇಂಗ್ಲೆಂಡ್​ ಆಲ್ರೌಂಡರ್ ಬೆನ್​ಸ್ಟೋಕ್ಸ್​ರನ್ನ ಸಿಎಸ್​​ಕೆ ತಂಡಕ್ಕೆ ಸೇರ್ಪಡೆಗೊಳಿಸುತ್ತೆ. ಹೀಗಾಗಿ ಧೋನಿ ಬಳಿಕ ಬೆನ್ಸ್​​ಸ್ಟೋಕ್ಸ್​ ಸಿಎಸ್​ಕೆ ಕ್ಯಾಪ್ಟನ್ ಆಗ್ತಾರೆ ಅಂತಾನೆ ಸುದ್ದಿ ಹಬ್ಬಿತ್ತು. ಈಗ ಮತ್ತೆ ಧೋನಿ ಬಳಿಕ ಹೂ ಈಸ್ ನೆಕ್ಸ್ಟ್ ಅನ್ನೋ ಪ್ರಶ್ನೆ ಎದ್ದಿದ್ದು ಹೀಗಾಗಿ ಬೆನ್​ ಸ್ಟೋಕ್ಸ್ ಅವರೇ ಫ್ರಂಟ್ ರನ್ನರ್ ಆಗಿದ್ರು. ಆದ್ರೆ ಸ್ಟೋಕ್ಸ್​ ಈ ಬಾರಿಯ ಐಪಿಎಲ್​​ನಲ್ಲೂ ಆಡೋದಿಲ್ಲ. ಬೆನ್​ ಸ್ಟೋಕ್ಸ್​​ ಇಂಜ್ಯೂರಿಗೆ ಒಳಗಾಗಿದ್ದು, ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಕಳೆದ ಟೂರ್ನಿಯಲ್ಲೂ ಇಂಜ್ಯೂರಿಗೆ ಒಳಗಾಗಿ ಕೇವಲ ಒಂದು ಮ್ಯಾಚ್​ ಮಾತ್ರ ಆಡಿದ್ರು. ಆ್ಯಕ್ಚುವಲಿ ಧೋನಿ ಬಳಿಕ ಬೆನ್​ ಸ್ಟೋಕ್ಸ್​​ರನ್ನ ಕ್ಯಾಪ್ಟನ್ ಮಾಡಬೇಕು ಅಂತಾನೆ ಪ್ಲ್ಯಾನ್​​ ಮಾಡಿ ಸಿಎಸ್​​ಕೆ ಬರೋಬ್ಬರಿ 16 ಕೋಟಿ ಕೊಟ್ಟು ಸ್ಟೋಕ್ಸ್​​ರನ್ನ ಪರ್ಚೇಸ್ ಮಾಡಿತ್ತು. ಆದ್ರೆ ಟೂರ್ನಿಯಿಂದಲೇ ಔಟಾಗಿರೋದ್ರಿಂದ ಸಿಎಸ್​ಕೆ ಮತ್ತೆ ಬೇರೆ ಕ್ಯಾಪ್ಟನ್​ಗೆ ತಲಾಶ್ ನಡೆಸಬೇಕಿದೆ.

ರುತುರಾಜ್ ಗಾಯಕ್ವಾಡ್​ ಗೆ CSK ಕ್ಯಾಪ್ಟನ್ಸಿ?

ಸಿಎಸ್​ಕೆ ಓಪನಿಂಗ್ ಬ್ಯಾಟ್ಸ್​​ಮನ್​ ರುತುರಾಜ್ ಗಾಯಕ್ವಾಡ್​​ ಈಗ ಕ್ಯಾಪ್ಟನ್ಸಿ ರೇಸ್​ನಲ್ಲಿದ್ದಾರೆ. ಯಾಕಂದ್ರೆ ಮಹೇಂದ್ರ ಸಿಂಗ್ ಧೋನಿಯ ಅತ್ಯಂತ ನಂಬಿಕಸ್ಥ ಆಟಗಾರರಲ್ಲಿ ರುತುರಾಜ್ ಕೂಡ ಒಬ್ರು. ಸಿಎಸ್​ಕೆ ಪರ ರುತುರಾಜ್ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಹಾಗೆಯೇ ಮೆಚ್ಯೂರ್ಡ್ ಕ್ರಿಕೆಟರ್​ ಕೂಡ. ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ ರುತುರಾಜ್ ಗಾಯಕ್ವಾಡ್ ಮಹಾರಾಷ್ಟ್ರ ತಂಡದ ಕ್ಯಾಪ್ಟನ್ ಆಗಿದ್ರು. ಮಹಾರಾಷ್ಟ್ರದ ಕ್ಯಾಪ್ಟನ್ ಅಗಿದ್ದಾಗ ರುತುರಾಜ್ ನಾಲ್ಕು ಸೆಂಚೂರಿ ಕೂಡ ಬಾರಿಸಿದ್ರು. ತಮ್ಮ ಬಳಿಕ ಸಿಎಸ್​ಕೆ ಮುಂದಿನ ಕ್ಯಾಪ್ಟನ್​​ ಆಗಿ ರುತುರಾಜ್ ಗಾಯಕ್ವಾಡ್ ಹೆಸರನ್ನ ಧೋನಿ ಸೂಚಿಸುವ ಸಾಧ್ಯತೆಯೂ ಇದೆ.

ಡೆವೊನ್ ಕಾನ್ವೆಗೆ ಕ್ಯಾಪ್ಟನ್ಸಿ ಪಟ್ಟ?

ನ್ಯೂಜಿಲ್ಯಾಂಡ್ ಬ್ಯಾಟ್ಸ್​ಮನ್ ಡೆವೊನ್ ಕಾನ್ವೆ ಕೂಡ ಚೆನ್ನೈ ಸೂಪರ್​ ಕಿಂಗ್ಸ್​​ನಲ್ಲೇ ಆಡ್ತಾ ಇದ್ದಾರೆ. ಬ್ರಿಲಿಯಂಟ್ ಬ್ಯಾಟ್ಸ್​ಮನ್ ಆಗಿರೋ ಕಾನ್ವೆ, ಅತ್ಯಂತ ಸೆನ್ಸಿಬಲ್ ಕ್ರಿಕೆಟರ್. ಕಂಪ್ಲೀಟ್ ಟೀಮ್​ ಮ್ಯಾನ್ ಆಗಿರೋ ಕಾನ್ವೆಗೆ ಕೂಡ ತಂಡವನ್ನ ಲೀಡ್ ಮಾಡುವ ಕೆಪಾಸಿಟಿ ಇದೆ. ಜೊತೆಗೆ ನ್ಯೂಜಿಲ್ಯಾಂಡ್​​ನ ಮಾಜಿ ಕ್ರಿಕೆಟಿಗ ಸ್ಟೀಫನ್ ಫ್ಲೆಮಿಂಗ್ ಹಲವು ವರ್ಷಗಳಿಂದ ಸಿಎಸ್​ಕೆ ಕೋಚ್ ಆಗಿದ್ದಾರೆ. ಹೀಗಾಗಿ ಕಾನ್ವೆ ಮತ್ತು ಫ್ಲೆಮಿಂಗ್ ಕಾಂಬಿನೇಷನ್ ಚೆನ್ನೈ ಸೂಪರ್​​ ಕಿಂಗ್ಸ್​ಗೆ ವರ್ಕೌಟ್ ಆಗಬಹುದು.

ಕ್ಯಾಪ್ಟನ್ಸಿ ರೇಸ್​ ನಲ್ಲಿ ಮೊಯಿನ್ ಅಲಿ!

ಧೋನಿ ಬಳಿಕ ಸಿಎಸ್​ಕೆ ಕ್ಯಾಪ್ಟನ್ಸಿ ರೇಸ್​ನಲ್ಲಿ ಮತ್ತೊಬ್ಬ ಫಾರಿನ್​ ಕ್ರಿಕಟರ್​ ಇಂಗ್ಲೆಂಡ್​ನ ಅಲ್ರೌಂಡರ್​ ಮೊಯಿನ್ ಅಲಿ ಕೂಡ ಇದ್ದಾರೆ. ಮೊಯಿನ್ ಅಲಿ ವನ್ ಆಫ್ ದಿ ಶಾರ್ಪ್ ಕ್ರಿಕೆಟಿಂಗ್ ಬ್ರೈನ್. ಧೋನಿಯಂತೆ ಮೊಹಿನ್ ಅಲಿ ಕೂಡ ಗ್ರೌಂಡ್​ನಲ್ಲಿ ಅತ್ಯಂತ ಕೂಲ್ ಆಗಿಯೇ ಇರ್ತಾರೆ. ಪ್ರೆಷರ್​ ಹ್ಯಾಂಡಲ್​ ಮಾಡಲು ಸ್ಕಿಲ್ ಮೊಹಿನ್ ಅಲಿಗೆ ಇದೆ. ಎಕ್ಸ್​​ಪೀರಿಯನ್ಸ್ ಕ್ರಿಕೆಟರ್ ಬೇರೆ. ಸಿಎಸ್​​ಕೆ ಟೀಂನಲ್ಲಿ ಚೆನ್ನಾಗಿ ಇನ್ವಾಲ್ ಆಗಿದ್ದಾರೆ. ತಂಡವನ್ನ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಎಸ್​ಕೆ ಕ್ಯಾಪ್ಟನ್ಸಿಗೆ ಮೊಯಿನ್ ಅಲಿ ಕೂಡ ರೈಟ್ ಚಾಯ್ಸ್ ಆಗಬಹುದು. ​

ರವೀಂದ್ರ ಜಡೇಜಾಗೆ ಮತ್ತೆ ಕ್ಯಾಪ್ಟನ್ಸಿ?

ಲಾಸ್ಟ್ ಚಾಯ್ಸ್ ರವೀಂದ್ರ ಜಡೇಜ.. ಯಾಕಂದ್ರೆ ಆಗಲೇ ಹೇಳಿದ ಹಾಗೆ ಈಗಾಗಲೇ ಒಂದು ಬಾರಿ ಜಡ್ಡು ಕ್ಯಾಪ್ಟನ್ಸಿ ನೀಡಿ ಸಿಎಸ್​​ಕೆ ಎಕ್ಸ್​​ಪರಿಮೆಂಟ್ ಮಾಡಿ ಕೈಸುಟ್ಟುಕೊಂಡಿದೆ. ಕ್ಯಾಪ್ಟನ್ ಆಗಿ ರವೀಂದ್ರ ಜಡೇಜಾ ರೋಲ್​​ನ್ನ ಸರಿಯಾಗಿ ನಿಭಾಯಿಸಿಲ್ಲ. ಏಸ್ ಎ ಲೀಡರ್ ಆಗಿ ಜಡ್ಡು ಅಪ್​ಟು ದ ಮಾರ್ಕ್ ಇಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಮತ್ತೆ ಜಡ್ಡುಗೆ ಕ್ಯಾಪ್ಟನ್ಸಿ ಹೊಣೆಯನ್ನ ನೀಡುವ ರಿಸ್ಕ್​​ನ್ನ ಸಿಎಸ್​​ಕೆ ತೆಗೆದುಕೊಳ್ಳುತ್ತಾ ಅನ್ನೋದು ಇಲ್ಲಿರುವ ಪ್ರಶ್ನೆ. ಬೇರೆ ಯಾವುದೇ ಆಪ್ಷನ್ ಇಲ್ಲ ಅಂದಾಗ ಮಾತ್ರ ಜಡ್ಡು ಲಾಸ್ಟ್ ಚಾಯ್ಸ್ ಆಗಬಹುದು. ಓವರ್​ ಆಲ್ ಆಗಿ ಹೇಳೋದಾದ್ರೆ ರವೀಂದ್ರ ಜಡೇಜಾಗೆ ಕ್ಯಾಪ್ಟನ್ ಪಟ್ಟ ಸಿಗೋದು ಡೌಟೇ.

ಹೀಗಾಗಿ ಧೋನಿ ಬಳಿಕ ಹೂ ಈಸ್ ನೆಕ್ಸ್ಟ್ ಅಂತಾ ಬಂದಾಗ ನಾಲ್ಕು ಮಂದಿಯ ಹೆಸರು ಲೀಡ್​​ನಲ್ಲಿದೆ. ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಸಿದ್ರೆ, ಐಪಿಎಲ್​ ರಿಟೈರ್​ಮೆಂಟ್ ಘೋಷಿಸಿದ್ರೆ ಸಿಎಸ್​​ಕೆ ಎಲ್ಲಾ ರೀತಿಯಲ್ಲೂ ಹೊಡೆತ ತಿನ್ನೋದಂತೂ ಗ್ಯಾರಂಟಿ.

Sulekha