ಕ್ಯಾಪ್ಟನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಲೀಡ್ ಮಾಡೋದಿಲ್ವಾ ಧೋನಿ? – ಸಂಚಲನ ಮೂಡಿಸಿದ ಮಹಿ ಪೋಸ್ಟ್

ಕ್ಯಾಪ್ಟನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಲೀಡ್ ಮಾಡೋದಿಲ್ವಾ ಧೋನಿ? – ಸಂಚಲನ ಮೂಡಿಸಿದ ಮಹಿ ಪೋಸ್ಟ್

ಐಪಿಎಲ್​ ಎಂದ ತಕ್ಷಣ ಎಲ್ಲರ ಫೋಕಸ್ ಹೋಗೋದು ಮೂವರು ಕ್ರಿಕೆಟರ್ಸ್​ಗಳ ಮೇಲೆ. ವಿರಾಟ್ ಕೊಹ್ಲಿ.. ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ. ಐಪಿಎಲ್​​ನ ಮಾಸ್ ಹೀರೋಗಳು ಅಂದ್ರೆ ಈ ಮೂವರೇ. ಇವರಿಗಿರೋವಷ್ಟು ಫ್ಯಾನ್​​ ಬೇಸ್​​ ಐಪಿಎಲ್​​ನಲ್ಲಿ ಆಡೋ ಇನ್ಯಾವುದೇ ಕ್ರಿಕೆಟರ್ಸ್​ಗಳಿಗೆ ಇಲ್ಲ. ಮೂವರು ಕೂಡ ಮೂರು ಫ್ರಾಂಚೈಸಿಗಳ ಪಾಲಿನ ಅಸೆಟ್.. ಮೂರು ಫ್ರಾಂಚೈಸಿಗಳ ಐಡೆಂಟಿಟಿ.. ಚೆನ್ನೈ ಸೂಪರ್ ಕಿಂಗ್ಸ್ ಎಂದಾಕ್ಷಣ ನೆನಪಾಗೋದು ಎಂಎಸ್ ಧೋನಿ.. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಎಂದಕೂಡಲೇ ವಿರಾಟ್ ಕೊಹ್ಲಿ.. ಮುಂಬೈ ಇಂಡಿಯನ್ಸ್ ಎಂದಾಕ್ಷಣ ರೋಹಿತ್ ಶರ್ಮಾ ಮೈಂಡ್​​ಗೆ ಬರ್ತಾರೆ. ಆದ್ರೆ ಈ ಬಾರಿಯ ಐಪಿಎಲ್​​ನಲ್ಲಿ ಈ ಮೂವರ ಪೈಕಿ ಒಬ್ಬ ಧೋನಿ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗ್ತಾ ಇರುವಂತೆ ಕಾಣ್ತಿದೆ. ಟೂರ್ನಿಯಲ್ಲಿ ಧೋನಿ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಕಾಡ್ತಿದೆ.

ಇದನ್ನೂ ಓದಿ: ಫಿಟ್ ಬಾಡಿ.. ಹಳೇ ಹೇರ್‌ಸ್ಟೈಲ್ – ಉದ್ದ ಕೂದಲಿನಲ್ಲಿ ಧೋನಿ ಸ್ಟೈಲಿಶ್ ಲುಕ್, ಮಹಿ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ

2023ರಲ್ಲಿ ಧೋನಿ ಚೆನ್ನೈ ಸೂಪರ್​ ಕಿಂಗ್ಸ್​​ನ್ನ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆದರೆ, ಧೋನಿ ಎಲ್ಲೂ ಕೂಡ ಇದು ನನ್ನ ಕೊನೆಯ ಐಪಿಎಲ್​​ ಅಂತಾ ಹೇಳಿರಲಿಲ್ಲ. ಐಪಿಎಲ್​​ನಿಂದ ರಿಟೈರ್​ಮೆಂಟ್ ಬಗ್ಗೆ ಯಾವತ್ತೂ ಮಾತನಾಡಿಯೇ ಇಲ್ಲ. 42 ವರ್ಷದ ಧೋನಿ ಈ ಬಾರಿಯ ಐಪಿಎಲ್​ನಲ್ಲೂ ಚೆನ್ನೈ ಸೂಪರ್​ ಕಿಂಗ್ಸ್​ ನ್ನ ಮುನ್ನೆಡಸಲಿದ್ದಾರೆ. ಮತ್ತೊಮ್ಮೆ ಅಖಾಡಕ್ಕಿಳೀತಾರೆ ಅಂತಾನೆ ಕ್ರಿಕೆಟ್ ಫ್ಯಾನ್ಸ್ ಭಾವಿಸಿದ್ದಾರೆ. ಸಾಲದ್ದಕ್ಕೆ ಕೆಲ ದಿನಗಳ ಹಿಂದೆ ಧೋನಿ ನೆಟ್ಸ್​​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡ್ತಾ ಇರೋ ಫೋಟೋ ಕೂಡ ವೈರಲ್ ಆಗಿತ್ತು. ಹೀಗಾಗಿ ಮಾಹಿ ಮತ್ತೊಮ್ಮೆ ಬ್ಯಾಟ್ ಬೀಸೋದನ್ನ ನೋಡ್ಬಬಹುದು ಅನ್ನೋ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ರು. ಆದ್ರೆ ಧೋನಿಯ ರೋಲ್​ನಲ್ಲಿ ಏನೋ ಚೇಂಜೆಸ್ ಆಗ್ತಾ ಇರುವಂತೆ ಕಾಣ್ತಿದೆ. ಅಪರೂಪಕ್ಕೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಎಂಎಸ್​ಡಿ ಈಗ ಮಾಡಿರೋ ಒಂದು ಪೋಸ್ಟ್ ಸಂಚಲನ ಸೃಷ್ಟಿಸಿದೆ. Can’t wait for the new season and the new ‘role’. Stay tuned!”.. ಹೊಸ ಸೀಸನ್ ಮತ್ತು ಹೊಸ ರೋಲ್​ಗಾಗಿ ಎದುರು ನೋಡ್ತಾ ಇದ್ದೇನೆ ಅನ್ನೋದಾಗಿ ಧೋನಿ ಪೋಸ್ಟ್ ಮಾಡಿದ್ದಾರೆ. ಆದ್ರೆ ಹೊಸ ರೋಲ್ ಏನು ಅನ್ನೋದನ್ನ ಧೋನಿ ಇನ್ನೂ ರಿವೀಲ್ ಮಾಡಿಲ್ಲ. ಹೀಗಾಗಿ ಕ್ರಿಕೆಟ್ ವಲಯದಲ್ಲಿ, ಎಸ್ಪೆಷಲಿ ಚೆನ್ನೈ ಸೂಪರ್​ ಕಿಂಗ್ಸ್​ ಫ್ಯಾನ್ಸ್ ಅಂತೂ ಧೋನಿಯ ನ್ಯೂ ರೋಲ್ ಏನಿರಬಹುದು ಅಂತಾ ಚರ್ಚೆ ನಡೆಸ್ತಾ ಇದ್ದಾರೆ.

ಹಾಗಿದ್ರೆ ಈ ಬಾರಿಯ ಐಪಿಎಲ್​ನಲ್ಲಿ ಧೋನಿ ಫೀಲ್ಡ್​​ನಲ್ಲಿ ಕಾಣಿಸಿಕೊಳ್ಳೋದಿಲ್ವಾ? ಕ್ಯಾಪ್ಟನ್ ಆಗಿ ಚೆನ್ನೈ ಸೂಪರ್​ ಕಿಂಗ್ಸ್​ನ್ನ ಲೀಡ್ ಮಾಡೋದಿಲ್ವಾ? 6, 7ನೇ ಆರ್ಡರ್​​ನಲ್ಲಿ ಬ್ಯಾಟಿಂಗ್​ಗೆ ಇಳಿಯೋದಿಲ್ಲ ಅನ್ನೋದಾದ್ರೆ ಧೋನಿಯ ನ್ಯೂ ರೋಲ್ ಏನಾಗಿರಬಹುದು ಅನ್ನೋ ಬಗ್ಗೆ ಈಗಾಗ್ಲೇ ಗೆಸ್​ ವರ್ಕ್ ಶುರುವಾಗಿದೆ. ಮೇನ್ ಆಗಿ ಧೋನಿ ಚೆನ್ನೈ ಸೂಪರ್​ ಕಿಂಗ್ಸ್​ನ ಕೋಚ್ ಆಗ್ತಾರಾ ಅನ್ನೋದು. ಇದುವರೆಗೂ ನ್ಯೂಜಿಲ್ಯಾಂಡ್​ನ ಸ್ಟೀಫನ್ ಫ್ಲೆಮಿಂಗ್​ ಸಿಎಸ್​ಕೆ ಕೋಚ್ ಆಗಿದ್ರು. ಆದ್ರೀಗ ಸಿಎಸ್​​ಕೆ ಮ್ಯಾನೇಜ್ಮೆಂಟ್​ ಧೋನಿಯನ್ನೇ ಹೆಡ್ ಕೋಚ್ ಮಾಡೋಕೆ ನಿರ್ಧರಿಸಿರಬಹುದಾ ಅನ್ನೋ ಅನುಮಾನ ಇದೆ. ಒಂದು ವೇಳೆ ಹೆಡ್​ ಕೋಚ್ ಅಲ್ಲದಿದ್ರೆ ಧೋನಿ ಸಿಎಸ್​ಕೆಯ ಮೆಂಟರ್ ಆಗಬಹುದು. ನಿಮಗೆ ನೆನಪಿರಬಹುದು, ಈ ಹಿಂದೆ ಟಿ20 ವರ್ಲ್ಡ್​​ಕಪ್​​ನಲ್ಲಿ ಧೋನಿ ಟೀಂ ಇಂಡಿಯಾದ ಮೆಂಟರ್ ಆಗಿ ಕೆಲಸ ಮಾಡಿದ್ರು. ಸೋ ಧೋನಿಗೆ ಮೆಂಟರ್​ ರೋಲ್​​ ನಿಭಾಯಿಸಿ ಎಕ್ಸ್​ಪೀರಿಯನ್ಸ್ ಇದೆ. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಸಿಎಸ್​ಕೆ ಮ್ಯಾನೇಜ್ಮೆಂಟ್ ಧೋನಿಗೆ ಮೆಂಟರ್​ಶಿಪ್​ ರೋಲ್ ನೀಡಿದ್ರೂ ನೀಡಿರಬಹುದು. ಒಂದು ವೇಳೆ ಧೋನಿ ಮೆಂಟರ್ ಅಥವಾ ಕೋಚ್ ಆದ್ರೆ ಚೆನ್ನೈ ಸೂಪರ್​ ಕಿಂಗ್ಸ್​​ನ ಕ್ಯಾಪ್ಟನ್ ಯಾರಾಗ್ತಾರೆ ಅನ್ನೋದು ಇಲ್ಲಿರುವ ಇನ್ನೊಂದು ಮಿಲಿಯನ್ ಡಾಲರ್ ಕ್ವಶ್ಚನ್.

ಒಂದಂತೂ ಗ್ಯಾರಂಟಿ..ಈ ಬಾರಿಯ ಐಪಿಎಲ್​​ನಲ್ಲಿ ಧೋನಿ ಆಡಲ್ಲ ಅನ್ನೋದಾದ್ರೆ ಸಿಎಸ್​ಕೆಗೆ ದೊಡ್ಡ ಹೊಡೆತ ಬೀಳೋದಂತೂ ಗ್ಯಾರಂಟಿ. ಯಾರು ಏನೇ ಹೇಳಿದ್ರೂ ಚೆನ್ನೈ ಸೂಪರ್​ ಕಿಂಗ್ಸ್​​ ಧೋನಿಯನ್ನ ತುಂಬಾನೆ ಡಿಪೆಂಡ್ ಆಗಿದೆ. ಹೀಗಾಗಿ ಕ್ಯಾಪ್ಟನ್ಸಿ ವಿಚಾರದಲ್ಲಿ ಧೋನಿಯನ್ನ ರಿಪ್ಲೇಸ್ ಮಾಡೋದು ಸಾಧ್ಯವೇ ಇಲ್ಲ. ಆದ್ರೆ ತಮ್ಮ ಹೊಸ ರೋಲ್​​ನಲ್ಲಿ ಧೋನಿ ಟೀಮ್​​ನ್ನ ಮತ್ತೊಮ್ಮೆ ಚಾಂಪಿಯನ್ ಆಗಿಸ್ತಾರಾ ಅನ್ನೋದನ್ನ ನೋಡ್ಬೇಕಿದೆ.

ಈ ಎಲ್ಲಾ ಡೆವಲಪ್​​​ಮೆಂಟ್​ಗಳ ಮಧ್ಯೆ ಚೆನ್ನೈ ಸೂಪರ್​​ ಕಿಂಗ್ಸ್​ನ ಕೆಲ ಕೀ ಪ್ಲೇಯರ್ಸ್​ಗಳೇ ಇಂಜ್ಯೂರಿಗೊಳಗಾಗಿದ್ದು ಟೂರ್ನಿ ಆರಂಭವಾಗೋ ಮೊದಲೇ ಸಿಎಸ್​ಕೆಗೆ ಹೊಡೆತ ಬಿದ್ದಿದೆ. ಚೆನ್ನೈ ಓಪನರ್ ಡೆವೋನ್ ಕಾನ್ವೆ ಈ ಬಾರಿಯ ಐಪಿಎಲ್​ನ ಫಸ್ಟ್ ಹಾಫ್​ನಲ್ಲಿ ಆಡೋದೆ ಇಲ್ಲ. ಥಂಬ್ ಇಂಜ್ಯೂರಿಗೆ ಒಳಗಾಗಿರೋ ಡೆವೋನ್ ಕಾನ್ವೆ ಸರ್ಜರಿಗೆ ಒಳಗಾಗಿದ್ರು. ಎಂಟು ವಾರಗಳ ಕಾಲ ರೆಸ್ಟ್​​ ಬೇಕಿದೆ. ಹೀಗಾಗಿ ಈ ಸೀಸನ್​​ನ ಫಸ್ಟ್ ಹಾಫ್​​ನಲ್ಲಂತೂ ಕಾನ್ವೆಗೆ ಆಡೋಕೆ ಆಗೋದಿಲ್ಲ. ಆ್ಯಕ್ಚುವಲಿ, ಸಿಎಸ್​ಕೆ ಕ್ಯಾಪ್ಟನ್ಸಿ ರೇಸ್​​ನಲ್ಲಿ ಡೆವೋನ್​ ಕಾನ್ವೆ ಕೂಡ ಇದ್ರು. ಧೋನಿ ಈ ಬಾರಿ ಆಡ್ತಿಲ್ಲ ಅಂದ್ರೆ ಕಾನ್ವೆಯನ್ನ ಕ್ಯಾಪ್ಟನ್ ಮಾಡೋ ಚಾನ್ಸ್ ಕೂಡ ಇತ್ತು. ಆದ್ರೆ ಟೂರ್ನಿಯ ಫಸ್ಟ್ ಹಾಫ್​​ನಿಂದಲೇ ಡೆವೋನ್ ಕಾನ್ವೆ ಹೊರ ಬಿದ್ದಿರೋದ್ರಿಂದ ಸಿಎಸ್​​ಕೆಗೆ ಭಾರಿ ಹೊಡೆತ ಬಿದ್ದಿರೋದಂತೂ ಸುಳ್ಳಲ್ಲ. ಇನ್ನು ಓಪನರ್ ಆಗಿ ಸಿಎಸ್​​ಕೆ ಕಾನ್ವೆ ಪ್ಲೇಸ್​​ಗೆ ರಚಿನ್ ರವೀಂದ್ರರನ್ನ ಕ್ರೀಸ್​ಗೆ ಇಳಿಸಬಹುದೋ ಏನೊ. ಹೀಗಾಗಿ ಐಪಿಎಲ್​​ನಲ್ಲೂ ತಮ್ಮ ಟ್ಯಾಲೆಂಟ್​​ ಪ್ರೂವ್ ಮಾಡೋಕೆ ರಚಿನ್​ಗೆ ಅವಕಾಶ ಸಿಕ್ಕಂತಾಗಿದೆ. ರಚಿನ್​ ರವೀಂದ್ರ ವಿಚಾರದಲ್ಲಿ 2023ರ ವಂಡೇ ವರ್ಲ್ಡ್​​ಕಪ್​ನಲ್ಲೂ ಹೀಗೆಯೇ ಆಗಿತ್ತು. ಆಗ ಕೇನ್​​ ವಿಲಿಯಮ್ಸನ್​ ಇಂಜ್ಯೂರಿಗೊಳಗಾಗಿದ್ರಿಂದ ಅವರ ಪ್ಲೇಸ್​​ನಲ್ಲಿ ರಚಿನ್​​ಗೆ ಆಡೋಕೆ ಅವಕಾಶ ಸಿಕ್ಕಿತ್ತು. ಹಾಗೆಯೇ ರಚಿನ್ ಮೇಲಿಂದ ಮೇಲೆ ಸೆಂಚೂರಿ ಕೂಡ ಹೊಡೆದಿದ್ರು. ಈಗ ಐಪಿಎಲ್​​ನಲ್ಲಿ ಡೆವೊನ್ ಕಾನ್ವೆ ಇಂಜ್ಯೂರಿಯಾಗಿದ್ದು, ರಚಿನ್​ ರವೀಂದ್ರಗೆ ಮತ್ತೊಮ್ಮೆ ರಿಪ್ಲೇಸ್ ಮಾಡೋಕೆ ಅವಕಾಶ ಸಿಕ್ಕಂತಾಗಿದೆ. ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಸಿಎಸ್​ಕೆ ಪರ ಓಪನಿಂಗ್​ಗೆ ಇಳಿಯಬಹುದು.

ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಕೇವಲ ಡೆವೋನ್ ಕಾನ್ವೆ ಅಷ್ಟೇ ಅಲ್ಲ, ಇನ್ನೂ ಕೆಲ ಪ್ಲೇಯರ್ಸ್​​ ಇಂಜ್ಯೂರಿಗೊಳಗಾಗಿದ್ದಾರೆ. ಬಾಂಗ್ಲಾದೇಶದ ಪೇಸ್ ಬೌಲರ್ ಮುಸ್ತಾಫಿಜುರ್ ರೆಹ್ಮಾನ್ ಕೂಡ ಗಾಯಗೊಂಡಿದ್ದಾರೆ. ಇನ್ನು ಆಲ್ರೌಂಡರ್ ಶಿವಮ್ ದುಬೆ ರಣಜಿ ಮ್ಯಾಚ್ ವೇಳೆ ಸೈಡ್ ಸ್ಟ್ರೈನ್ ಇಂಜ್ಯೂರಿಗೊಳಗಾಗಿದ್ರು. ಹೀಗಾಗಿ ರಣಜಿ ಟೂರ್ನಿಯಿಂದಲೇ ಹೊರ ಬಿದ್ದಿದ್ರು. ಆ್ಯಕ್ಚುವಲಿ ಶಿವಮ್ ದುಬೆ ಟಾಪ್ ಕ್ಲಾಸ್ ಫಾರ್ಮ್​ನಲ್ಲಿದ್ರು. ಈ ಸೀಸನ್​ನ ರಣಜಿಯಲ್ಲಿ ಮುಂಬೈ ಪರ ಐದು ಮ್ಯಾಚ್​​ಗಳಲ್ಲೇ 407 ರನ್ ಹೊಡೆದಿದ್ರು. ಎರಡು ಸೆಂಚೂರಿ, ಎರಡು ಹಾಫ್ ಸೆಂಚೂರಿ ದುಬೆ ಬ್ಯಾಟ್​​ನಿಂದ ಬಂದಿತ್ತು. ಇದು ಬ್ಯಾಟಿಂಗ್​ ಕಥೆಯಾದ್ರೆ, ಇನ್ನು ಬ್ಯಾಲಿಂಗ್ ಶಿವಮ್ ದುಬೆ 12 ವಿಕೆಟ್​ ಪಡೆದಿದ್ರು. ಆದ್ರೀಗ ಇಂಜ್ಯೂರಿಗೊಳಗಾಗಿರೋದ್ರಿಂದ ಐಪಿಎಲ್​​​ನ ಆರಂಭಿಕ ಕೆಲ ಮ್ಯಾಚ್​​ಗಳನ್ನ ಶಿವಮ್ ದುಬೆ ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಆ್ಯಕ್ಚುವಲಿ ಈ ಬಾರಿಯ ಐಪಿಎಲ್​​ ಶಿವಮ್ ದುಬೆ ಪಾಲಿಗೆ ತುಂಬಾನೆ ಕ್ರೂಶಿಯಲ್. ಯಾಕಂದ್ರೆ ಜೂನ್​ನಲ್ಲಿ ನಡೆಯೋ ಟಿ20 ವರ್ಲ್ಡ್​​ಕಪ್​ಗೆ ಟೀಂ ಇಂಡಿಯಾದ ಸ್ಕ್ವಾಡ್​​ ರೇಸ್​ನಲ್ಲಿ ಶಿವಮ್ ದುಬೆ ಕೂಡ ಇದ್ದಾರೆ. 15 ಮಂದಿ ಪ್ಲೇಯರ್ಸ್​ಗಳ ಲಿಸ್ಟ್​ನಲ್ಲಿ ದುಬೆಯನ್ನ ಕೂಡ ಪಿಕ್ ಮಾಡೋ ಸಾಧ್ಯತೆ ಇದೆ. ಐಪಿಎಲ್​​ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ರೆ ಶಿವಮ್​ ದುಬೆ ಸೆಲೆಕ್ಟ್​ ಆಗೋದು ಆಲ್​​ಮೋಸ್ಟ್ ಗ್ಯಾರಂಟಿ ಅಂತಾನೆ ಹೇಳಬಹುದು. ಅನ್​ಫಾರ್ಚ್ಯುನೇಟ್ಲಿ ಶಿವಮ್ ದುಬೆ ಈಗ ಇಂಜ್ಯೂರಿಯಾಗಿದ್ದು, ಆದಷ್ಟು ಬೇಗ ರಿಕವರಿ ಆಗಿ ಸಿಎಸ್​​ಕೆಯನ್ನ ಜಾಯಿನ್ ಆದ್ರೆ ಸೇಫ್.

ಇನ್ನು ನ್ಯೂಜಿಲ್ಯಾಂಡ್​​ನ ಮತ್ತೊಬ್ಬ ಪ್ಲೇಯರ್ ಡ್ಯಾರೆಲ್ ಮಿಚೆಲ್ ಕೂಡ ಗಾಯಗೊಂಡಿದ್ರು. ಆದ್ರೀಗ ರಿಕವರಿ ಹಂತದಲ್ಲಿದ್ದು, ಐಪಿಎಲ್​​ ವೇಳೆಗೆ ಕಮ್​​ಬ್ಯಾಕ್ ಮಾಡೋ ನಿರೀಕ್ಷೆ ಇದೆ. ಮೋಸ್ಟ್ ಪ್ರಾಬಬ್ಲಿ ಆರಂಭಿಕ ಕೆಲ ಮ್ಯಾಚ್​ಗಳನ್ನ ಡ್ಯಾರೆಲ್ ಮಿಚೆಲ್ ಮಿಸ್ ಮಾಡಿಕೊಂಡ್ರೂ ಆಶ್ಚರ್ಯ ಇಲ್ಲ. ಬರೋಬ್ಬರಿ 14 ಕೋಟಿ ಕೊಟ್ಟು ಮಿಚೆಲ್​ರನ್ನ ಸಿಎಸ್​ಕೆ ಖರೀದಿಸಿದೆ.

Sulekha