ಸಿಎಂ ವಿಜಯ್ ಪತ್ನಿ ಸಂಗೀತಾ ಮತ್ತೆ ಒಂದಾಗುತ್ತಾರಾ? – ಮೂಕಾಂಬಿಕೆ ದರ್ಶನದ ಬಳಿಕ ಮನಸ್ಸು ಬದಲಿಸಿದ್ರಾ ವಿಜಯ್?

ಸಿಎಂ ವಿಜಯ್ ಪತ್ನಿ ಸಂಗೀತಾ ಮತ್ತೆ ಒಂದಾಗುತ್ತಾರಾ? –  ಮೂಕಾಂಬಿಕೆ ದರ್ಶನದ ಬಳಿಕ ಮನಸ್ಸು ಬದಲಿಸಿದ್ರಾ ವಿಜಯ್?

ತಮಿಳುನಾಡು ಸಿಎಂ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ದಾಂಪತ್ಯ ಜೀವನ ಮತ್ತೆ ಒಂದಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೊಲ್ಲೂರು ಮೂಕಾಂಬಿಕೆಯ ದರ್ಶನದಿಂದ ವಿಜಯ್ ದಾಂಪತ್ಯ ಜೀವನ ಸರಿಯಾಗುತ್ತಿದೆ ಎಂಬ ವಿಚಾರ ಚರ್ಚೆಯಲ್ಲಿದೆ.

ಇದನ್ನೂ ಓದಿ:BBKಗೆ ಹೂವಿನ ಬಾಣದ ಹುಡುಗಿ.. CONTROVERSY ಮಾಡಿದ್ರಷ್ಟೇ ಚಾನ್ಸ್?‌ – ದೊಡ್ಮನೆಗೆ ಬರಲು ಈ ತಪ್ಪು ಬೇಡ!

ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವೈವಾಹಿಕ ಜೀವನದ ಬಗ್ಗೆ ಗುಡ್ ನ್ಯೂಸ್ ಕೇಳಿಬರುತ್ತಿದೆ. 27 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ವಿಚ್ಛೇದನ ಅರ್ಜಿ ಸಲ್ಲಿಸಲಾಗಿದೆ ಎಂಬ ವರದಿಗಳು ಹೊರಬಂದ ಬಳಿಕ ಚರ್ಚೆ ಶುರುವಾಗಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ದಂಪತಿಗಳ ನಡುವೆ ಸಂಧಾನದ ಪ್ರಯತ್ನಗಳು ನಡೆಯುತ್ತಿವೆ ಎಂಬ ಸುದ್ದಿ ಹೊರಬಿದ್ದಿದೆ. ಕಳೆದ ಫೆಬ್ರವರಿಯಲ್ಲಿ ಸಂಗೀತಾ ನ್ಯಾಯಾಲಯದ ಮೊರೆ ಹೋಗಿದ್ದು, ತಮ್ಮ ದಾಂಪತ್ಯ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ಕುರಿತು ಹಲವು ಆರೋಪಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಈ ಬೆಳವಣಿಗೆ ತಮಿಳು ಚಿತ್ರರಂಗ ಮಾತ್ರವಲ್ಲದೆ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ವಿಜಯ್ ಅವರ ಕುಟುಂಬ ಸದಸ್ಯರು, ವಿಶೇಷವಾಗಿ ತಾಯಿ ಶೋಭಾ ಚಂದ್ರಶೇಖರ್, ದಂಪತಿಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಹಿರಿಯರು ಮತ್ತು ಆಪ್ತರು ಇಬ್ಬರನ್ನೂ ಮತ್ತೆ ಒಂದಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.

ಶುಕ್ರವಾರವಷ್ಟೇ ಮುಖ್ಯಮಂತ್ರಿ ವಿಜಯ್, ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ್ದರು. ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಸುಮಾರು ಅರ್ಧ ಗಂಟೆ ಕಾಲ ಕಳೆದ ಅವರು ದೇವಿಗೆ ವಿಶೇಷ ಕಾಣಿಕೆಯನ್ನೂ ಅರ್ಪಿಸಿದರು. ಈ ಭೇಟಿ ನಂತರ ಅವರ ವೈಯಕ್ತಿಕ ಜೀವನದ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ. ವರದಿಗಳ ಪ್ರಕಾರ, ಲಂಡನ್‌ನಲ್ಲಿ ವಾಸಿಸುತ್ತಿದ್ದ ಸಂಗೀತಾ ಸ್ವರ್ಣಲಿಂಗಂ ತಮ್ಮ ತಾಯಿ ಮತ್ತು ಕುಟುಂಬದ ಹಿರಿಯರ ಸಲಹೆಯ ಮೇರೆಗೆ ಚೆನ್ನೈನಲ್ಲಿರುವ ಕುಟುಂಬ ನಿವಾಸಕ್ಕೆ ಮರಳಿದ್ದಾರೆ ಎನ್ನಲಾಗಿದೆ. ದಂಪತಿಗಳು ಒಂದೇ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ ಎಂಬ ಮಾಹಿತಿಯೂ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಜೂನ್ 22 ರಂದು ವಿಜಯ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ವಿಶೇಷ ದಿನದಂದು ದಂಪತಿಗಳು ಒಟ್ಟಾಗಿ ಕಾಣಿಸಿಕೊಳ್ಳಬಹುದು ಅಥವಾ ತಮ್ಮ ಸಂಬಂಧದ ಬಗ್ಗೆ ಮಹತ್ವದ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಿದೆ.

Sulekha

Leave a Reply

Your email address will not be published. Required fields are marked *