ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ! – ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌

ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ! – ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌

ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ರೂ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಇದಿಷ್ಟೇ ಅಲ್ಲದೇ ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ ಅಂತ ಹೊಸ ಬಾಂಬ್‌ ಸಿಡಿಸಿದ್ದಾರೆ.

ಇದನ್ನೂ ಓದಿ: ಮ್ಯಾನ್ಮಾರ್‌ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿಕೆ – ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಮೂರು ನನಗೆ ಲಕ್ಕಿ, 3ನೇ ಬಾರಿ ಉಚ್ಚಾಟನೆ ಮಾಡಿರೋದು, ಮುಂದೆ ಏನಾಗುತ್ತೆ ನೋಡಿ, ಇದಕ್ಕೆ ಕಾರಣಕರ್ತರಾದವರು ನಾಶ ಆಗ್ತಾರೆ. ಯಾರ ಮನವರಿಕೆಯೂ ನಾನು ಮಾಡಲ್ಲ. ಜನಮೆಚ್ಚಿದ ನಾಯಕ ಯಾರೂ ಇಲ್ಲ. ವಿಜಯೇಂದ್ರ ಸೇರಿ ಯಾರಿಗೂ 3 ಜನ ಸೇರಿಸೋ ಯೋಗ್ಯತೆ ಇಲ್ಲ. ಆದ್ರೆ ನಾನು ಬಾಡಿಗೆ ಜನ ತಂದಿಲ್ಲ. ನಿನ್ನೆ ವಿಜಯಪುರದಲ್ಲಿ ಬಾಡಿಗೆ ಕೊಟ್ಟು ಕರೆಸಿಲ್ಲ. ಕಳೆದ ಚುನಾವಣೆಯಲ್ಲಿ ಸಿಟಿ ರವಿಯನ್ನು ತನ್ನ ಚೇಲಾ ನಿಲ್ಲಿಸಿ ಯಡಿಯೂರಪ್ಪ ಸೋಲಿಸಿದ ಅಂತ ಯತ್ನಾಳ್‌ ಮಾರ್ಮಿಕವಾಗಿ ನುಡಿದಿದ್ದಾರೆ.

ಯಡಿಯೂರಪ್ಪ ಮಗ ಒತ್ತಡ ತಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ಯಾವ ವೀರಶೈವ ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ. ಭ್ರಮೆಯಿಂದ ಕೇಂದ್ರದವರು ಹೊರಗೆ ಬರಬೇಕು. ರಾಮಾಯಣ, ಮಹಾಭಾರತದಲ್ಲೂ ಅಪಮಾನ ಮಾಡಿರೋದಿದೆ. ಹಾಗಾಗಿ ನನಗೆ ಯಾವ ಮುಜುಗರವೂ ಇಲ್ಲ. ಬಿಎಸ್‌ವೈ ಕುಟುಂಬವನ್ನು ನಾನು ಹೊರಗೆ ಇಡೋವರೆಗೂ ಬಿಡೋದಿಲ್ಲ ಅಂತ ಶಪಥ ಮಾಡಿದ್ದಾರೆ.

ನಾನು ಮತ್ತೆ ದೆಹಲಿಗೆ ಹೋಗಲ್ಲ. ಮರುಪರಿಶೀಲನೆಗೆ ನಾನು ಮನವಿ ಮಾಡಲ್ಲ. ನಾನು ಹಿಂದೂ ಪರವಾಗಿ ಹೋರಾಟ ಮಾಡ್ತೇನೆ. ಇಡೀ ರಾಜ್ಯ ಸುತ್ತುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ. ಹಿಂದೂಗಳ ರಕ್ಷಣೆ ಮಾಡುವವರು ಯಾರೂ ಇಲ್ಲ. ಉ.ಕರ್ನಾಟಕದ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ನಮ್ಮ ಹಿಂದೆ ಬಹಳ ದೊಡ್ಡ ಶಕ್ತಿ ಇದೆ. ರಾಘವೇಂದ್ರ ಹೊರತು ಪಡಿಸಿ ಎಲ್ಲಾ ಸಂಸದರೂ ನಮ್ಮ ಪರ ಇದ್ದಾರೆ ಅಂತ ಯತ್ನಾಳ್‌ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *