ಹೊಸ ಪಕ್ಷ ಸ್ಥಾಪಿಸುತ್ತಾರಾ ಅಶೋಕ್ ಗೆಹ್ಲೋಟ್? – ಚುನಾವಣೆ ಹೊಸ್ತಿಲಲ್ಲೇ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಿರುಗಾಳಿ!

ಹೊಸ ಪಕ್ಷ ಸ್ಥಾಪಿಸುತ್ತಾರಾ ಅಶೋಕ್ ಗೆಹ್ಲೋಟ್? – ಚುನಾವಣೆ ಹೊಸ್ತಿಲಲ್ಲೇ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಿರುಗಾಳಿ!

ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿಯೂ ಆಸರೆ ಅಂತಾರಲ್ಲ ಹಾಗೆ ಸಾಲು ಸಾಲು ಸೋಲಿಂದ ಕಂಗೆಟ್ಟಿದ್ದ ಕಾಂಗ್ರೆಸ್​​ ಪಕ್ಷಕ್ಕೆ ಕರ್ನಾಟಕದ ಗೆಲುವು ಬೂಸ್ಟರ್ ಡೋಸ್ ನೀಡಿದಂತಾಗಿದೆ. ಇದೇ ಗೆಲುವನ್ನ ಅಸ್ತ್ರವಾಗಿ ಬಳಸಿಕೊಂಡು ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಿಸೋಕೆ ಪ್ಲ್ಯಾನ್ ಕೂಡ ರೆಡಿ ಆಗ್ತಿದೆ. ಆದರೆ ರಾಜಸ್ಥಾನದಲ್ಲಿನ ಬೆಳವಣಿಗೆ ಪಕ್ಷ ಮತ್ತೆ ಬಿರುಗಾಳಿಗೆ ಸಿಲುಕುವ ಆತಂಕ ಎದುರಾಗಿದೆ.

ರಾಜಸ್ಥಾನದಲ್ಲಿ ಈಗಾಗಲೇ ಇಬ್ಬರು ನಾಯಕರ ನಡುವಿನ ಜಟಾಪಟಿ ಜಗಜ್ಜಾಹೀರಾಗಿದೆ. ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ನಡುವಿನ ಸಿಎಂ ಕುರ್ಚಿ ಕದನ ಬೇಗುದಿಗೆ ಕಾರಣವಾಗಿದೆ. ಇದರ ನಡುವೆ ರಾಜಸ್ಥಾನದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಸಚಿನ್‌ ಪೈಲಟ್‌ ಕಾಂಗ್ರೆಸ್‌ನಿಂದ ಹೊರಬಂದು ತಮ್ಮದೇ ಆದ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ‘ವಿಧಾನಸಭೆಗೆ ಟಿಕೆಟ್ ಸಿಗಲಿಲ್ಲ.. ಲೋಕಸಭೆಗಾದ್ರೂ ಕೊಡಿ’ – 2 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಭವಾನಿ ರೇವಣ್ಣ?

ಜೂನ್‌ 11 ರಂದು ಸಚಿನ್‌ ಪೈಲಟ್‌ ಅವರ ತಂದೆ ರಾಜೇಶ್‌ ಪೈಲಟ್‌ ಅವರ ಪುಣ್ಯಸ್ಮರಣೆ ಇದೆ. ಆ ದಿನವೇ ಸಚಿನ್‌ ಪೈಲಟ್‌ ತಮ್ಮ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಹೊಸ ಪಕ್ಷಕ್ಕೆ ಪ್ರಗತಿಶೀಲ ಕಾಂಗ್ರೆಸ್‌ ಎಂಬ ಹೆಸರಿಡಲಾಗಿದೆ ಎನ್ನಲಾಗಿದೆ. ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದ ಸಚಿನ್‌ ಪೈಲಟ್‌ ಈಗ ಕಾಂಗ್ರೆಸ್‌ನಿಂದ ಹೊರಬರುವ ತೀರ್ಮಾನಕ್ಕೆ ಬಂದಿದ್ದು, ಭಾನುವಾರ ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಜೈಪುರದಲ್ಲಿ ಬೃಹತ್‌ ರ‍್ಯಾಲಿ ಸಂಘಟಿಸಿ ಅಲ್ಲಿಯೇ ಹೊಸ ಪಕ್ಷವನ್ನು ಸಚಿನ್‌ ಪೈಲಟ್‌ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಗತಿಶೀಲ ಕಾಂಗ್ರೆಸ್‌ ಪಕ್ಷ ಸ್ಥಾಪನೆಗೂ ಮೊದಲು ಸಚಿನ್‌ ಪೈಲಟ್‌ ಟೆಂಪಲ್‌ ರನ್‌ ನಡೆಸಿದ್ದು, ಅವರಿಗೆ ರಾಜ್ಯಸಭಾ ಸಂಸದ ವಿವೇಕ್‌ ಟಣಖಾ ಸಾಥ್‌ ನೀಡಿದ್ದಾರೆ. ಆದರೆ, ಸಚಿನ್‌ ಪೈಲಟ್‌ ಹೊಸ ಪಕ್ಷ ಸ್ಥಾಪಿಸಿದರೆ ಅನೇಕ ಶಾಸಕರು ಪ್ರಗತಿಶೀಲ ಕಾಂಗ್ರೆಸ್‌ ಪಕ್ಷಕ್ಕೆ ವಲಸೆ ಹೋಗುವ ಸಾಧ್ಯತೆ ಇದೆ. ಈ ಬೆಳವಣಿಗೆ ಅಶೋಕ್‌ ಗೆಹ್ಲೋಟ್‌ ಸರ್ಕಾರದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.

ಸಚಿನ್ ಪೈಲಟ್ ಹೊಸ ಪಕ್ಷ ಸ್ಥಾಪನೆ ಸಾಧ್ಯತೆಯನ್ನ ರಾಜಸ್ಥಾನದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಖ್ಜಿಂದರ್ ಸಿಂಗ್ ರಾಂಧವಾ ತಳ್ಳಿಹಾಕಿದ್ದಾರೆ. ಪಕ್ಷವು ರಾಜಸ್ಥಾನದ ನಾಯಕರಿಗೆ ಅವರ ಸ್ಥಾನಮಾನಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ನಿಯೋಜಿಸುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಇತ್ತೀಚೆಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಬಳಿಕ  ರಾಜಸ್ಥಾನದ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದಿದ್ದರು. 2018 ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿದಾಗಿನಿಂದ ಗೆಹ್ಲೋಟ್ ಮತ್ತು ಪೈಲಟ್ ಸಿಎಂ ಕುರ್ಚಿಗಾಗಿ ಜಗಳದಲ್ಲಿ ತೊಡಗಿದ್ದಾರೆ.

suddiyaana