ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ? ಭಾರತದ ಮುಂಬೈ, ಕೊಲ್ಕತ್ತಾ ಟಾರ್ಗೆಟ್!!

ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ? ಭಾರತದ ಮುಂಬೈ, ಕೊಲ್ಕತ್ತಾ ಟಾರ್ಗೆಟ್!!

ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ.3.1 ರಷ್ಟಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಮೊದಲು ನಾಸಾ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ 1. ರಷ್ಟಿದೆ ಎಂದು ಹೇಳಿತ್ತು. ನಂತರ ಇನ್ನಷ್ಟು ಅಧ್ಯಯನದ ಬಳಿಕ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ.3.1 ರಷ್ಟಿದೆ ಎಂದು ಹೇಳಿದೆ. 2024 YR4 ಕ್ಷುದ್ರಗ್ರಹದ ಬಗ್ಗೆ ಲೇಟೆಸ್ಟ್‌ ಅಪ್ಡೇಟ್‌ ಬಿಡುಗಡೆ ಮಾಡಿರುವ ಅಮೆರಿಕದ ನಾಸಾ , ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದೆ. 2032, ಡಿಸೆಂಬರ್‌ 22ರಂದು 2024 YR4 ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ. 3.1ರಷ್ಟು ಹೆಚ್ಚಿದೆ ಎಂದು ನಾಸಾ ಗಂಭೀರ ಎಚ್ಚರಿಕೆ ನೀಡಿದೆ.

ಬಾಹ್ಯಾಕಾಶದಲ್ಲಿ ಗಂಟೆಗೆ 40,000 ಮೈಲುಗಳ ವೇಗದಲ್ಲಿ ಚಲಿಸುತ್ತಿರುವ 2024 YR4 ಕ್ಷುದ್ರಗ್ರಹ ಒಂದು ವೇಳೆ ಭೂಮಿಗೆ ಅಪ್ಪಳಿಸಿದರೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ನ ಹಿರೋಷಿಮಾ ನಗರದ ಮೇಲೆ ಅಮೆರಿಕ ಬೀಳಿಸಿದ್ದ ಪರಮಾಣು ಬಾಂಬ್‌ಗಿಂತ 500 ಪಟ್ಟು ಹೆಚ್ಚು ಶಕ್ತಿಶಾಲಿಯಾದ 8 ಮೆಗಾಟನ್ ಟಿಎನ್‌ಟಿಗೆ ಸಮಾನವಾದ ಶಕ್ತಿಯನ್ನು ಬಿಡುಗಡೆ ಮಾಡಬಹುದು ಎಂದು ನಾಸಾ ಅಂದಾಜಿಸಿದೆ.

 

ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ  ಇಎಸ್‌ಎ  2024 YR4 ಕ್ಷುದ್ರಗ್ರಹದ ಪಥವನ್ನು ಹತ್ತಿರದಿಂದ ಗಮನಿಸುತ್ತಿವೆ. ಇಎಸ್‌ಎ ಪ್ರಸ್ತುತ ಡಿಕ್ಕಿಯ ಸಂಭವನೀಯತೆಯನ್ನು ಶೇ. 2.8 ಎಂದು ಅಂದಾಜಿಸಿದ್ದು, ಇದು ನಾಸಾದ ಅಂದಾಜಿಗಿಂತ ಸ್ವಲ್ಪ ಕಡಿಮೆ ಇದೆ.

ಈ ಕುರಿತು ಮಾತನಾಡಿರುವ ಇಎಸ್‌ಎ ನ ಗ್ರಹ ರಕ್ಷಣಾ ಕಚೇರಿಯ ಮುಖ್ಯಸ್ಥ ರಿಚರ್ಡ್ ಮೊಯಿಸ್ಲ್, “2024 YR4 ಕ್ಷುದ್ರಗ್ರಹ 60 ಮಿಲಿಯನ್‌ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿ ಡೈನಾಸೋರ್‌ಗಳ ಸರ್ವನಾಶಕ್ಕೆ ಕಾರಣವಾದ ಕ್ಷುದ್ರಗ್ರಹದಷ್ಟು ದೊಡ್ಡದಾಗಿಲ್ಲ. ಈ ಕ್ಷುದ್ರಗ್ರಹ ಇಡೀ ಗ್ರಹವನ್ನು ನಾಶಮಾಡುವುದಿಲ್ಲವಾದರೂ, ಸಂಭವನೀಯ ಅಪ್ಪಳಿಸುವಿಕೆಯ ಪ್ರದೇಶದ ದೊಡ್ಡ ನಗರಗಳನ್ನು ನಾಶ ಮಾಡಬಲ್ಲದು..” ಎಂದು ಸ್ಪಷ್ಟಪಡಿಸಿದ್ದಾರೆ.

 

ಇನ್ನು “2024 YR4 ಕ್ಷುದ್ರಗ್ರಹವು ಭೂಮಿಯ ಪೂರ್ವ ಪೆಸಿಫಿಕ್ ಸಾಗರ, ಉತ್ತರ ದಕ್ಷಿಣ ಅಮೆರಿಕ, ಅಟ್ಲಾಂಟಿಕ್ ಸಾಗರ, ಆಫ್ರಿಕಾ, ಅರೇಬಿಯನ್ ಸಮುದ್ರ ಮತ್ತು ದಕ್ಷಿಣ ಏಷ್ಯಾ ಭಾಗದಲ್ಲಿ ಅಪ್ಪಳಿಸುವ ಸಂಭವನೀಯತೆ ಹೆಚ್ಚಿದೆ..” ಎಂದು ತಿಳಸಿದೆ. ಭಾರತದ ಮುಂಬೈ, ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಸೇರಿ   ಜನನಿಬಿಡ ನಗರಗಳು ಸಂಭಾವ್ಯ ಹೊಡೆತದ ವಲಯದಲ್ಲಿವೆ. ಒಟ್ಟಾರೆಯಾಗಿ ಈ ಪ್ರದೇಶದಲ್ಲಿ 110 ಮಿಲಿಯನ್‌ಗಿಂತಲೂ ಹೆಚ್ಚು ಜನ ವಾಸ ಮಾಡುತ್ತಾರೆ. ಕ್ಷುದ್ರಗ್ರಹ ಯಾವಾಗ ಅಪ್ಪಳಿಸುತ್ತೆ ಅನ್ನೋ ಭಯ ಜನರನ್ನ ಕಾಡುತ್ತಿದೆ.

 

 

Kishor KV

Leave a Reply

Your email address will not be published. Required fields are marked *