2024 ಹೊಸ ವರ್ಷ ಟೀಮ್ ಇಂಡಿಯಾಗೆ ಅದೃಷ್ಟ ತರುತ್ತಾ? – 2023ರ ಸೋಲಿನ ಕಹಿಯನ್ನು ಅಭಿಮಾನಿಗಳು ಮರೆಯುತ್ತಾರಾ?

2024 ಹೊಸ ವರ್ಷ ಟೀಮ್ ಇಂಡಿಯಾಗೆ ಅದೃಷ್ಟ ತರುತ್ತಾ? – 2023ರ ಸೋಲಿನ ಕಹಿಯನ್ನು ಅಭಿಮಾನಿಗಳು ಮರೆಯುತ್ತಾರಾ?

2023 ಇಂಡಿಯನ್​ ಕ್ರಿಕೆಟ್​ ವಿಚಾರದಲ್ಲಿ ಬ್ಯಾಡ್​​ ಮೆಮೋರಿಯೇ ಹೆಚ್ಚಾಗಿತ್ತು. ವರ್ಲ್ಡ್​ಕಪ್​ ಫೈನಲ್​​ ಸೋಲಿನಿಂದಾಗಿ ಕ್ರಿಕೆಟ್​​ ಅಭಿಮಾನಿಗಳು 2023ನ್ನ ನೆನಪು ಮಾಡಿಕೊಳ್ಳೋಕೂ ಇಷ್ಟಪಡಲ್ಲ. ಆದ್ರೆ 2024ರಲ್ಲಿ ಕೆಲ ಅಚೀವ್​ಮೆಂಟ್​​ ಮಾಡಿಕೊಳ್ಳೋ ಅವಕಾಶ ಟೀಂ ಇಂಡಿಯಾಗೆ. 2023ರಲ್ಲಿ ವಂಡೇ ವರ್ಲ್ಡ್​ಕಪ್​ ಸೋತಿದ್ರು, ವರ್ಲ್ಡ್ ಟೆಸ್ಟ್​ ಚಾಂಪಿಯನ್​​ಶಿಪ್​​ನ್ನ ಕೂಡ ಸೋತಿದ್ರು. ಆದ್ರೆ ಈ ವರ್ಷ ಇನ್ನೊಂದು ವಿಶ್ವಕಪ್​​ ಗೆಲ್ಲುವ ಅಪಾರ್ಚ್ಯುನಿಟಿ ಟೀಂ ಇಂಡಿಯಾಗೆ ಇದೆ.

ಇದನ್ನೂ ಓದಿ: ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಕ್ವಾಲಿಫೈ ಆಗಲು ಟೀಮ್ ಇಂಡಿಯಾ ಮುಂದಿದೆ ಸವಾಲು..!

2024 ಇಂಡಿಯನ್ ಕ್ರಿಕೆಟ್​ಗೆ ಮಾತ್ರವಲ್ಲಿ ಕೆಲ ಆಟಗಾರರ ಭವಿಷ್ಯವನ್ನು ಕೂಡ ನಿರ್ಧರಿಸಲಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಮುಂದೆಯಂತೂ ದೊಡ್ಡ ಟಾಸ್ಕ್​ ಇದೆ. ಎರಡು ಐಸಿಸಿ ಟೂರ್ನಿಮೆಂಟ್​ಗಳನ್ನ ಟಾರ್ಗೆಟ್ ಇಟ್ಟುಕೊಂಡೇ ಆಡಬೇಕಿದೆ. ಒಂದು ಇದೇ ವರ್ಷ ನಡೆಯೋ ಟಿ-20 ವರ್ಲ್ಡ್​ಕಪ್​.. ಇನ್ನೊಂದು 2025ರಲ್ಲಿ ನಡೆಯೋ ವರ್ಲ್ಡ್ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್.

ಸೌತ್​ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್​ ಮ್ಯಾಚ್​​ನ್ನ ಟೀಂ ಇಂಡಿಯಾ ಸೋತಾಗಿದೆ. ಇನ್ನೊಂದು ಟೆಸ್ಟ್ ಬಾಕಿ ಇದೆ. ಜನವರಿ 3ರಿಂದ ಕೇಪ್​ಟೌನ್​​ನಲ್ಲಿ 2ನೇ ಟೆಸ್ಟ್ ಮ್ಯಾಚ್ ನಡೆಯಲಿದೆ. ಸೀರಿಸ್​ ಗೆಲ್ಲೋಕೆ ಆಗದಿದ್ರೂ ಸೀರಿಸ್ ಲೆವೆಲ್ ಮಾಡುವ ಅವಕಾಶ ಟೀಂ ಇಂಡಿಯಾಗೆ ಇದೆ. ಒಂದು ವೇಳೆ ಮ್ಯಾಚ್ ಡ್ರಾ ಅದ್ರೂ ಕೂಡ ಸೀರಿಸ್ ಕಳೆದುಕೊಳ್ಳಬೇಕಾಗುತ್ತೆ. ಹೀಗಾಗಿ ಹೊಸ ವರ್ಷವನ್ನ ಮ್ಯಾಚ್​ ವಿನ್ ಆಗೋ ಮೂಲಕ ಆರಂಭಿಸ್ತಾರಾ ನೋಡಬೇಕಿದೆ. ಸೋತ್ರೆ ಮಾತ್ರ ನಿಜಕ್ಕೂ ಕ್ರಿಕೆಟ್​​ ಫ್ಯಾನ್ಸ್ ವರ್ಷಾರಂಭದಲ್ಲೇ ಅಪ್​ಸೆಟ್ ಆಗೋದು ಗ್ಯಾರಂಟಿ. ಸೋ ಸೆಕೆಂಡ್​ ಟೆಸ್ಟ್​​ನಲ್ಲಿ ರೋಹಿತ್ & ಟೀಂ ಫೈಟ್ ಮಾಡಲೇಬೇಕಿದೆ.

ಅಫ್ಘಾನಿಸ್ತಾನ ವಿರುದ್ಧ ಟಿ-20 ಸೀರಿಸ್!

ಜನವರಿ 11ರಿಂದ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ 3 ಮ್ಯಾಚ್​​ಗಳ ಟಿ-20 ಸೀರಿಸ್​​ನ್ನ ಆಡಲಿದೆ. ಜನವರಿ 11, ಜನವರಿ 14 ಮತ್ತು ಜನವರಿ 17ರಂದು ಭಾರತದಲ್ಲೇ ಈ ಮೂರು ಮ್ಯಾಚ್​​ಗಳು ನಡೆಯಲಿದೆ. ಆದ್ರೆ ಅಫ್ಘಾನಿಸ್ತಾನ ವಿರುದ್ಧದ ಈ ಮೂರೂ ಮ್ಯಾಚ್​ಗಳು ಟೀಂ ಇಂಡಿಯಾಗೆ ತುಂಬಾನೆ ಇಂಪಾರ್ಟೆಂಟ್. ಯಾಕಂದ್ರೆ ಈ ವರ್ಷ ನಡೆಯೋ ಟಿ-20 ವರ್ಲ್ಡ್​​ಕಪ್​​​ಗೂ ಮುನ್ನ ಟೀಂ ಇಂಡಿಯಾ ಆಡ್ತಿರೋ ಏಕೈಕ ಟಿ-20 ಸೀರಿಸ್ ಅಂದ್ರೆ ಅದು ಅಫ್ಘಾನಿಸ್ತಾನದ ವಿರುದ್ಧ. ಹೀಗಾಗಿ ಆಫ್ಘನ್ ವಿರುದ್ಧದ ಟಿ-20 ಸೀರಿಸ್​​ಗೆ ಟೀಂ ಇಂಡಿಯಾದ ಸ್ಕ್ವಾಡ್ ಹೇಗಿರುತ್ತೆ ಅನ್ನೋದು ಕೂಡ ತೀವ್ರ ಕುತೂಹಲ ಕೆರಳಿಸಿದೆ. ಸೂರ್ಯಕುಮಾರ್ ಯಾದವ್ ಇಂಜ್ಯೂರಿಗೊಳಗಾಗಿದ್ದಾರೆ. ಅಫ್ಘನ್ ವಿರುದ್ಧ ಆಡೋದು ಡೌಟ್. ಇನ್ನು ಹಾರ್ದಿಕ್ ಪಾಂಡ್ಯಾ ಕಮ್​ಬ್ಯಾಕ್ ಮಾಡ್ತಾರಾ ಅನ್ನೋದು ಇನ್ನೂ ಗ್ಯಾರಂಟಿ ಇಲ್ಲ. ಹಾಗಿದ್ರೆ ಟೀಂ ಇಂಡಿಯಾವನ್ನ ಲೀಡ್ ಮಾಡೋರು ಯಾರು ಅನ್ನೋ ಪ್ರಶ್ನೆ ಕೂಡ ಇಲ್ಲಿದೆ. ರೋಹಿತ್​ ಶರ್ಮಾ ಅಫ್ಘನ್ ವಿರುದ್ಧ ಆಡ್ತಾರಾ? ಇಲ್ವಾ ಅನ್ನೋದು ಕೂಡ ಕನ್ಫರ್ಮ್ ಇಲ್ಲ. ಹೀಗಾಗಿ ಈ ಆ್ಯಂಗಲ್​​ನಲ್ಲಿ ಆಫ್ಘನ್​ ಸೀರಿಸ್​ ಕೂಡ ಒಂದಷ್ಟು ಕ್ಯುರಿಯಾಸಿಟಿ ಮೂಡಿಸಿದೆ.

ಇಂಗ್ಲೆಂಡ್ ವಿರುದ್ಧ 5 ಟೆಸ್ಟ್!

ಜನವರಿ 25ರಿಂದ ಮಾರ್ಚ್ 11ರವರೆಗೂ ಟೀಂ ಇಂಡಿಯಾಗೆ ಬಿಗ್ ಟೆಸ್ಟ್ ನಡೆಯಲಿದೆ. ಇಂಗ್ಲೆಂಡ್ ವಿರುದ್ಧ ಭಾರತದಲ್ಲೇ ಒಟ್ಟು 5 ಮ್ಯಾಚ್​ಗಳ ಟೆಸ್ಟ್ ಸೀರಿಸ್ ನಡೆಯುತ್ತೆ. ಹೋಮ್​ ಗ್ರೌಂಡ್​​ನಲ್ಲೇ ಈ ಟೆಸ್ಟ್​ ಸೀರಿಸ್​ ನಡೀತಾ ಇರೋದು ಟೀಂ ಇಂಡಿಯಾಗೆ ಅಡ್ವಾಂಟೇಜ್​ ಆನ್ನೋದು ಬಿಟ್ರೆ, ಬಟ್ ಇದು ಅತ್ಯಂತ ಕ್ರೂಶಿಯಲ್ ಸೀರಿಸ್ ಆಗಿರಲಿದೆ. ಯಾಕಂದ್ರೆ ಭಾರತ ಸೇರಿದಂತೆ ಟೆಸ್ಟ್​ ಕ್ರಿಕೆಟಿಂಗ್ ನೇಷನ್​ಗಳು ಆಡ್ತಾ ಇರೋ ಪ್ರತಿ ಟೆಸ್ಟ್ ಮ್ಯಾಚ್​​ ಕೂಡ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಡರ್​ನಲ್ಲೇ ಬರುತ್ತೆ. ಸದ್ಯ WTC ಱಂಕಿಂಗ್ ಲಿಸ್ಟ್​ನಲ್ಲಿ ಟೀಂ ಇಂಡಿಯಾ 6ನೇ ಪೊಸೀಶನ್​ನಲ್ಲಿದೆ. ಹೀಗಾಗಿ ಈ ವರ್ಷ ಆಡೋ ಪ್ರತಿ ಟೆಸ್ಟ್​ ಮ್ಯಾಚ್​ಗಳು ಕೂಡ ಮ್ಯಾಟರ್ ಆಗುತ್ತೆ. ಹೆಚ್ಚಿನ ಪಂದ್ಯಗಳನ್ನ ಗೆದ್ರಷ್ಟೇ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ಗೆ ಕ್ವಾಲಿಫೈ ಆಗಬಹುದು. ಹೀಗಾಗಿ ಇಂಗ್ಲೆಂಡ್​ ವಿರುದ್ಧದ 5 ಟೆಸ್ಟ್​ ಮ್ಯಾಚ್​ಗಳು ಕೂಡ ಟೀಂ ಇಂಡಿಯಾಗೆ ಡಿಸೈಡಿಂಗ್ ಫ್ಯಾಕ್ಟರ್ ಆಗಿರಲಿದೆ.

ಮಾರ್ಚ್ – ಮೇನಲ್ಲಿ ಐಪಿಎಲ್ ಟೂರ್ನಿ!

ಇನ್ನು ಮಾರ್ಚ್​ ಮತ್ತು ಮೇನಲ್ಲಿ ಈ ವರ್ಷದ ಐಪಿಎಲ್​ ಟೂರ್ನಿ ನಡೆಯುತ್ತೆ. ಟಿ-20 ವರ್ಲ್ಡ್​​ಕಪ್​ಗೂ ಮುನ್ನ ಐಪಿಎಲ್​​ ಟೂರ್ನಿ ನಡೀತಾ ಇರೋದ್ರಿಂದ ಟೀಂ ಇಂಡಿಯಾದ ಆಟಗಾರರಿಗೂ ಇದು ಕೂಡ ಇಂಪಾರ್ಟೆಂಟ್. ಯಾಕಂದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರ ಟಿ-20 ಭವಿಷ್ಯ ಮತ್ತು ವರ್ಲ್ಡ್​​​ಕಪ್​​ ಸ್ಕ್ವಾಡ್​​ಗೆ ಸೆಲೆಕ್ಟ್ ಆಗ್ತಾರಾ ಇಲ್ವಾ ಅನ್ನೋದು ಐಪಿಎಲ್​ ಪರ್ಫಾಮೆನ್ಸ್ ಆಧಾರದಲ್ಲಿ ಡಿಸೈಡ್ ಆಗಬಹುದು. ಹೀಗಾಗಿ ಟೀಂ ಇಂಡಿಯಾ ಆಟಗಾರರರಿಗೆ ಐಪಿಎಲ್​ ಕೂಡ ತುಂಬಾನೆ ಕ್ರೂಶಿಯಲ್ ಆಗಿದೆ.

ಜೂನ್​ನಲ್ಲಿ ಟಿ-20 ವರ್ಲ್ಡ್​ಕಪ್!

ಕ್ರಿಕೆಟ್ ಫ್ಯಾನ್ಸ್ ಎಲ್ಲರೂ ಕಾಯ್ತಾ ಇರೋದು ಟಿ-20 ವರ್ಲ್ಡ್​ಕಪ್​ಗಾಗಿ. ಜೂನ್​ನಲ್ಲಿ ವೆಸ್ಟ್​ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ-20 ವರ್ಲ್ಡ್​ಕಪ್​ ನಡೆಯಲಿದ್ದು, ಈ ಬಾರಿಯಾದ್ರೂ ಟೀಂ ಇಂಡಿಯಾ ಟ್ರೋಫಿ ಗೆಲ್ಲುತ್ತಾ ನೋಡಬೇಕಿದೆ. 2007ರಲ್ಲಿ ಧೋನಿ ಕ್ಯಾಪ್ಟನ್ಸಿಯಲ್ಲಿ ಟಿ-20ವರ್ಲ್ಡ್​ಕಪ್ ಗೆದ್ದ ಬಳಿಕ ಕಳೆದ 16 ವರ್ಷಗಳಿಂದ ಒಂದೇ ಒಂದು ಬಾರಿ ಟೀಂ ಇಂಡಿಯಾ ಟೂರ್ನಿ ಗೆದ್ದಿಲ್ಲ. ಈ ಬಾರಿ ವಂಡೇ ವರ್ಲ್ಡ್​​ಕಪ್​​ನ್ನ ಕೂಡ ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಇಂಡಿಯನ್ ಟೀಮ್ ಟಿ-20 ವಿಶ್ವಕಪ್​​ನ್ನಾದ್ರೂ ಗೆಲ್ತಾರಾ ನೋಡಬೇಕಿದೆ.

ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್ ವಿರುದ್ಧ ಸೀರಿಸ್!

ಟಿ-20 ವರ್ಲ್ಡ್​ಕಪ್ ಬಳಿಕ ಜುಲೈನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತೆ. 3 ವಂಡೇ ಮತ್ತು 3 ಟಿ-20 ಸೀರಿಸ್​ನ್ನ ಟೀಂ ಇಂಡಿಯಾ ಆಡಲಿದೆ. ​ನಂತ್ರ ಸೆಪ್ಟೆಂಬರ್ ಮತ್ತು ಅಕ್ಟೋಬರ್​​ನಲ್ಲಿ ಬಾಂಗ್ಲಾದೇಶ ಟೀಂ ಭಾರತಕ್ಕೆ ಬರುತ್ತೆ. ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ 2 ಟೆಸ್ಟ್ ಮತ್ತು 3 ಟಿ-20 ಮ್ಯಾಚ್​ಗಳನ್ನ ಆಡಲಿದೆ. ಇದಾದ್ಮೇಲೆ, ಅಕ್ಟೋಬರ್​ ಮತ್ತು ನವೆಂಬರ್​​ನಲ್ಲಿ ನ್ಯೂಜಿಲ್ಯಾಂಡ್ ಕೂಡ ಭಾರತ ಪ್ರವಾಸ ಕೈಗೊಳ್ಳಲಿದೆ. ನ್ಯೂಜಿಲ್ಯಾಂಡ್ ವಿರುದ್ಧ 3 ಟೆಸ್ಟ್​ ಮ್ಯಾಚ್​ಗಳಷ್ಟೇ ನಡೆಯುತ್ತೆ. ​

ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಮ್ಯಾಚ್!

ಇದು ನಿಜಕ್ಕೂ ಹ್ಯೂಜ್ ಸೀರಿಸ್.. 2024ರ ನವೆಂಬರ್​​ ಎಂಡ್​ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಟೂರ್ ಕೈಗೊಳ್ತಾ ಇದೆ. ನಾಲ್ಕು ಮ್ಯಾಚ್​ಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸೀರಿಸ್ ನಡೆಯುತ್ತೆ. ಆಸ್ಟ್ರೇಲಿಯಾದಲ್ಲೇ ಈ ಸೀರಿಸ್ ನಡೀತಾ ಇರೋದು ಟೀಂ ಇಂಡಿಯಾಗೆ ಬಹುದೊಡ್ಡ ಚಾಲೆಂಜ್. ಈ ಹಿಂದೆ 2022ರಲ್ಲಿ ಆಸ್ಟ್ರೇಲಿಯಾವನ್ನ ಅವರದ್ದೇ ಗ್ರೌಂಡ್​​ನಲ್ಲಿ ನಮ್ಮವರು ಸೋಲಿಸಿದ್ರು. ಇನ್ನು ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮುನ್ನ ಟೀಂ ಇಂಡಿಯಾ ಆಡೋ ಕೊನೆಯ ಟೆಸ್ಟ್​ ಸೀರಿಸ್ ಕೂಡ ಆಗಿರಲಿದೆ. ಹೀಗಾಗಿ WTC ಫೈನಲ್​​ಗೆ ಕ್ವಾಲಿಫೈ ಆಗೋಕೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಟೀಂ ಇಂಡಿಯಾಗೆ ಎದುರಾಗಬಹುದು. ಯಾಕಂದ್ರೆ ಸದ್ಯ WTC ಱಂಕಿಂಗ್​ನಲ್ಲಿ ನಾವು 6ನೇ ಪೊಸೀಶನ್​ನಲ್ಲಿದ್ದೀವಿ. ಹೀಗಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಟೀಂ ಮೇಲೆ ಈ ವರ್ಷದುದ್ದಕ್ಕೂ ತುಂಬಾನೆ ಪ್ರೆಷರ್ ಇರುತ್ತೆ.ಈ ಎಲ್ಲಾ ಕಾರಣಗಳಿಂದಾಗಿ 2024 ಇಂಡಿಯನ್ ಕ್ರಿಕೆಟ್​​ಗೆ ನಿಜಕ್ಕೂ ಕ್ರೂಶಿಯಲ್​ ಆಗಿರಲಿದೆ.

Sulekha