ನೀರು ಅಂತಾ ಪ್ರವಾಸಿಗರು ತಂದ ಬೀಯರ್‌ ಕುಡಿಯಿತು! – ಎಣ್ಣೆ ಮತ್ತಲ್ಲಿ ಕಾಡು ಹಂದಿ ಮಾಡಿದ್ದೇನು ಗೊತ್ತಾ?

ನೀರು ಅಂತಾ ಪ್ರವಾಸಿಗರು ತಂದ ಬೀಯರ್‌ ಕುಡಿಯಿತು! – ಎಣ್ಣೆ ಮತ್ತಲ್ಲಿ ಕಾಡು ಹಂದಿ ಮಾಡಿದ್ದೇನು ಗೊತ್ತಾ?

ಪ್ರವಾಸಿ ತಾಣಗಳಿ ಭೇಟಿ ನೀಡಿದಾಗ ಕೆಲ ಪ್ರವಾಸಿಗರು ಜ್ಯೂಸ್‌, ನೀರು ಅರ್ಧಂಬರ್ಧ ಕುಡಿದು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಪ್ರವಾಸಿಗರು ಎಸೆದ ವಸ್ತುಗಳನ್ನು ಕಾಡು ಪ್ರಾಣಿಗಳು ಆಹಾರ ಅಂತಾ ಸೇವಿಸಿ ಅಪಾಯಕ್ಕೆ ಸಿಲುಕುವುದನ್ನು ನೋಡಿದ್ದೇವೆ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದೆ. ಪ್ರವಾಸಿಗರು ಕಡಿಯಲು ತಂದಿದ್ದ ಬಿಯರ್‌ ಕುಡಿದು ದೊಡ್ಡ ಅವಾಂತರವೇ ಎಬ್ಬಿಸಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಕಾಡಿನಲ್ಲಿ ಸಿಗುವ ಅಮಲೇರುವ ಪದಾರ್ಥಗಳನ್ನು ತಿಂದು ಮಂಗಗಳು ಆನೆಗಳು ಸದ್ದಿಲ್ಲದೇ ಇದ್ದಲ್ಲೇ ನಿದ್ದೆಗೆ ಜಾರಿದ ಹಲವು ಘಟನೆಗಳು ಈ ಹಿಂದೆಯು ನಡೆದಿದ್ದವು. ಕೆಲವು ಪ್ರಾಣಿಗಳಂತೂ ವಿಚಿತ್ರವಾಗಿ ವರ್ತಿಸಿ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡುತ್ತವೆ. ಇದೀಗ ಆಸ್ಟ್ರೇಲಿಯಾದ ಅರಣ್ಯ ಸಮೀಪ ರಜಾ ದಿನಗಳ ಮೋಜು ಮಾಡುವುದಕ್ಕೆಂದು ಎಣ್ಣೆಯೊಂದಿಗೆ ಕ್ಯಾಂಪ್ ಮಾಡಿದವರಿಗೆ ಕಾಡು ಹಂದಿಯೊಂದು ಶಾಕ್ ನೀಡಿದೆ.

ಇದನ್ನೂ ಓದಿ: ಹಬ್ಬದ ಶುಭಾಶಯ ಕೋರಲು ಸಹೋದರಿಗೆ ಪೋನ್​ ಮಾಡಿದ್ಲು! – ಆ ಒಂದು ಕರೆಯಿಂದ ಜೀವವೇ ಹೋಯ್ತು!

ಅಷ್ಟಕ್ಕೂ ಆಗಿದ್ದೇನು?

ಆಸ್ಟ್ರೇಲಿಯಾದ ಅರಣ್ಯವೊಂದರ ಸಮೀಪ ಇರುವ ನದಿಯೊಂದರ ಬಳಿ ಪ್ರವಾಸಿಗರು ಕ್ಯಾಂಪ್ ಮಾಡಿದ್ದು, ಇಲ್ಲಿ ಸುಂದರ ಕ್ಷಣಗಳ ಮಜಾ ಹೆಚ್ಚಿಸಲು ಇವರು ಬಿಯರ್‌ಗಳನ್ನು ಕೂಡ ತಂದಿದ್ದರು. ಆದರೆ ಕಾಡು ಹಂದಿಯೊಂದಕ್ಕೆ ಇದರ ವಾಸನೆ ಸಂಪೂರ್ಣವಾಗಿ ಅದರತ್ತ ಸೆಳೆದಿದ್ದು, ಕ್ಯಾಂಪ್‌ಗೆ ಬಂದ ಅದು ಅಲ್ಲಿದ್ದ ಬಿಯರ್ ಬಾಟಲ್‌ಗಳನ್ನು ಒಡೆದು ಕುಡಿಯಲಾರಂಭಿಸಿದೆ.  ಆದರೆ ಕುಡಿದ ನಂತರ ಹಂದಿಗೆ ಅಮಲೇರಿದ್ದು, ಕುಳಿತಲ್ಲಿ ಕೂರದ ಹಂದಿ ಅಲ್ಲಿದ್ದ ಹಸುವಿನೊಂದಿಗೂ ತುಂಟಾಟವಾಡಲು ಮುಂದಾಗಿದ್ದು, ಈ ವೇಳೆ ಹಸು ಹಂದಿಯನ್ನು ಅಟ್ಟಿಸುತ್ತಾ ಸಾಗಿದೆ. ಈ ಘಟನೆಯನ್ನು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾವು ಕ್ಯಾಂಪ್ ಫೈರ್‌ನ್ನು ಆನಂದಿಸುತ್ತಿದ್ದೆವು ಅಷ್ಟೊತ್ತಿಗೆ ಅಲ್ಲಿ ಏನೋ ಸದ್ದು ಕೇಳಿಸುತ್ತಿತ್ತು. ಹೋಗಿ ನೋಡಿದಾಗ ಹಂದಿಯೊಂದು ಪಾರ್ಟಿಗೆ ಹೋಗಿ ಪಳಗಿದವರಂತೆ ನಮ್ಮ ಬಿಯರ್ ಬಾಟಲ್‌ಗಳನ್ನು ತೆಗೆದು ಗುಟುಕಾಗಿ ಹೀರಲು ಶುರು ಮಾಡಿದ್ದು ನೋಡಿ ನಾವು ಅಚ್ಚರಿಗೊಳಗಾದೆವು. ಕುಡಿದ ನಂತರ ಹಂದಿಗೆ ಅಮಲೇರಿದ್ದು, ಅದು ಕ್ಯಾಂಪ್ ಮಾಡಿದ ಜಾಗದ ಸುತ್ತಲೂ  ಓಡಾಡಲು ಶುರು ಮಾಡಿದೆ. ಈ ವೇಳೆ ಹಸುವಿನೊಂದಿಗೆ ಅದು ಪುಂಡಾಟ ತೋರಲು ಮುಂದಾಗಿದ್ದು, ಅದು ಹಂದಿಯನ್ನು ಓಡಿಸಿಕೊಂಡು ಹೋಗಿದೆ. ಆದರೆ ಅದೃಷ್ಟವಶಾತ್ ಈ ವೇಳೆ ಬೇರೆ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ.

ಓರ್ವ ಪ್ರತ್ಯಕ್ಷದರ್ಶಿ ಈ ಘಟನೆಯನ್ನು ವಿವರಿಸಿದ್ದು, ನದಿಯ ಸಮೀಪದಲ್ಲಿ ಕೆಲವರು ಪಾರ್ಟಿ ಮಾಡುತ್ತಿದ್ದರು. ಅವರ ವಾಹನದ ಹಿಂದೆ ಹಂದಿ ಓಡುತ್ತಿರುವುದನ್ನು ನಾವು ನೋಡಿದೆವು. ಹಂದಿಯ ಹಿಂದೆ ಹಸುವೊಂದು ಬೆನ್ನಟ್ಟುತ್ತಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ಹಂದಿಗೆ ಅಮಲು ಇಳಿದಿದ್ದು, ಅದು ತನ್ನ ಹ್ಯಾಂಗೋವರ್‌ನಿಂದ ಹೊರಗೆ ಬರಲು ಅರಣ್ಯದತ್ತ ಓಡಿತು ಎಂದು ಹೇಳಿದ್ದಾರೆ.

Shwetha M