ಸುಳ್ಯದಲ್ಲಿ ಬಾವಿಗೆ ಬಿದ್ದ ಕಾಡಾನೆ! – ಅರಣ್ಯ ಇಲಾಖೆಯಿಂದ ಗಜರಾಜನ ರಕ್ಷಣೆಗೆ ಕಾರ್ಯಾಚರಣೆ

ರಾಜ್ಯದಲ್ಲಿ ಕಾಡಾನೆಗಳ ಉಪಟಳ ದಿನೇ ದಿನೆ ಹೆಚ್ಚಾಗ್ತಿದೆ. ಆಹಾರ ಹುಡುಕುತ್ತಾ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಬಳಿ ಪೆರಾಬೆ ಎಂಬಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದಿದೆ. ಇದೀಗ ಆನೆ ರಕ್ಷಣೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇದನ್ನೂ ಓದಿ: ಆಶಾ.. ನಿರಾಶಾ..- ನೋವು ನುಂಗಿ ಹಾಡಿನಲ್ಲೇ ಬದುಕಿದ ಗಾಯಕಿ ಆಶಾ ಭೋಸ್ಲೆ
ನಿನ್ನೆ ರಾತ್ರಿ ಸುಳ್ಯದ ಪೆರಾಬೆ ಎಂಬಲ್ಲಿ ಕಾಡಾನೆ ಮನೆಯೊಂದರ ಬಾವಿಗೆ ಬಿದ್ದಿದೆ. ಮನೆಯ ಬಳಿ ಇರೋ ಪಾಳು ಬಿದ್ದ ಬಾವಿಗೆ ಕಾಡಾನೆ ಬಿದ್ದಿದ್ದು, ಕೂಗಾಟ ಕಂಡು ಸ್ಥಳೀಯರು ಸ್ಥಳಕ್ಕೆ ಬಂದು ನೋಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಸ್ಥಳೀಯರ ಮಾಹಿತಿ ಮೇರೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆನೆಯನ್ನು ಬಾವಿಯಿಂದ ತೆಗೆಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬಾವಿಗೆ ಬಿದ್ದಿರುವ ಕಾಡಾನೆ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಜೆಸಿಬಿ ಮೂಲಕ ಬಾವಿ ಸುತ್ತಲು ಮಣ್ಣು ತೆಗೆದು ಆನೆ ರಕ್ಷಣೆ ಮಾಡಲು ಮುಂದಾಗಿದೆ.

ನೋಡಿರಿ

