ಸುಖ ನಿದ್ರೆಗೆ ಜಾರಿದ ಗಜ ಕುಟುಂಬ – ಮರಿ ಆನೆಗೆ Z+ ಸೆಕ್ಯೂರಿಟಿ !

ಅದು ದಟ್ಟ ಕಾನನ.. ಆ ಕಾಡಿನಲ್ಲಿ ಆನೆ ಕುಟುಂಬವೊಂದು ಸುಖ ನಿದ್ರೆಗೆ ಜಾರಿದೆ. ಕುಟುಂಬದವರ ಸುಖ ನಿದ್ರೆಗೆ ಯಾವ ಭಂಗವೂ ಬರಬಾರದೆಂದು ಆನೆಯೊಂದು Z+ ಭದ್ರತೆ ನೀಡುತ್ತಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸ್ಕಾಟ್ಲೆಂಡ್ ಜೆರ್ಸಿ ಮೇಲೆ ಕನ್ನಡ ಡಿಂಡಿಮ – ನಂದಿನಿ ಲೋಗೋ ನೋಡಿ ಸಿಎಂ ಸಿದ್ದು ಸಂತಸ
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ದಟ್ಟ ಕಾಡಿನಲ್ಲಿ ಆನೆಗಳು ನಿದ್ರಿಸುತ್ತಿರುವುದನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ. ಈ ದೃಶ್ಯದಲ್ಲಿ ಐದು ಆನೆಗಳ ಕುಟುಂಬ ನಿದ್ರೆಗೆ ಜಾರಿದೆ. ಈ ಆನೆಗಳನ್ನು ಮತ್ತೊಂದು ಆನೆ ಕಾಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಮೂರು ಆನೆಗಳು ನಡುವಿನಲ್ಲಿ ಮರಿಯಾನೆ ಮಲಗಿದೆ. ಮತ್ತೊಂದು ಆನೆ ನಿಂತು ಗಮನಿಸುತ್ತಿದೆ. ಎಲ್ಲರೂ ನಿದ್ರಿಸಿದರೂ ಒಂದು ಆನೆ ಮಾತ್ರ ನಿಂತುಕೊಂಡೆ ಎಲ್ಲರನ್ನು ಕಾಯುತ್ತಿದೆ. ಇಷ್ಟೇ ಅಲ್ಲ,ಒಂದು ಆನೆ ನಿದ್ದೆಯಲ್ಲಿ ಕಾಲನ್ನು ಎತ್ತಿ ಪಕ್ಕದಲ್ಲಿ ಮಲಗಿರುವ ಆನೆಯನ್ನು ಪರಿಶೀಲಿಸುತ್ತಿದೆ. ಬಳಿ ಮತ್ತೆ ಆರಾಮಾಗಿ ನಿದ್ರಿಸುತ್ತಿದೆ.
ಈ ಫೋಟೋಗ್ರಾಫರ್ ಧನು ಪರನ್ ತೆಗೆದಿರುವ ಈ ವಿಡಿಯೋವನ್ನು ಸುಪ್ರಿಯಾ ಸಾಹು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬಗಳ ರೀತಿಯಲ್ಲೇ ಮರಿ ಆನೆಯನ್ನು ಸುರಕ್ಷಿತವಾಗಿ ಮಲಗಿಸಿದೆ. ಜೊತೆಗೆ ಮಲಗಿದ್ದ ಸ್ಥಳದಿಂದಲೇ ಇತರರನ್ನುಕಾಲಿನ ಮೂಲಕ ಪರಿಶೀಲಿಸುತ್ತಿದೆ. ಆನೆ ಕುಟುಂಬ ಮರಿಯಾನೆಗೆ ಝೆಡ್ ಪ್ಲಸ್ ಭದ್ರತೆ ನೀಡಿದೆ ಎಂದು ಸುಪ್ರಿಯಾ ಬರೆದುಕೊಂಡಿದ್ದಾರೆ.