ಟೆರೇಸ್ ಮೇಲೆ ಮಗು ಮಲಗಿಸಿ ಕೆಲಸ ಮಾಡುತ್ತಿದ್ದಳು ತಾಯಿ – ಕಂದನನ್ನು ಹೊತ್ತೊಯ್ದು ಕೆಳಗೆ ಎಸೆದ ಬೆಕ್ಕು!

ಟೆರೇಸ್ ಮೇಲೆ ಮಗು ಮಲಗಿಸಿ ಕೆಲಸ ಮಾಡುತ್ತಿದ್ದಳು ತಾಯಿ – ಕಂದನನ್ನು ಹೊತ್ತೊಯ್ದು ಕೆಳಗೆ ಎಸೆದ ಬೆಕ್ಕು!

ಉತ್ತರ ಪ್ರದೇಶ: ಕೆಲಸವಿದೆ ಎಂದು ಮನೆಯಲ್ಲಿ ಪುಟ್ಟ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವ ಮುನ್ನ ಎಚ್ಚರ. ಸಣ್ಣ ನಿರ್ಲಕ್ಷ್ಯದಿಂದ ದೊಡ್ಡ ಅನಾಹುತವೇ ಸಂಭವಿಸಬಹುದು. ಇದಕ್ಕೆ ನಿದರ್ಶನ ಉತ್ತರ ಪ್ರದೇಶದಲ್ಲಿ ನಡೆದು ದುರ್ಘಟನೆ. ಟೆರೇಸ್​ ಮೇಲೆ ಮಲಗಿದ್ದ 15 ದಿನದ ಮಗುವನ್ನು ಕಾಡು ಬೆಕ್ಕೊಂದು ಎತ್ತಿಕೊಂಡು ಹೋಗಿ ಮನೆಯ ಚಾವಣಿಯಿಂದ ಎಸೆದು ಕೊಂದು ಹಾಕಿರುವ ಘಟನೆ ನಡೆದಿದೆ.

ಇದನ್ನೂಓದಿ: ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ – ಮಗುವಿನ ತಂದೆಗೂ 1 ತಿಂಗಳು ಲೀವ್‌!

ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಈ ದುರ್ಘಟನೆ ನಡೆದಿದ್ದು ತಡವಾಗಿ ಬೆಳಕಿದೆ ಬಂದಿದೆ. ಪಶ್ಚಿಮ ಯುಪಿಯಲ್ಲಿ ಈ ತಿಂಗಳು ನಡೆದ ಎರಡನೇ ಭಯಾನಕ ಘಟನೆ ಇದಾಗಿದೆ. ರೇಷ್ಮಾ ಮತ್ತು ಮೊಹಮ್ಮದ್ ಹಸನ್ ದಂಪತಿ ಬುಡೌನ್ ಜಿಲ್ಲೆಯ ಉಸಾವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌತರಾಪಟ್ಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮದುವೆಯಾಗಿ ಆರು ವರ್ಷಗಳ ನಂತರ ಈ ದಂಪತಿಗೆ ಅವಳಿ, ಒಂದು ಹೆಣ್ಣು ಮತ್ತು ಗಂಡು ಇತ್ತೀಚೆಗೆ ಜನಿಸಿದ್ದವು. ಗಂಡ ಕೆಲಸಕ್ಕೆ ಹೋಗಿದ್ದರೆ, ರೇಷ್ಮಾ ಮಕ್ಕಳೊಂದಿಗೆ ಮನೆಯಲ್ಲಿಯೇ ಇರುತ್ತಿದ್ದರು. ಸೋಮವಾರ ಸಂಜೆ ಮಕ್ಕಳಿಗೆ ಸ್ನಾನ ಮಾಡಿಸಿ, ಹಾಲು ಕುಡಿಸಿದ ಬಳಿಕ ತಾರಸಿಗೆ ಕರೆದುಕೊಂಡು ಹೋಗಿ ಮಂಚದ ಮೇಲೆ ಮಲಗಿಸಿದ್ದಾರೆ. ನಂತರ ತಾಯಿ ಕೆಳಗೆ ಬಂದು ಮನೆಕೆಲಸ ಮಾಡುವಲ್ಲಿ ನಿರತಳಾಗಿದ್ದಾಳೆ. ಆದರೆ ಮಗು ಅಳುವ ಶಬ್ಧ ಕೇಳಿಸಿದಾಗ, ಮೇಲೆ ಓಡಿ ಹೋಗಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಕಾಡು ಬೆಕ್ಕೊಂದು ಗಂಡು ಮಗುವನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದ್ದಾರೆ.

ತಕ್ಷಣ ಮಗುವನ್ನು ಬೆಕ್ಕಿನಿಂದ ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಷ್ಟೊತ್ತಿಗಾಗಲೇ ಬೆಕ್ಕು ಛಾವಣಿ ಮೇಲೆ ಜಿಗಿದಿದೆ. ಈ ವೇಳೆ ಮಗು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆ ಮಗು ದಾರುಣವಾಗಿ  ಮೃತಪಟ್ಟಿದೆ.

suddiyaana