ಆ ಸ್ಪರ್ಧಿ ನನ್ನನ್ನು ಮದುವೆ ಆಗೋ ಭರವಸೆ ನೀಡಿದ್ದಾರೆ – ವೈಲ್ಡ್‌ಕಾರ್ಡ್‌ ಮೂಲಕ ಬಿಗ್‌ಬಾಸ್‌ಗೆ ಎಂಟ್ರಿಯಾದ ಸ್ಪರ್ಧಿ!

ಆ ಸ್ಪರ್ಧಿ ನನ್ನನ್ನು ಮದುವೆ ಆಗೋ ಭರವಸೆ ನೀಡಿದ್ದಾರೆ – ವೈಲ್ಡ್‌ಕಾರ್ಡ್‌ ಮೂಲಕ ಬಿಗ್‌ಬಾಸ್‌ಗೆ ಎಂಟ್ರಿಯಾದ ಸ್ಪರ್ಧಿ!

ಬಿಗ್‌ ಬಾಸ್‌ ಮನೆ ಅಂದಾಗ ಅಲ್ಲಿ ಬರೀ ಜಗಳ, ಮನಸ್ತಾಪಗಳೇ ಎದ್ದು ಕಾಣಿಸುತ್ತಿದೆ. ಸದ್ಯ ಈಗ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದೆ. ಕನ್ನಡ ಬಿಗ್‌ಬಾಸ್‌ನಲ್ಲಿ ಈಗಾಗಲೇ ಇಬ್ಬರು ವೈಲ್ಡ್‌ಕಾರ್ಡ್‌ ಎಂಟ್ರಿ ಪಡೆದು ದೊಡ್ಮನೆ ಒಳಗೆ ಬಂದಿದ್ದಾರೆ. ಅದೇ ರೀತಿಯಲ್ಲಿ ಹಿಂದಿ ಬಿಗ್‌ಬಾಸ್‌ ನಲ್ಲೂ ಹೊಸ ಟ್ವಿಸ್ಟ್‌ ಸಿಕ್ಕಿದೆ. ಹಿಂದಿ ಬಿಗ್‌ಬಾಸ್‌ ಮನೆಗೆ ಒಬ್ಬರ ಎಂಟ್ರಿ ಆಗಿದೆ.

ಇದನ್ನೂ ಓದಿ: ಕೆಜಿಎಫ್‌ಗಿಂತ ಐದು ಪಟ್ಟು ದೊಡ್ಡದು ಸಲಾರ್‌! – ಏನಿದು ಸಿನಿಮಾ ಹೊಸ ಸಮಾಚಾರ!

ಹೌದು,  ಹಿಂದಿ ಬಿಗ್‌ಬಾಸ್‌ ಮನೆಗೆ ಒಬ್ಬರ ಎಂಟ್ರಿ ಅಗಿದೆ. ಅವರ ಹೆಸರು ಆಯೆಷಾ ಖಾನ್. ‘ಮುನಾವರ್ ಫಾರೂಕಿ ನನ್ನನ್ನು ಮದುವೆ ಆಗೋ ಭರವಸೆ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ. ಇದು ಮುನಾವರ್ ಅಭಿಮಾನಿಗಳಿಗೆ ಶಾಕ್ ನೀಡಿದೆ.  ರೊಮಾನ್ಸ್‌, ಕಿತ್ತಾಟದಿಂದ ಕೂಡಿದ್ದ ಹಿಂದಿ ಬಿಗ್‌ಬಾಸ್‌ ಮನೆಯಲ್ಲಿ ಆಯೆಷಾ ಖಾನ್ ಎಂಟ್ರಿ ಭಾರಿ ಕುತೂಹಲ ಮೂಡಿದೆ.

‘ನಾನು ಆಯೆಷಾ ಖಾನ್ ಅನ್ನೋದು ನಿಮಗೆ ಗೊತ್ತು. ಶೋನಲ್ಲಿ ಮುನಾವರ್ ಹೆಸರಿನ ಸ್ಪರ್ಧಿ ಇದ್ದಾರೆ. ನನಗೆ ಅವರ ಜೊತೆ ಲಿಂಕ್ ಇದೆ. ಅವರು ಹೇಗೆ ತೋರಿಸಿಕೊಳ್ಳುತ್ತಿದ್ದಾರೋ ಹಾಗಿಲ್ಲ. ಶೋಗೆ ಹೋಗೋ ಮೊದಲು ಅವರು ನನಗೆ ಐ ಲವ್​ ಯೂ, ನಾನು ನಿನ್ನ ಮದುವೆ ಆಗುತ್ತೇನೆ ಎನ್ನುತ್ತಿದ್ದರು. ಅವರು ಹುಡುಗಿಯರನ್ನು ಅಪ್ರೋಚ್ ಮಾಡೋದೆ ಹೀಗೆ. ನನಗೆ ಅವರಿಂದ ಕ್ಷಮೆ ಬೇಕು. ನಾನು ಈ ಶೋಗೆ ಹೋಗೋಕೆ ಅದುವೇ ಮುಖ್ಯ ಕಾರಣ’ ಎಂದಿದ್ದಾರೆ ಆಯೆಷಾ. ಸದ್ಯ ಈ ಪ್ರೋಮೋ ಗಮನ ಸೆಳೆಯುತ್ತಿದೆ. ಮುನಾವರ್ ಅವರ ಅಭಿಮಾನಿಗಳು ಈ ಪ್ರೋಮೋನ ನೋಡಿ ಶಾಕ್ ಆಗಿದ್ದಾರೆ. ಒಂದೊಮ್ಮೆ ಆಯೆಷಾ ಬಿಗ್ ಬಾಸ್ ಮನೆ ಒಳಗೆ ಹೋದರೆ ಇನ್ನೂ ಏನೆಲ್ಲ ಡ್ರಾಮಾ ಆಗಬಹುದು ಎಂದು ಫ್ಯಾನ್ಸ್ ಊಹಿಸಿಕೊಳ್ಳುತ್ತಿದ್ದಾರೆ. ‘ಮುನಾವರ್ ಅವರ ತಪ್ಪು ಇಲ್ಲ ಎನಿಸುತ್ತಿದೆ. ಜನಪ್ರಿಯತೆ ಪಡೆಯಲು ಆಯೆಷಾ ಈ ರೀತಿ ಮಾಡುತ್ತಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Shwetha M