ಆಹಾರ ಹುಡುಕುವಷ್ಟರಲ್ಲಿ ಮರಿಯ ಜೀವವೇ ಹೋಯ್ತು! –  ಕಂದಾ.. ಏಳು ಎದ್ದೇಳು ಎಂದು ಕಣ್ಣೀರಿಟ್ಟ ಸಿಂಹಿಣಿ!

ಆಹಾರ ಹುಡುಕುವಷ್ಟರಲ್ಲಿ ಮರಿಯ ಜೀವವೇ ಹೋಯ್ತು! –  ಕಂದಾ.. ಏಳು ಎದ್ದೇಳು ಎಂದು ಕಣ್ಣೀರಿಟ್ಟ ಸಿಂಹಿಣಿ!

ಕಾಡಿನಲ್ಲಿ ಪ್ರಾಣಿಗಳು ಆಹಾರ ಹುಡುಕುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗೋದು ಸಾಮಾನ್ಯ. ಇನ್ನು ಮರಿಗಳು ಇದ್ರೆ ಅವುಗಳನ್ನ ಅಲ್ಲೇ ಬಿಟ್ಟು ಆಹಾರ ಹುಡುಕಿಕೊಂಡು ಹೋಗುತ್ತವೆ. ಇದೀಗ ಇಲ್ಲೊಂದು ಸಿಂಹ ತನ್ನ ಮರಿಯನ್ನ ಒಂದು ಜಾಗದಲ್ಲಿ ಬಿಟ್ಟು ಆಹಾರ ಹುಡುಕಿಕೊಂಡು ಹೋಗಿದೆ. ಆದ್ರೆ ಬರುವಷ್ಟರಲ್ಲಿ ಮರಿ ಜೀವ ಕಳೆದುಕೊಂಡಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಅಬ್ಬಬ್ಬಾ.. ಸೆಕೆ ತಡಿಯೋಕೆ ಆಗ್ತಿಲ್ಲ.. – ಕೆಸರಿನಲ್ಲಿ ಮರಿಯಾನೆಯ ಫನ್‌!

ಹೌದು, ಸಿಂಹಿಣಿಯೊಂದು ತನ್ನ ಮರಿಗಾಗಿ ಆಹಾರವನ್ನು ಬೇಟೆಯಾಡಲು ಹೋಗಿದೆ. ಆದರೆ ಸಿಂಹಿಣಿ ಬೇಟೆಯಿಂದ ಹಿಂತಿರುಗಿದಾಗ, ತನ್ನ ಮಗುವನ್ನು ಕಾಣದೆ ಅಸಮಾಧಾನಗೊಂಡಿದೆ. ಅಲ್ಲಿ ಹುಡುಕುತ್ತಾ ಮುಂದೆ ಹೋದ ಸಿಂಹಿಣಿಯ ಕಣ್ಣಿಗೆ ತನ್ನ ಮಗು ಚಲನ ವಲನ ಇರದೆ ಬಿದ್ದಿರುವುದನ್ನು ನೋಡುತ್ತದೆ, ಅರಸಾಹಸ ಪಟ್ಟು ತನ್ನ ಮಗುವನ್ನು ಎಬ್ಬಿಸಲು ಪ್ರಯತ್ನಿಸುವ ಸಿಂಹಿಣಿಗೆ ಕೊನೆಗೆ ಸಿಕ್ಕಿದ್ದು ನಿರಾಸೆ.ಏನು ಮಾಡಿದರು ಸಹ ಸಿಂಹದ ಮರಿ ಮೇಲಕ್ಕೆ ಏಳುವುದೇ ಇಲ್ಲ. ತನ್ನ ಮರಿ ಸತ್ತಿದೆ ಎಂದು ತಿಳಿದ ತಕ್ಷಣ ಈ ಸಿಂಹಿಣಿ ಜೋರಾಗಿ ಘರ್ಜಿಸುತ್ತಾ, ಅಳಲು ಆರಂಭಿಸುತ್ತದೆ, ಮಗುವನ್ನು ಕಳೆದುಕೊಂಡ ಸಿಂಹಿಣಿಯ ಆಕ್ರಂದನ ಮುಗಿಲು ಮುಟ್ಟುತ್ತದೆ.

ಸಿಂಹಿಣಿಯ ಈ ಆಕ್ರಂದನವನ್ನು ದೂರದಿಂದಲೇ ನೋಡುತ್ತಾ ಜೋಡಿ ಜಿರಾಫೆಗಳು ಸಹ ದುಃಖಿತರಾಗುತ್ತವೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋವನ್ನು  alicemurrellanimals ಎಂಬ ಇನ್ಸ್ಟಾಗ್ರಾಮ್‌ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಕೆಲವರು ಸಿಂಹದ ನೋವನ್ನು ನೋಡಿ ವಿಷಾಧಿಸುತ್ತಿದ್ದರೆ, ಇನ್ನೂ ಕೆಲವರು ನೀನು ಬೇರೆ ಪ್ರಾಣಿಯ ಮರಿಯನ್ನು ತಿಂದಾಗ ಅದಕ್ಕೂ ಹೀಗೆ ನೋವು ಆಗುರುತ್ತದೆ ಅಲ್ವಾ? ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಯಾವುದು ಏನೇ ಇರಲಿ ಈ ವಿಡಿಯೋ ನೋಡಿದ ನಂತರ ನಮ್ಮ ಕರುಳು ಕಿತ್ತು ಬರುತ್ತದೆ.

Shwetha M

Leave a Reply

Your email address will not be published. Required fields are marked *