ರೀಲ್ಸ್ ಮಾಡುತ್ತಿದ್ದ ಪತ್ನಿ ಮೇಲೆ ಗಂಡನಿಗೆ ಅನುಮಾನ – ಪತ್ನಿಯನ್ನು ಕೊಂದು ಕಾವೇರಿ ನದಿಗೆ ಎಸೆದ ಅಳಿಯನಿಗೆ ಮಾವನ ಸಾಥ್..!

ರೀಲ್ಸ್ ಮಾಡುತ್ತಿದ್ದ ಪತ್ನಿ ಮೇಲೆ ಗಂಡನಿಗೆ ಅನುಮಾನ – ಪತ್ನಿಯನ್ನು ಕೊಂದು ಕಾವೇರಿ ನದಿಗೆ ಎಸೆದ ಅಳಿಯನಿಗೆ ಮಾವನ ಸಾಥ್..!

ಆಕೆಗೆ ಮೊಬೈಲ್‌ನಲ್ಲಿ ರೀಲ್ಸ್ ಮಾಡುವ ಹುಚ್ಚು. ಇದಕ್ಕಾಗಿ ಜಾಸ್ತಿ ಹೊಸ್ತು ಮೊಬೈಲ್‌ಗೆ ಅಂಟಿಕೊಂಡಿದ್ದಳು. ಪ್ರೀತಿಸಿ ಮದುವೆಯಾದ ಗಂಡನಿಗೆ ಹೆಂಡತಿ ಫೋನ್‌ನಲ್ಲಿಯೇ ಮುಳುಗಿದ್ದು ಕಿರಿಕಿರಿಯಾಗುತಿತ್ತು. ಜೊತೆಗೆ ಹೆಂಡತಿ ಮೇಲೆ ಅನುಮಾನವೂ ಜಾಸ್ತಿಯಾಗುತ್ತಲೇ ಇತ್ತು. ಕೊನೆಗೂ ಪತಿ ಮಹಾಶಯ ಹೆಂಡತಿಯ ಮೇಲೆ ಅನುಮಾನಗೊಂಡು ಅವಳನ್ನು ಕೊಂದು ಮುಗಿಸಿದ್ದ. ಮಗಳನ್ನು ಅಳಿಯ ಕೊಲೆ ಮಾಡಿದರೂ, ಶವ ಸಾಗಿಸಲು ಹೆತ್ತ ತಂದೆಯೇ ನೆರವಾಗಿದ್ದರು.

ಇದನ್ನೂ ಓದಿ: ಪತ್ನಿಯನ್ನು ಕಳ್ಳಿ, ಕಳ್ಳಿ ಎಂದು ಸಂಬಂಧಿಕರ ಟೀಕೆ – ಸಿಟ್ಟಿನಿಂದ  ಹೆಂಡತಿಯನ್ನೇ ಮುಗಿಸಿದ ಪಾಪಿ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. 26 ಪೂಜಾಳನ್ನು ಅವಳ ಗಂಡ ಶ್ರೀನಾಥ್ ಭೀಕರವಾಗಿ ಕೊಂದಿದ್ದಾನೆ. ಪೂಜಾ ಮತ್ತು ಶ್ರೀನಾಥ್ ಒಂದೇ ಗ್ರಾಮದವರು. ಪರಸ್ಪರ ಒಬ್ಬರನೊಬ್ಬರು ಪ್ರೀತಿಸಿ ವಿವಾಹ ಕೂಡ ಆಗಿದ್ದರು. ಎಂಟು ವರ್ಷದ ಮುದ್ದಾದ ಮಗಳು ಕೂಡ ಇದ್ದಾಳೆ. ಚೆನ್ನಾಗಿದ್ದ ಸಂಸಾರದಲ್ಲಿ ಮೊಬೈಲ್ ವಿಚಾರದಲ್ಲಿ ಜಗಳ ಶುರುವಾಗಿತ್ತು. ಆದರೆ, ಪೂಜಾ ಪದೇ ಪದೇ ರೀಲ್ಸ್ ಮಾಡುತ್ತಿದ್ದಳು. ಹೆಚ್ಚಾಗಿ ಮೊಬೈಲ್ ನಲ್ಲಿಯೇ ಕಾಲಕಳೆಯುತ್ತಿದ್ದಳು. ಇದು ಗಂಡ ಶ್ರೀನಾಥ್‌ಗೆ ಅನುಮಾನ ಬರುವಂತೆ ಮಾಡಿತ್ತು. ಪದೇ ಪದೇ ಪತ್ನಿಯ ಶೀಲದ ಮೇಲೆಯೇ ಅನುಮಾನ ಪಡುತ್ತಿದ್ದ. ಹೀಗಾಗಿ ಪತ್ನಿಯನ್ನ ಮನೆಯಲ್ಲಿಯೇ ಹಾಡುಹಗಲೇ ವೇಲ್‌ನಿಂದ ಕತ್ತು ಬಿಗಿದು ಕೊಲೆಗೈದಿದ್ದಾನೆ. ಹೆಂಡತಿಯನ್ನು ಕೊಂದ ನಂತರ ಆಕೆಯ ಅಪ್ಪ ಅಂದರೆ ತನ್ನ ಮಾವನಿಗೆ ಕೊಲೆ ಮಾಡಿರುವ ವಿಚಾರವನ್ನು ತಿಳಿಸಿದ್ದಾನೆ. ನಂತರ

ಗಂಡ ಶ್ರೀನಾಥ್ ಹಾಗೂ ಮಾವ ದೊರೆಸ್ವಾಮಿ ಇಬ್ಬರೂ ಪ್ಲಾನ್ ಮಾಡಿಕೊಂಡಿದ್ದಾರೆ. ಬೈಕ್ ನಲ್ಲಿ ಬ್ಯಾಗ್ನಲ್ಲಿ ಪೂಜಾಳ ಮೃತದೇಹ ತುಂಬಿ ದೂರದಲ್ಲಿರೋ ಕಾವೇರಿ ನದಿಗೆ ಕಲ್ಲುಕಟ್ಟಿ ಎಸೆದಿದ್ದಾರೆ. ಇನ್ನು ಮೃತದೇಹ ಎಸೆದಿರೋ ಜಾಗ ಸಾಕಷ್ಟು ಮೊಸಳೆಗಳು ಇರುವ ಕಾವೇರಿ ನದಿ. ಮೊಸಳೆಗಳು ಮೃತದೇಹವನ್ನ ತಿಂದು ಗುರುತು ಸಿಗುವುದಿಲ್ಲ ಎಂಬುದು ಮಾವ ಅಳಿಯನ ಲೆಕ್ಕಾಚಾರವಾಗಿತ್ತು.

ನಿನ್ನೆ ಬುಧವಾರ ಮೃತ ದೇಹವನ್ನ ಫಾರೆಸ್ಟ್ ಗಾರ್ಡ್ ಒಬ್ಬರು ನೋಡಿ, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರು ಪರಿಶೀಲನೆ ಮಾಡಿದಾಗ ಕೊಲೆಯ ರಹಸ್ಯ ಗೊತ್ತಾಗಿದೆ. ಅಂದಹಾಗೆ ಶ್ರೀನಾಥ್ ಹಾಗೂ ಪೂಜಾ ಇಬ್ಬರು ಮಂಡ್ಯಕೊಪ್ಪಲು ಗ್ರಾಮದವರು. ಶ್ರೀನಾಥ್ ಲಾರಿ ಚಾಲಕನಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿ 9 ವರ್ಷಗಳು ಕಳೆದಿತ್ತು. ಮುದ್ದಾದ ಮಗಳು ಇದ್ದಾಳೆ. ಆದರೆ, ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಅನುಮಾನಿಸಿ ಕೊನೆಗೂ ಗಂಡನೇ ಕೊಂದಿದ್ದಾನೆ. ವಿಪರ್ಯಾಸವೆಂದರೆ, ಮಗಳ ಸಾವನ್ನು ಪ್ರಶ್ನೆ ಮಾಡಬೇಕಾದ ತಂದೆಯೇ ಅಳಿಯನಿಗೆ ಮೃತದೇಹ ನದಿಗೆ ಎಸೆಯಲು ಸಾಥ್ ಕೊಟ್ಟಿರುವುದು. ಈ ಸಂಬಂಧ ಅರಕೆರೆ ಪೊಲೀಸರು ಆರೋಪಿ ಶ್ರೀನಾಥ್ ಹಾಗೂ ಪೂಜಾಳ ತಂದೆ ದೊರೆಸ್ವಾಮಿಯನ್ನ ಬಂಧಿಸಿದ್ದಾರೆ.

suddiyaana