ವಿವಾಹಿತನ ಜೊತೆ ಪತ್ನಿ ಪರಾರಿ – ಆತನ ಹೆಂಡ್ತಿಯನ್ನೇ ಮದುವೆಯಾದ ಭೂಪ..!
ಗಂಡ ಹೆಂಡತಿ ಮತ್ತು ನಾಲ್ವರು ಮಕ್ಕಳು. ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಆದ್ರೆ ಪತ್ನಿಗೆ ಮಾತ್ರ ಗಂಡನ ಮೇಲೆ ಪ್ರೀತಿ ಕಡಿಮೆಯಾಗಿತ್ತು. ಮತ್ತೊಬ್ಬನ ಸಂಗ ಮಾಡಿ ಕೊನೆಗೆ ಮಕ್ಕಳು, ಪತಿಯನ್ನ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಹೆಂಡ್ತಿ ಪರಾರಿಯಾದಳು ಅಂತಾ ತಲೆಕೆಡಿಸಿಕೊಳ್ಳಬೇಕಾದ ಗಂಡ ಊರಿನವ್ರೆಲ್ಲಾ ಶಾಕ್ ಆಗುವಂಥ ಕೆಲಸ ಮಾಡಿದ್ದಾನೆ.
ಇತ್ತೀಚಿನ ದಿನಗಳಲ್ಲಂತೂ ದಾಂಪತ್ಯ ಜೀವನದಲ್ಲಿ ಮೂರನೇಯವರ ಪ್ರವೇಶ ಸಾಮಾನ್ಯ ಎನ್ನುವಂತಾಗಿದೆ. ಇಲ್ಲೊಬ್ಬನ ಜೀವನದಲ್ಲೂ ಹಾಗೆಯೇ ಆಗಿದೆ. ಹೆಂಡತಿ ಗಂಡನನ್ನು ಬಿಟ್ಟು ವಿವಾಹಿತನ ಹಿಂದೆ ಬಿದ್ದಿದ್ದಾಳೆ. ಕೊನೆಗೆ ಎಲ್ಲರನ್ನೂ ಬಿಟ್ಟು ಆತನೇ ಬೇಕೆಂದು ಅವನ ಜೊತೆಯೇ ಕಾಲ್ಕಿತ್ತಿದ್ದಾಳೆ. ಅಯ್ಯಯ್ಯೋ ನನ್ ಹೆಂಡ್ತಿ ಓಡಿ ಹೋದ್ಲು ಅಂತಾ ಪತಿ ಬೇಸರ ಪಟ್ಕೊಂಡು ಸುಮ್ನಾಗಿಲ್ಲ. ಬದಲಿಗೆ ಹೆಂಡತಿಯೊಂದಿಗೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದುವೆಯಾಗಿದ್ದಾನೆ. ಅಚ್ಚರಿ ಅನ್ಸಿದ್ರೂ ಇದು ಸತ್ಯವೇ. ಬಿಹಾರದ ಖಗರಿಯಾ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಎಂಬ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ : ಬಾವಿಗೆ ಎಸೆದ ಮಗುವಿನ ಹೊಟ್ಟೆ ಸುತ್ತಿಕೊಂಡು ಕಾಪಾಡಿತು ನಾಗರಹಾವು – ಗ್ರಾಮಸ್ಥರಿಗೆ ಕಂಡಿದ್ದೆಂಥಾ ಪವಾಡ?
ನಾಲ್ಕು ಮಕ್ಕಳ ತಾಯಿಯಾಗಿದ್ದ ಪತ್ನಿ ರೂಬಿದೇವಿ ಓಡಿ ಹೋಗಿದ್ದಕ್ಕೆ ಪತಿ ನೀರಜ್ ವಿಚಲಿತನಾಗಿದ್ದ. ಮಕ್ಕಳ ಲಾಲನೆ ಪಾಲನೆ ಹೇಗೆ ಅನ್ನೋ ಬಗ್ಗೆ ಚಿಂತೆಗೀಡಾಗಿದ್ದ. ಕೊನೆಗೆ ತನ್ನ ಪತ್ನಿ ಜೊತೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದ್ವೆಯಾಗಿದ್ದಾನೆ. ಖಗರಿಯಾ ಜಿಲ್ಲೆಯ ಪಟ್ಟಣದಲ್ಲಿ ನಡೆದ ಈ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದು ವಿಚಿತ್ರವೆಂದರೆ, ವಿವಾಹವಾದ ಇಬ್ಬರೂ ಮಹಿಳೆಯರ ಹೆಸರು ಕೂಡಾ ಒಂದೇ ಇದೆ. ರೂಬಿ ದೇವಿ ಎಂಬುವವಳು ಗಂಡನನ್ನು ಬಿಟ್ಟು ಓಡಿ ಹೋಗಿದ್ದಾಳೆ. ಇನ್ನೊಬ್ಬ ರೂಬಿ ದೇವಿಯನ್ನು ನೀರಜ್ ಮದುವೆಯಾಗಿದ್ದಾನೆ. ಇಡೀ ಕುಟುಂಬದ ಒಪ್ಪಿಗೆಯೊಂದಿಗೆ ಈ ವಿವಾಹ (Marriage) ನೆರವೇರಿಸಲಾಗಿದೆ.
ಅಷ್ಟಕ್ಕೂ ನಡೆದಿದ್ದೇನೆಂದರೆ ಬಿಹಾರ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ 2009ರಲ್ಲಿ ರೂಬಿ ದೇವಿ ಎಂಬುವರನ್ನು ವಿವಾಹವಾಗಿದ್ದ. ದಂಪತಿಗೆ ನಾಲ್ಕು ಮಕ್ಕಳೂ (Children) ಇದ್ದಾರೆ. ಆದರೆ, ಇತ್ತೀಚೆಗೆ ರೂಬಿ, ಮುಖೇಶ್ ಎಂಬುವವನ ಜೊತೆಗೆ ಸಂಬಂಧ ಬೆಳೆಸಿಕೊಂಡಿದ್ದಳು. ಈತ ಇದೇ ಜಿಲ್ಲೆಯ ಪಾಸ್ರಾಹಾ ಗ್ರಾಮದ ನಿವಾಸಿಯಾಗಿದ್ದಾನೆ. ಮದುವೆಗೂ ಮುನ್ನ ರೂಬಿ ಪಾಸ್ರಾಹಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆತನ ಜೊತೆಗೆ ದೀರ್ಘಕಾಲದವರೆಗೆ ಸಂಬಂಧ (Relationship) ಹೊಂದಿದ್ದಳು ಎಂದು ತಿಳಿದುಬಂದಿದೆ.
ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ ಪತ್ನಿ ಮುಖೇಶ್ ಜೊತೆ ಓಡಿಹೋಗಿರುವ ವಿಷಯ ತಿಳಿದು ತಕ್ಷಣವೇ, ನೀರಜ್ ಮುಖೇಶ್ ವಿರುದ್ಧ ಪಸ್ರಾಹಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾನೆ. ಈ ಸಮಸ್ಯೆಯನ್ನು ಪರಿಹರಿಸಲು ಗ್ರಾಮದಲ್ಲಿ ಪಂಚಾಯಿತಿ ಕೂಡಾ ನಡೆಸಲಾಗಿದೆ. ಆದರೆ ಮುಖೇಶ್ ಇದಕ್ಕೆ ಒಪ್ಪಲಿಲ್ಲ. ಹೀಗಿರುವಾಗ ಓಡಿಹೋಗಿರುವ ಜೋಡಿಯ (Couple) ಮೇಲೆ ಸೇಡು ತೀರಿಸಿಕೊಳ್ಳಲು ನೀರಜ್ ಪ್ಲ್ಯಾನ್ ಮಾಡಿದ್ದಾನೆ. ಮುಕೇಶ್ ಹೆಂಡತಿಯೊಂದಿಗೆ ಅಂದ್ರೆ, ಮಾನ್ಸಿ ಬ್ಲಾಕ್‌ನ ಆಮ್ನಿ ಗ್ರಾಮದ ರೂಬಿ ಎಂಬ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ನೀರಜ್ ಫೆಬ್ರವರಿ 18ರಂದು ಸ್ಥಳೀಯ ದೇವಾಲಯವೊಂದರಲ್ಲಿ ವಿವಾಹವಾಗಿದ್ದಾನೆ. ಈ ವಿಚಿತ್ರ ಮದುವೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದೇನೆ ಇರ್ಲಿ, ಹೆಂಡ್ತಿ ಓಡಿಹೋದಾಗ ಮುಂದೇನೆಂದು ತಿಳಿಯದೆ ಕಂಗಾಲಾಗುವವರ ಮಧ್ಯೆ ವ್ಯಕ್ತಿಯ ನಡೆ ಎಲ್ಲರ ಹುಬ್ಬೇರುವಂತೆ ಮಾಡಿದೆ.