ಸೆಹ್ವಾಗ್ ಫ್ಯಾಮಿಲಿ ಫೋಟೋದಲ್ಲಿ ಪತ್ನಿ ಮಿಸ್ಸಿಂಗ್- ಆರತಿ ಫೋಟೋದಲ್ಲಿ ಮಕ್ಕಳಿಗೆ ಮಾತ್ರ ಜಾಗ..!

ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಡಿವೋರ್ಸ್ ವದಂತಿ ಬೆನ್ನಲ್ಲೇ, ದೀಪಾವಳಿ ಪೋಸ್ಟ್ ಮತ್ತೊಂದು ಅನುಮಾನ ಸೃಷ್ಟಿಸಿದೆ. ಲೆಜೆಂಡರಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ತಮ್ಮ ಕುಟುಂಬದೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋದಲ್ಲಿ ಅವರ ಪತ್ನಿ ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಸೆಹ್ವಾಗ್ ಪತ್ನಿ ಪಟಾಯಿಸ್ಕೊಂಡ ಫ್ರೆಂಡ್ – BCCI ಅಧ್ಯಕ್ಷನ ಜತೆ ಆರತಿ ಅಫೇರ್?
ದೀಪಾವಳಿ ಸಂಭ್ರಮದಲ್ಲಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ತನ್ನ ಮತ್ತು ಪತ್ನಿ ಆರತಿ ನಡುವೆ ಯಾವುದೂ ಸರಿ ಇಲ್ಲ ಅನ್ನೋದನ್ನ ಸಾಬೀತು ಮಾಡಿದಂತಿದೆ. ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸುವ ಫೋಟೋವೊಂದನ್ನು ವೀರೇಂದ್ರ ಸೆಹ್ವಾಗ್ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ, ಅವರ ತಾಯಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಆದರೆ ಈ ಫ್ಯಾಮಿಲಿ ಫೋಟೋದಲ್ಲಿ ಅವರ ಪತ್ನಿ ಇಲ್ಲ. ಮಕ್ಕಳ ಜೊತೆ ಫೋಟೋ ಹಂಚಿಕೊಂಡ ಸೆಹ್ವಾಗ್ ಕುಟುಂಬ ಫೋಟೋದಲ್ಲಿ ಅವರ ಪತ್ನಿ ಇಲ್ಲದಿರುವುದು ಸೆಹ್ವಾಗ್ ಅವರೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಿಸಿದೆ ಎಂಬ ಊಹಾಪೋಹವನ್ನ ಮತ್ತಷ್ಟು ಹೆಚ್ಚಿಸಿದೆ. ಅವರ ವಿಚ್ಛೇದನದ ಬಗ್ಗೆ ಕೆಲವು ದಿನಗಳಿಂದ ಮಾತುಕತೆ ನಡೆಯುತ್ತಿದೆ. ಆದರೆ ಅವರಿಬ್ಬರೂ ಇಲ್ಲಿಯವರೆಗೂ ಇದರ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿಲ್ಲ.
ಅತ್ತ ವೀರೇಂದ್ರ ಸೆಹ್ವಾಗ್ ಫೋಟೋ ಹಂಚಿಕೊಂಡರೆ, ಇತ್ತ ಆರತಿ ಸೆಹ್ವಾಗ್ ಕೂಡಾ ಮಕ್ಕಳ ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ. ಆರತಿ ಸೆಹ್ವಾಗ್ ದೀಪಾವಳಿ ಸಂದರ್ಭದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಆರತಿ ಸೆಹ್ವಾಗ್ ದೀಪಾವಳಿ ಸಂದರ್ಭದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.
ಸೆಹ್ವಾಗ್ ಅಥವಾ ಆರತಿ ಈ ವದಂತಿಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಸೆಹ್ವಾಗ್ ಮತ್ತು ಆರತಿ 2004 ರಲ್ಲಿ ವಿವಾಹವಾದರು. ಸೆಹ್ವಾಗ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದರೂ, ಆದರೆ ಅವರು ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಟ್ಟಿದ್ದಾರೆ. ಯಾವುದೇ ವಿಶ್ವಾಸಾರ್ಹ ಮೂಲವು ಇಬ್ಬರ ನಡುವೆ ವಿವಾದ ಅಥವಾ ಬಿರುಕು ಇರುವುದನ್ನು ದೃಢಪಡಿಸಿಲ್ಲ.

ನೋಡಿರಿ

