ಫೋನ್‌ನಲ್ಲಿ ಆ ವಿಡಿಯೋ ನೋಡ್ತಾನೆ, ಹೆಂಡ್ತಿ ಹತ್ರ ಹಾಗೆ ಮಾಡು ಅಂತಾನೆ – ಬೆತ್ತಲೆ ಗಂಡನ ಕಾಟಕ್ಕೆ ಹೆಂಡತಿ ಕಂಗಾಲು

ಗಂಡ ಹೆಂಡತಿ ಅಂದಮೇಲೆ ಪ್ರೀತಿ, ಜಗಳ ಹುಸಿಮುನಿಸು ಇದ್ದದ್ದೇ. ಆದರೆ, ಯಾರಾದರೂ ಮನೆಗೆ ಬಂದಾಗ ಯಾರೇ ಆಗಲಿ ಸಭ್ಯತೆಯಿಂದ ನಡೆದುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಇದ್ದಾನೆ. ಹೆಂಡತಿ ಎದುರಲ್ಲೇ ಬಟ್ಟೆ ಇಲ್ಲದೇ ತಿರುಗುತ್ತಾನೆ. ಮನೆಗೆ ಅತ್ತೆ ಮಾವ ಬಂದರೂ ಮೈಮೇಲೆ ಬಟ್ಟೆ ನಿಲ್ಲಲ್ಲ. ಇನ್ನು ಫೋನಲ್ಲಿ ಇವನಿಗೆ ಆ ಥರಾ ವಿಡಿಯೋ ನೋಡುವ ಚಟ. ಇದರಿಂದ ಹೆಂಡತಿಗೆ ಮಾತ್ರ ಪ್ರಾಣಸಂಕಟ
ಇದನ್ನೂ ಓದಿ:ಕನ್ನಡ ಕಿರುತೆರೆ ನಟಿ ದುರಂತ ಅಂತ್ಯ! – ನಂದಿನಿ ಸಾವಿಗೆ ಇದೇ ಕಾರಣವಾಯ್ತಾ?
ಬೆಂಗಳೂರಿನಲ್ಲಿ ಒಂದು ವಿಚಿತ್ರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇಬ್ಬರೂ ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳು. ಹೆಚ್ಆರ್ ಆಗಿದ್ದ ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿಯನ್ನು ಪ್ರೀತಿಸಿದ್ದ ಆತ ಆಕೆಯ ಮನೆಯವರನ್ನೂ ಒಪ್ಪಿಸಿದ್ದ. ಬಳಿಕ ಸೆಪ್ಟೆಂಬರ್ 03, 2025ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರೇ ನಿಂತು ಇವರ ವಿವಾಹವನ್ನೂ ನಡೆಸಿದ್ದರು. ಆದರೀಗ, ಮದುವೆಯಾದ ಮೇಲೆ ಆತನ ಬಣ್ಣ ಬಯಲಾಗಿದೆ. ಸೈಕೋ ಪತಿ ಕಾಟಕ್ಕೆ ಪತ್ನಿ ಬೆಚ್ಚಿಬಿದ್ದಿದ್ದಾಳೆ. ಸೈಕೋ ಪತಿಯ ಹೆಸರು ಮಂಜುನಾಥ್. ಈತನಿಗೆ ವಿಚಿತ್ರ ಲೈಂಗಿಕ ಕ್ರಿಯೆಯ ಚಟ. ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಲೇ ಇರುತ್ತಾನಂತೆ. ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡುತ್ತಾನಂತೆ. ಅಕ್ಕ ಪಕ್ಕದವರು ನೋಡ್ತಾರೆ ಅನ್ನೋ ಪರಿಜ್ಞಾನವೂ ಇಲ್ಲ. ಗಂಡನ ಈ ಬೆತ್ತಲೆ ಕಾಟದಿಂದ ಹೆಂಡತಿಗೆ ಪದೇ ಪದೇ ಮುಜುಗರ ಆಗುತ್ತಿತ್ತು. ಗಂಡನ ವಿಚಿತ್ರ ವರ್ತನೆ, ಕಿರುಕುಳಕ್ಕೆ ಬೇಸತ್ತಿರೋ ಹೆಂಡತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್ ಮನೆ ಬಿಟ್ಟು ಹೋಗಿದ್ದ. ಬಳಿಕ ಮತ್ತೆ ಮನೆ ಬಳಿ ಬಂದ ಆತ, ತನಗೆ ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲ್ಲೆಗೂ ಯತ್ನಿಸಿದ್ದಾನೆ. ಆತನ ಈ ಕೃತ್ಯಕ್ಕೆ ತನ್ನ ಅತ್ತೆ ಮತ್ತು ಮಾವ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೋಡಿರಿ

