ಬಾಯಿಗೆ ಬಾಯಿಟ್ಟು ಗಂಡನಿಂದ ಮುತ್ತು – ಪತಿ ಚುಂಬಿಸುವಾಗ ನಾಲಗೆಯನ್ನೇ ಕಚಕ್ ಮಾಡಿದ ಪತ್ನಿ..!

ಬಾಯಿಗೆ ಬಾಯಿಟ್ಟು ಗಂಡನಿಂದ ಮುತ್ತು – ಪತಿ ಚುಂಬಿಸುವಾಗ ನಾಲಗೆಯನ್ನೇ ಕಚಕ್ ಮಾಡಿದ ಪತ್ನಿ..!

ಅವರಿಬ್ಬರು ಪ್ರೀತಿಸಿ ಮದುವೆಯಾದವರು. 8 ವರ್ಷದ ದಾಂಪತ್ಯ. ಇಬ್ಬರು ಮಕ್ಕಳು. ಆದರೆ, ಮೊದಲು ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ ಅಂತಾ ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ಆದರೆ, ಮಕ್ಕಳಾದ ಮೇಲೆ ಇಬ್ಬರ ನಡುವೆ ಆಗಾಗ ಜಗಳ ಶುರುವಾಗಿತ್ತು. ನಂತರದ ದಿನಗಳಲ್ಲಿ ವಾರಕ್ಕೊಮ್ಮೆ ಇರುವ ಜಗಳ ವಾರಪೂರ್ತಿಯೂ ಇರುತ್ತಿತ್ತು. ನಂತರ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿಯಾಗುವಷ್ಟು ಜೋರಾಗಿಯೇ ಜಗಳ ನಡೆಯುತ್ತಿತ್ತು. ಎಷ್ಟೇ ಜಗಳವಾಡಿದರೂ ಸಿಟ್ಟು ಕಡಿಮೆಯಾದ ಮೇಲೆ ಇಬ್ಬರೂ ಪ್ರೀತಿ ಮಾಡುತ್ತಿದ್ದರಂತೆ. ಹೀಗೆ ಗಂಡ ಹೆಂಡತಿಗೆ ಪ್ರೀತಿಯಿಂದ ಮುತ್ತುಕೊಡಲು ಹೋದಾಗ ಪತ್ನಿ ಗಂಡನ ಮೇಲೆ ಸೇಡು ತೀರಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಬಾಲಿವುಡ್ ನಟಿ ರೇಖಾ ಲೇಡಿ ಸೆಕ್ರಟರಿ ಜೊತೆ ಸಂಬಂಧ ಹೊಂದಿದ್ದರು! – ಬಯೋಗ್ರಫಿಯಲ್ಲಿದೆ ಇನ್ನೂ ಕೆಲ ರೋಚಕ ರಹಸ್ಯ..!

ಆಂಧ್ರ ಪ್ರದೇಶದ ಕರ್ನೂಲು ನಿವಾಸಿ ಥಾರಚಂದ್ ನಾಯ್ಕ್ ಹಾಗೂ ಪುಷ್ಪಾವತಿ 2015ರಲ್ಲೇ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಯಲ್ಲಮ್ಮಗುಟ್ಟಾ ಥಂಡಾದಲ್ಲಿ ಇವರಿಬ್ಬರು ವಾಸವಾಗಿದ್ದರು. ಇಬ್ಬರ ನಡುವೆ ಇತ್ತೀಚಿಗೆ ಜೋರಾಗಿಯೇ ಜಗಳ ನಡೆಯುತ್ತಲೇ ಇದೆಯಂತೆ. ಎರಡು ದಿನಗಳ ಹಿಂದೆ ಇಬ್ಬರೂ ಕಿತ್ತಾಡಿಕೊಂಡಿದ್ದರು. ಸ್ವಲ್ಪ ಸಮಯದ ನಂತರ ಗಂಡನಿಗೆ ಹೆಂಡತಿ ಮೇಲೆ ಪ್ರೀತಿ ಉಕ್ಕಿದೆ. ಪ್ರೀತಿಯಿಂದ ಮುತ್ತುಕೊಡಲು ತುಟಿಗೆ ತುಟಿ ಸೇರಿಸಿದ್ದಾನೆ. ನಂತರ ಪ್ರೀತಿಯ ಪರಾಕಾಷ್ಠೆ ತಲುಪಿದ ಪತಿರಾಯ ಹೆಂಡತಿಯ ಬಾಯೊಳಗೆ ತನ್ನ ನಾಲಗೆಯನ್ನು ಇಟ್ಟಿದ್ದಾನೆ. ಆಗ ಹೆಂಡತಿಗೆ ಗಂಡ ತನ್ನ ಜೊತೆ ಜಗಳ ಮಾಡುತ್ತಿರುವುದು ಸಡನ್ನಾಗಿ ನೆನಪಾಗಿದೆ. ಸೇಡಲ್ಲಿದ್ದ ಪತ್ನಿ ಗಂಡನ ನಾಲಗೆಯನ್ನು ಹಲ್ಲಿನಿಂದ ಜೋರಾಗಿ ಕಚ್ಚಿದ್ದಾಳೆ. ಇತ್ತ ನಾಲಗೆಗೆ ಗಂಭೀರ ಗಾಯವಾಗಿದ್ದರಿಂದ ರಕ್ತ ಹರಿದಿದೆ. ಕೂಡಲೇ ಪತಿರಾಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇಷ್ಟೆಲ್ಲಾ ಆದ ಮೇಲೆ ಪತ್ನಿ ಪುಷ್ಪಾವತಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ನನ್ನ ಗಂಡ ನನ್ನಿಂದ ಬಲವಂತವಾಗಿ ಮುತ್ತು ಸ್ವೀಕರಿಸಲು ಯತ್ನಿಸಿದ. ಹೀಗಾಗಿ ನಾಲಿಗೆ ಕಚ್ಚಿದ್ದೇನೆ ಎಂದಿದ್ದಾಳೆ. ಪತಿ ಕೂಡ ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆಕೆಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾನೆ.

suddiyaana