ಕೋಲಾರದಲ್ಲಿ ಭೀಮನ ಅಮಾವಾಸ್ಯೆ ದಿನವೇ ಹೆಂಡತಿಯಿಂದ ಗಂಡನ ಕೊ*ಲೆ

ಕೋಲಾರದಲ್ಲಿ ಭೀಮನ ಅಮಾವಾಸ್ಯೆ ದಿನವೇ ಹೆಂಡತಿಯಿಂದ ಗಂಡನ ಕೊ*ಲೆ

ಭೀಮನ ಅಮಾವಾಸ್ಯೆ  ಗಂಡನಿಗೆ ಪೂಜೆ ಮಾಡುವ ಬದಲು ಗಂಡನ ಕತೆಯನ್ನೇ ಪತ್ನಿ ಮುಗಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.   ಹೆಂಡತಿ  ಗಂಡನನ್ನ ಕೊಂದು  ಪೋಲಿಸ್‌ ಠಾಣೆಗೆ ಹೋಗಿ ಶರಣಾಗಿದ್ದಾಳೆ.

ಇದನ್ನೂ ಓದಿ:  ತೆಲಂಗಾಣದಲ್ಲಿ ಟ್ಯಾಂಕರ್,​​ ಆಟೋ ರಿಕ್ಷಾಗೆ ಡಿಕ್ಕಿ – ಬೀದರ್‌ನ 6 ಜನ ಬಲಿ, 6 ಜನಕ್ಕೆ ಗಾಯ

ಕೋಲಾರ ತಾಲೂಕಿನ ಚೆನ್ನಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಪತಿ ನಾರಾಯಣ ಸ್ವಾಮಿ(68) ಅವರನ್ನು ಪತ್ನಿ ಜಗದಾಂಬ(58) ಕೊಲೆ ಮಾಡಿದ್ದಾಳೆ. ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದ ಪತ್ನಿ ಜಗದಾಂಬ ಪತಿ ನಿದ್ದೆಗೆ ಜಾರಿದ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.

ಜಮೀನು ಮಾರಾಟ ಮಾಡಿದ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಮತ್ತು ಇರುವ ಜಮೀನನ್ನು ಕೂಡ ಮಾರಾಟ ಮಾಡುತ್ತಾನೆ ಎಂದು ಕೊಲೆ ಮಾಡಿದ್ದಾಳೆ. ಪತಿ ನಾರಾಯಣಪ್ಪ ಮತ್ತು ಪತ್ನಿ ಜಗದಾಂಬ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಹಣಕ್ಕಾಗಿ ತೋಟದ ಮನೆಗೆ ಕರೆತ೦ದು ಪತಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Kishor KV

Leave a Reply

Your email address will not be published. Required fields are marked *