ಪತ್ನಿ ಹೆರಿಗೆಗಾಗಿ ಬರುವಾಗ ಸೈನಿಕನ ದುರಂತ ಅಂತ್ಯ! – ಮಗು ಜೊತೆ ಸ್ಟ್ರೆಚರ್‌ನಲ್ಲೇ ಬಂದು ಪತ್ನಿ ಅಂತಿಮನಮನ

ಪತ್ನಿ ಹೆರಿಗೆಗಾಗಿ ಬರುವಾಗ ಸೈನಿಕನ ದುರಂತ ಅಂತ್ಯ! – ಮಗು ಜೊತೆ ಸ್ಟ್ರೆಚರ್‌ನಲ್ಲೇ ಬಂದು ಪತ್ನಿ ಅಂತಿಮನಮನ

ಮನೆಗೆ ಪುಟ್ಟ ಕಂದಮ್ಮ ಬರುವ ಖುಷಿ.. ಹೆರಿಗೆ ನೋವಿನಿಂದ ಹೆಂಡತಿ ಒದ್ದಾಡ್ತಿದ್ರೆ, ಇತ್ತ ಪತಿಯ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಹೆರಿಗೆ ಬಳಿಕ ಪುಟ್ಟ ಕಂದಮ್ಮನ ಜೊತೆ ಸ್ಟ್ರೆಚರ್‌ನಲ್ಲೇ ಬಂದು ಪತ್ನಿ ಸೈನಿಕ ಅಂತಿಮ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಮಲ್ಲಮ್ಮ ಯಾಕೋ ಮೊದಲಿನಂತಿಲ್ಲ! – ಮಲ್ಲಮ್ಮ ಮೇಲೂ ಅಸಮಧಾನ ಹೊರ ಹಾಕಿದ ಧ್ರುವಂತ್!‌

ಈ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಭಾರತೀಯ ಸೇನೆಯ ಅಧಿಕಾರಿ ಪ್ರಮೋದ್ ಜಾಧವ್ ಎಂಬುವವರು ಪತ್ನಿಯ ಹೆರಿಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ರಜೆ ಕೇಳಿ ಊರಿಗೆ ಆಗಮಿಸಿದ್ದರು. ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ವಿಧಿಯ ಆಟ ಬೇರೆಯೇ ಇತ್ತು. ಪತ್ನಿ ಮಗುವಿಗೆ ಜನ್ಮ ನೀಡಿದ್ರೆ, ಇತ್ತ ಪ್ರಮೋದ್‌ ಪರಶುರಾಮ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಭಾನುವಾರ  ಸೈನಿಕ ಪ್ರಮೋದ್ ಜಾಧವ್, ಬೈಕಿನಲ್ಲಿ ತೆರಳುತ್ತಿರುವಾಗ ಪಿಕಪ್ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಮೋದ್ ಜಾಧವ್ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ ಯೋಧನ ಮೃತದೇಹವನ್ನು ಮನೆಗೆ ತರಲಾಗಿದೆ. ಈ ವೇಳೆ ಯೋಧನ ಅಂತ್ಯಕ್ರಿಯೆ ವೇಳೆ ಮಗು ಹಾಗೂ ಪತ್ನಿಯನ್ನು ಆಸ್ಪತ್ರೆಯಿಂದ ಸ್ಟ್ರೆಚರ್‌ನಲ್ಲಿ ಕರೆತರಲಾಗಿದೆ. ಪತಿಯ ಮೃತದೇಹದ ಮೇಲೆ ಕೈಯಿಟ್ಟು ಪತ್ನಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಜಾದವ್ ಅವರಿಗೆ ಪೂರ್ಣ ಮಿಲಿಟರಿ ಗೌರವಗಳನ್ನು ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಜಾಧವ್ ಅವರ ಪತ್ನಿ ಚೇತರಿಸಿಕೊಳ್ಳುತ್ತಿದ್ದು, ಸ್ಟ್ರೆಚರ್ ನಲ್ಲೇ ಮಲಗಿಕೊಂಡು ಜಾಧವ್ ಅವರಿಗೆ ಅಂತಿಮ ವಿದಾಯ ಹೇಳಿದರು. ಆಸ್ಪತ್ರೆ ಸಿಬ್ಬಂದಿ ಮಗುವನ್ನು ಹಿಡಿದುಕೊಂಡು ಮಗುವಿಗೆ ತಂದೆಯ ಅಂತಿಮ ದರ್ಶನ ಮಾಡಿಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕರು ಇದಕ್ಕೆ ಸಂತಾಪ ಸೂಚಿಸಿದ್ದಾರೆ.

Shwetha M