OUT ಮಾಡಿ ಕ್ರಿಕೆಟ್ ಗೆ ಗುಡ್ ಬೈ – ವೃತ್ತಿ ಜೀವನದ ಕೊನೇ ಬಾಲ್ ವಿಕೆಟ್
ನಾಲ್ವರು ಬೌಲರ್ ಗಳ ಸ್ಪೆಷಲ್ ನಿವೃತ್ತಿ

OUT ಮಾಡಿ ಕ್ರಿಕೆಟ್ ಗೆ ಗುಡ್ ಬೈ – ವೃತ್ತಿ ಜೀವನದ ಕೊನೇ ಬಾಲ್ ವಿಕೆಟ್ನಾಲ್ವರು ಬೌಲರ್ ಗಳ ಸ್ಪೆಷಲ್ ನಿವೃತ್ತಿ

ಕ್ರಿಕೆಟ್​​ನಲ್ಲಿ ಬ್ಯಾಟಿಂಗ್ ಸ್ಟ್ರೆಂತ್ ಎಷ್ಟು ಮುಖ್ಯನೋ ಬೌಲಿಂಗ್ ಪವರ್ ಅದಕ್ಕಿಂತ್ಲೂ ಮೋಸ್ಟ್ ಇಂಪಾರ್ಟೆಂಟ್. ಅದೆಷ್ಟೋ ಪಂದ್ಯಗಳಲ್ಲಿ ಬ್ಯಾಟರ್ಸ್ ಕೈ ಕೊಟ್ರೂ ಬೌಲರ್ಸ್ ಮ್ಯಾಚ್ ಗೆಲ್ಲಿಸಿದ ಎಕ್ಸಾಂಪಲ್ಸ್ ಇವೆ. ಟಿ-20 ವಿಶ್ವಕಪ್​ನಲ್ಲಿ ನಮ್ಮ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿದ್ದು ಕೂಡ ಬೌಲರ್ಸ್ ಜಾದೂನಿಂದಲೇ.  ಪ್ರಸೆಂಟ್ ಸಿಚುಯೇಶನ್​ನಲ್ಲಿ ನಮ್ಮ ಭಾರತದ ಸೂಪರ್ ಸ್ಟಾರ್ ಆಟಗಾರ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಜಗತ್ತಿನಲ್ಲೇ ಬೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ವಿದೇಶಿ ದಿಗ್ಗಜರು ಕೂಡ ಗುಣಗಾನ ಮಾಡ್ತಿದ್ದಾರೆ. ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಕೆಟ್ ಕೀಳೋದು ಪ್ರತಿಯೊಬ್ಬ ಬೌಲರ್​​ನ ಕನಸು. ಅದ್ರಲ್ಲೂ ತಮ್ಮ ಕೊನೇ ಪಂದ್ಯದ ಕೊನೇ ಎಸೆತದಲ್ಲಿ ವಿಕೆಟ್ ಬೇಟೆಯಾಡುವಂಥ ಅದೃಷ್ಟ ಎಷ್ಟು ಜನ್ರಿಗೆ ಸಿಗುತ್ತೆ ಹೇಳಿ. ಆದ್ರೆ ಇಂಥ ಲಕ್ ಈ ನಾಲ್ವರು ಬೌಲರ್​ಗಳಿಗೆ ಒಲಿದಿದೆ. ಅಷ್ಟಕ್ಕೂ ಯಾರು ಆ ಲಕ್ಕಿ ಪ್ಲೇಯರ್ಸ್..? ಕೊನೇ ಪಂದ್ಯದ ಕೊನೇ ಎಸೆತದಲ್ಲಿ ವಿಕೆಟ್ ಉರುಳಿಸಿದ್ದೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಿಚ್ಚನ ವಿರುದ್ಧ ಒಳಗೊಳಗೇ ಸಂಚು – ಸುದೀಪ್ ಸಿಟ್ಟಿಗೆ ಇದೇ ಕಾರಣ

ಕ್ರಿಕೆಟ್ ಅನ್ನೋದು ಈಗ ಭಾರತದ ಪಾಲಿಗೆ ಮೋಸ್ಟ್ ಪಾಪ್ಯುಲರ್ ಗೇಮ್. ಬ್ಯಾಟಿಂಗ್​ನಲ್ಲಿ ಹೇಗೆ ಆಟಗಾರರು ಮಿಂಚುತ್ತಾರೋ ಹಾಗೇ ಬೌಲಿಂಗ್​ನಲ್ಲೂ ಜಗದ್ವಿಖ್ಯಾತಿ ಪಡೆದಿರೋ ಬೌಲರ್ಸ್ ಇದ್ದಾರೆ. ಕ್ರಿಕೆಟ್ ಆಡುವ ಪ್ರತಿಯೊಬ್ಬ ಬೌಲರ್​ಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ಬೇಟೆಯಾಡೋದು ಬಹುದೊಡ್ಡ ಕನಸು. ಬ್ಯಾಟರ್‌ಗಳನ್ನ ರನ್ ಗಳಿಸದಂತೆ ಕಟ್ಟಿ ಹಾಕಲು ತಮ್ಮದೇ ಸ್ಟೈಲ್​ನಲ್ಲಿ ಅಟ್ಯಾಕ್ ಮಾಡ್ತಾರೆ. ಹಾಗೇ ಕೆಲ ಬೌಲರ್‌ಗಳನ್ನು ಎದುರಿಸುವುದು ಸ್ಟಾರ್ ಬ್ಯಾಟರ್‌ಗಳಿಗೂ ಕೂಡ ಸವಾಲಾಗಿರುತ್ತೆ. ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ನಾಲ್ವರು ಸರ್ವಶ್ರೇಷ್ಠ ಬೌಲರ್‌ಗಳಿದ್ದಾರೆ. ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಈ ನಾಲ್ವರು ಬೌಲರ್ಸ್  ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಎಸೆತದಲ್ಲಿಯೂ ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಯಾರು ಆ ನಾಲ್ವರು ಜಾದೂಗಾರರು ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.

ನಂಬರ್ – 1 – ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್!

ಮುತ್ತಯ್ಯ ಮುರಳೀಧರನ್. ಒಂದು ಕಾಲದಲ್ಲಿ ಈ ಹೆಸ್ರು ಕೇಳಿದ್ರೇನೆ ದಿಗ್ಗಜ ಬ್ಯಾಟರ್​ಗಳೂ ಕೂಡ ಕ್ರೀಸ್​ನಲ್ಲಿ ಸೈಲೆಂಟ್ ಆಗಿ ಬಿಡ್ತಿದ್ರು. ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಮುತ್ತಯ್ಯ ಮುರಳೀಧರನ್ ಒಬ್ಬರು. ತಮ್ಮ ಮಾಂತ್ರಿಕ ಸ್ಪಿನ್ ಬೌಲಿಂಗ್‌ನಿಂದಲೇ ಹೆಸುವಾಸಿಯಾಗಿದ್ದರು. ಅವರ ಕಾಲದ ಎಲ್ಲಾ ದಿಗ್ಗಜ ಬ್ಯಾಟರ್‌ಗಳ ವಿಕೆಟ್‌ಗಳನ್ನು ಪಡೆದಿರೋ ಖ್ಯಾತಿ ಅವ್ರದ್ದು. ಈಗಲೂ ಸಹ ವಿಶ್ವಕ್ರಿಕೆಟ್​​ನಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅದೆಂಥದ್ದೇ ಸೂಪರ್ ಸ್ಟಾರ್ ಬ್ಯಾಟರ್ ಆಗಿದ್ರೂ  ಮುರುಳೀಧರನ್ ಅವರ ಬೌಲಿಂಗ್‌ನಲ್ಲಿ ರನ್ ಗಳಿಸೋದು ಸುಲಭದ ಮಾತಾಗಿರಲಿಲ್ಲ. ಮುತ್ತಯ್ಯ ಮುರುಳೀಧರನ್ ಅವ್ರು ಟೆಸ್ಟ್ ಕ್ರಿಕೆಟ್‌ನಲ್ಲಿ 800 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 534 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 1,347 ವಿಕೆಟ್​ಗಳನ್ನ ಉರುಳಿಸಿದ್ದಾರೆ. ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಐದು ವಿಕೆಟ್ ಗೊಂಚಲು ಪಡೆದ ವಿಶ್ವದಾಖಲೆ ಹೊಂದಿದ್ದಾರೆ. 133 ಟೆಸ್ಟ್ ಪಂದ್ಯಗಳ 230 ಇನ್ನಿಂಗ್ಸ್​​​ಗಳಲ್ಲಿ ಬೌಲಿಂಗ್ ಮಾಡಿದ್ದು, 67 ಸಲ 5 ವಿಕೆಟ್ ಗೊಂಚಲು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಅದ್ರಲ್ಲೂ ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಭಾರತದ ಪ್ರಗ್ಯಾನ್ ಓಜಾ ಅವರ ವಿಕೆಟ್ ಕಬಳಿಸಿ ವಿದಾಯದ ಪಂದ್ಯವನ್ನ ಸ್ಮರಣೀಯವಾಗಿಸಿಕೊಂಡಿದ್ರು.

ನಂಬರ್ – 2 – ಆಸ್ಟ್ರೇಲಿಯಾದ ಮಾರಕ ಬೌಲರ್ ಗ್ಲೆನ್ ಮೆಕ್‌ಗ್ರಾತ್!

ಕ್ರಿಕೆಟ್ ಜಗತ್ತು ಕಂಡ ಬಲಿಷ್ಠ ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಇಂಥಾ ಆಸಿಸ್ ಪಡೆಯಲ್ಲಿದ್ದ ಅಪಾಯಕಾರಿ ವೇಗದ ಬೌಲರ್‌ಗಳಲ್ಲಿ ಒಬ್ಬರು ಗ್ಲೆನ್ ಮೆಕ್‌ಗ್ರಾತ್. ಈ ಗ್ಲೆನ್ ಮೆಕ್ ಗ್ರಾತ್ ಆನೇಕ ದಾಖಲೆಗಳನ್ನ ಬರೆದಿದ್ದಾರೆ. ಲೈನ್ ಲೆಂಗ್ತ್‌ ಬೌಲಿಂಗ್ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದ ಗ್ರಾತ್ ಕಣ್ಣು ಮಿಟುಕಿಸುವಷ್ಟರಲ್ಲಿ ಬ್ಯಾಟರ್‌ಗಳ ವಿಕೆಟ್ ಉರುಳಿಸುತ್ತಿದ್ರು. ಅತ್ಯದ್ಭುತ ಕೌಶಲ್ಯ ಹೊಂದಿದ್ದ ಅವರು ಆಸ್ಟ್ರೇಲಿಯಾ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡಿದ್ದರು. ಮೆಕ್‌ಗ್ರಾತ್ ಎಲ್ಲಾ ಮೂರು ಮಾದರಿಗಳಿಂದ ಒಟ್ಟು 949 ವಿಕೆಟ್‌ಗಳನ್ನು ಕಬಳಿಸಿದ್ದು, ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರನ್ನು ಔಟ್ ಮಾಡಿದ್ರು.

ನಂಬರ್ – 3 -ನ್ಯೂಜಿಲೆಂಡ್ ನ ಅಪ್ರತಿಮ ಆಟಗಾರ ರಿಚರ್ಡ್ ಹ್ಯಾಡ್ಲಿ!

ರಿಚರ್ಡ್ ಹ್ಯಾಡ್ಲೀ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಬೌಲಿಂಗ್‌ ಪ್ರದರ್ಶನದ ಮೂಲಕವೇ ಸದ್ದು ಮಾಡಿದವ್ರು. ನ್ಯೂಜಿಲೆಂಡ್ ಪರ 86 ಟೆಸ್ಟ್ ಪಂದ್ಯಗಳಲ್ಲಿ 431 ವಿಕೆಟ್ ಪಡೆದಿದ್ದಾರೆ. ಅಲ್ದೇ ರಿಚರ್ಡ್ ಹ್ಯಾಡ್ಲಿ 86 ಟೆಸ್ಟ್​​ಗಳ 150 ಇನ್ನಿಂಗ್ಸ್​​ಗಳಲ್ಲಿ 36 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಅಶ್ವಿನ್ 101 ಟೆಸ್ಟ್ ಪಂದ್ಯಗಳ 191 ಇನ್ನಿಂಗ್ಸ್​​ಗಳಲ್ಲಿ ಬೌಲಿಂಗ್ ಮಾಡಿದ್ದು, 37 ಬಾರಿ 5 ವಿಕೆಟ್ ಹಾಲ್ ಪಡೆದಿದ್ದಾರೆ. ಹ್ಯಾಡ್ಲಿ ಅವರು ತಮ್ಮ ಹೆಸರಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದರು. ನಂತರ ಈ ದಾಖಲೆಯನ್ನು ಭಾರತದ ಮಾಜಿ ನಾಯಕ ಕಪಿಲ್ ದೇವ್ ಮುರಿದಿದ್ದರು. ಅವರು ತಮ್ಮ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ನ ಡಿ ಮಾಲ್ಕಮ್‌ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ನಂಬರ್ – 4 : ಯಾರ್ಕರ್ ಕಿಂಗ್ ಲಸಿತ್ ಮಾಲಿಂಗ!

ಲಸಿತ್ ಮಾಲಿಂಗ್. ಬಹುಶಃ ಈಗಿನ ಕ್ರಿಕೆಟ್ ಪ್ರೇಮಿಗಳು ಈ ಹೆಸರನ್ನ ಕೇಳದೆ ಇರೋಕೆ ಚಾನ್ಸೇ ಇಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ “ಯಾರ್ಕರ್ ಕಿಂಗ್” ಎಂದೇ ಖ್ಯಾತರಾಗಿರುವ ಲಸಿತ್ ಮಾಲಿಂಗ ಶ್ರೀಲಂಕಾದ ದಿಗ್ಗಜ ಬೌಲರ್‌. ತಮ್ಮ ಬೌಲಿಂಗ್ ಆಕ್ಷನ್ ಮತ್ತು ಗುಂಗುರು ಕೂದಲಿನಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ನಿಖರವಾದ ಯಾರ್ಕರ್‌ನಿಂದ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳ ವಿಕೆಟ್‌ ಪಡೆದಿದ್ದಾರೆ. ಮಾಲಿಂಗ ಕೂಡ ತಮ್ಮ ವೃತ್ತಿ ಜೀವನದ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮಾಲಿಂಗ ತಮ್ಮ ಏಕದಿನ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವರ ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದ್ದಾರೆ.

ಒಟ್ನಲ್ಲಿ ಬ್ಯಾಟರ್ಸ್​ಗೆ ಹೇಗೆ ತಮ್ಮ ಕೊನೇ ಪಂದ್ಯದಲ್ಲಿ ಸೆಂಚುರಿ, ಹಾಫ್ ಸೆಂಚುರಿ ಸಿಡಿಸ್ಬೇಕು ಅನ್ನೋ ಇಂಟೆನ್ಷನ್​ನಲ್ಲಿ ಇರ್ತಾರೋ ಹಾಗೇ ಬೌಲರ್ಸ್ ಕೂಡ ತಮ್ಮ ಕೊನೇ ಮ್ಯಾಚ್​ನಲ್ಲೇ ಕೊನೇ ಬಾಲ್​ ವಿಕೆಟ್ ಪಡೆಯೋ ಆಸೆಯಲ್ಲಿರ್ತಾರೆ. ಅದ್ರಂತೆ ಇಂಥಾ ಅವಕಾಶ ಈ ನಾಲ್ವರು ಬೌಲರ್ಸ್​ಗೆ ಸಿಕ್ಕಿರೋದು ನಿಜಕ್ಕೂ ಇವ್ರು ಲಕ್ಕಿ ಪ್ಲೇಯರ್ಸ್.

Shwetha M