ಇಂಗ್ಲೆಂಡ್ ಕೀಪರ್ Loves ಆಸೀಸ್ ಬೌಲರ್  – ಕ್ರಿಕೆಟ್ ಆಟಗಾರ್ತಿಯರ ಸಲಿಂಗ ಪ್ರೀತಿ

ಇಂಗ್ಲೆಂಡ್ ಕೀಪರ್ Loves ಆಸೀಸ್ ಬೌಲರ್  – ಕ್ರಿಕೆಟ್ ಆಟಗಾರ್ತಿಯರ ಸಲಿಂಗ ಪ್ರೀತಿ

ಪ್ರೀತಿಗೆ ವಯಸ್ಸಿನ ಅಡ್ಡಿಯಿಲ್ಲ. ಜೊತೆಗೆ ಹೆಣ್ಣು ಗಂಡು ಎಂಬ ಬೇಧವೂ ಇಲ್ಲ ಅನ್ನೋದಕ್ಕೆ ಮತ್ತೊಂದು ಕ್ರಿಕೆಟರ್ಸ್‌ ಜೋಡಿ ಸಾಕ್ಷಿಯಾಗಿದೆ. ಈಗಾಗಲೇ ಮಹಿಳಾ ಕ್ರಿಕೆಟರ್ಸ್ ಸಲಿಂಗ ವಿವಾಹವಾಗಿದ್ದು ನೋಡಿದ್ದೀರಾ ಮತ್ತು ಕೇಳಿರ್ತೀರಾ. ಇಂಗ್ಲೆಂಡ್ ನಲ್ಲಿ ತಮ್ಮ ತಂಡದ ಆಟಗಾರ್ತಿ ಇಬ್ಬರೂ ಪರಸ್ಪರ ಪ್ರೀತಿಸಿ ಮದ್ವೆಯಾಗಿರೋ ಎಕ್ಸಾಂಪಲ್ ಕೂಡಾ ಕಣ್ಣ ಮುಂದಿದೆ. ಇದೀಗ ಇದೇ ಸಲಿಂಗ ಪ್ರೀತಿ ಗಡಿಯನ್ನೂ ಮೀರಿದೆ. ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್​ ಕ್ರಿಕೆಟಿಗರಿಬ್ಬರು ಪ್ರೀತಿಯ ಮೂಲಕ ಒಂದಾಗಿದ್ದಾರೆ. ಆ ಮಹಿಳಾ ಸ್ಟಾರ್ ಕ್ರಿಕೆಟರ್ಸ್ ಯಾರು, ಇವರ ಮಧ್ಯೆ ಪ್ರೀತಿ ಮೂಡಿದ್ದು ಎಲ್ಲಿ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KL ಓವರ್ ಟೇಕ್ ಮಾಡಿದ GILL – ಟೆಸ್ಟ್ ಸರಣಿ ಉಪನಾಯಕತ್ವಕ್ಕೂ ಕೊಕ್

ಇಂಗ್ಲೆಂಡ್​ ವಿಕೆಟ್​ ಕೀಪರ್​ ಆಮಿ ಜೋನ್ಸ್​ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ ನಡುವೆ ಹುಟ್ಟಿಕೊಂಡ ಪ್ರೀತಿಯಿದು. ಸದ್ಯ ಇವರಿಬ್ಬರ ನಡುವಿನ ಪ್ರೀತಿ ಎರಡು ದೇಶಗಳ ಸಂಬಂಧವನ್ನು ಬೆಸೆದಿದೆ. ಅದರಲ್ಲೂ ಗಡಿಯಾಚೆಗಿನ ಸಂಬಂಧವನ್ನು ಮೀರಿಸಿದೆ. ಪರಸ್ಪರ ಪ್ರೀತಿಸುತ್ತಿದ್ದ ಆಮಿ ಜೋನ್ಸ್​ ಮತ್ತು ಪೈಪಾ ಕ್ಲಿಯರಿ ಈಗ ತಮ್ಮ ಸಂಬಂಧವನ್ನು ನಿಶ್ಚಿತಾರ್ಥದ ಮೂಲಕ ಗಟ್ಟಿ ಮಾಡಿಕೊಂಡಿದ್ದಾರೆ. ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡು ನಾನು-ನೀನು ಜೋಡಿ ಎಂದು ಜಗತ್ತಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ಪ್ರೀತಿ ವಿಚಾರವನ್ನ ಹಂಚಿಕೊಂಡಿದ್ದಾರೆ. ಷಾಂಪೇನ್​​ ತುಂಬಿದ ಗ್ಲಾಸ್​ ಹಿಡಿದುಕೊಂಡು ‘‘ಚಿಯರ್ಸ್​ ಟು ಫಾರೆವರ್​​’’ ಎಂದು ಬರೆದುಕೊಂಡಿದ್ದಾರೆ.

ಆಮಿ ಜೋನ್ಸ್ 2019 ರಲ್ಲಿ ಇಂಗ್ಲೆಂಡ್​ನ ಕ್ರಿಕೆಟ್​ ಆಟಗಾರ್ತಿ. ಜೂನ್ 13, 1993 ರಂದು ವೆಸ್ಟ್ ಮಿಡ್ಲ್ಯಾಂಡ್ಸ್​ನಲ್ಲಿ ಜನಿಸಿದರು. 31 ವರ್ಷ ವಯಸ್ಸಿನ ಆಮಿ ಇಂಗ್ಲೆಂಡ್​​ ತಂಡದ ಮಹಿಳಾ ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಆಡ್ತಿದ್ದಾರೆ. ಇಲ್ಲಿಯವರೆಗೆ 6 ಟೆಸ್ಟ್ ಮತ್ತು 91 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆಮಿಯವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ಗಾಗಿ ಆಡುತ್ತಿರುವಾಗ ಆಸ್ಟ್ರೇಲಿಯಾದ ಪೈಪಾ ಕ್ಲಿಯರಿ ಅವರನ್ನು ಭೇಟಿಯಾದರು. ಮೊದಲಿಗೆ ಸ್ನೇಹಿತರಾಗಿದ್ದ ಆಮಿ ಮತ್ತು ಪೈಪಾ ನಂತರ ಪರಸ್ಪರ ಪ್ರೀತಿ ಮಾಡಲು ಶುರುಮಾಡಿದ್ರು.

ಪೈಪಾ ಕ್ಲಿಯರಿ ಜುಲೈ 17, 1996 ರಲ್ಲಿ ಜನಿಸಿದರು. ಆಮಿಗಿಂತ 3 ವರ್ಷ ಚಿಕ್ಕವರು. ಈಗಾಗಲೇ ಪೈಪಾ, ಸ್ಕಾರ್ಚರ್ಸ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ವುಮೆನ್‌ ತಂಡಗಳಿಗಾಗಿ ಆಡಿದ್ದಾರೆ. ಇವರು ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ಈ ಹಿಂದೆ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇತ್ತೀಚಿಗೆ ಇಂಗ್ಲೆಂಡ್ ತಂಡದ ಆಟಗಾರ್ತಿಯರು ಕೂಡಾ ಸಲಿಂಗ ಪ್ರೀತಿಯನ್ನ ಘೋಷಣೆ ಮಾಡಿದ್ದರು. ಇದೀಗ ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್ ಕ್ರಿಕೆಟರ್ಸ್ ಕೂಡಾ ತಮ್ಮ ಪ್ರೀತಿಯನ್ನ ಫ್ಯಾನ್ಸ್ ಮುಂದೆ ಶೇರ್ ಮಾಡಿಕೊಂಡಿದ್ದು, ಪ್ರೀತಿಗೆ ಯಾವ ಅಡೆತಡೆ ಇಲ್ಲ ಅನ್ನೋದನ್ನ ಜಗತ್ತಿಗೆ ಸಾರಿದ್ದಾರೆ.

Shwetha M