ಪದೇ ಪದೆ ಕಾಲ್‌ ಡ್ರಾಪ್‌ ಗೆ ಪರಿಹಾರವೇನು ಗೊತ್ತಾ? – ಈ ಅಪ್ಲಿಕೇಶನ್ ನೀವು ಡೌನ್ ಲೋಡ್ ಮಾಡಿದ್ರಾ?

ಪದೇ ಪದೆ ಕಾಲ್‌ ಡ್ರಾಪ್‌ ಗೆ ಪರಿಹಾರವೇನು ಗೊತ್ತಾ? – ಈ ಅಪ್ಲಿಕೇಶನ್ ನೀವು ಡೌನ್ ಲೋಡ್ ಮಾಡಿದ್ರಾ?

ಇದು ಸ್ಮಾರ್ಟ್ ಫೋನ್ ಯುಗ.. ಕೈಯಲ್ಲಿ ಫೋನ್ ಇರಲೇಬೇಕು.. ಆಗಾಗ ಕಾಲ್ ಗಳ ಮೇಲೆ ಕಾಲ್ ಗಳು ಬರ್ತಾ ಇರ್ತವೆ. ಆದ್ರೆ ಪೋನ್ ನಲ್ಲಿ ಮಾತಾಡ್ತಾ ಇರುವಾಗ ಇದ್ದಕ್ಕಿದ್ದಂತೆ ಕಾಲ್ ಕಟ್ ಆಗುತ್ತೆ. ಏನಾಯಿತು ಎಂದು ಅರ್ಥವಾಗುವುದಿಲ್ಲ. ಫೋನ್‌ ನ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಕರೆ ಕಟ್ ಮಾಡಿರಬಹುದು ಎಂದು ಭಾವಿಸುತ್ತೇವೆ. ಪುನಃ ಕರೆ ಮಾಡಿ ಕೇಳಿದಾಗ ಆತ ಕೂಡ ಕಾಲ್ ಕಟ್ ಮಾಡಿಲ್ಲ ಎಂದು ಹೇಳುತ್ತಾನೆ. ಇದು ಆಗಾಗ ಅಗ್ತಾ ಇರುತ್ತೆ. ಫೋನ್ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಕಾಲ್ ಕಟ್ ಆಗುವ ಸಮಸ್ಯೆಯನ್ನು ಕಾಲ್ ಡ್ರಾಪ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಬಾಂಧವ್ಯ – ಗಿಳಿರಾಯನಿಗೆ ಪ್ರೀತಿಯ ಕೈತುತ್ತು ಕೊಟ್ಟ ಕಪಿರಾಯ! 

ಹೀಗೆ ಏಕಾ ಏಕಿ ಕಾಲ್ ಕಟ್ ಆಗಲು ಸಿಮ್ ಕಾರ್ಡ್ ಸಮಸ್ಯೆ ಕೂಡ ಇರ್ಬೋದು. ಹೀಗಾಗಿ ನೀವು, ನಿಮ್ಮ ಪ್ರದೇಶದಲ್ಲಿ ಉತ್ತಮ ನೆಟ್ವರ್ಕ್ ಇರುವ ಸಿಮ್ ಕಾರ್ಡ್ ಅನ್ನು ಆಯ್ಕೆಮಾಡಿ. ನೀವು ವಿವಿಧ ಆಪರೇಟರ್ಗಳ ಸಿಮ್ ಕಾರ್ಡ್ಗಳನ್ನು ಬಳಸಿ ಹೋಲಿಕೆ ಮಾಡಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಫುಲ್ ನೆಟ್ವಾರ್ಕ್ ಇರುವ ಸಿಮ್ ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಕಾಲ್ ಡ್ರಾಪ್ ಸಮಸ್ಯೆ ಹೆಚ್ಚಾಗಿ ನೆಟ್ವರ್ಕ್ನಿಂದ ಉಂಟಾಗುತ್ತದೆ.

ಇನ್ನು ಕೆಲವೊಮ್ಮೆ ಫೋನಿನ ಹಿಂಬದಿಯ ಕವರ್ ನಿಂದಾಗಿಯೂ ಈ ಸಮಸ್ಯೆ ಎದುರಾಗಬಹುದು. ಈ ರೀತಿಯ ಕಾಲ್ ಡ್ರಾಪ್ ಸಮಸ್ಯೆ ಉಂಟಾದರೆ, ಫೋನ್ ಕವರ್ ತೆರೆದು ಕರೆ ಮಾಡಲು ಪ್ರಯತ್ನಿಸಿ. ವೈ-ಫೈ ಲಭ್ಯವಿದ್ದರೆ ಅದರ ಮೂಲಕ ನೆಟ್ವರ್ಕ್ ಪಡೆದು ಕರೆ ಮಾಡುವುದು ಉತ್ತಮ.. ಆದರೆ ಎಲ್ಲಾ ಫೋನ್ಗಳು ಈ ವೈಶಿಷ್ಟ್ಯವನ್ನು ಹೊಂದಿರುವುದಿಲ್ಲ. ಇನ್ನು ಪದೇ ಪದೇ ಈ ರೀತಿಯ ಸಮಸ್ಯೆ ಕಾಣಿಸಿಕೊಂಡ್ರೆ TRAI MyCall ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ನೀವು ಕಾಲ್ ಡ್ರಾಪ್ ಸಮಸ್ಯೆಯನ್ನು ವರದಿ ಮಾಡಬಹುದು. ನಿಮ್ಮ ಕರೆಯ ಗುಣಮಟ್ಟದ ಡೇಟಾವನ್ನು ರೆಕಾರ್ಡ್ ಮಾಡಲು ಮತ್ತು ಅದನ್ನು TRAI ಗೆ ಕಳುಹಿಸಲು ಈ ಅಪ್ಲಿಕೇಶನ್ ನಿಮಗೆ ನೆರವಾಗುತ್ತದೆ. ವರದಿ ಮಾಡಿದ ನಂತರ TRAI ನಿಮ್ಮ ನೆಟ್ವರ್ಕ್ ಅನ್ನು ಸುಧಾರಿಸಲು ಮೊಬೈಲ್ ನೆಟ್ವರ್ಕ್ ಕಂಪನಿಯವರನ್ನು ಸಂಪರ್ಕಿಸುತ್ತದೆ. ಈ ಮೂಲಕ ಸಮಸ್ಯೆ ಬಹಳ ಸುಲಭವಾಗಿ ಬಗೆಹರಿಯುತ್ತದೆ.

Shwetha M