ನೀವು ಕಲ್ಲಂಗಡಿ ಹಣ್ಣು ಫ್ರಿಡ್ಜ್ ನಲ್ಲಿ ಇಡ್ತೀರಾ? – ತಿನ್ನೋ ಮೊದ್ಲು ಹೊಟ್ಟೆ ಸೇರಿದ್ದೇನು ಗಮನಿಸಿ‌‌‌..

ನೀವು ಕಲ್ಲಂಗಡಿ ಹಣ್ಣು ಫ್ರಿಡ್ಜ್ ನಲ್ಲಿ ಇಡ್ತೀರಾ? – ತಿನ್ನೋ ಮೊದ್ಲು ಹೊಟ್ಟೆ ಸೇರಿದ್ದೇನು ಗಮನಿಸಿ‌‌‌..

ಈಗ ಬೇಸಿಗೆಯ ಝಳ ಹೆಚ್ಚಾಗುತ್ತಲೇ ಇದೆ.. ಹೀಗಾಗಿ ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ತುಂಬಾನೆ ಇದೆ. ಹೀಗಾಗಿ ಅನೇಕರು ನೀರು, ಜ್ಯೂಸ್, ಹಣ್ಣುಗಳನ್ನು ತಿಂತಾರೆ..  ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ತಿನ್ನಲು ಬಯಸುತ್ತಾರೆ.  ಅದರಲ್ಲೂ ಕೆಲವರು ಕಲ್ಲಂಗಡಿ ಹಣ್ಣನ್ನು ಕಟ್‌ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುತ್ತಾರೆ.. ನೀವು ಕೂಡ ಫ್ರಿಡ್ಜ್ ನಲ್ಲಿ ಕಲ್ಲಂಗಡಿ ಹಣ್ಣನ್ನ ಇಟ್ರೆ ಅಪಾಯ ಗ್ಯಾರಂಟಿ.

ಇದನ್ನೂ ಓದಿ:ತುಪ್ಪ-ಸಕ್ಕರೆ- ಚಪಾತಿ ಕಾಂಬಿನೇಷನ್! – ತಿನ್ಬೇಕಾ? ತಿನ್ನಬಾರದಾ? 

ದಿನದಿಂದ ದಿನಕ್ಕೆ ಈಗ ಬೇಸಿಲಿನ ಝಳ ಹೆಚ್ಚಾಗುತ್ತಲೇ ಇದೆ..ಇದ್ರ ಜೊತೆಗೆ ನಾನಾ ಕಾಯಿಲೆಗಳು ಕೂಡ ವಕ್ಕರಿಸಿಕೊಳ್ತಿವೆ. ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ಹೆಚ್ಚು ನೀರು ಕುಡಿಯುವುದು ಉತ್ತಮ ಮಾರ್ಗ. ಅಲ್ಲದೆ, ಹಣ್ಣುಗಳ ಜ್ಯೂಸ್ ಕುಡಿಯುವುದರಿಂದ ದೇಹವನ್ನು ತಂಪಾಗಿಸಲು ಮತ್ತು ರಿಫ್ರೆಶ್ ಮಾಡಲು ಸಹಾಯವಾಗುತ್ತದೆ. ಹಣ್ಣುಗಳ ಪೈಕಿ ಕಲ್ಲಂಗಡಿ ಹಣ್ಣು ಉತ್ತಮ.  ವಿಶೇಷವಾಗಿ ಕಲ್ಲಂಗಡಿ ಹಣ್ಣು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಹಣ್ಣು ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಶೇಕಡಾ 92 ರಷ್ಟು ನೀರಿನಿಂದ ತುಂಬಿರುವ ಕಲ್ಲಂಗಡಿ ನಮ್ಮ ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತೆ.

ಈ ಹಣ್ಣು ತೂಕ ಇಳಿಸಿಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಆದ್ರೆ ಕಲ್ಲಂಗಡಿ ಹಣ್ಣನ್ನು ಒಮ್ಮೆ‌ಕಟ್ ಮಾಡಿದ ಮೇಲೆ ಅನೇಕರು ಫಿಡ್ಜ್ ನಲ್ಲಿ ತಂದು ಇಡ್ತಾರೆ.. ತುಂಬಾ ದಿನಗಳ ಬಳಿಕ ಹಣ್ಣನ್ನು ತಿಂತಾರೆ. ಹೀಗೆ ಮಾಡೋದು ಆರೋಗ್ಯದ ದೃಷ್ಟಿಯಿಂದ ತುಂಬಾನೆ ಕೆಟ್ಟದ್ದು. ತಜ್ಞರ ಪ್ರಕಾರ, ಕಲ್ಲಂಗಡಿಗಳನ್ನು ರೆಫ್ರಿಜರೇಟರ್ನಲ್ಲಿ ಇಡಬಾರದು. ಹಾಗೆ ಮಾಡುವುದರಿಂದ ಹಣ್ಣಿನ ಪೌಷ್ಟಿಕಾಂಶದ ಮೌಲ್ಯವು ಕಡಿಮೆಯಾಗುತ್ತದೆ. ತುಂಬಾ ದಿನಗಳವರೆಗೆ ಫಿಡ್ಜ್ ನಲ್ಲಿ ಇಟ್ರೆ ಹಣ್ಣಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲಾರಂಭಿಸುತ್ತವೆ. ಇಂತಹ ಹಣ್ಣುಗಳನ್ನು ತಿಂದ್ರೆ ನಮ್ಮ ಆರೋಗ್ಯ ಹಾಳಾಗುತ್ತದೆ. ಶೀತ, ಜ್ವರ, ಗಂಟಲು ನೋವು, ಬೇದಿ, ಅತಿಸಾರ ಮುಂತಾದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಲ್ಲಂಗಡಿ ಹಣ್ಣನ್ನು ಆದಷ್ಟು ಫ್ರೆಶ್ ಆಗಿಯೇ ತಿನ್ನಿ. ಇಲ್ದೇ ಹೋದ್ರೆ ಆರೋಗ್ಯಕ್ಕೆ ಒಳ್ಳೆಯದಾಗುವ ಬದಲು, ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ತಪ್ಪಿದ್ದಲ್ಲ.

Shwetha M