ನೀವು ಹೊಸ ಬಟ್ಟೆ ಅಂತಾ ವಾಶ್ ಮಾಡದೇ ಧರಿಸುತ್ತಿದ್ದೀರಾ?
ಹೊಸ ಬಟ್ಟೆಗಳು ಮನೆಗೆ ತಂದ ತಕ್ಷಣ ಒಮ್ಮೆ ತೊಟ್ಟು ನೋಡಬೇಕು ಎನ್ನುವ ಬಯಕೆ ಎಲ್ಲರದ್ದು. ಹೀಗಾಗಿ ಅದನ್ನ ವಾಶ್ ಮಾಡದೇ ಯೂಸ್ ಮಾಡ್ತಾರೆ. ಹೀಗೆ ಮಾಡೋದು ತಪ್ಪು ಅಂತಾರೆ ತಜ್ಞರು. ಇದರಿಂದ ಆರೋಗ್ಯ ಸಮಸ್ಯೆ ಕಾಡೋ ಸಾಧ್ಯತೆ ಇದೆ.
ಅಂಗಡಿಯಿಂದ ತಂದ ಡ್ರೆಸ್ ಗಳನ್ನು ನಾವು ಅವುಗಳನ್ನು ಹೊಸ ಬಟ್ಟೆ ಎಂದು ಭಾವಿಸುತ್ತೇವೆ, ಆದರೆ ಹೊಸ ಬಟ್ಟೆ ನಿಮ್ಮ ಕೈ ಸೇರುವ ಮೊದಲು ಶೇಖರಣಾ ಸ್ಥಳವು ಸ್ವಚ್ಛವಾಗಿತ್ತೋ, ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ. ಪ್ಯಾಕಿಂಗ್ ಸಮಯದಲ್ಲಿ ಕೂಡ ಸ್ವಚ್ಛತೆ ಹೇಗಿರುತ್ತದೆ ಎನ್ನುವುದು ಗೊತ್ತಿರುವುದಿಲ್ಲ. ಹಾಗಾಗಿ ಅವುಗಳ ಮೇಲೆ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಇರೋಸಾಧ್ಯತೆ ಹೆಚ್ಚಿರುತ್ತೆ.
ಇದನ್ನೂ ಓದಿ: ಹೆಚ್ಚು ಉಪ್ಪು ತಿಂದ್ರೆ ಬಿಪಿ ಮಾತ್ರವಲ್ಲ ಶುಗರ್ ಕೂಡ ಬರುತ್ತೆ!
ಇನ್ನು ಡ್ರೆಸ್ ಖರೀದಿಸುವ ಮೊದಲು ಅವುಗಳನ್ನು ಅನೇಕರು ಟ್ರಯಲ್ ನೋಡುತ್ತಾರೆ. ಆ ಬಟ್ಟೆಗಳನ್ನು ಧರಿಸಿದ ವ್ಯಕ್ತಿಗೆ ಸೋಂಕಿರಬಹುದು ಅಥವಾ ಈ ಹಿಂದೆ ಅದೇ ಬಟ್ಟೆಯನ್ನು ಧರಿಸಿದ್ದ ಇನ್ಯಾರಿಗೋ ಸೋಂಕಿರಬಹುದು. ಅದು ಆ ಬಟ್ಟೆಯ ಮೂಲಕ ನಮಗೂ ಸ್ಪ್ರೆಡ್ ಆಗುವ ಸಾಧ್ಯತೆ ಇರುತ್ತೆ. ಇನ್ನು ಬಟ್ಟೆಗಳ ತಯಾರಿಕೆಯಲ್ಲಿ ವಿವಿಧ ಬಣ್ಣಗಳು ಕೆಮಿಕಲ್ಸ್ ಗಳನ್ನು ಬಳಸಲಾಗುತ್ತದೆ. ಇದು ಕೂಡ ಚರ್ಮದ ಸಮಸ್ಯೆಗೆ ಕಾರಣವಾಗಬಹುದು.
ಕೆಲವರಿಗೆ ಹೊಸ ಬಟ್ಟೆಗಳನ್ನು ಧರಿಸಿದಾಗ, ನೀವು ತುರಿಕೆ ಮತ್ತು ಕಿರಿಕಿರಿಯನ್ನು ಉಂಟಾಗುತ್ತೆ. ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳು ಇದಕ್ಕೆ ಕಾರಣ. ಅಲ್ಲದೆ ಹೊಸ ಬಟ್ಟೆಗಳು ಬೆವರು ಮತ್ತು ನೀರನ್ನು ಹೆಚ್ಚು ಹೀರಿಕೊಳ್ಳುವುದಿಲ್ಲ. ಇದ್ರಿಂದಾಗಿ ಚರ್ಮದ ಸಮಸ್ಯೆ ಉಂಟಾಗುತ್ತದೆ. ಹಿಗಾಗಿ ಹೊಸ ಡ್ರೆಸ್ ಗಳನ್ನು ಬಳಸುವ ಮೊದಲು ಒಮ್ಮೆ ವಾಶ್ ಮಾಡೋದು ಉತ್ತಮ.