ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಹರ್ಭಜನ್ – 2008ರ ವಿಡಿಯೋ ಈಗ ರಿಲೀಸ್ ಯಾಕೆ?
ವಿವಾದದ ಕಿಡಿ ಹೊತ್ತಿಸಿದ್ರಾ ಮೋದಿ?

ಐಪಿಎಲ್ ಇತಿಹಾಸವನ್ನ ಕೆದಕಿದ್ರೆ ಈಗಲೂ ಕಪ್ಪುಚುಕ್ಕೆಯಾಗಿ ಕಾಡುವ ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವಿನ ಕಪಾಳ ಮೋಕ್ಷ ಪ್ರಕರಣದ ವಿಡಿಯೋ ರಿಲೀಸ್ ಆಗಿದೆ. ಅದೂ ಕೂಡ ಬರೋಬ್ಬರಿ 18 ವರ್ಷಗಳ ಬಳಿಕ ಅನ್ನೋದೇ ಟ್ವಿಸ್ಟ್. ಅದ್ರಲ್ಲೂ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಅಂದಿನ ಐಪಿಎಲ್ ಚೇರ್ಮನ್ ಲಲಿತ್ ಮೋದಿ. 2008ರಲ್ಲಿ ನಡೆದಿದ್ದ ಭಾರತದ ಮೊಟ್ಟ ಮೊದಲ ಐಪಿಎಲ್ ಟೂರ್ನಿಯಲ್ಲಿನ ಗಲಾಟೆ ವಿಡಿಯೋ ಔಟ್ ಆಗಿದೆ.
ಮೈಕೆಲ್ ಕ್ಲಾರ್ಕ್ ಅವರ ಪಾಡ್ ಕ್ಯಾಸ್ಟ್ ನಲ್ಲಿ ವಿಡಿಯೋ ರಿಲೀಸ್!
ಐಪಿಎಲ್ ನಲ್ಲಿ ಸ್ಲ್ಯಾಪ್ಗೇಟ್ ವಿವಾದ ಅಂತಾನೇ ಕರೆಸಿಕೊಳ್ಳೋ ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವಿನ ಗಲಾಟೆ ವಿಡಿಯೋ ಇದು. 18 ವರ್ಷಗಳ ನಂತರ ಬಿಡುಗಡೆಯಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ನ ಶ್ರೀಶಾಂತ್ನಿಗೆ ಮುಂಬೈ ಇಂಡಿಯನ್ಸ್ನ ತಂಡದಲ್ಲಿದ್ದ ಹರ್ಭಜನ್ ಸಿಂಗ್ ಹೊಡೆದ ಘಟನೆ ಭಾರೀ ಸುದ್ದಿ ಮಾಡಿತ್ತು. ಆದರೆ, ಘಟನೆಯ ವಿಡಿಯೋ ಯಾರಿಗೂ ಸಿಕ್ಕಿರಲಿಲ್ಲ. ಈಗ, ಲಲಿತ್ ಮೋದಿ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕೆಲ್ ಕ್ಲಾರ್ಕ್ರ ‘ಬಿಯಾಂಡ್ 23’ ಪಾಡ್ಕ್ಯಾಸ್ಟ್ನಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ. ಮ್ಯಾಚ್ ಮುಗಿದ ನಂತರ ಟಿವಿಯಲ್ಲಿ ಅಳುತ್ತಿರುವ ಶ್ರೀಶಾಂತ್ನ ಮುಖವನ್ನು ಮಾತ್ರ ತೋರಿಸಲಾಗಿತ್ತು. ಬಟ್ ಈಗ ಸ್ಲ್ಯಾಪ್ ಮಾಡಿದ್ದ ವಿಡಿಯೋ ಔಟ್ ಆಗಿದೆ. ಅಷ್ಟಕ್ಕೂ ಅವತ್ತು ಏನಾಯ್ತು ಅನ್ನೋ ಬಗ್ಗೆ ಬೇರೆಯದ್ದೇ ವಾದಗಳಿವೆ.
ಏನಾಗಿತ್ತು ಆವತ್ತು?
ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ಇಬ್ಬರೂ ಭಾರತ ತಂಡದಲ್ಲಿ ಆಟ
ಐಪಿಎಲ್ ನಲ್ಲಿ ಹರ್ಭಜನ್ ಮುಂಬೈ, ಶ್ರೀಶಾಂತ್ ಪಂಜಾಬ್ ತಂಡದಲ್ಲಿ
ಉಭಯ ತಂಡಗಳು ಎದುರು ಬದುರಾಗಿದ್ದು ಇದ್ರಲ್ಲಿ ಮುಂಬೈ ಸೋಲು
ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಕಪಾಳಕ್ಕೆ ಹೊಡೆದಿದ್ದರು
ಹರ್ಭಜನ್ ಕಡೆಗೆ ತಿರುಗಿದ ಶ್ರೀಶಾಂತ್ ನನ್ನು ಪಠಾಣ್ ಮತ್ತು ಮಹೇಲ ತಡೆ
ಮಾತಿನ ಚಕಮಕಿ ಮುಂದುವರೆದು ದೊಡ್ಡ ಗಲಾಟೆ ನಡೆಯುವ ಲಕ್ಷಣಗಳು
ಹರ್ಭಜನ್ ಕೂಡ ಪುನಃ ಶ್ರೀಶಾಂತ್ನ ಕಡೆಗೆ ಸಿಟ್ಟಿನಿಂದಲೇ ಆಗಮಿಸಿದಾಗ
ಶ್ರೀಶಾಂತ್ ಸೋಲು ಕಂಡಿದ್ದ ಮುಂಬೈ ನಾಯಕ ಭಜ್ಜಿಗೆ ಬ್ಯಾಡ್ ಲಕ್
ಮುಂಬೈ ತಂಡದ ಶಾನ್ ಪೊಲಾಕ್ ಅವರನ್ನು ಶ್ರೀಶಾಂತ್ ಔಟ್ ಮಾಡಿದ್ದಕ್ಕೆ
ಹೊಡೆದ ನಂತರ ಹರ್ಭಜನ್ ಡ್ರೆಸ್ಸಿಂಗ್ ರೂಮಿಗೆ ಹೋಗಿ ಕ್ಷಮೆ ಕೇಳಿದ್ದರು
ಬಿಸಿಸಿಐ ಹರ್ಭಜನ್ರನ್ನು ಉಳಿದ ಪಂದ್ಯಗಳಿಂದ ಬಹಿಷ್ಕರಿಸಿತು
ಯುವರಾಜ್ ಸಿಂಗ್ ಸೇರಿದಂತೆ ಹಲವರು ಹರ್ಭಜನ್ ವಿರುದ್ಧ
ಇಲ್ಲಿಗೆ ಎಲ್ಲವೂ ಮುಗಿದಿತ್ತು. ಬಟ್ ಈಗ ವಿಡಿಯೋ ವೈರಲ್ ಆಗಿ ಮತ್ತೆ ಸದ್ದು ಮಾಡ್ತಿದೆ. ಈ ಬಗ್ಗೆ ಶ್ರೀಶಾಂತ್ ಅವರ ಪತ್ನಿ ಭುವನೇಶ್ವರಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಲಲಿತ್ ಮೋದಿ ಮತ್ತು ಮೈಕೆಲ್ ಕ್ಲಾರ್ಕ್, ನಿಮಗೆ ನಾಚಿಕೆಯಾಗಬೇಕು. ನಿಮ್ಮ ಪ್ರಚಾರದ ಗೀಳಿಗಾಗಿ ಹಳೇ ವಿಡಿಯೋ ಹರಿಬಿಟ್ಟಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ನೋಡಿರಿ

