ವಿಶ್ವಕಪ್ ಗಾಗಿ ಕೊಹ್ಲಿ ವಿಶ್ವರೂಪ – 2026 ಫೈರ್.. 2027ಕ್ಕೆ ಡೇಂಜರಸ್
ಭಯ ಹುಟ್ಟಿಸಿದ್ರಾ KING?

ವಿಶ್ವಕಪ್ ಗಾಗಿ ಕೊಹ್ಲಿ ವಿಶ್ವರೂಪ – 2026 ಫೈರ್.. 2027ಕ್ಕೆ ಡೇಂಜರಸ್ಭಯ ಹುಟ್ಟಿಸಿದ್ರಾ KING?

ನ್ಯೂಜಿಲೆಂಡ್ ವಿರುದ್ಧ ಎರಡು ಏಕದಿನ ಪಂದ್ಯಗಳನ್ನ ಮುಗಿಸಿರೋ ಭಾರತ ನೆಕ್ಸ್​ಟ್ ಮಂಗಳವಾರ ಮೂರನೇ ಪಂದ್ಯ ಆಡಲಿದೆ. ಌಂಡ್ ಈ ಸಿರೀಸ್​ನಲ್ಲಿ ಭಾರತದ ಪರ ಕಿಂಗ್ ವಿರಾಟ್ ಕೊಹ್ಲಿ ಸಿಕ್ಕಾಪಟ್ಟೆ ಡೇಂಜರಸ್ ಆಗಿ ಕಾಣ್ತಿದ್ದಾರೆ. ಅದ್ರಲ್ಲೂ ಬ್ಯಾಟಿಂಗ್ ಶೈಲಿಯಲ್ಲಿ ಕಂಪ್ಲೀಟ್ ಬದಲಾವಣೆ ಆಗಿದೆ. ಹಾಗೇ 2027ರ ಏಕದಿನ ವಿಶ್ವಕಪ್​ಗೂ ಅಪಾಯಕಾರಿ ಆಗ್ತಾರೆ.

ಇದನ್ನೂ ಓದಿ : ಮೊದಲು ಆಟ.. ಆಮೇಲೆ ಪಟ್ಟ – ವೈಭವ್ ವಿರುದ್ಧ ಸಚಿನ್ ಸಿಡಿಮಿಡಿ

ನವೆಂಬರ್ 5ರಂದು 38ನೇ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಕಿಂಗ್ ಕೊಹ್ಲಿ ಆಟದಲ್ಲಿ ಮಾತ್ರ ದಿನೇದಿನೇ ಬೆಸ್ಟ್ ಆಗ್ತಾನೇ ಇದ್ದಾರೆ. ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿ, ಇದೀಗ ಕಂಪ್ಲೀಟ್ ಫೋಕಸ್ ಏಕದಿನ ಕ್ರಿಕೆಟ್ ಮೇಲೆ ಇಟ್ಟಿದ್ದಾರೆ. 2027ರ ವಿಶ್ವಕಪ್ ತಮ್ಮ ಕೊನೆಯ ವಿಶ್ವಕಪ್ ಅನ್ನೋದನ್ನೂ ಅನೌನ್ಸ್ ಮಾಡಿರೋದ್ರಿಂದ ಮುಂದಿನ 9 ತಿಂಗಳುಗಳಲ್ಲಿ ಕೊಹ್ಲಿ ಆಡಿದ್ದೇ ಆಟ. ಅಷ್ಟಕ್ಕೂ ತಮ್ಮ ಕೆರಿಯರ್ ಎಂಡ್​ನಲ್ಲೂ ಪೀಕ್ ಪರ್ಫಾಮೆನ್ಸ್ ಕೊಡೋದಕ್ಕೆ ಕಾರಣಗಳೂ ಇವೆ.

ಕೊಹ್ಲಿ ಅಪಾಯಕಾರಿ!

2025ರಲ್ಲಿ ಟೆಸ್ಟ್ ಕ್ರಿಕೆಟ್‌ ಗೆ ನಿವೃತ್ತಿ, ಏಕದಿನದಲ್ಲಿ ಮುಕ್ತವಾಗಿ ಬ್ಯಾಟಿಂಗ್

ಹೆಚ್ಚಾದ ಸ್ಟ್ರೈಕ್ ರೇಟ್ ಮತ್ತು ಸಿಕ್ಸರ್‌ ಗಳ ಅಬ್ಬರ, ಬ್ಯಾಟಿಂಗ್ ಅಗ್ರೆಶನ್

ಕೊಹ್ಲಿ ಮೈದಾನದಾದ್ಯಂತ ಓಡಿ ರನ್ ಗಳಿಸುವ ಕ್ಲಾಸಿಕ್ ಶೈಲಿಯ ಬ್ಯಾಟರ್

ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 139 ರನ್ ಗಳಿಸುವಾಗ 9 ಸಿಕ್ಸರ್ಸ್

ರನ್ ಬೆನ್ನಟ್ಟುವಿಕೆಯಲ್ಲಿ ಮಿಸ್ಟರ್ ಇನ್ವಿನ್ಸಿಬಲ್ ಆಗಿ ಬ್ಯಾಟಿಂಗ್ ಪ್ರದರ್ಶನ

ಏಕದಿನ ಕ್ರಿಕೆಟ್ ನಲ್ಲಿ ರನ್ ಚೇಸಿಂಗ್‌ ನಲ್ಲಿ ವಿರಾಟ್‌ ಮೋಸ್ಟ್ ಡೇಂಜರಸ್

ಇದುವೇ ಕೊನೆಯ ವಿಶ್ವಕಪ್ ಆಗಿರೋದ್ರಿಂದ ಗೆಲ್ಲಲೇಬೇಕೆನ್ನುವ ಮೋಟಿವೇಷನ್

38 ವರ್ಷವಾದ್ರೂ ಯುವಕರನ್ನೂ ನಾಚಿಸುವಂತಿರೋ ಕೊಹ್ಲಿಯವರ ಫಿಟ್ ನೆಸ್

ಕಳೆದ 15 ಏಕದಿನ ಇನ್ನಿಂಗ್ಸ್ ಗಳಲ್ಲಿ 77ಕ್ಕೂ ಹೆಚ್ಚು ಸರಾಸರಿಯಲ್ಲಿ 1000+ ರನ್ಸ್

2026ರಲ್ಲಿ 10 ಏಕದಿನ ಪಂದ್ಯಗಳಲ್ಲಿ 626 ರನ್ಸ್, 2 ಶತಕ, 4 ಅರ್ಧಶತಕ

ಅಷ್ಟಕ್ಕೂ ಕೊಹ್ಲಿ ಯಾಕೆ ಮೋಸ್ಟ್ ಡೇಂಜರಸ್ ಆಗಿ ಕಾಣ್ತಾರೆ ಅಂದ್ರೆ ಅವ್ರ ಕನ್ಸಿಸ್ಟೆನ್ಸಿ ಪರ್ಪಾಮೆನ್ಸ್..  ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಈಗಾಗಲೇ 55 ಶತಕಗಳನ್ನು ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. 15 ಸಾವಿರಕ್ಕೂ ಹೆಚ್ಚು ಏಕದಿನ ರನ್ ಗಳಿಸಿರುವ ಕೊಹ್ಲಿ, ಪ್ರತಿ ಪಂದ್ಯದಲ್ಲೂ ಹೊಸ ದಾಖಲೆ ಬರೆಯುವ ಸಾಮರ್ಥ್ಯ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಪರ ನಾಲ್ಕು ಏಕದಿನ ವಿಶ್ವಕಪ್ ಟೂರ್ನಮೆಂಟ್​ಗಳಲ್ಲಿ ಆಡಿದ್ದು 37 ಪಂದ್ಯಗಳಿಂದ 1,795 ರನ್, 59.83 ಸರಾಸರಿ ಮತ್ತು ಐದು ಶತಕಗಳನ್ನು ದಾಖಲಿಸಿದ್ದಾರೆ.  2023ರ ವಿಶ್ವಕಪ್‌ನಲ್ಲಿ 765 ರನ್ ಗಳಿಸಿ ಟೂರ್ನಿಯ ಗರಿಷ್ಠ ರನ್‌ ಸ್ಕೋರರ್ ಆಗಿದ್ರು. ಸೋ 2027ರ ವಿಶ್ವಕಪ್ ಅವ್ರ ಪಾಲಿಗೆ ಕೊನೆಯ ಟೂರ್ನಮೆಂಟ್ ಆಗೋದ್ರಿಂದ ಅವ್ರ ಕನಸಿನ ಕಪ್ ಗೆಲ್ಲೋಕೆ ವಿರಾಟ್ ವಿಶ್ವರೂಪ ತಾಳೋದಂತೂ ಪಕ್ಕಾ.

Shantha Kumari

Leave a Reply

Your email address will not be published. Required fields are marked *