ಯುಗಕ್ಕೊಬ್ಬ ಬೌಲರ್ ಬುಮ್ರಾ – ಜಸ್ಪ್ರೀತ್ ಇಲ್ಲದೆ ಗೆಲ್ಲಲ್ವಾ ಭಾರತ?
ದಶಕವಾದ್ರೂ ಸಿಗಲಿಲ್ಲ ಬ್ಯಾಕಪ್  

ಯುಗಕ್ಕೊಬ್ಬ ಬೌಲರ್ ಬುಮ್ರಾ – ಜಸ್ಪ್ರೀತ್ ಇಲ್ಲದೆ ಗೆಲ್ಲಲ್ವಾ ಭಾರತ?ದಶಕವಾದ್ರೂ ಸಿಗಲಿಲ್ಲ ಬ್ಯಾಕಪ್  

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಭಾರತದ ಬೌಲಿಂಗ್ ಎಕ್ಸ್​ಪೆನ್ಸಿವ್ ಆದಾಗ ನೆನಪಾಗಿದ್ದೇ ಜಸ್ಪ್ರೀತ್ ಬುಮ್ರಾ.. ಅದೇ ವಿಂಡೀಸ್ ವಿರುದ್ಧ ಟಿ-20ಐ ಪಂದ್ಯಗಳಲ್ಲಿ ಭಾರತದ ಬೌಲರ್ಸ್ ಹಿಗ್ಗಾಮುಗ್ಗಾ ಹೊಡೆಸಿಕೊಳ್ಳುವಾಗ ಮತ್ತೆ ಸದ್ದು ಮಾಡಿದ್ದೇ ಬುಮ್ರಾ. ಛೇ ಬುಮ್ರಾ ತಂಡದಲ್ಲಿ ಇದ್ದಿದ್ರೆ ಭಾರತ ಸೋಲ್ತಾ ಇರ್ಲಿಲ್ಲ, ಇಷ್ಟು ರನ್ಸ್ ಕೊಡ್ತಾ ಇರ್ಲಿಲ್ಲ ಅನ್ನೋದು ಎಲ್ಲರ ವಾದ.

ಇದನ್ನೂ ಓದಿ : ಸೋತರೂ ದಾಖಲೆ ಬರೆದ ಅಭಿಷೇಕ್!- ಒಂದೇ ವರ್ಷದಲ್ಲಿ ಸಿಕ್ಸರ್‌ಗಳ ವಿಶ್ವದಾಖಲೆ?

ಭಾರತದ ಬ್ಯಾಟಿಂಗ್​ನಲ್ಲಿ ಒಬ್ರಿಗಿಂತ ಒಬ್ರನ್ನ ಮೀರಿಸೋ ರೇಂಜ್​ಗೆ ತಮ್ಮದೇ ಟ್ರೇಡ್​ ಮಾರ್ಕ್ ಸೆಟ್ ಮಾಡ್ತಾ ಹೊಸ ಹೊಸ ಡೈನಾಮಿಕ್ ಬ್ಯಾಟರ್ಸ್ ಬರ್ತಿದ್ದಾರೆ. ಪ್ಲೇಯಿಂಗ್ 11ನಲ್ಲಿ ಅವಕಾಶಗಳೇ ಸಿಗ್ದೇ ಬೆಂಚ್ ಕಾಯಿಸ್ತಿದ್ದಾರೆ. ಆದ್ರೆ ಬೌಲಿಂಗ್ ಅಂತಾ ಬಂದಾಗ ಅಪ್ಪ ಹಾಕಿದ ಆಲದಮರ ಅಂತಾ ಜಸ್ಪ್ರೀತ್ ಬುಮ್ರಾ ಮೇಲೆಯೇ ಜೋತು ಬಿದ್ದಿದ್ದಾರೆ. ಅವ್ರ ಜಾಗಕ್ಕೆ ಮತ್ತೊಬ್ಬ ಸಮರ್ಥ ಬೌಲರ್​ನ ತಯಾರಿಸೋಕೆ ಸ್ಟಿಲ್ ಈವರೆಗೂ ಸಾಧ್ಯವಾಗಿಲ್ಲ. ಬುಮ್ರಾ ಇದ್ದಾಗ ಬೆಂಕಿಚೆಂಡಿನಂತೆ ಕಾಣೋ ಬೌಲಿಂಗ್ ಸ್ಕ್ವಾಡ್​ ಬುಮ್ರಾ ಆಬ್ಸೆನ್ಸ್​ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ.

ಯುಗಕ್ಕೊಬ್ಬ ಬುಮ್ರಾ.. ಬ್ಯಾಕಪ್ ಬೌಲರ್ ಸಿಗಲೇ ಇಲ್ಲ!

ಜಸ್ಪ್ರೀತ್ ಬುಮ್ರಾ ಭಾರತದ ಬೌಲಿಂಗ್ ಯುನಿಟ್​ನಲ್ಲಿ ಜನರೇಷನಲ್ ಬೌಲರ್ ಎನ್ನುವಂತಾಗಿದೆ. ಆಧುನಿಕ ಕ್ರಿಕೆಟ್ ಜಗತ್ತಿನಲ್ಲಿ ಬುಮ್ರಾನಂತ ಅಪರೂಪದ ಮತ್ತು ಪ್ರಭಾವಶಾಲಿ ಬೌಲರ್ ಮತ್ತೊಬ್ಬರಿಲ್ಲ. ಟೆಸ್ಟ್, ಒನ್ ಡೇ ಅಥವಾ ಟಿ20 ಫಾರ್ಮ್ಯಾಟ್ ಯಾವುದೇ ಇರಲಿ. ಭಾರತ ತಂಡದ ಪಾಲಿನ ಅತಿ ದೊಡ್ಡ ಮ್ಯಾಚ್ ವಿನ್ನರ್  ಮತ್ತು ಸಂಕಷ್ಟ ನಿವಾರಕ.  ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಡೆತ್ ಓವರ್‌ಗಳಲ್ಲಿ ರನ್ ಕಂಟ್ರೋಲ್ ಮಾಡೋಕಾಗ್ತಿಲ್ಲ ಮತ್ತು ಎಕ್ಸ್‌ಟ್ರಾ ರನ್‌ಗಳನ್ನು ಕಂಟ್ರೋಲ್ ಮಾಡೋದ್ರಲ್ಲಿ ಒದ್ದಾಡ್ತಿರೋದನ್ನ ನೋಡಿದ್ರೆ ಬುಮ್ರಾ ಅನಿವಾರ್ಯತೆ ಎಷ್ಟಿದೆ ಅನ್ನೋದು ಇಲ್ಲೇ ಗೊತ್ತಾಗುತ್ತೆ. ವಿಂಡೀಸ್ ವಿರುದ್ಧದ ನಾಲ್ಕನೇ ಮ್ಯಾಚಲ್ಲಂತೂ ಮಯಾಂಕ್ ಯಾದವ್ ಮೊದಲ ಓವರ್​ನಲ್ಲಿ ಕೇವಲ ಮೂರು ರನ್ ನೀಡಿ ಗ್ರೇಟ್ ಎನಿಸಿಕೊಂಡಿದ್ದರು. ನಂತರ ತಮ್ಮ ಕೋಟಾದ 2ನೇ ಓವರ್ ಎಸೆಯಲು ಬಂದಾಗ ಕಂಟಿನ್ಯೂಯಸ್ ಆಗಿ ಐದು ವೈಡ್ ಬಾಲ್. ಅದು ಸಾಲ್ದು ಅಂಥಾ ನೋಬಾಲ್ ಬೇರೆ. ಫ್ರಿ-ಹಿಟ್‌ ಸಿಕ್ತಿದ್ದಂತೆ ಶಾಯ್ ಹೋಪ್ ಸಿಕ್ಸರ್ ಬಾರಿಸಿದರು. ಆ ಮೂಲಕ ಒಂದೇ ಬಾಲ್‌ನಲ್ಲಿ 12 ರನ್‌ಗಳನ್ನ ನೀಡಿದ್ರು. ಅದೇ ಓವರ್‍‌ನಲ್ಲಿ ಒಂದು ಬೌಂಡರಿ ಕೂಡ ನೀಡಿದರು. ಜೊತೆಗೆ ಇನ್ನೊಂದು ವೈಡ್ ಹಾಕಿ ಒಂದ ಓವರ್‍‌ನಲ್ಲಿ ಆರು ವೈಡ್ ಹಾಕಿ ಕೆಟ್ಟ ದಾಖಲೆ ಬರೆದು. ಇನ್ನು ಅರ್ಶದೀಪ್ ಸಿಂಗ್ ಕೂಡ ವೈಡ್ ಬಾಲ್​ನಲ್ಲೇ ತಂಡಕ್ಕೆ ಹೊರೆಯಾದ್ರು. ಹೀಗೆ ಯಾವ ಬೌಲರ್ ಕೂಡ ಭರವಸೆ ಇಡಬಹುದಾಗ ಬೌಲರ್ ಆಗಿ ಕಂಡಿಲ್ಲ. ಆದ್ರೆ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಇದ್ರೆ ಕಥೆಯೇ ಬೇರೆ ಇರ್ತಾ ಇತ್ತು.

ಬುಮ್ರಾ ಯಾಕೆ ಗ್ರೇಟ್?

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿಭಿನ್ನವಾದ ಬೌಲಿಂಗ್ ಆಕ್ಷನ್

ಶಾರ್ಟ್ ರನ್-ಅಪ್ ಮತ್ತು ಹೈ-ಆರ್ಮ್ ಆಕ್ಷನ್‌ ಜಡ್ಜ್ ಮಾಡುವುದು ಕಷ್ಟ

ಯಾರ್ಕರ್‌ ಗಳು & ಸ್ಲೋಯರ್ ಒನ್‌ ಗಳನ್ನು ಎದುರಿಸಲು ದಿಗ್ಗಜರೂ ಶೇಕ್

ಕೊನೆಯ ಓವರ್‌ ಗಳಲ್ಲಿ ರನ್ ಕಂಟ್ರೋಲ್ ಜೊತೆಗೆ ವಿಕೆಟ್ ಬೇಟೆಯಲ್ಲಿ ನಿಸ್ಸೀಮ

ಭಾರತಕ್ಕೆ ವಿಕೆಟ್‌ ಅಗತ್ಯ ಇದ್ದಾಗ ನಾಯಕನ ಮೊದಲ ಆಯ್ಕೆಯೇ ಬುಮ್ರಾ

ಟೆಸ್ಟ್, ಒನ್ ಡೇ ಮತ್ತು ಟಿ20 3 ಮಾದರಿಯಲ್ಲೂ ವಿಶ್ವದ ನಂ.1 ಆಗಿದ್ದವ್ರು

ಬುಮ್ರಾ ಎದುರು ಬ್ಯಾಟರ್ಸ್ ಡಿಫೆನ್ಸ್.. ಬೇರೆ ಬೌಲರ್ಸ್ ಗೂ ಕೂಡ ಗ್ರಿಪ್

ಹೀಗೆ ಬುಮ್ರಾ ಇದ್ದಾಗ ಭಾರತ ಬೌಲಿಂಗ್​ನಲ್ಲಿ ಬೆಂಕಿಚೆಂಡಿನಂತೆ ಕಾಣುತ್ತೆ. ಇದೇ ಕಾರಣಕ್ಕೆ ಇತ್ತೀಚೆಗೆ ಏಷ್ಯನ್ ಗೇಮ್ಸ್​ನಲ್ಲಿ ಟೀಂ ಇಂಡಿಯಾ 6 ಬ್ಯಾಟರ್​ಗಳನ್ನ ಆಡಿಸಿದ್ರೂ ಬೌಲಿಂಗ್​ನಲ್ಲಿ ವೀಕ್ ಅನ್ಸಿರಲಿಲ್ಲ. ಯಾಕಂದ್ರೆ ತಂಡದಲ್ಲಿ ಬುಮ್ರಾ ಇದ್ದದ್ದು ಅತಿದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಸಿಚುಯೇಷನ್​ಗೆ ತಕ್ಕಂತೆ ಬೌಲಿಂಗ್ ಮಾಡ್ತಾರೆ. ಯಾರ್ಕರ್, ಬೌನ್ಸರ್, ಸ್ಲೋವರ್ ಬಾಲ್ ಮತ್ತು ಲೈನ್ ಌಂಡ್ ಲೆಂಗ್ತ್‌ಗಳನ್ನು ಎಫೆಕ್ಟೀವ್ ಆಗಿ ಡೆಲಿವರ್ ಮಾಡ್ತಾ ವೇರಿಯೇಷನ್ಸ್ ತರ್ತಾರೆ. ಆದ್ರೆ ವಿಪರ್ಯಾಸ ಅಂದ್ರೆ ಭಾರತ ತಂಡಕ್ಕೆ ಬುಮ್ರಾ ಕಾಲಿಟ್ಟು ಹತ್ತು ವರ್ಷಗಳೇ ಕಳೆದಿದ್ರೂ ಬುಮ್ರಾನಂತೆ ಇಂಪ್ಯಾಕ್ಟ್ ಮಾಡಬಲ್ಲ ಮತ್ತೊಬ್ಬ ಬೌಲರ್ ಸಿಕ್ಕೇ ಇಲ್ಲ. ಮ್ಯಾನೇಜ್​ಮೆಂಟ್ ಕೂಡ ಇದಕ್ಕೆ ಪರಿಹಾರವನ್ನೂ ಕಂಡಿಲ್ಲ. ಇಂಜುರಿ, ರೆಸ್ಟ್​ ಅಂತಾ ಬುಮ್ರಾ ತಂಡದಿಂದ ಹೊರಗಿದ್ದಾಗೆಲ್ಲಾ ಹೊಡೆತ ತಿನ್ನೋದೂ ಕೂಡ ತಪ್ಪಿಲ್ಲ.

Shantha Kumari

Leave a Reply

Your email address will not be published. Required fields are marked *