ವನವಾಸ ಅಂತ್ಯ.. KL ಕಮ್ ಬ್ಯಾಕ್! – ಪಂತ್​ಗಿಂತ ರಾಹುಲ್ ಬೆಸ್ಟ್ ಹೇಗೆ?
ರೋಹಿತ್ & ಗಂಭೀರ್ ಪ್ಲ್ಯಾನ್ ಸಕ್ಸಸ್

ವನವಾಸ ಅಂತ್ಯ.. KL ಕಮ್ ಬ್ಯಾಕ್! – ಪಂತ್​ಗಿಂತ ರಾಹುಲ್ ಬೆಸ್ಟ್ ಹೇಗೆ?ರೋಹಿತ್ & ಗಂಭೀರ್ ಪ್ಲ್ಯಾನ್ ಸಕ್ಸಸ್

ಟಿ-20 ವಿಶ್ವಕಪ್​ಗೆ ಸೆಲೆಕ್ಟ್ ಆಗಲಿಲ್ಲ. ಜಿಂಬಾಬ್ವೆ ಸರಣಿಗೂ ಪರಿಗಣಿಸಲಿಲ್ಲ. ಲಂಕಾ ವಿರುದ್ಧದ ಟಿ-20 ಸಿರೀಸ್​ನಲ್ಲೂ ಚಾನ್ಸ್ ಕೊಡ್ಲಿಲ್ಲ. ಚುಟುಕು ಸಮರದ ನಾಯಕತ್ವನೂ ಹೋಯ್ತು. ಹೋಗ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಪ್ಲೇಯಿಂಗ್ 11ನಲ್ಲಾದ್ರೂ ಚಾನ್ಸ್ ಕೊಡ್ತಾರೋ, ಇಲ್ಲ ಇಲ್ಲೂ ಮೋಸ ಮಾಡ್ತಾರೋ ಅಂತಾ ಕೋಟಿ ಕೋಟಿ ಕನ್ನಡಿಗರು ಟೆನ್ಷನ್​ನಲ್ಲಿದ್ರು. ಬಟ್ ಕೊನೆಗೂ ಕನ್ನಡಿಗ ಕೆ.ಎಲ್ ರಾಹುಲ್​ರ ವನವಾಸ ಅಂತ್ಯವಾಗಿದೆ. ತಿಂಗಳುಗಳ ಬಳಿಕ ಟೀಂ ಇಂಡಿಯಾ ಪರ ಮೈದಾನಕ್ಕೆ ಇಳಿದಿದ್ದಾರೆ. ವಿಕೆಟ್ ಕೀಪರ್ ರೇಸ್​ನಲ್ಲಿದ್ದ ರಿಷಬ್ ಪಂತ್​ರನ್ನ ಹಿಂದಿಕ್ಕಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: INDದಂತೆ PAKಗೆ ಬಾಂಗ್ಲಾ ಶಾಕ್! – ಚಾಂಪಿಯನ್ಸ್ ಟ್ರೋಫಿಗೆ ಬಿಗ್ ಎಫೆಕ್ಟ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡದ ಅನೌನ್ಸ್​ಗೂ ಮುನ್ನ ಕೆ.ಎಲ್ ರಾಹುಲ್​ರೇ ನಾಯಕ ಎನ್ನಲಾಗಿತ್ತು. ಬಟ್ ರೋಹಿತ್ ಕಮ್​ಬ್ಯಾಕ್ ಮಾಡಿದ್ರಿಂದ ಕ್ಯಾಪ್ಟನ್ಸಿ ಕೈತಪ್ಪಿತ್ತು. ಅಂತಿಮವಾಗಿ ವಿಕೆಟ್ ಕೀಪರ್ ಕೋಟಾದಡಿ ತಂಡಕ್ಕೆ ಆಯ್ಕೆಯಾಗಿದ್ರು. ಇದೀಗ ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ ಕೆ.ಎಲ್ ರಾಹುಲ್ ಸ್ಥಾನ ಪಡೆದಿದ್ದು, ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ರಿಷಬ್ ಪಂತ್​ ಅವರನ್ನು ಬೆಂಚ್​​ ಕಾಯಿಸಿದ್ದು, ಸ್ಟಾರ್​ ವಿಕೆಟ್ ಕೀಪರ್​​ ಕೆ.ಎಲ್​ ರಾಹುಲ್​​ ಕಮ್​ಬ್ಯಾಕ್​ ಮಾಡಿದ್ದಾರೆ. ಶುಭ್ಮನ್ ಗಿಲ್ ಉಪನಾಯಕ ಆಗಿದ್ದು, ರೋಹಿತ್ ಶರ್ಮಾ ಜತೆ ಇನ್ನಿಂಗ್ಸ್ ಆರಂಭಿಸಿದ್ರೆ ಕೊಹ್ಲಿ 3ನೇ ಕ್ರಮಾಂಕದಲ್ಲಿ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೇ 5ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಸ್ಥಾನ ಗಿಟ್ಟಿಸಿಕೊಂಡಿದ್ರು. ಅಷ್ಟಕ್ಕೂ ಪಂತ್​ರನ್ನ ಬೆಂಚ್ ಕಾಯಿಸಿ ರಾಹುಲ್​ಗೆ ಚಾನ್ಸ್ ಕೊಟ್ಟಿದ್ರ ಹಿಂದಿನ ಉದ್ದೇಶ ಏನು ಅನ್ನೋದನ್ನೇ ಹೇಳ್ತೇನೆ ನೋಡಿ.

ಭಾರತದ ಪರ ರಾಹುಲ್ ಕಣಕ್ಕೆ!

ಕೆ.ಎಲ್ ರಾಹುಲ್ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್. ಬ್ಯಾಟಿಂಗ್ ಹಾಗೇ ವಿಕೆಟ್ ಕೀಪಿಂಗ್ ಎರಡರಲ್ಲೂ ಕೂಡ ತಂಡದ ಪರ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಏಕದಿನ ಕ್ರಿಕೆಟ್​​ನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಧ್ಯಮ ಕ್ರಮಾಂಕದ ಆಧಾರ ಸ್ಥಂಭವಾಗಿದ್ದಾರೆ. ಕಳೆದ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​​ನಲ್ಲೂ ಸಾಮರ್ಥ್ಯ ನಿರೂಪಿಸಿದ್ದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 452 ರನ್ ಬಾರಿಸಿದ್ದರು. ರಾಹುಲ್ ವಿಶ್ವಕಪ್‌ನ 10 ಇನ್ನಿಂಗ್ಸ್‌ಗಳಲ್ಲಿ 75 ಸರಾಸರಿಯಲ್ಲಿ 452 ರನ್ ಕಲೆಹಾಕಿದ್ದಲ್ಲದೆ, ವಿಕೆಟ್ ಕೀಪಿಂಗ್‌ನಲ್ಲಿ 17 ವಿಕೆಟ್ ಕೂಡ ಉರುಳಿಸಿದ್ದರು. ಆ ಮೂಲಕ ದಾಖಲೆಯನ್ನೂ ನಿರ್ಮಿಸಿದ್ದರು. ಆದರೆ ವಿಶ್ವಕಪ್ ನಂತರ ರಾಹುಲ್​ ಏಕದಿನ ಫಾರ್ಮೆಟ್​ ಆಡಿಯೇ ಇಲ್ಲ. ಲಂಕಾ ಸರಣಿಗೂ ಮುನ್ನ ಟೀಂ ಇಂಡಿಯಾ ಪರ ಒಟ್ಟಾರೆ 75 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕೆ.ಎಲ್ ರಾಹುಲ್ 2820 ರನ್ ಗಳಿಸಿದ್ದಾರೆ. ಇನ್ನು ರಿಷಬ್ ಪಂತ್  2022ರ ನವೆಂಬರ್​​​ನಿಂದ ಒಂದೂ ಏಕದಿನ ಪಂದ್ಯವನ್ನಾಡಿಲ್ಲ. ಭೀಕರ ಅಪಘಾತದ ನಂತರ ಟಿ20ಐನಲ್ಲಿ ಆಡಿದ್ರೂ ಸ್ಥಿರ ಪ್ರದರ್ಶನ ನೀಡಿಲ್ಲ. 14 ತಿಂಗಳಿಗೂ ಹೆಚ್ಚು ಕಾಲ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ಹೊರಗುಳಿದಿದ್ದ ಪಂತ್​, 2024ರ ಟಿ20 ವಿಶ್ವಕಪ್​​ನಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ್ದರು. ಈ ಮೆಗಾ ಟೂರ್ನಿಗೂ ಮುನ್ನ 2024ರ ಐಪಿಎಲ್​​ನಲ್ಲೂ ಮಿಂಚಿದ್ದರು. ಇನ್ನು ಭಾರತ ತಂಡದ ಪರ ಒಟ್ಟಾರೆ 30 ಏಕದಿನ ಪಂದ್ಯಗಳನ್ನ ಆಡಿರುವ ರಿಷಬ್ ಪಂತ್ 865 ರನ್ ಕಲೆ ಹಾಕಿದ್ದಾರೆ. ಹೀಗಾಗಿ ಅನುಭವ ಮತ್ತು ಪ್ರತಿಭೆಯ ಆಧಾರದ ಮೇಲೆ ಕೆ.ಎಲ್ ರಾಹುಲ್​ಗೆ ಟೀಂ ಮ್ಯಾನೇಜ್​ಮೆಂಟ್ ಮಣೆ ಹಾಕಿದೆ.

ಸದ್ಯ ಬಹಳ ದಿನಗಳ ನಂತರ ಕೆಎಲ್ ರಾಹುಲ್ ಜೊತೆ ಶ್ರೇಯಸ್ ಅಯ್ಯರ್ ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಕೊನೆಯ ಪಂದ್ಯವನ್ನು ಟೀಮ್ ಇಂಡಿಯಾಗೆ ಫೆಬ್ರವರಿ 2024ರಲ್ಲಿ ಆಡಿದ್ದರು. ಅದು ಟೆಸ್ಟ್ ಪಂದ್ಯವಾಗಿತ್ತು. ಕೆಎಲ್ ರಾಹುಲ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಜನವರಿ 2024ರಲ್ಲಿ ಆಡಿದ್ದರು. ಇದೀಗ ಇಬ್ಬರೂ ಕೂಡ ಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಟಿಂ ಇಂಡಿಯಾದಲ್ಲಿ ಸ್ಥಾನ ಭಧ್ರಪಡಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ.

Shwetha M