ಸ್ಮೋಕ್ ಬಾಂಬ್‌ ಪತ್ತೆ ಮಾಡೋಕೆ ಭದ್ರತಾ ಸಿಬ್ಬಂದಿಗೆ ಆಗಿಲ್ಲ ಯಾಕೆ? – ಪಾಸ್ ಕೇಳಿದವರ ಬಗ್ಗೆ ಪ್ರತಾಪ್ ಸಿಂಹ ಮಾಹಿತಿ ಪಡೆದಿಲ್ವಾ?

ಸ್ಮೋಕ್ ಬಾಂಬ್‌ ಪತ್ತೆ ಮಾಡೋಕೆ ಭದ್ರತಾ ಸಿಬ್ಬಂದಿಗೆ ಆಗಿಲ್ಲ ಯಾಕೆ? –  ಪಾಸ್ ಕೇಳಿದವರ ಬಗ್ಗೆ ಪ್ರತಾಪ್ ಸಿಂಹ ಮಾಹಿತಿ ಪಡೆದಿಲ್ವಾ?

ಕೆಲ ದಿನಗಳ ಹಿಂದೆಯಷ್ಟೇ ಖಲಿಸ್ತಾನಿ ಉಗ್ರ ಗುರುಪಂತ್ ಸಿಂಗ್ ಪನ್ನು ಸಂಸತ್​ ಮೇಲೆ ದಾಳಿಯಾಗಲಿದೆ ಅಂತಾ ವಾರ್ನಿಂಗ್ ಮಾಡಿದ್ದ. ಅದು ಕೂಡ 2001ರ ಉಗ್ರರ ದಾಳಿಯ ವರ್ಷಾಚರಣೆಯಂದೇ ಅಟ್ಯಾಕ್ ಮಾಡೋದಾಗಿ ಬೆದರಿಕೆ ಹಾಕಿದ್ದ. ಅಂದು ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಹೀಗಾಗಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನೇ ಮಾಡಲಾಗಿತ್ತು. ಜೊತೆಗೆ ದೆಹಲಿ ಪೊಲೀಸರಿಗೆ ಇಂಟೆಲಿಜೆನ್ಸ್ ಮಾಹಿತಿ ಬಂದಿತ್ತಂತೆ. ಸಂಸತ್ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿರೋರ ಬಗ್ಗೆ ಇನ್​ಫಾರ್ಮೇಶನ್ ಸಿಕ್ಕಿತ್ತು. ಇಷ್ಟಾದ್ರೂ ಕೂಡ ಸಂಸತ್​ನೊಳಕ್ಕೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ ಅಂದ್ರೆ ಇದು ಭದ್ರತಾ ವೈಫಲ್ಯವೇ .  ಈ ಬಗ್ಗೆ ಕೆಲವು ಪ್ರಶ್ನೆಗಳು ಕೂಡಾ ಎದ್ದಿವೆ.

ಇದನ್ನೂ ಓದಿ:  ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೇರಿಸಲಿ! – ಸಂಸತ್‌ ಮೇಲೆ ದಾಳಿ ನಡೆಸಿದ ಮನೋರಂಜನ್ ತಂದೆ ಹೀಗೆ ಹೇಳಿದ್ಧೇಕೆ?

ನಂ1: ಸಂಸತ್​​​ ಸೆಕ್ಯೂರಿಟಿ ಸಿಸ್ಟಂಗೆ ಏನಾಗಿದೆ?

ಸಂಸತ್ ಭವನ ಪ್ರಜಾಪ್ರಭುತ್ವದ ದೇವಾಲಯ. ದೇಶದ ಸಾರ್ವಭೌಮತ್ವದ ಸಂಕೇತ. ಪ್ರಧಾನಿಯಿಂದ ಹಿಡಿದು 140 ಕೋಟಿ ಭಾರತೀಯರನ್ನ ಪ್ರತಿನಿಧಿಸೋ ಜನಪ್ರತಿನಿಧಿಗಳು ಕೆಲಸ ಮಾಡೋ ಜಾಗ. ಅದು ಕೂಡ ನಾವು-ನೀವು ಕಟ್ಟಿದ ತೆರಿಗೆ ಹಣದಲ್ಲಿ, ಸಾವಿರ ಕೋಟಿ ರೂಪಾಯಿಗೆ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಿದ ಭವ್ಯ ಸಂಸತ್​ ಭವನ. ಸೆಕ್ಯೂರಿಟಿಯೇ ಫಸ್ಟ್ ಪ್ರಯೋರಿಟಿ. ಅದ್ರಲ್ಲೂ 2001ರಲ್ಲಿ ಏನಾಗಿತ್ತು ಅನ್ನೋದು ಇಡೀ ದೇಶಕ್ಕೆ ಗೊತ್ತಿದೆ. ಹೀಗಾಗಿ ಸಂಸತ್​ ಭವನಕ್ಕೆ ಒಟ್ಟು ಮೂರು ಲೇಯರ್​​ಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಿರಲಾಗಿರುತ್ತೆ. ದೆಹಲಿ ಪೊಲೀಸ್ ಮತ್ತು ಸಿಆರ್​ಪಿಎಫ್​ ಸಂಸತ್ ಭವನದ ಭದ್ರತೆಯ ಹೊಣೆ ಹೊತ್ತುಕೊಂಡಿದೆ. ಸಂಸತ್​ನ ಸುತ್ತಲೂ, ಒಳಗೂ, ಹೊರಗೂ ಪೊಲೀಸರು ಮತ್ತು ಸಿಆರ್​ಪಿಎಫ್ ಯೋಧರನ್ನ ನಿಯೋಜಿಸಲಾಗಿರುತ್ತೆ. ಸಂಸತ್​ ಆವರಣ ಮಾತ್ರವಲ್ಲ. ಕೆಲವು ಕಿಲೋ ಮೀಟರ್​ ದೂರದವರೆಗೂ ಸಿಸಿಕ್ಯಾಮರಾಗಳ ಮೂಲಕ ಎಲ್ಲರ ಮೇಲೂ ನಿಗಾ ವಹಿಸಲಾಗುತ್ತೆ. ಅನುಮತಿ ಇಲ್ಲದೆ ಸಂಸತ್​​ ಆವರಣದೊಳಕ್ಕೂ ಯಾವನಿಗೂ ಪ್ರವೇಶ ಇರೋದಿಲ್ಲ. ದಾಖಲೆ ಪತ್ರ, ಐಡೆಂಟಿಟಿ ಕಾರ್ಡ್ ಇದ್ರಷ್ಟೇ ಸಂಸತ್​ ಗೇಟ್ ಓಪನ್ ಆಗುತ್ತೆ. ಅಂಥದ್ರಲ್ಲಿ ಯಾವುದೇ ಐಡೆಂಟಿಟಿ ಪ್ರೂಫ್ ಇಲ್ಲದೆ ನೀಲಂ ಮತ್ತು ಅಮೋಲ್ ಸಂಸತ್ ಆವರಣಕ್ಕೆ ಹೇಗೆ ಎಂಟ್ರಿಯಾದ್ರು ಅನ್ನೋದೆ ಇಲ್ಲಿರುವ ಪ್ರಶ್ನೆ.

ಸ್ಮೋಕ್ ಬಾಂಬ್ ಪತ್ತೆ ಮಾಡೋಕೆ ಆಗಿಲ್ಲ ಯಾಕೆ?

ಇನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಇಬ್ಬರೂ ಎಂಪಿ​ ಪ್ರತಾಪ್ ಸಿಂಹ ಕಡೆಯಿಂದ ಸಿಕ್ಕ ವಿಸಿಟರ್ಸ್ ಪಾಸ್ ಹಿಡಿದುಕೊಂಡು ಸಂಸತ್​​ನೊಳಕ್ಕೆ ಎಂಟ್ರಿಯಾಗಿದ್ದಾರೆ ಅನ್ನೋದೇನೊ ನಿಜ. ಆದ್ರೆ ಅವರ ಬಳಿಯಿದ್ದ ಸ್ಮೋಕ್ ಬಾಂಬ್​​ನ್ನ ಪತ್ತೆ ಮಾಡೋಕೆ ಭದ್ರತಾ ಸಿಬ್ಬಂದಿಗೆ ಆಗಿಲ್ಲ ಯಾಕೆ ಅನ್ನೋದು ಇಲ್ಲಿರುವ ಇನ್ನೊಂದು ಪ್ರಶ್ನೆ. ಯಾಕಂದ್ರೆ, ಸಂಸತ್​​ನೊಳಗೆ ಎಂಟ್ರಿಯಾಗೋ ಮುನ್ನ ಮೂರು ಹಂತಗಳಲ್ಲಿ ಚೆಕ್ಕಿಂಗ್ ನಡೆಯುತ್ತೆ. ಮೆಟಲ್​ ಡಿಟೆಕ್ಷರ್ ಕೂಡ ಇರುತ್ತೆ. ಅದು ಇಡೀ ಬಾಡಿಯನ್ನೇ ಸ್ಕ್ಯಾನ್ ಮಾಡುತ್ತೆ. ಇಷ್ಟಾದ್ರೂ ಇವರ ಬಳಿ ಸ್ಮೋಕ್ ಬಾಂಬ್ ಇರೋದು ಗೊತ್ತಾಗಿಲ್ಲ ಯಾಕೆ? ಸಂಸತ್​​ ಭವನದ ಮೆಟಲ್ ಡಿಟೆಕ್ಟರ್ ವರ್ಕೇ ಆಗ್ತಿಲ್ವಾ ಹಾಗಿದ್ರೆ?

ಪೆನ್ ​​ಗೂ NO ಪರ್ಮಿಷನ್..ಸ್ಮೋಕ್​ ಬಾಂಬ್ ಹೇಗೆ ಬಂತು?

ವಿಸಿಟರ್ಸ್ ಆಗಿ ಸಂಸತ್​​ನೊಳಕ್ಕೆ ಹೋಗುವವರು ಒಂದು ಪೆನ್, ಪೇಪರ್​ ಕೂಡ ತೆಗೆದುಕೊಂಡು ಹೋಗುವಂತಿಲ್ಲ. ವಾಟರ್ ಬಾಟಲ್, ಬ್ಯಾಗ್ ಯಾವುದೇ ಸಾಮಗ್ರಿಗಳನ್ನ ಒಳಕ್ಕೆ ತೆಗೆದುಕೊಂಡು ಹೋಗೋಕೆ ಪರ್ಮಿಷನ್ ಇರೋದಿಲ್ಲ. ಖಾಲಿ ಕೈಯಲ್ಲೇ ಹೋಗಬೇಕು. ಇನ್ನು ಗ್ಯಾಲರಿಯಲ್ಲೂ ಸೆಕ್ಯೂರಿಟಿ ಪರ್ಸನ್​ಗಳನ್ನ ನಿಯೋಜಿಸಲಾಗಿರುತ್ತೆ. ಪ್ರತಿಯೊಬ್ಬ ವಿಸಿಟರ್​​ನನ್ನ ಕೂಡ ಗಮನಿಸ್ತಾ ಇರ್ತಾರೆ. ಆದ್ರೂ ಕೂಡ ಸಾಗರ್ ಮತ್ತು ಮನೋರಂಜನ್ ಸ್ಮೋಕ್​ ಬಾಂಬ್​ನ್ನ ಶೂವಿನೊಳಗೆ ಹಾಕ್ಕೊಂಡು ಹೋಗಿದ್ದಾರೆ ಅಂದ್ರೆ ಸೆಕ್ಯೂರಿಟಿ ಸ್ಟಿಸ್ಟಮ್ಸ್​​ಗೆ ಏನಾಯ್ತು? ಭದ್ರತಾ ಸಿಬ್ಬಂದಿ ಏನ್ಮಾಡ್ತಿದ್ರು?

ಪಾಸ್ ಕೇಳಿದವರ ಬಗ್ಗೆ ಪ್ರತಾಪ್​​ ಸಿಂಹ ಮಾಹಿತಿ ಪಡೆದಿಲ್ವಾ?

ಸಂಸದ ಪ್ರತಾಪ್ ಸಿಂಹ ಕೂಡ ಇಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಆನ್ಸರ್ ಮಾಡಲೇಬೇಕಾಗುತ್ತೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಪ್ರತಾಪ್ ಸಿಂಹ ಕಡೆಯಿಂದಲೇ ಮನೋರಂಜನ್ ಮತ್ತು ಸಾಗರ್​​ಗೆ ಪಾಸ್ ಸಿಕ್ಕಿದೆ ಅಂತಾ ಹೇಳಲಾಗ್ತಿದೆ. ಆದ್ರೆ ಇದು ಅಫೀಶಿಯಲ್​ ಆಗಿ ಕನ್ಫರ್ಮ್ ಆಗಿಲ್ಲ. ಒಂದು ವೇಳೆ ಪ್ರತಾಪ್ ಸಿಂಹ ಕಡೆಯಿಂದಲೇ ಪಾಸ್ ಸಿಕ್ಕಿದೆ ಅನ್ನೋದಾದ್ರೆ, ಪ್ರತಾಪ್​ಗೆ ಈ ಬಗ್ಗೆ ಮಾಹಿತಿ ಇರಲಿಲ್ವಾ? ಮನೋರಂಜನ್ ಮತ್ತು ಸಾಗರ್​​ ಬಗ್ಗೆ ಪ್ರತಾಪ್ ವಿಚಾರಿಸಿಲ್ವಾ? ಅವರು ಯಾರು? ಎಲ್ಲಿಯವರು? ಅವರ ಹಿನ್ನೆಲೆ ಏನು? ಆಧಾರ್ ಕಾರ್ಡ್ ತೋರಿಸಿದ್ದಾರಾ? ಯಾವ ಉದ್ದೇಶಕ್ಕಾಗಿ ಸಂಸತ್​​ಗೆ ವಿಸಿಟ್ ಮಾಡ್ತಿದ್ದಾರೆ? ಈ ಎಲ್ಲಾ ವಿಚಾರಗಳನ್ನ ಸ್ಪಷ್ಟಪಡಿಸಿಕೊಂಡೇ ತಮ್ಮ ಕಡೆಯಿಂದ ಪಾಸ್ ನೀಡೋಕೆ ಪ್ರತಾಪ್ ಪರ್ಮಿಷನ್ ಕೊಟ್ಟಿರಬೇಕಲ್ವಾ? ಈ ಪ್ರೊಸೀಜರ್​​ನ್ನ ಪ್ರತಾಪ್ ಫಾಲೋ ಮಾಡಿದ್ದಾರಾ? ಇಲ್ಲಾ ಪ್ರತಾಪ್ ಸಿಂಹರ ಪಿಎ ಸೀದಾ ವಿಸಿಟರ್ ಪಾಸ್​​ನ್ನ ಮನೋರಂಜನ್ ಮತ್ತು ಸಾಗರ್​ಗೆ ಇಶ್ಯೂ ಮಾಡಿದ್ರಾ? ಗೊತ್ತಿಲ್ಲ. ಯಾಕಂದ್ರೆ ಮನೋರಂಜನ್ ಏನೋ ಮೈಸೂರು ಮೂದದವನು. ಆದ್ರೆ ಆತನ ಜೊತೆಗೆ ಸಂಸತ್​​ನೊಳಕ್ಕೆ ನುಗ್ಗಿದ ಸಾಗರ್​​ ಮೈಸೂರಿನವನಲ್ಲ. ಆತ ಉತ್ತರಪ್ರದೇಶದ ಲಕ್ನೋದವನು. ಅವನಿಗೆ ಯಾಕೆ ಪ್ರತಾಪ್ ಸಿಂಹ ತಮ್ಮ ಕಡೆಯಿಂದ ವಿಸಿಟರ್ಸ್ ಪಾಸ್ ಕೊಟ್ರು? ಮನೋರಂಜನ್​ ಆತನಿಗೂ ಪಾಸ್ ಕೊಡಿಸಿದ್ನಾ? ಈ ಎಲ್ಲಾ ಪ್ರಶ್ನೆಗಳಿಗೂ ಈಗ ಆನ್ಸರ್ ಸಿಗಬೇಕಿದೆ.

ಸ್ಮೋಕ್ ಬದಲು ಬಾಂಬ್ ತಗೊಂಡು ಹೋಗಿದ್ದರೆ ಏನು ಗತಿ?

ಒಂದು ವೇಳೆ ಶೂವಿನೊಳಗೆ ಪಿಸ್ತೂಲ್​ ಅಥವಾ ಸ್ಫೋಟಕಗಳನ್ನ ಇಟ್ಕೊಂಡು ಸಂಸತ್​​ನೊಳಕ್ಕೆ ಎಂಟ್ರಿಯಾಗಿ ಅಟ್ಯಾಕ್ ಮಾಡ್ತಿದ್ರೆ ಕಥೆಯೇನಾಗ್ತಿತ್ತು? ಬಾಂಬ್, ಪಿಸ್ತೂಲ್ ಬಿಡಿ. ಈಗ ಅದಕ್ಕಿಂತಲೂ ಡೇಂಜರಸ್ ಅಂದ್ರೆ ಇದೇ ಸ್ಮೋಕ್. ಈಗ ಇಬ್ಬರು ತೆಗೆದುಕೊಂಡು ಹೋಗಿರೋದೇನು ಮಾಮೂಲಿ ಸ್ಮೋಕ್ ಆಗಿತ್ತು. ಆದ್ರಿಂದ ಯಾವುದೇ ಅನಾಹುತ ಆಗಿಲ್ಲ. ಆದ್ರೆ, ಇದೇ ರೀತಿ ಪಾಯಿಸನಸ್ ಸ್ಮೋಕ್​ ಕೂಡ ಬರುತ್ತೆ. ಬಾಟಲ್​​ನ್ನ ಜಸ್ಟ್ ಓಪನ್​ ಮಾಡಿದ್ರೆ ಸಾಕು, ಸ್ಮೋಕ್ ಹೊರ ಬರುತ್ತಲೇ ಸ್ಥಳದಲ್ಲಿದ್ದವರೆಲ್ಲಾ ಅಲ್ಲೇ ಸತ್ತೇ ಹೋಗ್ತಾರೆ. ಆತ್ಮಾಹುತಿ ದಾಳಿಕೋರರು ಈ ರೀತಿ ಬೇಕಾದ್ರೂ ಅಟ್ಯಾಕ್ ಮಾಡಬಹುದು. ಹೀಗಾಗಿ ಈಗ ಸಂಸತ್​​ನಲ್ಲಿ ಜಸ್ಟ್ ಯೆಲ್ಲೋ ಸ್ಮೋಕ್​ನ್ನ ಓಪನ್​ ಮಾಡಿದ್ದಾರಷ್ಟೇ ಅಂತಾ ಕೇರ್​ಲೆಸ್​​ ಕೂಡ ಮಾಡುವಂತಿಲ್ಲ.

ಸಂಸತ್​ನಲ್ಲಿ ಆಗಿರೋದು ದೊಡ್ಡ ಅನಾಹುತವೇ​.. ಅದು  ಕೂಡ 2001ರ ಉಗ್ರರ ದಾಳಿಯ ದಿನದಂದೇ. ಹೀಗಾಗಿ ಇಡೀ ಕೇಸ್​​ನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಇಂಟೆಲಿಜೆನ್ಸ್ ಬ್ಯೂರೂ, ಸಿಆರ್​ಪಿಎಫ್​ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ತನಿಖೆ ನಡೆಸ್ತಾ ಇದ್ದಾರೆ. ಆರೋಪಿಗಳನ್ನ ತೀವ್ರ ವಿಚಾರಣೆ ನಡೆಸ್ತಾ ಇದ್ದಾರೆ. ಇದಕ್ಕಾಗಿಯೇ ಸ್ಪೆಷಲ್ ಇನ್​​ವೆಸ್ಟಿಗೇಷನ್ ಟೀಂನ್ನ ಕೂಡ ರಚಿಸಲಾಗಿದೆ.

Sulekha