ಸೂರ್ಯ ಉದಯ.. ಸಂಜೆಯತ್ತ ಸ್ಯಾಮ್ಸನ್ – 3 ಪಂದ್ಯ.. 16 ರನ್.. ಸಂಜುಗೆ ಏನಾಯ್ತು?

ಟೀಂ ಇಂಡಿಯಾದ ಟಿ-20ಐ ಟೀಂ ಕಳೆದ 20 ತಿಂಗಳಿಂದ ಒಂದೇ ಒಂದು ಸರಣಿಯನ್ನ ಸೋತಿಲ್ಲ. ಹಾಗೇ ಏಷ್ಯಾಕಪ್ನಲ್ಲೂ ಅಜೇಯವಾಗೇ ಚಾಂಪಿಯನ್ ಪಟ್ಟಕ್ಕೇರಿದ್ರು. ಇನ್ನೇನು ಟೀಂ ಸೂಪರ್ ಸ್ಟ್ರಾಂಗ್ ಆಗಿದೆ ಬಿಡಿ ಈ ಸಲನೂ ಟಿ-20 ವಿಶ್ವಕಪ್ ನಮ್ದೇ ಅನ್ಕೊಳ್ಬೋದು. ಬಟ್ ತಂಡ ಗೆಲ್ತಾ ಇದ್ರೂ ಕೆಲವರ ಕಳಪೆ ಫಾರ್ಮ್ ಟೆನ್ಷನ್ಗೆ ಕಾರಣ ಆಗಿದೆ. 20 ತಿಂಗಳಿಂದ ನಾಯಕ ಸೂರ್ಯಕುಮಾರ್ ಯಾದವ್ಗೆ ಹಿಡಿದಿದ್ದ ಗ್ರಹಣ ಬಿಡ್ತು ಅನ್ನುವಷ್ಟ್ರಲ್ಲಿ ಸಂಜು ಸ್ಯಾಮ್ಸನ್ ಸೈಲೆಂಟ್ ಆಗಿದ್ದಾರೆ. ಓಪನರ್ ಆಗಿ ಸಂಜು ಡಲ್ ಆದ್ರೆ ಅದು ತಂಡಕ್ಕೆ ಮಾತ್ರ ಅಲ್ಲ ಅವ್ರ ಕೆರಿಯರ್ಗೂ ಕಷ್ಟನೇ.
ಇದನ್ನೂ ಓದಿ : ನ್ಯೂಜಿಲೆಂಡ್ ವಿರುದ್ಧ ದಾಖಲೆಗಳ ಸರಮಾಲೆ – ಅಜೇಯವಾಗಿ ವಿಶ್ವಕಪ್ ಗೆ ಕಾಲಿಟ್ಟ ಭಾರತ!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20 ಸರಣಿಯ ಮೂರು ಪಂದ್ಯ ಮುಗಿದಿವೆ. ಮೊದಲ ಮೂರೂ ಪಂದ್ಯಗಳನ್ನ ಗೆದ್ದು ಭಾರತ ಸರಣಿ ಕೈವಶ ಮಾಡ್ಕೊಂಡಿದೆ. ಮೂರೂ ಮ್ಯಾಚ್ಗಳಲ್ಲೂ ಭಾರತವೇ ಡಾಮಿನೇಟ್ ಮಾಡಿ ಗೆದ್ದಿದೆ. ಎಲ್ಲೂ ಕೂಡ ನ್ಯೂಜಿಲೆಂಡ್ ಗೆಲುವಿನ ಹತ್ತಿರಕ್ಕೆ ಬರೋಕೂ ಆಗಿಲ್ಲ. ಹೀಗಿದ್ರೂ ಭಾರತದ ಪರ ಸಂಜು ಸ್ಯಾಮ್ಸನ್ ಮಂಕಾಗಿರೋದು ಮ್ಯಾನೇಜ್ಮೆಂಟ್ ಭೀತಿ ಹೆಚ್ಚಿಸಿದೆ.
3 ಪಂದ್ಯಗಳಿಂದ 16 ರನ್ ಗಳಿಸಿದ ಸಂಜು!
2024ರಲ್ಲಿ ಭಾರತದ ಟಿ-20ಐ ಟೀಮ್ನಲ್ಲಿ ಸಂಜು ಸ್ಫೋಟಕ ಬ್ಯಾಟರ್.. ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದ ಆಟಗಾರ. ಆದ್ರೆ 2025ರ ಏಷ್ಯಾಕಪ್ ನಂತರ ಸಂಜುಗೆ ಲಕ್ ಕೈಕೊಟ್ಟಿತ್ತು. ಶುಭ್ಮನ್ ಗಿಲ್ರನ್ನ ವೈಸ್ ಕ್ಯಾಪ್ಟನ್ ಆಗಿ ಕರ್ಕೊಂಡು ಬಂದು ಓಪನರ್ ಆಗಿ ಕಣಕ್ಕಿಳಿಸಿದ್ರು. ಸಂಜುಗೆ ಮಿಡಲ್ ಆರ್ಡರ್ಗೆ ತಳ್ಳಿದ್ರು. ಬಟ್ ಮಧ್ಯಮ ಕ್ರಮಾಂಕದಲ್ಲಿ ಸಂಜು ಕಂಪ್ಲೀಟ್ ಸೈಲೆಂಟ್ ಆಗಿದ್ರು. ಎಷ್ಟೋ ಪಂದ್ಯಗಳಲ್ಲಿ ಬೆಂಚ್ ಕೂಡ ಕಾದಿದ್ದಾರೆ. ಈಗ ಗಿಲ್ಗೆ ಗೇಟ್ ಪಾಸ್ ಕೊಟ್ಮೇಲೆ ಸಂಜುಗೆ ಓಪನರ್ ಆಗಿ ಮತ್ತೆ ಚಾನ್ಸ್ ಸಿಕ್ಕಿದೆ. ಆದ್ರೆ ಸಿಕ್ಕಿರುವಂಥ ಪಂದ್ಯಗಳಲ್ಲಿ ಸಂಜು ಕಡೆಯಿಂದ ಕನ್ವಿನ್ಸಿಂಗ್ ಸ್ಕೋರ್ ಬರ್ತಾ ಇಲ್ಲ. ಟಿ20 ವಿಶ್ವಕಪ್ಗೂ ಮುನ್ನ ಈಗ ಮ್ಯಾನೇಜ್ಮೆಂಟ್ ತಲೆ ಬಿಸಿ ಹೆಚ್ಚಿಸಿದ್ದಾರೆ. ಌಂಡ್ ಬೇರೆ ಆಟಗಾರರ ಪ್ರದರ್ಶನದ ಮುಂದೆ ಬಿಗ್ ಸ್ಕೋರ್ ಕಲೆ ಹಾಕಲೇಬೇಕಾದ ಒತ್ತಡದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ 10 ರನ್ ಬಾರಿಸಿದ್ರೆ ಎರಡನೇ ಪಂದ್ಯದಲ್ಲಿ 6, ಮೂರನೇ ಪಂದ್ಯದಲ್ಲಿ ಮೊದಲ ಎಸೆತದಲ್ಲಿ ಬೌಲ್ಡ್ ಆಗಿದ್ರು. ಅಲ್ಲಿಗೆ 3 ಪಂದ್ಯಗಳಿಂದ 16 ರನ್ಸ್ ಬಂದಿದೆ. ಸಂಜು ಇದೇ ರೀತಿ ಸೈಲೆಂಟ್ ಆಗಿದ್ರೆ ಅವ್ರ ಸ್ಥಾನಕ್ಕೇ ಕುತ್ತು ಬರೋ ಚಾನ್ಸಸ್ ಇದೆ. ಈಗ ಸರಣಿಯ ನಾಲ್ಕು & ಐದನೇ ಪಂದ್ಯದಲ್ಲಿ ಸಿಡಿಯಲೇಬೇಕಿದೆ. ಌಂಡ್ ಬಿಗ್ ಇನ್ನಿಂಗ್ಸ್ ಬರಲೇಬೇಕಿದೆ.
ಇಶಾನ್ ಕಿಶನ್ ಅಬ್ಬರದ ಮುಂದೆ ಸಂಜು ಆಟ ವೀಕ್ ಆಯ್ತಾ?
ಟಿ-20 ಫಾರ್ಮೆಟ್ ಮ್ಯಾಚ್ ಅಂದ್ರೇನೇ ಅಲ್ಲಿ ಹೊಡಿಬಡಿ ಆಟಗಾರರಿಗಷ್ಟೇ ಗತ್ತು ಗಮ್ಮತ್ತು ಎಲ್ಲವೂ. ಈಗ ಇಶಾನ್ ಕಿಶನ್ ಕೂಡ ಹೊಡಿಬಡಿ ಆಟಗಾರನಾಗಿ ನಿಂತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ನಿಂದ ಎರಡನೇ ಪಂದ್ಯದಲ್ಲಿ ಮ್ಯಾಚ್ ಗೆಲ್ಲಿಸಿದ್ರು. ಎರಡನೇ T20I ನಲ್ಲಿ 32 ಎಸೆತಗಳಲ್ಲಿ 76 ರನ್ ಗಳಿಸಿದ್ರು. ಮೂರು ಪಂದ್ಯಗಳಲ್ಲಿ 224 ಸ್ಟ್ರೈಕ್ ರೇಟ್ನಲ್ಲಿ 112 ರನ್ ಗಳಿಸುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದದ್ದಾರೆ. ದೇಶೀಯ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಇವರಿಗೆ ಮತ್ತೆ ತಂಡದಲ್ಲಿ ಸ್ಥಾನ ಲಭಿಸಿತು. ಮುಂದಿನ ಪಂದ್ಯಗಳಲ್ಲಿ ಕಿಶನ್ರನ್ನ ಆಡಿಸಲೇಬೇಕು ಎನ್ನುವಂಥ ಸಿಚುಯೇಷನ್ ಬಂದಿದೆ. ಆದ್ರೆ ಸಂಜು ಕಡೆಯಿಂದಲೂ ಬಿಗ್ ಸ್ಕೋರ್ ಬರಬೇಕಿದೆ.
ಬಿಸಿಸಿಐಗೆ ತಲೆ ಬಿಸಿ ತಂದಿಟ್ಟ ಪ್ಲೇಯಿಂಗ್ 11
ಪ್ರಸ್ತುತ ಟಿ-20ಐ ತಂಡದ ಪ್ಲೇಯಿಂಗ್ 11ನಲ್ಲಿ ತಿಲಕ್ ವರ್ಮಾ ಬದಲಿಗೆ ಇಶಾನ್ ಕಿಶನ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಅವರ ಫಾರ್ಮ್ ನೋಡಿದರೆ, ಅವರನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡುವುದು ಭಾರತಕ್ಕೆ ತುಂಬಾ ಕಷ್ಟವಾಗುತ್ತದೆ. ಬಟ್ ತಿಲಕ್ ಒಮ್ಮೆ ತಂಡಕ್ಕೆ ಮರಳಿದರೆ ಅವ್ರೂ ಕೂಡ ಆಡುವ ಇಲೆವೆನ್ನಲ್ಲಿ ಸ್ಥಾನ ಪಡೆಯುತ್ತಾರೆ. 23 ವರ್ಷದ ತಿಲಕ್ ಇದುವರೆಗೆ ಭಾರತ ಪರ 40 ಟಿ20 ಪಂದ್ಯಗಳನ್ನು ಆಡಿದ್ದು ಎರಡು ಶತಕಗಳು ಮತ್ತು ಆರು ಅರ್ಧಶತಕಗಳು ಸೇರಿದಂತೆ 1183 ರನ್ ಗಳಿಸಿದ್ದಾರೆ. ತಿಲಕ್ ವರ್ಮಾ ಫೆಬ್ರವರಿ 3 ರಂದು ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದು ಆ ನಂತ್ರ ವಿಶ್ವಕಪ್ನಲ್ಲಿ ಚಾನ್ಸ್ ಕೊಡಲೇಬೇಕಾಗುತ್ತೆ. ಸೋ ಅಲ್ಲಿಗೆ ಬಿಸಿಸಿಐ ಮುಂದಿರೋ ದಾರಿ ಅಂದ್ರೆ ಮುಂದಿನ 2 ಟಿ-20 ಪಂದ್ಯಗಳು. ಈ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಮೇಲೆ ಬಿಸಿಸಿಐ ನಿಗಾ ಇಡಲಿದೆ. ಌಂಡ್ ಅವ್ರ ಪರ್ಫಾಮೆನ್ಸ್ ಮೇಲೆ ಮುಂದಿನ ತೀರ್ಮಾನ ತಗೊಳ್ತಾರೆ. ಹಾಗಂತ ಏಕಾಏಕಿ ಸಂಜುನ ಬೆಂಚ್ ಕಾಯಿಸೋಕೂ ಆಗಲ್ಲ. ಲೆಫ್ಟ್ ರೈಟ್ ಕಾಂಬಿನೇಷನ್ ಕೂಡ ನೋಡ್ಬೇಕು. ಅಭಿಷೇಕ್ ಲೆಫ್ಟ್ ಹ್ಯಾಂಡ್ ಆದ್ರೆ ಸಂಜು ರೈಟ್ ಹ್ಯಾಂಡ್ ಓಪನರ್. ನೆಕ್ಸ್ಟ್ ಒನ್ ಡೌನ್ನಲ್ಲಿ ಇಶಾನ್ ಕಿಶನ್ ಲೆಫ್ಟ್ ಹ್ಯಾಂಡ್ ಸೂರ್ಯ ರೈಟ್ ಹ್ಯಾಂಡ್.. ಹಾಗೇನಾದ್ರೂ ಅಭಿಷೇಕ್, ಕಿಶನ್ ಓಪನರ್ ಅಂದ್ರೆ ತಿಲಕ್ ಕೂಡ ಲೆಫ್ಟ್ ಹ್ಯಾಂಡ್ ಬ್ಯಾಟರ್. ಮೂವರನ್ನೂ ಟಾಪ್ ಆರ್ಡರ್ನಲ್ಲಿ ಆಡ್ಸೋದು ಕಷ್ಟ. ಹೀಗಾಗಿ ಕಾಂಬಿನೇಷನ್ ಕೂಡ ಇಂಪಾರ್ಟೆಂಟ್ ಆಗುತ್ತೆ. ಬಟ್ ಮುಂದಿನ 2 ಪಂದ್ಯಗಳಲ್ಲಿ ಬಿಸಿಸಿಐಗೆ ಒಂದು ಕ್ಲೈಮ್ಯಾಕ್ಸ್ ಪಿಕ್ಚರ್ ಸಿಗುತ್ತೆ.
ಇನ್ನು ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾ ಆಯೋಜನೆಯಲ್ಲಿ ಟಿ20 ವಿಶ್ವಕಪ್ ಆರಂಭವಾಗುತ್ತೆ. ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು 5 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧವೂ ಸರಣಿ ಗೆದ್ದಿರೋ ಭಾರತ ಅದೇ ಕಾನ್ಫಿಡೆನ್ಷನ್ನಲ್ಲೇ ವಿಶ್ವಕಪ್ ಅಖಾಡಕ್ಕೂ ಇಳಿಯಲಿದೆ. ಸೂರ್ಯ ಕಂ ಬ್ಯಾಕ್ ಮಾಡಿರೋದು ಪ್ಲಸ್ ಪಾಯಿಂಟ್ ಆಗಿದ್ರೂ ಸಂಜು ಸಂಜೆಯತ್ತ ಸರಿದಿರೋದು ಟೆನ್ಷನ್ ಹೆಚ್ಚಿಸಿದೆ.

ನೋಡಿರಿ

