ರೋಹಿತ್ ನಿವೃತ್ತಿಗೆ ರಿತಿಕಾ ರಿಲ್ಯಾಕ್ಸ್ – ಪತ್ನಿಯ 4 ಬೆರಳಿನ ತಪಸ್ಸು ಈಡೇರಿತಾ?
ಫಿಂಗರ್ಸ್ ಕ್ರಾಸ್ಡ್ ಶಕ್ತಿ ಕೊಡುತ್ತಾ?

ರೋಹಿತ್ ನಿವೃತ್ತಿಗೆ ರಿತಿಕಾ ರಿಲ್ಯಾಕ್ಸ್ – ಪತ್ನಿಯ 4 ಬೆರಳಿನ ತಪಸ್ಸು ಈಡೇರಿತಾ?ಫಿಂಗರ್ಸ್ ಕ್ರಾಸ್ಡ್ ಶಕ್ತಿ ಕೊಡುತ್ತಾ?

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಣೆ ಮಾಡಿದ ಮೇಲೆ ಕೋಟಿ ಕೋಟಿ ಅಭಿಮಾನಿಗಳು ನೋವು ಪಟ್ಟುಕೊಂಡಿದ್ರು. ಹಿಟ್‌ಮ್ಯಾನ್ ಅಬ್ಬರದ ಆಟ ಮಿಸ್ ಮಾಡಿಕೊಳ್ಳುವ ಮನಸು ಯಾರಿಗೂ ಇರಲಿಲ್ಲ. ಆದ್ರೆ, ಯಾವ ಸಮಯಕ್ಕೆ ಏನು ಆಗಬೇಕು ಅದು ಆಗಲೇಬೇಕು. ಆ ಟೈಮ್ ರೋಹಿತ್ ಶರ್ಮಾಗೂ ಬಂದಿತ್ತು ಅಷ್ಟೇ. ರೋಹಿತ್ ಶರ್ಮಾ ನಿವೃತ್ತಿ ಘೋಷಣೆಯಿಂದ ಜಾಸ್ತಿ ರಿಲೀಫ್ ಆಗಿದ್ದು ಏನು ಗೊತ್ತಾ. ಮುದ್ದಿನ ಪತ್ನಿ ರಿತಿಕಾ ಸಜ್ದೆ ಅವರ ನಾಲ್ಕು ಬೆರಳುಗಳು. ಹೌದು ಸ್ನೇಹಿತರೇ, ರೋಹಿತ್ ಶರ್ಮಾ ಅವರೇ ಪತ್ನಿಯ ಬೆರಳುಗಳ ತಪಸ್ಸಿನ ಬಗ್ಗೆ ಆಗಾಗ್ಗೇ ಹೇಳ್ತಾನೇ ಇದ್ರು. ಬೇಚಾರಿ ಪ್ಯೂರ್ ಮ್ಯಾಚ್ ಮೇ ಫಿಂಗರ್ಸ್ ಕ್ರಾಸ್ ಕರ್ಕೆ ಬೈಠಿ ರೆಹತಿ ಹೈ ಅಂತಾ ಕಪಿಲ್ ಶರ್ಮಾ ಪ್ರೋಗ್ರಾಮ್‌ನಲ್ಲೂ ಬೇಜಾರಿನಲ್ಲೇ ಹೇಳಿಕೊಂಡಿದ್ರು. ಪತ್ನಿಯ ತಪಸ್ಸು, ತನಗಾಗಿ ಆಕೆ ಮಾಡೋ ತ್ಯಾಗವನ್ನೂ ಉಲ್ಲೇಖಿಸಿದ್ದರು. ಹೌದು, ರೋಹಿತ್ ಶರ್ಮಾ ಹೇಳುವಂತೆ ರಿತಿಕಾ ಇಡೀ ಮ್ಯಾಚ್ ಉದ್ದಕ್ಕೂ ತನ್ನ ಬೆರಳುಗಳನ್ನು ಕ್ರಾಸ್ ನಲ್ಲೇ ಇಟ್ಟುಕೊಳ್ತಾರೆ. ರಿತಿಕಾ ಹೀಗೆ ಮಾಡಲು ಶುರು ಮಾಡಿದ್ದು ಯಾವಾಗ, ರಿತಿಕಾ ಈ ಕಠಿಣ ವೃತದಿಂದ ನೋವು ಪಟ್ಕೊಂಡಿದ್ರಾ?, ರೋಹಿತ್ ಶರ್ಮಾ ಯಶಸ್ಸಿಗೆ ಪತ್ನಿಯ ನಂಬಿಕೆಯೇ ಕಾರಣನಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ಲೇಯರ್ಸ್ ​ಗೆ ಪುಟ್ಟ ಮಗು TROPHY – ಕಪ್ ಮೇಲೆ ಕಾಲಿಟ್ಟವ್ರು ನೋಡಿ ಕಲೀರಿ!

ರೋಹಿತ್ ಶರ್ಮ ಸಾಧನೆಯ ಸರದಾರ ಆಗಿ ಇಂದು ಮೆರೆದಾಡುತ್ತಿರುವುದರ ಹಿಂದಿರೋ ಶಕ್ತಿಯೇ ಫ್ಯಾಮಿಲಿ. ಬಡತನದ ಜೊತೆಗೆ ಮುಳ್ಳಿನ ಹಾದಿಯಲ್ಲಿ ಬೆಳೆದು ಯಶಸ್ವೀ ಕ್ರಿಕೆಟರ್ ಆಗಿರೋ ಹಿಟ್ ಮ್ಯಾನ್ ಬಂದ ದಾರಿಯನ್ನು ಎಂದೂ ಮರೆತವರಲ್ಲ. ನಂತರ ರಿತಿಕಾ ಸಜ್ದೇ ರೋಹಿತ್ ಶರ್ಮಾ ಬಾಳಲ್ಲಿ ಬಂದ ಮೇಲೂ ಹಿಟ್‌ಮ್ಯಾನ್ ಮತ್ತಷ್ಟು ಗಟ್ಟಿಯಾದರು. ಸೋಲಲ್ಲೂ, ಗೆಲುವಲ್ಲೂ ಪ್ರತಿ ಏಳುಬೀಳಿನಲ್ಲೂ ರೋಹಿತ್ ಶರ್ಮಾ ಜೊತೆಯಾದರು ರಿತಿಕಾ. ರಿತಿಕಾ ಬಗ್ಗೆ, ಆಕೆ ಪ್ರತಿ ಮ್ಯಾಚ್‌ನಲ್ಲೂ ಕೊಡುವ ಎಕ್ಸ್‌ಪ್ರೆಷನ್ ಎಲ್ಲವನ್ನೂ ನೋಡೇ ಇರ್ತೀರಾ. ನಗುವಲ್ಲೂ, ನೋವಲ್ಲೂ ಆಕೆಯ ಕೈಯನ್ನು ಯಾರಾದ್ರೂ ಗಮನಿಸಿದ್ದೀರಾ?, ಹೌದು. ರಿತಿಕಾ ಮಾಡುತ್ತಿರುವುದು ನೋಡಲು ಮಾತ್ರ ಸುಲಭ. ಆದ್ರೆ, ಹಾಗೇ ಮಾಡೋದಕ್ಕೂ ಮನೋಬಲ ಬೇಕು. ರೋಹಿತ್ ಆಡಿರೋ ಪಂದ್ಯಗಳನ್ನ ಆತನ ಪತ್ನಿ ರಿತಿಕಾ ಸಜ್ದೇ ಮಿಸ್ ಮಾಡಿರೋದು ಬಹಳ ಕಡಿಮೆ. ರೋಹಿತ್ ನ ಗರ್ಲ್ ಫ್ರೆಂಡ್ ಆದಾಗಿಂದ ಇವತ್ತಿನ ತನಕ ಬಹುಶಃ ಎಲ್ಲ ಪಂದ್ಯಗಳನ್ನೂ ಗ್ರೌಂಡಲ್ಲೇ ಕೂತು ನೋಡಿರ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಟಿವಿಯಲ್ಲಿ ನೋಡಿರಬಹುದು. ಹೀಗೆ ಗ್ರೌಂಡ್‌ಗೆ ಬಂದ ರಿತಿಕಾಗೆ ನಂಬಿಕೆಯೊಂದಿದೆ. ಅದು ನಂಬಿಕೆಯೋ ಇಲ್ಲ ಫಿಂಗರ್ಸ್ ಕ್ರಾಸ್ಡ್ ಅನ್ನೋದನ್ನು ತುಂಬಾ ಸೀರಿಯಸ್ಸಾಗಿ ಫಾಲೋ ಮಾಡ್ತಾರೋ.. ಆದ್ರೆ, ರೋಹಿತ್ ಬ್ಯಾಟಿಂಗ್ ಮಾಡ್ತಿರೋ ಅಷ್ಟೂ ಹೊತ್ತು ಆಕೆ ತನ್ನ ಎರಡೂ ಕೈಗಳ ಬೆರಳುಗಳನ್ನ ಹೆಣೆದಿಟ್ಕೊಂಡೇ ಕೂರುತ್ತಾರೆ. ಉಂಗುರದ ಬೆರಳಿನ ಮೇಲೆ ನಡುಬೆರಳಿನ ಹೆಣಿಗೆ. ಅದು ಐವತ್ತು ಓವರ್ ಪಂದ್ಯ ಆಗ್ಲೀ… ಟೆಸ್ಟ್ ಮ್ಯಾಚ್ ಆಗ್ಲೀ ಟಿಟ್ವೆಂಟಿ ಆಗ್ಲೀ ಐಪಿಎಲ್ ಆಗ್ಲೀ.. ರೋಹಿತ್ ಬ್ಯಾಟಿಂಗ್ ಬರ್ತಾ ಇದ್ದ ಹಾಗೇ ರಿತಿಕಾ ಬೆರಳುಗಳು ತಂತಾನೇ ಹೆಣೆದುಕೊಳ್ತಿದ್ವು. ರೋಹಿತ್ ಕ್ಯಾಪ್ಟನ್ ಆದಮೇಲೆ ಅವನು ಪಂದ್ಯ ಗೆಲ್ಲಲಿ ಅಂತ ಇಡೀ ಪಂದ್ಯ ಹಾಗೆ ಫಿಂಗರ್ಸ್ ಕ್ರಾಸ್ ಮಾಡಿಯೇ ಇಟ್ಕೊಂಡಿರ್ತಾರೆ. ಹೆಚ್ಚಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವಾಗ ಮಾತ್ರ ರಿತಿಕಾ ಕಡೆಗೆ ಕ್ಯಾಮರಾ ಫೋಕಸ್ ಆಗೋದ್ರಿಂದ ಆ ಟೈಮಲ್ಲಿ ಮಾತ್ರ  ಆ ಫಿಂಗರ್ಸ್ ಕ್ರಾಸ್ಡ್ ಕಾಣ್ಸುತ್ತೆ.

ಗಂಡನ ಮೇಲಿನ ಪ್ರೀತಿ ಒಂದ್ ಕಡೆ. ಅದು ಸಹಜ ಬಿಡಿ. ಜೊತೆಗೆ ತನ್ನ ಗಂಡನ ನಾಯಕತ್ವದಲ್ಲಿ ಟೀಮ್ ಗೆಲ್ಲಬೇಕು ಅನ್ನೋ ತಪಸ್ಸು. ಏನೇ ಇರ್ಲಿ.. ನಿರಂತರವಾಗಿ ಅಂಥದ್ದೊಂದು ಅಭ್ಯಾಸವನ್ನ ವ್ರತದ ಥರ ಪಾಲಿಸಿಕೊಂಡು ಬರೋದು ಸಣ್ಣ ವಿಷಯ ಅಲ್ಲ. ಆದ್ರೆ, ರಿತಿಕಾ ರೋಹಿತ್ ಮೇಲಿನ ಪ್ರೀತಿ ಮತ್ತು ಗಂಡನ ಯಶಸ್ಸಿಗಾಗಿ ಇಂಥಾದ್ದೊಂದು ಕಷ್ಟದ ತಪಸ್ಸು ಮಾಡಿಕೊಂಡೇ ಬಂದಿದ್ದಾರೆ. ಬಹುಶಃ ರಿತಿಕಾ ಕೈ ಬೆರಳುಗಳು ಸ್ವಲ್ಪ ದಿನದ ಮಟ್ಟಿಗಂತೂ ರಿಲ್ಯಾಕ್ಸ್ ಆಗಿರಬಹುದು. ಐಪಿಎಲ್ ಬಿಟ್ರೆ ಟಿ20 ಫಾರ್ಮೆಟ್‌ನಲ್ಲಿ ರೋಹಿತ್ ಶರ್ಮಾ ಆಡೋದಿಲ್ಲ. ಹೀಗಾಗಿ ರಿತಿಕಾ ಸದ್ಯದ ಮಟ್ಟಿಗೆ ತನ್ನ ವ್ರತದಿಂದ ರಿಲೀಫ್ ಆಗಿರೋದಂತೂ ಸತ್ಯ. ಟೀಮ್ ಅಂತಾ ಬಂದಾಗ ರಿತಿಕಾ ಇಂಡಿಯಾದ ಪ್ರತಿಯೊಬ್ಬ ಬ್ಯಾಟರ್‌ಗಳ ಆಟವನ್ನು ಎಂಜಾಯ್ ಮಾಡ್ತಾರೆ. ಜೊತೆಗೆ ಮೈನ್ ಬ್ಯಾಟರ್ ಔಟಾದಾಗಲೂ ಬೇಜಾರು ಮಾಡಿಕೊಳ್ತಾರೆ. ರಿತಿಕಾ ಈ ರೀತಿ ಬೆರಳುಗಳನ್ನು ಕ್ರಾಸಿಂಗ್ ಲ್ಲಿ ಹೆಣೆದಿಟ್ಟುಕೊಂಡಿರೋ ಬಗ್ಗೆ ರೋಹಿತ್ ಶರ್ಮಾ ಅನೇಕ ಬಾರಿ ಹೇಳಿಕೊಂಡಿದ್ದಾರೆ. ನನ್ನ ಗೆಲುವು ಮತ್ತು ಯಶಸ್ಸಿಗಾಗಿ ರಿತಿಕಾ ಪ್ರತಿಕ್ಷಣ ಹಂಬಲಿಸುತ್ತಾಳೆ. ಅದಕ್ಕಾಗಿ ತನ್ನ ಬೆರಳುಗಳನ್ನು ಮ್ಯಾಚ್ ಉದ್ದಕ್ಕೂ ಕ್ರಾಸ್ ನಲ್ಲಿಯೇ ಇಟ್ಟುಕೊಂಡಿರ್ತಾಳೆ ಅಂತಾ ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದರು.

ರಿತಿಕಾ ಫಿಂಗರ್ಸ್ ಕ್ರಾಸ್ಡ್ ಮಾಡೋದು ಯಾಕೆ ಎಂಬ ಬಗ್ಗೆ ಕುತೂಹಲ ವಿರುತ್ತದೆ. ಈ ರೀತಿ ಮಾಡೋದ್ರಿಂದ ಮಾನಸಿಕ ಒತ್ತಡದಿಂದ ರಿಲೀಫ್ ಸಿಗುತ್ತದೆ. ಜೊತೆಗೆ ಈ ರೀತಿ ಮಾಡೋದು ಅದೃಷ್ಟದ ಸಂಕೇತ ಅಂತಾನೂ ಹೇಳಲಾಗುತ್ತೆ. ಅಚಲ ನಂಬಿಕೆ ಮತ್ತು ಮನಸಿಗೆ ಶಕ್ತಿ ನೀಡುವುದಕ್ಕೆ ಈ ರೀತಿ ಕೈಬೆರಳುಗಳನ್ನು ಹೆಣೆದಿಟ್ಟುಕೊಂಡಿರುತ್ತಾರೆ. ಇದಕ್ಕಾಗಿಯೇ ರಿತಿಕಾ ಕೂಡಾ ಗಂಡನ ಮೇಲಿನ ನಂಬಿಕೆ, ಗಂಡನಿಗಾಗಿ ಪಂದ್ಯ ಗೆಲ್ಲಲಿ ಅನ್ನೋ ಭರವಸೆಗಾಗಿ ಈ ರೀತಿ ಫಿಂಗರ್ಸ್ ಕ್ರಾಸ್ಡ್ ಎಂಬ ವ್ರತ ಮಾಡುತ್ತಿರಬಹುದು ಅಂತಾನೇ ಹೇಳಲಾಗ್ತಿದೆ. ಇನ್ನು ಇವರಿಬ್ಬರ ಬಾಂಡಿಂಗ್ ಬಗ್ಗೆ ಹೇಳಲೇಬೇಕು. ಮೊನ್ನೆ ಮೊನ್ನೆಯಷ್ಟೇ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದಾಗ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡಿದ್ದರು. ಪತ್ನಿಯಾಗಿ, ರೋಹಿತ್ ಶರ್ಮಾ ಬದುಕಿನ ಸ್ಪೂರ್ತಿಯಾಗಿ ರಿತಿಕಾ ಸಜ್ದೇ ಮಾಡಿರೋ ಪೋಸ್ಟ್ ಮಾತ್ರ ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿತ್ತು.

“ನಿಮ್ಮ ಹೆಂಡತಿಯಾಗಿ, ನೀವು ಏನು ಸಾಧಿಸಿದ್ದೀರಿ ಮತ್ತು ಕ್ರಿಕೆಟ್ ಮತ್ತು ಅದನ್ನು ಪ್ರೀತಿಸುವ ಜನರ ಮೇಲೆ ನೀವು ಬೀರಿದ ಪ್ರಭಾವದ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ; ಆದರೆ ನಿಮ್ಮ ಆಟವನ್ನು ಪ್ರೀತಿಸುವ ವ್ಯಕ್ತಿಯಾಗಿ ನೀವು ಯಾವುದೇ ಭಾಗವನ್ನು ಬಿಟ್ಟು ಹೋಗುವುದನ್ನು ನೋಡಲು ನನಗೆ ದುಃಖವಾಗಿದೆ. ಈ ತಂಡಕ್ಕೆ ಯಾವುದು ಉತ್ತಮ ಎಂಬುದರ ಕುರಿತು ನೀವು ದೀರ್ಘಕಾಲ ಯೋಚಿಸಿದ್ದೀರಿ ಎಂದು ನನಗೆ ತಿಳಿದಿದೆ ಆದರೆ ನೀವು ಕ್ರಿಕೆಟ್ ಬಿಟ್ಟು ಹೋಗುವುದನ್ನು ನೋಡುವುದು ಸುಲಭವಲ್ಲ ಮತ್ತು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ರಿತಿಕಾ ಬರೆದುಕೊಂಡಿದ್ದರು. ಹೌದು. ರೋಹಿತ್ ಅವರ ಆಟದ ಅಭಿಮಾನಿಯಾಗಿದ್ದರು ಸಂಗಾತಿ ರಿತಿಕಾ. ಇನ್ನು ಮುಂದಕ್ಕೆ ಬರೆದುಕೊಂಡು ಹೋಗಿರುವ ರಿತಿಕಾ, “ರೋ, ಇದು ನಿಮಗೆ ಏನು ಅರ್ಥವಾಗಿದೆ ಎಂದು ನನಗೆ ತಿಳಿದಿದೆ. ಈ ಕಪ್, ಈ ಪ್ರಯಾಣ ಮತ್ತು ನೀವು ಯಾವಾಗಲೂ ಕನಸು ಕಂಡಿದ್ದನ್ನು ಪಡೆಯುವ ಈ ಸಂಪೂರ್ಣ ಪ್ರಕ್ರಿಯೆ. ಕಳೆದ ಕೆಲವು ತಿಂಗಳುಗಳು ನೀವು ಎಷ್ಟು ಕಷ್ಟಪಟ್ಟಿದ್ದೀರಿ ಎಂದು ನನಗೆ ತಿಳಿದಿದೆ. ಇದು ನಿಮ್ಮ ಹೃದಯ, ಮನಸ್ಸು ಮತ್ತು ದೇಹಕ್ಕೂ ಎಷ್ಟು ನೋವು ಕೊಟ್ಟಿದೆ ಎಂದು ನನಗೆ ತಿಳಿದಿದೆ. ಆದರೆ ನೀವು ನಿಮ್ಮ ಕನಸನ್ನು ಸಾಧಿಸಿದ್ದೀರಿ. ಇದೇ ನಮ್ಮ ಬದುಕಿಗೆ ಸ್ಪೂರ್ತಿದಾಯಕವಾಗಿದೆ. ಅಂತಾ ಗಂಡನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ರಿತಿಕಾ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳಂತೆ. ಇದೀಗ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ ಜಯಿಸಿರುವುದರ ಹಿಂದೆ ರಿತಿಕಾ ಪ್ರೀತಿಯಿದೆ. ಪತ್ನಿಯ ತ್ಯಾಗವಿದೆ, ಜೊತೆಗೆ ಬೆಟ್ಟದಷ್ಟು ನಂಬಿಕೆಯೂ ಕೈ ಹಿಡಿದಿದೆ.

Shwetha M

Leave a Reply

Your email address will not be published. Required fields are marked *