2024ರ ಜನವರಿ 22ರಂದೇ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡ್ತಿರೋದ್ಯಾಕೆ?

2024ರ ಜನವರಿ 22ರಂದೇ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡ್ತಿರೋದ್ಯಾಕೆ?

ಕೋಟ್ಯಂತರ ಹಿಂದೂಗಳು ಕಾಯುತ್ತಿದ್ದ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 22 ರಂದು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಲಾಗುತ್ತಿದೆ. 2024ರ ಜನವರಿ 22ರಂದೇ ಪ್ರಾಣಪ್ರತಿಷ್ಠಾಪನೆ ಮಾಡ್ತಿರೋದ್ಯಾಕೆ? ಈ ದಿನದ ಮಹತ್ವ ಎಂಥಾದ್ದು? ಗರ್ಭಗುಡಿ ಪ್ರವೇಶಿಸಿ ಪ್ರಧಾನಿ ಮೋದಿ ಕೈಗೊಳ್ಳಲಿರುವ ಕಾರ್ಯ ಎಂಥಾದ್ದು? ರಾಮಮಂದಿರ ಲೋಕಾರ್ಪಣೆ ದೇಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ಇವೆಲ್ಲದರ ಕುರಿತ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಯೋಧ್ಯೆಗೆ ಒಂದು‌ ದಿನ‌ ಮೊದಲೇ ಹೊರಟ ಪ್ರಧಾನಮಂತ್ರಿ – ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಭರ್ಜರಿ ಸಿದ್ಧತೆ

ಜನವರಿ 22ರ ಮಧ್ಯಾಹ್ನ 12.20ಕ್ಕೆ ಅಯೋಧ್ಯೆಯಲ್ಲಿ ರಾಮಲ್ಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗ್ತಿದೆ. ಈ ಹೊತ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡೋಕೆ ನಿರ್ಧಿಷ್ಟ ಕಾರಣ ಕೂಡ ಇದೆ. ಹಿಂದೂ ಪುರಾಣಗಳ ಪ್ರಕಾರ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಭಿಜಿತ್ ಮುಹೂರ್ತ ವೇಳೆ, ಮ್ರಿಗಶ್ರೀಶ ನಕ್ಷತ್ರದಲ್ಲಿ ಅಮೃತ್ ಸಿದ್ಧಿ ಯೋಗ ಮತ್ತು ಸರ್ವತ್ರ ಸಿದ್ಧಿ ಯೋಗ ಇವೆಲ್ಲವುಗಳ ಸಂಗಮದ ಹೊತ್ತಲ್ಲಿ ಶ್ರೀರಾಮನು ಜನಿಸಿದ್ದ. ಈ ಎಲ್ಲಾ ಮಂಗಳಕರ ಅವಧಿ ಕೂಡ 2024ರ ಜನವರಿ 22ರಂದೇ ಜೋಡಣೆಯಾಗ್ತಾ ಇದೆ. ಹೀಗಾಗಿ 2024ರ ಜನವರಿ 22 ಅತ್ಯಂತ ಪವಿತ್ರ ದಿನವಾಗಿರೋದ್ರಿಂದ ಅದೇ ದಿನದಂದು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಮಾಡೋಕೆ ಜ್ಯೋತಿಷಿಗಳು ನಿರ್ಧರಿಸಿದ್ದಾರೆ. ಇಷ್ಟೇ ಇಲ್ಲ, ಇನ್ನೊಂದಷ್ಟು ವಿಶೇಷತೆಗಳು ಕೂಡ ಇವೆ.

2024ರ ಜನವರಿ 22 ರಂದು ಅಭಿಜಿತ್ ಮುಹೂರ್ತ ಮಧ್ಯಾಹ್ನ 12.16ರಿಂದ 12.59ರವರೆಗೆ ಇರುತ್ತೆ. ಅಂದ್ರೆ ಸುಮಾರು 48 ನಿಮಿಷ ಅಭಿಜಿತ್ ಮುಹೂರ್ತದ ಸಮಯ. ಇದೇ ಹೊತ್ತಲ್ಲಿ ಶಿವನು ತನ್ನ ಶತ್ರುವಾಗಿದ್ದ ತ್ರಿಪುರಾಸುರನನ್ನ ಕೊಲ್ಲುತ್ತಾನೆ. ಅಭಿಜಿತ್ ಮುಹೂರ್ತದ ಸಂದರ್ಭದಲ್ಲಿ ಜೀವನದಲ್ಲಿರೋ ನೆಗೆಟಿವ್ ಎನರ್ಜಿ ಹೊರ ಹೋಗುತ್ತೆ ಅನ್ನೋ ನಂಬಿಕೆ ಇದೆ.

ಇನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನಿಸಿದ್ದು ಮ್ರಿಗಶಿರ್ಷ ನಕ್ಷತ್ರದ ಸಂದರ್ಭದಲ್ಲಿ. ವೈದಿಕ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳ ಪೈಕಿ ಮ್ರಿಗಶಿರ್ಷ ನಕ್ಷತ್ರ 5ನೇ ಸ್ಥಾನದಲ್ಲಿದೆ. ಮ್ರಿಗಶಿರ್ಷ ಅಂದ್ರೆ ಜಿಂಕೆಯ ತಲೆ ಅಂತಾ ಅರ್ಥ. ಮ್ರಿಗಶಿರ್ಷ ನಕ್ಷತ್ರದಲ್ಲಿ ಜನಿಸಿದವರು ನೋಡೋಕೆ ತುಂಬಾ ಸ್ಫುರದ್ರೂಪಿಗಳಾಗಿರುರ್ತಾರೆ. ನೋಡಿದ ಕೂಡಲೇ ಸೆಳೆಯುವಂತೆ ಇರ್ತಾರೆ. ತುಂಬಾ ಬುದ್ಧಿವಂತರಾಗಿರ್ತಾರೆ. ಹಾಗೆಯೇ ಅತ್ಯಂತ ಶ್ರಮಜೀವಿಗಳಾಗಿರ್ತಾರೆ. ಮ್ರಿಗಶಿರ್ಷ ನಕ್ಷತ್ರ ವಿಚಾರದಲ್ಲಿ ಇನ್ನೊಂದು ಕಹಾನಿ ಕೂಡ ಇದೆ. ಅಮರತ್ವದ ದೇವರು ಮತ್ತು ನಕ್ಷತ್ರಗಳ ರಾಜ ಸೋಮನನ್ನ ರಾಕ್ಷಸರು ಅಪಹರಣ ಮಾಡಿ ಕಮಲದ ಒಳಗಡೆ ಅಡಗಿಸಿರ್ತಾರೆ.  ಈ ವೇಳೆ ಸೋಮನ ಭಕ್ತರು ಸಹಾಯಕ್ಕಾಗಿ ಜಿಂಕೆಗಳ ರಾಜ ಮ್ರಿಗಶಿರ್ಷನನ್ನ ಸಂಪರ್ಕಿಸ್ತಾರೆ. ಅದ್ರಂತೆ ಮ್ರಿಗಶಿರ್ಷನೇ ಕಮಲದ ಒಳಗೆ ಬಂಧಿಯಾಗಿದ್ದ ಸೋಮನನ್ನ ಬಿಡುಗಡೆಗೊಳಿಸ್ತಾನೆ. 2024ರ ಜನವರಿ 22ರಂದು ಮ್ರಿಗಶಿರ್ಷ ನಕ್ಷತ್ರ ಮುಂಜಾನೆ 3:52ಕ್ಕೆ ಆರಂಭವಾಗಿ ಜನವರಿ 23ರ ಬೆಳಗ್ಗೆ 7:13ವರೆಗೂ ಇರುತ್ತೆ.

ಇದಿಷ್ಟೇ ಅಲ್ಲ, ಜನವರಿ 22 ಅಮೃತ್ ಸಿದ್ಧಿ ಯೋಗ ಮತ್ತು ಸರ್ವರ್ತ ಸಿದ್ಧಿ ಯೋಗದ ದಿನ. ಅಂದ್ರೆ ವೈದಿಕ ಶಾಸ್ತ್ರದ ಪ್ರಕಾರ ಇದು ಅತ್ಯಂತ ಅಮೃತ ಕಾಲ. ಈ ಎಲ್ಲಾ ಕಾರಣಗಳಿಗೋಸ್ಕರವೇ 2024ರ ಜನವರಿ 22ರಂದೇ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಢಾಪನೆ ಮಾಡಲಾಗ್ತಿದೆ.

Shwetha M