ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಯೂಸ್ ಮಾಡ್ತೀರಾ?

ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಯೂಸ್ ಮಾಡ್ತೀರಾ?

ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಬಳಕೆದಾರರ ಅನುಕೂಲಕ್ಕಾಗಿ ಪ್ರತಿಯೊಂದು ಫೋನ್‌ನಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನು ಒದಗಿಸುತ್ತವೆ. ಆದರೆ, ಅನೇಕ ಜನರು ಈ ವೈಶಿಷ್ಟ್ಯವನ್ನು ಬಳಸುವುದಿಲ್ಲ ಅಥವಾ ಅವರಿಗೆ ಈ ವೈಶಿಷ್ಟ್ಯದ ಬಗ್ಗೆ ತಿಳಿದಿರುವುದಿಲ್ಲ. ನೀವು ಸ್ಮಾರ್ಟ್​ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿಟ್ಟು ಉಪಯೋಗಿಸುತ್ತಿದ್ದರೆ ಇದು ಒಳ್ಳೆಯ ವಿಚಾರ. ಯಾಕೆಂದರೆ ಫೊನ್ ಬಳಸುವಾಗ ಡಾರ್ಕ್ ಮೋಡ್​ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇದು ನಿಮಗೆ ಅನೇಕ ಪ್ರಯೋಜನಗಳಿವೆ, ಮುಖ್ಯವಾಗಿ ಡಾರ್ಕ್ ಮೋಡ್ ನಲ್ಲಿ ಇಟ್ರೆ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬೀರುವುದಿಲ್ಲ.

ಇದನ್ನೂ ಓದಿ: ಪವರ್ ಬ್ಯಾಂಕ್ ನಲ್ಲಿ ಫೋನ್ ಚಾರ್ಜ್ ಮಾಡ್ತೀರಾ? – ಸ್ಮಾರ್ಟ್ ಫೋನ್ ಬ್ಯಾಟರಿ ಹಾಳಾಗುತ್ತೆ ಹುಷಾರ್!

ಸ್ಮಾರ್ಟ್‌ಫೋನ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದ ನಂತರ, ಡಿಸ್ ಪ್ಲೇ ಮೇಲೆ ಗೋಚರಿಸುವ ಎಲ್ಲ ವಿಷಯಗಳು ಕಪ್ಪು ಬಣ್ಣದಲ್ಲಿ ಇರುತ್ತದೆ. ಇದು ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುವುದಿಲ್ಲ. ಇದರ ಹೊರತಾಗಿ ಡಾರ್ಕ್ ಮೋಡ್ ಆನ್ ಮಾಡಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಹೀಗೆ ಮಾಡಿದ್ರೆ ನಿಮ್ಮ ಕಣ್ಣುಗಳಿಗೆ ಯಾವುದೇ ಅಡ್ಡ ಪರಿಣಾಮ ಬೀರಲ್ಲ.

ಇನ್ನು ಹೆಚ್ಚಿನವರು ದಿನವಿಡೀ ಮೊಬೈಲ್ ಬಳಸುತ್ತಾರೆ. ಹೀಗಾಗಿ ಇದು ಬ್ಯಾಟರಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಆದರೆ, ನಿಮ್ಮ ಫೋನ್‌ನಲ್ಲಿ ನೀವು ಡಾರ್ಕ್ ಮೋಡ್ ಅನ್ನು ಆನ್ ಮಾಡಿದರೆ, ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗನೆ ಖಾಲಿ ಆಗುವುದಿಲ್ಲ. ಡಾರ್ಕ್ ಮೋಡ್ ಅನ್ನು ಆನ್ ಮಾಡಿದ ನಂತರ, ಸ್ಮಾರ್ಟ್​ಫೋನ್​ನಲ್ಲಿರುವ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಡಾರ್ಕ್ ಮೋಡ್ ಅನ್ನು ಆನ್ ಮಾಡಿದ ನಂತರ, ಇದು ಡಿಸ್ ಪ್ಲೇಯಿಂದ ಹೊರಸೂಸುವ ನೀಲಿ ಬೆಳಕನ್ನು ಕಡಿಮೆ ಮಾಡುತ್ತದೆ. ನೀವು ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿ ಬಳಸದಿದ್ದರೆ, ನೀವು ನಿದ್ದೆಯ ಸಮಸ್ಯೆಯನ್ನು ಕೂಡ ಎದುರಿಸಬಹುದು. ಹೀಗಾಗಿ ನೀವು ಡಾರ್ಕ್ ಮೋಡ್ ಆನ್ ಮಾಡಿ ಫೋನ್ ಯೂಸ್ ಮಾಡೋದು ಒಳ್ಳೆದು..

Shwetha M