ಸೋತರೂ RR ಹೊಗಳಿದ ಶ್ರೇಯಸ್! – ಪರಾಗ್ ಪಡೆಗೆ ಪ್ಲಸ್ ಆಗಿದ್ದೇನು?

ಆರ್ ಆರ್ ವಿರುದ್ಧ ಸೋತ ಮೇಲೆ, ರಾಜಸ್ಥಾನದ ಬ್ಯಾಟ್ಸ್‌ಮನ್‌ಗಳನ್ನು ಶ್ರೇಯಸ್ ಅಯ್ಯರ್ ಹೊಗಳಿದ್ದಾರೆ.. ಐಪಿಎಲ್ ಶುರುವಾಗಿ ಒಂದು ತಿಂಗಳು ಕಳೆದ್ಮೇಲೆ ಪಿಬಿಕೆಎಸ್ ಮೊದಲ ಸೋಲು ಕಂಡಿದೆ. ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ರೂ ಪಂಜಾಬ್‌ನ ಬೌಲಿಂಗ್‌ನಲ್ಲಿ ವೀಕ್ನೆಸ್ ಇರುವುದು ಈ ಮೊದಲೇ ಗೊತ್ತಿತ್ತು.. ಡೆಲ್ಲಿ ವಿರುದ್ಧ ಪಂಜಾಬ್ ಬೌಲರ್‌ಗಳು 264 ರನ್ ಬಿಟ್ಟುಕೊಟ್ಟಿದ್ದರು. ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸ್ಟಾರ್ ಬೌಲರ್ ಅರ್ಶದೀಪ್ ಸಿಂಗ್ ಅತ್ಯಂತ ದುಬಾರಿ ಎನಿಸಿಕೊಂಡಿದ್ದಾರೆ..
ನಮ್ಗೆ ಸೋಲೇ ಇಲ್ಲ.. ನಾವ್ ನಡೆದಿದ್ದೇ ದಾರಿ ಅಂತ ಈ ಸೀಸನ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದ ಪಂಜಾಬ್ ಕಿಂಗ್ಸ್ ಆರ್‌ಆರ್ ವಿರುದ್ಧ ಮುಂಡಿಯೂರಿದೆ. .ಐಪಿಎಲ್ 2026ರಲ್ಲಿ ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೋಲೇ ಇಲ್ಲ ಅಂತ ಬಿಲ್ಡಪ್ ಕೊಡುತ್ತಿದ್ದ ಪಂಜಾಬ್ ಕಿಂಗ್ಸ್‌ಗೆ ರಾಜಸ್ಥಾನ ರಾಯಲ್ಸ್ ಮೊದಲ ಸೋಲಿನ ರುಚಿ ತೋರಿಸಿದೆ. ಚಂಡೀಗಢದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 223 ರನ್‌ಗಳ ಬೃಹತ್ ಗುರಿಯನ್ನು ಮುಟ್ಟಿದ ರಾಜಸ್ಥಾನ್ ರಾಯಲ್ಸ್, ಪಂಜಾಬ್‌ಗೆ ಮೊದಲ ಸೋಲಿನ ಪಂಚ್ ಕೊಟ್ಟಿದೆ. ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದರೆ, ಅಂತಿಮ ಹಂತದಲ್ಲಿ ಡೊನೊವನ್ ಫೆರೆರಾ ಮತ್ತು ಶುಭಂ ದುಬೆ ಅಬ್ಬರದ ಆಟವಾಡಿ 6 ವಿಕೆಟ್‌ಗಳ ಜಯ ತಂದುಕೊಟ್ಟರು.
ಇದನ್ನೂ ಓದಿ: ಮ್ಯಾಚ್ ವೇಳೆ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್‌ಗೆ ಕಾನೂನು ಸಂಕಷ್ಟ! – ಅರೆಸ್ಟ್ ಆಗ್ತಾರಾ RR ಕ್ಯಾಪ್ಟನ್?
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ, ಆರ್‌ಆರ್‌ಗೆ ಬಿಗ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ನೋಡಿದವರು ಈ ಪಂದ್ಯ ಕೂಡ ಪಂಜಾಬ್ ಗೆಲ್ಲುತ್ತೆ ಅನ್ನೋ ಲೆಕ್ಕಾಚಾರ ಹಾಕಿದ್ರು. ಆ ಲೆಕ್ಕಾಚಾರವನ್ನ ರಾಜಸ್ಥಾನ ರಾಯಲ್ಸ್ ಉಲ್ಪಾಪಲ್ಟಾ ಮಾಡ್ತು. ನಮ್ಮ ಯಂಗ್ ಗನ್ ವೈಭವ್ ಸೂರ್ಯವಂಶಿ 16 ಎಸೆತದಲ್ಲಿ 43 ರನ್‌ಗಳಿಸಿ, ಉತ್ತಮ ಆರಂಭ ಒದಗಿಸಿಕೊಟ್ರು, ಯಶಸ್ವಿ ಜೈಸ್ವಾಲ್ ಕೂಡ 27 ಎಸೆತದಲ್ಲಿ 51 ರನ್ ಕಲೆ ಹಾಕಿ ಪಂಜಾಬ್‌ಗೆ ಭಯ ಹುಟ್ಟಿಸಿದ್ರು. ಜಸ್ಟ್ 3 ಓವರ್ ಗಳಲ್ಲಿ ರಾಜಸ್ಥಾನ ಮೊತ್ತ 50 ದಾಟಿತ್ತು. ವೈಭವ್ ಅದಾಗಲೇ 5 ಸಿಕ್ಸರ್ ಸಿಡಿಸಿ ದೊಡ್ಡ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದರು. ಆದೆರ ವೈಭವ್ ಗೆ ಫುಲ್ ಟಾಲ್ ಚೆಂಡೆಸೆದು ದಿಕ್ಕು ತಪ್ಪಿಸಿದ ಅರ್ಶದೀಪ್ ಸಿಂಗ್ ಅವರು ಶ್ರೇಯಸ್ ಅಯ್ಯರ್ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಪಂದ್ಯದಲ್ಲಿ ಹತೋಟಿ ಸಾಧಿಸುವಲ್ಲಿ ಒಂದು ಹಂತಕ್ಕೆ ಪಂಜಾಬ್ ಯಶಸ್ವಿಯಾದರೂ ಅಂತಿಮ ಹಂತದಲ್ಲಿ ಡೊನೊವನ್ ಫೆರೆರಾ 26 ಎಸೆತದಲ್ಲಿ ಅಜೇಯ 52 ರನ್ ಮತ್ತು ಶುಭಂ ದುಬೆ 12 ಎಸೆತದಲ್ಲಿ ಅಜೇಯ 31 ರನ್ ಅಬ್ಬರದ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್ ಬೌಲರ್ ಗಳು ಮಾಡಿದ ಎಲ್ಲಾ ಪ್ರಯತ್ನಗಳೂ ವ್ಯರ್ಥವಾದವು. ಪಂಜಾಬ್ ಪರ ಯುಜುವೇಂದ್ರ ಚಹಲ್ 3 ವಿಕೆಟ್ ಪಡೆದರು. ಡೊನೊವನ್ ಫೆರೆರಾ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಂಜಾಬ್ ಬೌಲಿಂಗ್‌ನಲ್ಲಿ ವಿಕ್ನೇಸ್ ಇದೆ ಅನ್ನೋದು ಈ ಮೂಲಕ ಬೇರೆ ತಂಡಕ್ಕೂ ಗೊತ್ತಾಯ್ತು..
ಪಂಜಾಬ್ ಸೋಲಿಗೆ ಬೌಲರ್ ಕಾರಣ
ಇನ್ನೂ ಪಂಜಾಬ್ ಸೋಲಿಗೆ ಬೌಲಿಂಗ್ ಕಾರಣ ಅಂತ ಸ್ವತಃ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಒಪ್ಪಿಕೊಂಡಿದ್ದಾರೆ. “ನಮ್ಮ ಬೌಲಿಂಗ್‌ನಲ್ಲಿ, ನಿರ್ವಹಣೆಯ ವಿಷಯದಲ್ಲಿ ನಾವು ಸ್ವಲ್ಪ ಎಡವಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಬಹಳಷ್ಟು ಪೇಸ್ ಆಫ್, ಯಾರ್ಕರ್‌ಗಳನ್ನು ಎಸೆಯಲು ಪ್ಲ್ಯಾನ್ ಮಾಡಿದ್ದೇವೆ. ಆದ್ರೆ ಅಲ್ಲಿ ನಾವು ಸ್ವಲ್ಪ ಎಡವಿದ್ದೇವೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಅಷ್ಟೇ ಅಲ್ಲ ರಾಜಸ್ತಾನ್ ರಾಯಲ್ಲ್ ಬ್ಯಾಟ್ಸಮನ್‌ಗಳು ಅತ್ಯತ್ತಮ್ಮವಾಗಿ ಆಟವಾಡಿದ್ರು ಅಂತ ಅಯ್ಯರ್ ಹೊಗಳಿದ್ದಾರೆ.
ಸೋತ್ರು ಪಾಯಿಂಟ್ಸ್ ಟೇಬಲ್‌ನಲ್ಲಿ ಪಂಜಾಬ್ ನಂ.1
ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ರಾಜಸ್ಥಾನ್ ರಾಯಲ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಮೊದಲಾರ್ಧದ 7 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಒಂದೇ ಒಂದು ಪಂದ್ಯ ಸೋತಿರಲಿಲ್ಲ. ಇದೀಗ ದ್ವಿತೀಯಾರ್ಧದ ಮೊದಲ ಮ್ಯಾಚ್ನಲ್ಲೇ ಪಂಜಾಬ್ ಪಡೆ ಸೋತಿದೆ. ಈ ಸೋಲಿನ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
400 + ರನ್.. ಪರ್ಪಲ್ ಕ್ಯಾಪ್ ಪಡೆದ ಸೂರ್ಯವಂಶಿ
ಇನ್ನು ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್‌ನ್ನ ತನ್ನದಾಗಿಸಿಕೊಂಡಿ್ದದಾರೆ. ವೈಭವ್ ಐಪಿಎಲ್ ಇತಿಹಾಸದಲ್ಲಿ ಒಂದೇ ಸೀಸನ್‌ನಲ್ಲಿ 400 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸೀಸನ್‌ನಲ್ಲಿ ಅವರು 167 ಎಸೆತಗಳಲ್ಲಿ 400 ರನ್ ಗಳಿಸಿದರು. ಇದಕ್ಕೂ ಮೊದಲು, ಆಂಡ್ರೆ ರಸೆಲ್ 2019 ರಲ್ಲಿ 188 ಎಸೆತಗಳಲ್ಲಿ 400 ರನ್ ಗಳಿಸಿದರು.. ಒಟ್ನಲ್ಲಿ ಸೋಲೇ ಇಲ್ಲ ಅಂತ ಬಿಲ್ಡಪ್ ಕೊಡುತ್ತಿದ್ದ ಪಂಜಾಬ್‌ಗೆ ರಾಜಸ್ಥಾನ್ ಮೊದಲ ಸೋಲಿನ ರುಚಿಯನ್ನ ತೋರಿಸಿದೆ.

ನೋಡಿರಿ

