ಹರಾಜಿಲ್ಲದೆ ಆಡಿದ ಕೊಹ್ಲಿ & ಎಬಿಡಿ – RCBಯಲ್ಲೇ ಉಳಿದಿದ್ದೇಕೆ ಇಬ್ಬರು ಸ್ಟಾರ್ಸ್?
ಜೀವದ ಗೆಳೆಯರ IPL ಜರ್ನಿ ಹೇಗಿತ್ತು?

ಸಾಲು ಸಾಲು ಟೆಸ್ಟ್ ಸರಣಿಗಳ ನಡುವೆಯೇ 2025ರ ಐಪಿಎಲ್ ಸೀಸಸ್ಗೆ ಬಿಸಿಸಿಐ ಸಿದ್ಧತೆ ಮಾಡಿಕೊಳ್ತಿದೆ. ಇದೇ ತಿಂಗಳ ಅಂತ್ಯದಲ್ಲಿ ಹರಾಜು ಪ್ರಕ್ರಿಯೆಗಳ ನಿಯಮಗಳು ರಿಲೀಸ್ ಆಗೋ ಸಾಧ್ಯತೆ ಕೂಡ ಇದೆ. ಸೋ ಈಗಾಗ್ಲೇ ಫ್ರಾಂಚೈಸಿಗಳಲ್ಲಿ ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಆಟಗಾರರ ಲಿಸ್ಟ್ ಕೂಡ ರೆಡಿಯಾಗಿದೆ. ಆರ್‌ಸಿಬಿ ಕೂಡ 18ನೇ ಸೀಸನ್ಗೆ ಟ್ರೋಫಿ ಗೆದ್ದೇ ಗೆಲ್ಲಬೇಕು ಎಂಬ ಹಠದೊಂದಿಗೆ ಟೀಂ ಸೆಟ್ ಮಾಡ್ತಿದೆ. ಆಕ್ಷನ್ಗೆ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನೂ ಸಿದ್ಧಪಡಿಸಿದೆ. ಬಟ್ ನಿಮ್ಗೊತ್ತಾ 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ಇಬ್ಬರು ಆಟಗಾರರನ್ನ ಬೆಂಗಳೂರು ಫ್ರಾಂಚೈಸಿ ಹರಾಜಿಗೆ ಬಿಟ್ಟಿದ್ದೇ ಇಲ್ಲ. ಅಷ್ಟಕ್ಕೂ ಯಾರು ಆ ಪ್ಲೇಯರ್ಸ್. ಯಾಕೆ ಆಕ್ಷನ್ಗೆ ರಿಲೀಸ್ ಮಾಡಿರಲಿಲ್ಲ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸುದೀಪ್ ಗೆ ಮ್ಯಾಕ್ಸ್ ಟೆನ್ಷನ್! -ಕಿಚ್ಚನಿಗೆ ಕಾಡ್ತಿದೆ ಸಾಲು ಸಾಲು ಚಿಂತೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂಥರಾ ಕಿರೀಟ ಇದ್ದಂತೆ. 17 ವರ್ಷಗಳಿಂದ ಒಮ್ಮೆಯೂ ಕಪ್ ಗೆದ್ದಿಲ್ಲ ಅಂದ್ರೂ ಆರ್‌ಸಿಬಿ ಟೀಮ್ಗೆ ಇರೋ ಕ್ರೇಜ್ ಹತ್ತಿರಕ್ಕೆ ಬರೋಕೂ ಕೂಡ ಬೇರೆ ಯಾವ ತಂಡಕ್ಕೂ ಸಾಧ್ಯ ಆಗಿಲ್ಲ. ಇದೀಗ 18ನೇ ಆವೃತ್ತಿಗೂ ಕೂಡ ಅಷ್ಟೇ ಜಬರ್ದಸ್ತ್ ಆಗಿ ಮೈದಾನಕ್ಕಿಳಿಯೋಕೆ ರೆಡಿಯಾಗಿದೆ. ಯಾರನ್ನ ತಂಡದಲ್ಲೇ ಉಳಿಸಿಕೊಳ್ಬೇಕು ಯಾರಿಗೆ ಗೇಟ್ಪಾಸ್ ಕೊಡ್ಬೇಕು ಅನ್ನೋದು ಕೂಡ ಫೈನಲ್ ಆಗಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಐಪಿಎಲ್ ಹಿಸ್ಟರಿಯಲ್ಲೇ ಈ ಇಬ್ಬರನ್ನ ಹರಾಜಿಗೆ ಬಿಟ್ಟಿಲ್ಲ. ನಂಬರ್ 1 ವಿರಾಟ್ ಕೊಹ್ಲಿ ನಂಬರ್ 2 ಎಬಿ ಡಿವಿಲಿಯರ್ಸ್.
ಕೊಹ್ಲಿ & ಎಬಿಸಿ ಬೆಸ್ಟ್!
ಐಪಿಎಲ್ ಆರಂಭವಾದ 2008ರ ಮೊದಲ ಹರಾಜಿಗೂ ಮುನ್ನವೇ ಆರ್‌ಸಿಬಿ ವಿರಾಟ್ ಕೊಹ್ಲಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಮೂಲ ಬೆಲೆಯಲ್ಲಿ ಖರೀದಿ ಮಾಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಹೀಗಾಗಿ ಅಂದಿನಿಂದ ವಿರಾಟ್ ಕೊಹ್ಲಿ ಎಂದಿಗೂ ಹರಾಜಿನ ಭಾಗವಾಗಿಲ್ಲ. RCB ಫ್ರಾಂಚೈಸಿ ತನ್ನ 17 ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೆ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯನ್ನು ರಿಲೀಸ್ ಮಾಡಿಲ್ಲ. ಕೊಹ್ಲಿ ಕೂಡ ತಂಡಕ್ಕೆ ಅಷ್ಟೇ ನಿಷ್ಠರಾಗಿದ್ದು, ಬೇರೆ ತಂಡಕ್ಕೆ ಹೋಗ್ಬೇಕು ಅನ್ನೋ ಬಗ್ಗೆ ಇಮ್ಯಾಜಿನ್ ಕೂಡ ಮಾಡ್ತಿಲ್ಲ. ಐಪಿಎಲ್ನಲ್ಲಿ ಈವರೆಗೂ 252 ಪಂದ್ಯಗಳನ್ನ ಆಡಿರೋ ವಿರಾಟ್ 8004 ರನ್ ಗಳಿಸಿದ್ದಾರೆ. ಹಾಗೇ ವಿರಾಟ್ ಕೊಹ್ಲಿ ಹೊರತುಪಡಿಸಿ, ಆರ್‌ಸಿಬಿ ಬಿಡುಗಡೆ ಮಾಡದೇ ಇರೋ ಮತ್ತೊಬ್ಬ ಆಟಗಾರ ಎಬಿ ಡಿವಿಲಿಯರ್ಸ್. ಡಿವಿಲಿಯರ್ಸ್ 2011ರಲ್ಲಿ RCBಗೆ ಸೇರ್ಪಡೆಗೊಂಡಿದ್ರು. ಅಂದಿನಿಂದ 10 ವರ್ಷಗಳ ನಿರಂತರವಾಗಿ ಬೆಂಗಳೂರು ತಂಡದಲ್ಲೇ ಉಳಿದಿದ್ರು. 2021ರಲ್ಲಿ IPL ನಿಂದ ನಿವೃತ್ತಿಯಾಗುವವರೆಗೂ RCBಗಾಗಿಯೇ ಮ್ಯಾಚ್ಗಳನ್ನ ಆಡಿದ್ರು. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿಯವ್ರನ್ನ RCB ಕೂಡ ಎಂದಿಗೂ ಬಿಡುಗಡೆ ಮಾಡಲಿಲ್ಲ. ಪ್ರತೀ ಸೀಸನ್ನಲ್ಲೂ ಉಳಿಸಿಕೊಂಡೇ ಬಂದಿತ್ತು. ಐಪಿಎಲ್ನಲ್ಲಿ ನಿವೃತ್ತಿವರೆಗೂ 184 ಪಂದ್ಯಗಳನ್ನ ಆಡಿದ್ದ ಎಬಿಡಿ 3 ಶತಕಗಳು ಸೇರಿದಂತೆ 5,162 ರನ್ ಕಲೆ ಹಾಕಿದ್ದಾರೆ.
ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಅತೀ ಹೆಚ್ಚು ರನ್ ಗಳಿಸಿ ತಂಡದ ಅಗ್ರಮಾನ್ಯ ಆಟಗಾರ ಎನಿಸಿಕೊಂಡಿದ್ದಾರೆ. ಡಿವಿಲಿಯರ್ಸ್ ಕೂಡ ಆರ್‌ಸಿಬಿ ಪರ ಹಲವು ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸದ್ಯ ಐಪಿಎಲ್ನಲ್ಲಿ ಹೈಯೆಸ್ಟ್ ಫ್ಯಾನ್ ಫಾಲೋವರ್ಸ್ ಹೊಂದಿರೋ ವಿರಾಟ್ ಈ ಬಾರಿಯೂ ಬೆಂಗಳೂರು ತಂಡದಲ್ಲೇ ಕಣಕ್ಕಿಳಿಯೋದು ಗ್ಯಾರಂಟಿ. ಹಾಗೇ ಐಪಿಎಲ್ನಿಂದ ನಿವೃತ್ತಿ ಪಡೆದಿದ್ರೂ ಕೂಡ ಡಿವಿಲಿಯರ್ಸ್ ಇಂದಿಗೂ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡ್ತಾರೆ. ಕಳೆದ ಸೀಸನ್ನಲ್ಲೂ ಎಬಿಸಿ ಫೋಟೋ ಹಿಡಿದು ಫ್ಯಾನ್ಸ್ ಮಿಸ್ಸಿಂಗ್ ಅಂತಾ ತಮ್ಮ ಅಭಿಮಾನ ಮೆರೆದಿದ್ರು.