T-20Iನಲ್ಲಿ ಇನ್ನೆಂದೂ ಆಡಲ್ಲ KL – IPL ಸಕ್ಸಸ್ ಭಾರತದ ಪರ ಸಿಗ್ಲಿಲ್ವಾ?
2022ರ ವಿಶ್ವಕಪ್ ವಿಲನ್ ಆಯ್ತಾ?

ನ್ಯೂಜಿಲೆಂಡ್ ವಿರುದ್ಧದ ಟಿ-20ಐ ಸರಣಿ ಮುಗೀತು. ಇನ್ನೇನಿದ್ರೂ ಟಿ-20 ವಿಶ್ವಕಪ್ ಜರ್ನಿ ಸ್ಟಾರ್ಟ್ ಆಗಲಿದೆ. ಚುಟುಕು ಮಾದರಿಯಲ್ಲಿ ಟೀಂ ಇಂಡಿಯಾ ಸಾಲಿಡ್ ಫಾರ್ಮ್ನಲ್ಲಿದ್ದು ಚಾಂಪಿಯನ್ ಪಟ್ಟಕ್ಕೇರೋ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಹೀಗಿದ್ರೂ ಕನ್ನಡಿಗರಿಗೆ ಕೊಂಚ ಬೇಸರ ಇದೆ. ವಿಶ್ವಕಪ್ ಟೀಮ್ನಲ್ಲಿ ಕನ್ನಡಿಗರು ಯಾರು ಇಲ್ಲ ಅನ್ನೋದು. ಇನ್ನೂ ಕೆಲವ್ರು ಕೆಎಲ್ ರಾಹುಲ್ಗೆ ಚಾನ್ಸ್ ಕೊಡ್ಬೋದಿತ್ತು ಅನ್ನೋರೂ ಇದ್ದಾರೆ. ಆದ್ರೆ ಸದ್ಯದ ಪರಿಸ್ಥಿತಿಗಳನ್ನ ನೋಡಿದ್ರೆ ಚುಟುಕು ಮಾದರಿಯಲ್ಲಿ ಇನ್ನೆಂದೂ ಕೂಡ ಭಾರತದ ಜೆರ್ಸಿಯಲ್ಲಿ ರಾಹುಲ್ ಆಡೋದು ಅಸಾಧ್ಯ ಅನ್ನಿಸುತ್ತೆ.
ಇದನ್ನೂ ಓದಿ : WPLನಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿ ಪ್ಲೇಆಫ್ಗೇರಿದ ಗುಜರಾತ್ ಜೈಂಟ್ಸ್
ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಭಾರತದ ಆಪತ್ಬಾಂಧವನಾಗಿರೋ ಕೆಎಲ್ ರಾಹುಲ್ಗೆ ಟಿ-20ಐ ಮಾದರಿಯಲ್ಲಿ ಬಾಗಿಲು ಬಂದ್ ಆಗಿದೆ. ಕಳೆದ ವರ್ಷ ಇಂಟರ್ವ್ಯೂನಲ್ಲಿ ನಾನು ಟಿ-20ಐ ತಂಡಕ್ಕೆ ಕಂ ಬ್ಯಾಕ್ ಮಾಡೋ ಆಸೆ ಇದೆ ಅಂತಾ ರಾಹುಲ್ ಅವ್ರೇ ಅಂದಿದ್ರು. ಆದ್ರೆ 2024ರ ತಂಡದಲ್ಲೇ ಅವಕಾಶ ಮಿಸ್ ಮಾಡ್ಕೊಂಡಿದ್ದ ರಾಹುಲ್ ಈ ವರ್ಷದ ಟಿ-20 ವಿಶ್ವಕಪ್ ರೇಸ್ನಲ್ಲಿ ಅವ್ರ ಹೆಸ್ರೇ ಇರ್ಲಿಲ್ಲ. ಯಾಕಂದ್ರೆ ಆಯ್ಕೆದಾರರು ಆಲ್ರೆಡಿ ರಾಹುಲ್ ಹೆಸರನ್ನ ಲಿಸ್ಟ್ನಿಂದಲೇ ತೆಗೆದಿದ್ದಾರೆ. ಌಕ್ಚುಲಿ 2022ರಿಂದ ಈಚೆಗೆ ರಾಹುಲ್ಗೆ ಟೀಂ ಇಂಡಿಯಾ ಟಿ-20ಐನಲ್ಲಿ ಚಾನ್ಸೇ ಸಿಕ್ಕಿಲ್ಲ.
2022ರ ಟಿ-20 ವಿಶ್ವಕಪ್ ಕಳಪೆ ಪ್ರದರ್ಶನವೇ ಮುಖ್ಯ ಕಾರಣ!
ಌಕ್ಚುಲಿ ಐಪಿಎಲ್ನಲ್ಲಿ ರಾಹುಲ್ ಡಿಫ್ರೆಂಟ್ ಆಗಿ ಕಂಡ್ರೂ ಭಾರತ ತಂಡದಲ್ಲಿ ಅವ್ರ ಪರ್ಫಾಮೆನ್ಸ್ ಅಗ್ರೆಸ್ಸಿವ್ ಆಗಿಲ್ಲ. ಅದ್ರಲ್ಲೂ 2022ರ ಟಿ-20 ವಿಶ್ವಕಪ್ನಲ್ಲಿ ಅವ್ರ ಪ್ರದರ್ಶನ ತೀರಾ ಕಳಪೆಯಾಗಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20ಐ ತಂಡದಲ್ಲಿ ಅವಕಾಶ ಪಡೆದಿದ್ದ ರಾಹುಲ್ ಟೂರ್ನಿಯುದ್ದಕ್ಕೂ ಕಳಪೆ ಫಾರ್ಮ್ನಲ್ಲಿದ್ರು. ಪಂದ್ಯಾವಳಿಯಲ್ಲಿ 21.33 ಸರಾಸರಿ ಮತ್ತು 120.75 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 128 ರನ್‌ಗಳನ್ನು ಗಳಿಸಿದ್ದರು. ಇದು ಆಯ್ಕೆದಾರರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಮುಂದೆ ಟಿ-20ಐ ತಂಡದಿಂದಲೇ ರಾಹುಲ್ರನ್ನ ಕೈಬಿಡಲಾಯ್ತು. ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಬಳಿಕ ರಾಹುಲ್ಗೆ ಮತ್ತೆ ಚಾನ್ಸ್ ಸಿಕ್ಕೇ ಇಲ್ಲ. ಈ ಪಂದ್ಯದಲ್ಲಿ 5 ಬಾಲ್ಗಳನ್ನ ಫೇಸ್ ಮಾಡಿದ್ದ ರಾಹುಲ್ 5 ರನ್ ಗಳಿಸಿ ಔಟ್ ಆಗಿದ್ರು.
ಐಪಿಎಲ್ ನಲ್ಲಿ ಸದ್ದು ಮಾಡಿದ್ರೂ ಟಿ-20ಐನಲ್ಲಿ ವೀಕ್!
ಇನ್ನು ಐಪಿಎಲ್ ಅಂತಾ ಬಂದಾಗ ಕೆಎಲ್ ರಾಹುಲ್ ಒನ್ ಆಫ್ ದಿ ಸ್ಟಾರ್ ಪ್ಲೇಯರ್. ಯಾವುದೇ ಫ್ರಾಂಚೈಸಿ ಪರ ಆಡಿದ್ರೂ ಅದ್ಭುತ ಪ್ರದರ್ಶನ ನೀಡ್ತಾ ಬಂದಿದ್ದಾರೆ. ಹಾಗೇ ಐಪಿಎಲ್ನಲ್ಲಿ 145 ಪದ್ಯಗಳಿಂದ 5,222 ರನ್ಸ್ ಕಲೆ ಹಾಕಿದ್ದಾರೆ. ಹಾಗೇ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡ್ತಾ ಬಂದಿದ್ದಾರೆ. 2018ರ ಬಳಿಕ ಅಂದ್ರೆ ಕಳೆದ 7 ಸೀಸನ್ಗಳಲ್ಲಿ 5 ಸಲ 500ಕ್ಕಿಂತ ಹೆಚ್ಚಿನ ಸ್ಕೋರ್ ಮಾಡಿದ್ದಾರೆ. 4 ಸಲ 600+ ರನ್ಸ್ ಬಂದಿದೆ. 5 ಸೆಂಚುರಿ ಬಾರಿಸಿದ್ದು 132 ರನ್ ಗಳಿಸಿ ಅಜೇಯರಾಗಿ ಉಳಿದಿರೋದು ಅವ್ರ ಸಾಧನೆಯಾಗಿದೆ. ಌಂಡ್ 2020ರಲ್ಲಿ 670 ರನ್ ಗಳಿಸಿ ಆರೆಂಜ್ ಕ್ಯಾಪ್ ವಿನ್ನರ್ ಕೂಡ ಆಗಿದ್ರು. ಪಂಜಾಬ್ ಮತ್ತು ಲಕ್ನೋ ಕ್ಯಾಪ್ಟನ್ ಆಗಿಯೂ ತಂಡವನ್ನ ಲೀಡ್ ಮಾಡಿದ್ದು ಹೆಚ್ಚು ಅನುಭವ ಹೊಂದಿದ್ದಾರೆ. ಇನ್ನು ಐಪಿಎಲ್ನಲ್ಲಿ ಜಾಯಿಂಟ್ ಫಾಸ್ಟೆಸ್ಟ್ ಫಿಫ್ಟಿಯಲ್ಲಿ ರಾಹುಲ್ ಕೂಡ ಇದ್ದಾರೆ. 14 ಬಾಲಲ್ಲಿ ಅರ್ಧಶತಕದ ದಾಖಲೆ ಮಾಡಿದ್ದಾರೆ. 2025ರಲ್ಲಿ ಡೆಲ್ಲಿ ಪರವೂ ಅಂಥದ್ದೇ ಪ್ರದರ್ಶನ ಬಂದಿದೆ. 13 ಇನ್ನಿಂಗ್ಸ್‌ಗಳಲ್ಲಿ 149.72 ರ ಸ್ಟ್ರೈಕ್ ರೇಟ್‌ನಲ್ಲಿ 539 ರನ್ ಗಳಿಸುವ ಮೂಲಕ ಟಾಪ್ ಸ್ಕೋರರ್ ಆಗಿದ್ದಾರೆ. ಈ ನಂಬರ್ಗಳನ್ನ ನೋಡಿದಾಗ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಪರ್ಫಾಮೆನ್ಸ್ ವರ್ಷದಿಂದ ವರ್ಷಕ್ಕೆ ಇಂಪ್ರೂವ್ ಆಗ್ತಾನೇ ಇದೆ. ಆದ್ರೆ ಟಿ-20ಐ ಅಂತಾ ಬಂದಾಗ ಅಷ್ಟೊಂದು ಇಂಪ್ರೆಸ್ಸಿವ್ ಆಗಿಲ್ಲ. ಅದೂ ಅಲ್ದೇ T20I ಸೆಟಪ್‌ನಲ್ಲಿ ರೇಸ್ ತುಂಬಾನೇ ಇದೆ. ವಿಕೆಟ್-ಕೀಪರ್-ಬ್ಯಾಟ್ಸ್ಮನ್ಗಳಾಗಿ ಸಂಜು ಸ್ಯಾಮ್ಸನ್ ಮತ್ತು ಈಗ ಇಶಾನ್ ಕಿಶನ್ ಫಸ್ಟ್ ಪ್ರಿಯಾರಿಟಿ ಪ್ಲೇಯರ್ಗಳಾಗಿದೆ. ಇಂಥಾ ಟೈಮಲ್ಲಿ ರಾಹುಲ್ಗೆ ಮುಂದಿನ ದಿನಗಳಲ್ಲಿ ಚಾನ್ಸ್ ಸಿಗೋದು ಕಷ್ಟವೇ ಇದೆ.
ಒಟ್ಟಾರೆ ಟಿ-20ಐ ಫಾರ್ಮೆಟ್ನಲ್ಲಿ 72 ಪಂದ್ಯಗಳ 68 ಇನ್ನಿಂಗ್ಸ್ಗಳನ್ನ ಆಡಿರೋ ರಾಹುಲ್ 2,265 ರನ್ಸ್ ಕಲೆ ಹಾಕಿದ್ದಾರೆ. 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 110 ರನ್ಸ್ ಗಳಿಸಿ ಅಜೇಯರಾಗಿ ಉಳಿದಿರೋದೇ ಹೈಯೆಸ್ಟ್ ಸ್ಕೋರ್ ಆಗಿದೆ. 2 ಶತಕ 24 ಅರ್ಧಶತಕ ಅವ್ರ ಹೆಸ್ರಲ್ಲಿದೆ. 33 ವರ್ಷದ ರಾಹುಲ್ ಇನ್ಮುಂದೆ ಟಿ-20ಐಗೆ ಕಂ ಬ್ಯಾಕ್ ಮಾಡೋದು ಕಷ್ಟ ಸಾಧ್ಯ. ಏಕದಿನ ಮತ್ತು ಟೆಸ್ಟ್ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಡ್ಬೇಕು ಅಷ್ಟೇ.

ನೋಡಿರಿ

