ವಿಶ್ವಕಪ್ ಫೈನಲ್‌ಗೆ ಈ ರೀತಿ ಪಿಚ್ ಬೇಕಿತ್ತಾ? –ಬ್ಯಾಟ್ ಬೀಸಲು ಒದ್ದಾಡಿದ ಭಾರತದ ದಿಗ್ಗಜ ಬ್ಯಾಟರ್‌ಗಳು

ವಿಶ್ವಕಪ್ ಫೈನಲ್‌ಗೆ ಈ ರೀತಿ ಪಿಚ್ ಬೇಕಿತ್ತಾ? –ಬ್ಯಾಟ್ ಬೀಸಲು ಒದ್ದಾಡಿದ ಭಾರತದ ದಿಗ್ಗಜ ಬ್ಯಾಟರ್‌ಗಳು

ಸ್ಕೋರ್‌ ಎಷ್ಟೇ ಆದ್ರೂ ಭಾರತ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸ ಭಾರತೀಯ ಕ್ರಿಕೆಟ್‌ ಪ್ರೇಮಿಗಳಲ್ಲಿದೆ.. ಆದರೆ ಕೇವಲ 240 ರನ್‌ ಮಾತ್ರ ಗಳಿಸೋದಿಕ್ಕೆ ಸಾಧ್ಯವಾಗಿದ್ದಕ್ಕೆ ಅಭಿಮಾನಿಗಳಲ್ಲಿ ಬೇಸರವಿದೆ.. ವಿಶ್ವದ ಅತಿದೊಡ್ಡ ಸ್ಟೇಡಿಯಂನಲ್ಲಿ ನಡೀತಿದ್ದ ಫೈನಲ್‌ನಲ್ಲಿ ಭಾರತ ಅತಿಹೆಚ್ಚಿನ ಸ್ಕೋರ್‌ ಸೆಟ್‌ ಮಾಡಬಹುದು ಎಂಬ ನಿರೀಕ್ಷೆಯಿತ್ತು.. ಆದ್ರೆ ಭಾರತದ ಇನ್ನಿಂಗ್ಸ್‌ ನೋಡಿದ ಪ್ರತಿಯೊಬ್ಬರೂ ಫೈನಲ್‌ಗೆ ಇಂಥಾ ಪಿಚ್‌ ರೆಡಿ ಮಾಡ್ತಾರಾ ಎಂದು ಹಿಡಿಶಾಪ ಹಾಕ್ತಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್‌ನಲ್ಲಿ 240 ರನ್‌ಗಳಿಗೆ ಟೀಮ್ ಇಂಡಿಯಾ ಆಲೌಟ್ –ಕಾಂಗರೂಗಳನ್ನು ಕಟ್ಟಿ ಹಾಕ್ತಾರಾ ಭಾರತದ ಬೌಲರ್ಸ್?

ನರೇಂದ್ರ ಮೋದಿ ಸ್ಟೇಡಿಯಂ ಈಗ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ.. ಅದರಲ್ಲೂ ವಿಶ್ವಕಪ್‌ ಕ್ರಿಕೆಟ್‌ನ ಫೈನಲ್‌ ಮ್ಯಾಚ್‌ ಆಡಿಸಲು ಹೇಳಿ ಮಾಡಿಸಿದಂತಿರುವ ಸ್ಟೇಡಿಯಂ.. ಯಾಕಂದ್ರೆ ಒಂದು ಲಕ್ಷದ 35 ಸಾವಿರದಷ್ಟು ಜನ ಏಕಕಾಲದಲ್ಲಿ ಕುಳಿತು ಮ್ಯಾಚ್‌ ನೋಡಲು ಸಾಧ್ಯವಾಗುತ್ತದೆ.. ಇದುವರೆಗೆ ನಡೆದ ವರ್ಲ್ಡ್‌ಕಪ್‌ ಕ್ರಿಕೆಟ್‌ನ ಫೈನಲ್‌ನ ಇತಿಹಾಸದಲ್ಲಿ 2023ರ ಫೈನಲ್‌ ಅತಿಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಪಂದ್ಯ ಎಂದು ದಾಖಲೆ ಬರೆದಿದೆ.. ಆದರೆ ಇಂತಾ ಮ್ಯಾಚ್‌ಗೆ ಇಂತಾ ಪಿಚ್ ಎಂಬ ಪ್ರಶ್ನೆ ಎದುರಾಗಿದೆ.. ಇಂತಾ ಸ್ಟೇಡಿಯಂ ಇದ್ದರೇನು? ಲಕ್ಷಕ್ಕೂ ಹೆಚ್ಚು ಜನ ಕುಳಿತು ನೋಡೋದಿಕ್ಕೆ ಸೀಟ್‌ ವ್ಯವಸ್ಥೆ ಮಾಡಿದ್ರೆ ಪ್ರಯೋಜನವೇನು? ಆಡೋದಿಕ್ಕೆ ಪಿಚ್‌ ಕೂಡ ಅಷ್ಟೇ ಚೆನ್ನಾಗಿ ಬೇಕಲ್ವಾ ಅಂತ ಕ್ರಿಕೆಟ್‌ ಅಭಿಮಾನಿಗಳು ಪ್ರಶ್ನೆ ಮಾಡುವಂತಾಗಿದೆ.. ಯಾಕಂದ್ರೆ ಫೈನಲ್‌ ಮ್ಯಾಚ್‌ ಅಂದ್ಮೇಲೆ 300 ಪ್ಲಸ್‌ ರನ್‌ ಹರಿದುಬರುತ್ತೆ ಎಂಬ ನಿರೀಕ್ಷೆ ಇದ್ದೇ ಇರುತ್ತೆ.. ಆದ್ರೆ ಇಲ್ಲಿ ನೋಡಿದ್ರೆ 300 ಹೋಗ್ಲಿ.. ಇನ್ನೂರು ರನ್‌ ದಾಟಿದ್ದೇ ಜಾಸ್ತಿ ಎಂಬಂತೆ ಬ್ಯಾಟ್ಸ್‌ಮನ್‌ಗಳು ಇವತ್ತು ಕ್ರಿಕೆಟ್‌ ಮೈದಾನದಲ್ಲಿ ಪರದಾಡುವಂತಾಗಿತ್ತು.. ವಿರಾಟ್‌ ಕೊಹ್ಲಿ.. ರೋಹಿತ್‌ ಶರ್ಮಾ.. ಕೆ.ಎಲ್‌.ರಾಹುಲ್‌ರಂತಹ ವಿಶ್ವಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಇರುವ ತಂಡ ಫೈನಲ್‌ನಲ್ಲಿ ಒದ್ದಾಡುತ್ತಾ ಬ್ಯಾಟ್‌ ಬೀಸುವಂತಾಗಿದ್ದು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ..

ಆಸ್ಟ್ರೇಲಿಯಾ ಟಾಸ್‌ ಸೋತ್ರೂ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.. ಅಹಮದಾಬಾದ್‌ ಪಿಚ್‌ ಅನ್ನು ಎಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ಆಸ್ಟ್ರೇಲಿಯಾ ಕ್ಯಾಫ್ಟನ್‌ ಪ್ಯಾಟ್‌ ಕಮಿನ್ಸ್‌ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಈ ಪಿಚ್‌ನಲ್ಲಿ ಬಾಲ್‌ ಎದ್ದೇಳೋದಿಲ್ಲ.. ಸ್ಲೋ ಬೌನ್ಸ್‌ ಡೆಡ್ಲಿ ಆಗುತ್ತೆ.. ಪ್ಲ್ಯಾನ್‌ ಪ್ರಕಾರ ಬೌಲಿಂಗ್‌ ಮಾಡ್ತಾ ಹೋದ್ರೆ 200ರ ಆಸುಪಾಸಿನಲ್ಲಿ ಭಾರತವನ್ನು ಕಟ್ಟಿಹಾಕಬಹುದು.. ನಂತರ ಡ್ಯೂ ಫ್ಯಾಕ್ಟರ್‌ ನೆರವಿಗೆ ಬಂದರೆ ಆಗ ಭಾರತದ ಬೌಲರ್‌ಗಳಿಗೂ ಬಾಲ್‌ ಮೇಲಿನ ಹಿಡಿತ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ ಹಾಕಿಯೇ ಪ್ಯಾಟ್‌ ಕಮಿನ್ಸ್‌ ಮೊದಲು ಬೌಲಿಂಗ್‌ ಮಾಡುವ ನಿರ್ಧಾರಕ್ಕೆ ಬಂದಿದ್ದರು.. ಹಾಗಿದ್ದರೂ ರೋಹಿತ್‌ ಶರ್ಮಾ ಅಂಜಿರಲಿಲ್ಲ.. ಎಂದಿನಂತೆ ಎದುರಿಗೆ ಬಂದ ಬಾಲ್‌ಗೆ ಹೊಡೆಯೋದಕ್ಕಷ್ಟೇ ಕೈಯಲ್ಲಿ ಬ್ಯಾಟ್‌ ಇರೋದು ಎಂಬ ತೀರ್ಮಾನಕ್ಕೆ ರೋಹಿತ್ ಬಂದಿದ್ದರು.. ಸೆಮಿಫೈನಲ್‌ ಮ್ಯಾಚ್‌ನಲ್ಲಿ ಹೇಗೆ ಹೊಡಿ ಬಡಿ ಆಟಕ್ಕೆ ಕೈಹಾಕಿದ್ದರೋ.. ಅದೇ ಸ್ವರೂಪದಲ್ಲಿ ಪೈನಲ್‌ ಪಂದ್ಯದ ಮೊದಲ  ಓವರ್‌ನಲ್ಲೇ ಹೊಡೆಯುವ ಮುನ್ಸೂಚನೆ ರೋಹಿತ್‌ ನೀಡಿದ್ದರು.. ಪಂದ್ಯದ ಎರಡನೇ ಬಾಲ್‌ ಅನ್ನು ಲಾಂಗ್‌ ಆನ್‌ ಕಡೆಗೆ ಹೊಡೆದಾಗ್ಲೇ ರೋಹಿತ್‌ ಉದ್ದೇಶ ಅರ್ಥವಾಗಿತ್ತು.. ಆದ್ರೆ ಆಸ್ಟ್ರೇಲಿಯಾದ ಪೀಲ್ಡಿಂಗ್‌ ಅಲ್ಟಿಮೇಟ್‌ ಆಗಿತ್ತು.. ಇದ್ರಿಂದಾಗಿ ಅದು ಬೌಂಡರಿಯಾಗಿ ಕನ್ವರ್ಟ್‌ ಆಗಿರಲಿಲ್ಲ.. ಅಲ್ಲಿಗೆ ಆಸ್ಟ್ರೇಲಿಯಾ ಕೂಡ ಬೌಲಿಂಗ್‌ ಮಾತ್ರವಲ್ಲ ಫೀಲ್ಡಿಂಗ್‌ ಬಲದಿಂದಲೂ ಭಾರತವನ್ನು ಕಟ್ಟಿಹಾಕುವ ಮುನ್ಸೂಚನೆ ಕೊಟ್ಟಿತ್ತು.. ಹೀಗೆ ಜಿದ್ದಾಜಿದ್ದಿ ಶುರುವಾಗಿದ್ದಾಗಲೇ ಭರವಸೆಯ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟಾಗುವುದರಿಂದ ಸ್ವಲ್ಪದರಲ್ಲೇ ಬಚಾವಾಗಿದ್ದರು.. ಹೀಗಾಗಿ ಅಪಾಯದ ಮುನ್ಸೂಚನೆ ಗಿಲ್‌ ಕಡೆಯಿಂದ ಸಿಕ್ಕಿಬಿಟ್ಟಿತ್ತು.. ಅದರಂತೆಯೇ ಗಿಲ್‌ ದೊಡ್ಡ ಇನ್ನಿಂಗ್ಸ್‌ ಕಟ್ಟಲಿಲ್ಲ.. ತಂಡದ ಸ್ಕೋರ್‌ 30 ತಲುಪುವಾಗ ಕೆಟ್ಟ ಶಾಟ್‌ಗೆ ಕೈಹಾಕಿ ಔಟಾದ್ರು.. ಹಾಗಿದ್ದರೂ ನಾಯಕ ರೋಹಿತ್‌ ಶರ್ಮಾ ತಾನಿರೋದೇ ಹಿಟ್‌ ಮಾಡಲು ಎನ್ನುವ ಗುರಿಯಿಂದ ಹಿಂದೆ ಸರಿದಿರಲಿಲ್ಲ.. ತಂಡದ ಸ್ಕೋರ್‌ ರಾಕೆಟ್‌ ವೇಗದಲ್ಲಿ ಮೇಲಕ್ಕೆ ಹೋಗುವಂತೆ ಆಟವಾಡುತ್ತಲೇ ಸಾಗಿದ್ದರು.. ಮೂರು ಭರ್ಜರಿ ಸಿಕ್ಸರ್‌ ಸಿಡಿಸಿದ ರೋಹಿತ್‌, ಅರ್ಧಶತಕದ ಅಂಚಿಗೆ ತಲುಪಿದ್ದರು.. ನಿಜಕ್ಕೂ ಅದು ರೋಹಿತ್‌ ಔಟಾಗುವಂತಹ ಶಾಟ್‌ ಆಗಿರಲಿಲ್ಲ… ನಮ್‌ ಜನರೇಷನ್‌ನವರು 1983 ವರ್ಲ್ಡ್‌ ಕಪ್‌ ಫೈನಲ್‌ ನೋಡಿಲ್ಲ.. ಆದ್ರೆ ಆ ಫೈನಲ್‌ನಲ್ಲಿ ಹಿಮ್ಮುಖವಾಗಿ ಓಡಿ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ವಿವಿಯನ್‌ ರಿಚರ್ಡ್ಸ್‌ ಕ್ಯಾಚ್‌ ಪಡೆಯುವ ಮೂಲಕ ಅಂದು ಟೀಂ ಇಂಡಿಯಾದ ಕ್ಯಾಫ್ಟನ್‌ ಕಪಿಲ್‌ ದೇವ್‌, ಭಾರತ ಕಪ್‌ ಗೆಲ್ಲುವಂತೆ ಮಾಡಿದ್ದರು.. ಬಹುತೇಕ ಅದೇ ಶೈಲಿಯಲ್ಲಿ ಇಂದು ಕ್ಯಾಚ್‌ ಹಿಡಿದಿದ್ದು ಟ್ರಾವಿಸ್‌ ಹೆಡ್‌.. ಹೆಡ್‌ ಹಿಡಿದ ಕ್ಯಾಚ್‌ನಿಂದ ಭಾರತದ ಕ್ಯಾಪ್ಟನ್‌ ಪೆವಿಲಿಯನ್‌ಗೆ ಮರಳಬೇಕಾಯಿತು.. ಅಷ್ಟೇ ಅಲ್ಲ.. ಭಾರತದ ಇನ್ನಿಂಗ್ಸ್‌ ವೇಗಕ್ಕೂ ಅಲ್ಲಿಂದ ನಂತರ ಬಿದ್ದ ಬ್ರೇಕ್‌ ರಿಲೀಸ್‌ ಆಗಲೇ ಇಲ್ಲ.. ಇಡೀ ಇನ್ನಿಂಗ್ಸ್‌ನಲ್ಲಿ ರೋಹಿತ್‌ ಶರ್ಮಾ ಬಿಟ್ರೆ ಬೇರೆ ಯಾರೂ ಸಿಕ್ಸ್‌ ಹೊಡೆಯಲು ಸಾಧ್ಯವಾಗಿಲ್ಲ.. ಹಾಗಿದ್ದರೂ ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌.ರಾಹುಲ್‌ ಅತ್ಯಂತ ನಿರ್ಣಾಯಕ ಮತ್ತು ಜವಾಬ್ದಾರಿಯುತ ಆಟ ಆಡಿದ್ದಾರೆ.. ಕೊಹ್ಲಿ ಹಾಗೂ ರಾಹುಲ್‌ ಸ್ಲೋ ಆಗಿ ಆಡೋದ್ರ ಮೂಲಕ ಮೋದಿ ಸ್ಟೇಡಿಯಂನ ಪಿಚ್‌ ಹೇಗೆ ಕಾಟ ಕೊಡ್ತಿದೆ ಎನ್ನುವುದನ್ನೂ ತೋರಿಸಿದ್ದಾರೆ.. ಇಡೀ ವಿಶ್ವಕಪ್‌ ಟೂರ್ನಮೆಂಟ್‌ನಲ್ಲಿ ಭಾರತ ಯಾವುದೇ ಮ್ಯಾಚ್‌ ಸೋತಿಲ್ಲ.. ಒಂದಾದ ಮೇಲೊಂದರಂತೆ ಗೆಲುವು ಸಾಧಿಸುತ್ತಾ ಬಂದಿತ್ತು.. ಈಗ ಫೈನಲ್‌ ಮ್ಯಾಚ್‌ನ ಫೈನಲ್‌ ಇನ್ನಿಂಗ್ಸ್‌ನಲ್ಲಿ ಭಾರತ ಬಿಗ್‌ ಸ್ಕೋರ್‌ ಮಾಡಲು ವಿಫಲವಾಗಿದೆ.. ಆದರೆ ಈಗಿರುವ ಸ್ಕೋರ್‌ ಅನ್ನು ಡಿಫೆಂಡ್‌ ಮಾಡಿಕೊಳ್ಳುತ್ತಾ ಎನ್ನುವುದಷ್ಟೇ ಈಗ ಉಳಿದಿರುವ ಕುತೂಹಲ.. ಆದ್ರೆ ಆಸ್ಟ್ರೆಲಿಯಾ ಬ್ಯಾಟ್ಸ್‌ಮನ್‌ಗಳನ್ನು ಫೈನಲ್‌ನಲ್ಲಿ ಸುಲಭವಾಗಿ ಅಂದಾಜಿಸೋದೂ ಕಷ್ಟ.. ಭಾರತದ ಬೌಲರ್‌ಗಳಿಗೆ 240 ರನ್‌ಗಳನ್ನು ಡಿಫೆಂಡ್‌ ಮಾಡ್ಕೊಳ್ಳೋದು ಸವಾಲಾಗಿದೆ.. ಆದ್ರೆ ಶಮಿ ಮೊದಲ ಬ್ರೇಕ್‌ ಕೊಡೋದ್ರ ಮೂಲಕ ಭಾರತದ ವಿಶ್ವಾಸವನ್ನು ಹೆಚ್ಚಿಸಿದ್ದಾರೆ.. ಭಾರತ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ..

Sulekha