ಟಾಕ್ಸಿಕ್ ಸಿನಿಮಾ ವಯಸ್ಕರಿಗೆ ಮಾತ್ರ ಯಾಕೆ? – ಮಕ್ಕಳನ್ನು ಕರೆತರಲೇಬೇಡಿ ಎಂದಿದ್ಯಾಕೆ ನಿರ್ಮಾಪಕರು

ಟಾಕ್ಸಿಕ್ ಸಿನಿಮಾ ವಯಸ್ಕರಿಗೆ ಮಾತ್ರ ಯಾಕೆ? – ಮಕ್ಕಳನ್ನು ಕರೆತರಲೇಬೇಡಿ ಎಂದಿದ್ಯಾಕೆ ನಿರ್ಮಾಪಕರು

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ವಯಸ್ಕರಿಗಾಗಿ ಮಾತ್ರ ಯಾಕೆ ಎಂಬ ವಿಚಾರದಲ್ಲಿ ಕುತೂಹಲ ಗರಿಗೆದರಿದೆ. ಆದರೆ, ಚಿತ್ರದ ನಿರ್ಮಾಪಕ ಕೆವಿಎನ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಶೀರ್ಷಿಕೆಯಲ್ಲಿರುವ ‘ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಬಗ್ಗೆ ಮಾತಾಡಿದ್ದಾರೆ ನಿರ್ಮಾಪಕರು.

ಇದನ್ನೂ ಓದಿ:ಮಿಸ್ಟರ್ ಬೀಸ್ಟ್ ಮದುವೆ ನಡೆದಿದ್ದು ಎಲ್ಲಿ ಗೊತ್ತಾ? – ಗೆಳತಿ ಜೊತೆ ವಿವಾಹವಾದ ವಿಶ್ವದ ಶ್ರೀಮಂತ ಯೂಟ್ಯೂಬರ್

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಸಿನಿಮಾ ರಿಲೀಸ್‌ಗೆ ಯಶ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್, ಸಾಂಗ್, ಅಭಿಮಾನಿಗಳ ಮನಗೆದ್ದಿದೆ. ಇದರ ಮಧ್ಯೆ ಟಾಕ್ಸಿಕ್ ಸಿನಿಮಾ ವಯಸ್ಕರಿಗಾಗಿ ಮಾತ್ರ ಯಾಕೆ ಎಂಬ ವಿಚಾರದ ಬಗ್ಗೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ. ಇದೀಗ ಸಿನಿಮಾದ ನಿರ್ಮಾಪಕ ವೆಂಕಟ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

‘ಸಿನಿಮಾದ ಬಗ್ಗೆ ನಾವು ಪೋಸ್ಟರ್​ನಲ್ಲೇ ಹೇಳಿಬಿಟ್ಟಿದ್ದೀವಿ, ಇದು ದೊಡ್ಡವರಿಗೆ ಹೇಳುವ ಕತೆ, ಫೇರಿಟೇಲ್ ಫಾರ್ ಗ್ರೋನ್ ಅಪ್ಸ್  ನಾವೇ ಹೇಳುತ್ತಿದ್ದೀವಿ. ಇದು ವಯಸ್ಕರಿಗೆ ಮಾತ್ರ. ಮಕ್ಕಳಿಗೆ ಅಲ್ಲ. ಇದು ದೊಡ್ಡವರಿಗಾಗಿಯೇ ಮಾಡಲಾಗಿರುವ ಸಿನಿಮಾ ಎಂದು ವೆಂಕಟ್ ಅವರು ಹೇಳಿದ್ದಾರೆ. ಟಾಕ್ಸಿಕ್ ಬಹಳ ಮಹತ್ವಾಕಾಂಕ್ಷೆಯ ಸಿನಿಮಾ, ಈ ಚಿತ್ರದ ಅದ್ಧೂರಿತನ ಬಲು ಭಿನ್ನ, ಸಿನಿಮಾನಲ್ಲಿ ಕತೆ ಹೇಳಿರುವ ವಿಧಾನವೂ ಭಿನ್ನ, ಸಿನಿಮಾ ಬಿಡುಗಡೆ ಆಗಿ, ಸ್ಕ್ರೀನ್​​ ಮೇಲೆ ಜನ ನೋಡಿದಾಗ ಖಂಡಿತ ಅವರಿಗೆ ಇಷ್ಟವಾಗುತ್ತದೆ. ಅವರು ನಮ್ಮ ಶ್ರಮವನ್ನು ಮೆಚ್ಚಿಕೊಳ್ಳುತ್ತಾರೆ, ಅವರಿಗೆ ಹೊಸ ಅನುಭವ ಸಿಗಲಿದೆ ಎಂಬ ಬಗ್ಗೆ ಸಂಪೂರ್ಣ ನಂಬಿಕೆ ನನಗೆ ಇದೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಕಂಟೆಂಟ್, ಕೇವಲ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಎಕ್ಸೈಟ್​​ಮೆಂಟ್ ಬರಲೆಂದು ಮಾತ್ರ, ಸಿನಿಮಾನಲ್ಲಿ ಸಾಕಷ್ಟು ಭಿನ್ನ ವಿಷಯಗಳು ಇವೆ’ ಎಂದಿದ್ದಾರೆ ಕೆವಿಎನ್ ವೆಂಕಟ್.

‘ಟಾಕ್ಸಿಕ್ ಸಿನಿಮಾವನ್ನು ಬಲು ಅದ್ಧೂರಿಯಾಗಿ ಕೆವಿಎನ್ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಜೊತೆಗೆ ಯಶ್ ಅವರು ಸಹ ನಿರ್ಮಾಪಕ ಆಗಿದ್ದಾರೆ. ಈ ವರೆಗೆ ಕೆವಿಎನ್ ನಿರ್ಮಾಣ ಮಾಡಿರುವ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಬಜೆಟ್​​ನ ಸಿನಿಮಾ ಟಾಕ್ಸಿಕ್. ಈ ಸಿನಿಮಾಕ್ಕೆ ಸುಮಾರು 500 ಕೋಟಿ ಬಜೆಟ್ ಹೂಡಲಾಗಿದೆಯಂತೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ.

Sulekha

Leave a Reply

Your email address will not be published. Required fields are marked *