ಡಿಸಿ ವಿರುದ್ಧದ ಪಂದ್ಯ ಕೆ.ಎಲ್ ರಾಹುಲ್ ಪಾಲಿಗೆ ಮಹತ್ವ ಯಾಕೆ? – ಲಕ್ನೋ ಮಾಲೀಕರ ವಿರುದ್ಧ ಕನ್ನಡಿಗನ ಹಠ?

ಡಿಸಿ ವಿರುದ್ಧದ ಪಂದ್ಯ ಕೆ.ಎಲ್ ರಾಹುಲ್ ಪಾಲಿಗೆ ಮಹತ್ವ ಯಾಕೆ? – ಲಕ್ನೋ ಮಾಲೀಕರ ವಿರುದ್ಧ ಕನ್ನಡಿಗನ ಹಠ?

ಐಪಿಲ್ ಸೀಸನ್ 17 ಟೂರ್ನಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಪ್ಲೇಆಫ್​ಗೇರಲು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಒಂದೊಂದು ಪಂದ್ಯಗಳ ರಿಸಲ್ಟ್ ಪಾಯಿಂಟ್ಸ್ ಟೇಬಲ್​ನಲ್ಲಿ ಬಾರೀ ಬದಲಾವಣೆಗಳನ್ನ ಮಾಡ್ತಿದೆ. ಹೀಗೆ ಪ್ಲೇಆಫ್ ರೇಸ್​ನಲ್ಲಿರೋ ಎಲ್​ಎಸ್​ಜಿ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ತಂಡದ ಕ್ಯಾಪ್ಟನ್ ಆಗಿರುವ ಕನ್ನಡಿಗ ಕೆ.ಎಲ್ ರಾಹುಲ್​ಗೆ ತನ್ನನ್ನ ತಾನು ಪ್ರೂವ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಷ್ಟಕ್ಕೂ ಈ ಪಂದ್ಯ ಕೆ.ಎಲ್ ರಾಹುಲ್​ಗೆ ಯಾಕೆ ಇಂಪಾರ್ಟೆಂಟ್? ನಾಯಕತ್ವ ಬದಲಾವಣೆಯಾಗುತ್ತಾ..? ಈ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಕನ್ನಡಿಗರ ಬೆನ್ನಿಗೆ ನಿಂತ ಸ್ಟಾರ್ಸ್! – ಗೋಯೆಂಕಾ ವಿರುದ್ಧ ಆಕ್ರೋಶ!  

ಅಂತಿಮ ಘಟ್ಟದತ್ತ ಸಾಗುತ್ತಿರೋ ಐಪಿಎಲ್ ರೇಸ್​ ಭಾರೀ ರೋಚಕತೆಯಿಂದ ಕೂಡಿದೆ. ಮಂಗಳವಾರ ಲಕ್ನೋ ಸೂಪರ್ ಜೇಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸದ್ಯ ಈ ಎರಡೂ ಟೀಮ್​ಗಳು ಪ್ಲೇಆಫ್ ರೇಸ್​ನಲ್ಲಿದ್ದು ಉಭಯ ತಂಡಗಳೂ ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಲಕ್ನೋ ತಂಡ ಈವರೆಗೂ 12 ಪಂದ್ಯಗಳನ್ನ ಆಡಿದ್ದು 6ರಲ್ಲಿ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ 6 ಪಂದ್ಯಗಳನ್ನ ಗೆದ್ದಿದ್ದು 6ನೇ ಸ್ಥಾನದಲ್ಲಿದೆ. ಹೀಗಾಗಿ ಟಾಪ್ 4 ಪ್ಲೇಸ್​ಗೆ ಹೋಗ್ಬೇಕು ಅಂದ್ರೆ ಮಂಗಳವಾರದ ಗೆಲುವು ಎರಡೂ ತಂಡಗಳಿಗೂ ತುಂಬಾನೇ ಮುಖ್ಯವಾಗಲಿದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಕೆ.ಎಲ್ ರಾಹುಲ್​ಗೆ ಇದು ಅಸ್ತಿತ್ವದ ಪ್ರಶ್ನೆ. ಆದ ಅವಮಾನಕ್ಕೆ ಉತ್ತರ ನೀಡೋ ಪಂದ್ಯ.

ಡಿಸಿ ವಿರುದ್ಧದ ಪಂದ್ಯ ಎಲ್​ಎಸ್​ಜಿ ತಂಡದ ನಾಯಕನಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಡು ಆರ್ ಡೈ ಪಂದ್ಯ. ತಂಡವನ್ನ ಗೆಲ್ಲಿಸೋದ್ರ ಜೊತೆಗೆ ತನ್ನ ಸಾಮರ್ಥ್ಯವನ್ನ ಪ್ರೂವ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಳೆದ ಮ್ಯಾಚ್​ನಲ್ಲಿ ಹೈದ್ರಾಬಾದ್ ವಿರುದ್ಧದ ಸೋಲಿನ ಬಳಿಕ ಫ್ರಾಂಚೈಸಿ ಮಾಲೀಕ ನಡೆಸಿಕೊಂಡ ರೀತಿ ತೀರಾ ಹೀನಾಯವಾಗಿತ್ತು. ಎಲ್​ಎಸ್​ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕೆ.ಎಲ್ ರಾಹುಲ್​ರನ್ನ ಅವಮಾನಿಸಿದ್ದರು. ಗ್ರೌಂಡ್​ನಲ್ಲೇ ಸಾರ್ವಜನಿಕವಾಗಿ ಕೈ ತೋರಿಸುತ್ತಾ ಬೈಯುತ್ತಾ ಕೂಗಾಡಿದ್ದರು. ರಾಹುಲ್ ಸಮಜಾಯಿಷಿಯನ್ನೂ ಕೇಳದೆ ದರ್ಪ ತೋರಿದ್ದರು. ಆದ್ರೂ ತಂಡ ಸೋತ ಬೇಸರದಲ್ಲಿದ್ದ ರಾಹುಲ್ ತಾಳ್ಮೆಯಿಂದಲೇ ವರ್ತಿಸಿದ್ರು. ಬಳಿಕ ಸಂಜೀವ್ ಗೋಯೆಂಕಾ ಅಹಂಕಾರದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಘಟನೆ ನಡೆದ ಬಳಿಕ ಎಲ್​ಎಸ್​ಜಿಗೆ ಮಂಗಳವಾರ ಡಿಸಿ ವಿರುದ್ಧ ಮೊದಲನೇ ಪಂದ್ಯವಾಗಿದ್ದು, ರಾಹುಲ್​ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಟೀಕಿಸಿದವ್ರಿಗೆ ಪ್ರತ್ಯುತ್ತರ ನೀಡಬೇಕಿದೆ. ಒಂದು ಪಂದ್ಯ ಸೋತಿರಬಹುದು ಆದ್ರೆ ಮತ್ತೊಮ್ಮೆ ಸಿಡಿದೇಳೋ ತಾಕತ್ತಿನ್ನೂ ತನ್ನಲ್ಲಿದೆ ಅನ್ನೋದನ್ನ ತೋರಿಸಿಕೊಡಬೇಕಿದೆ. ಹೀಗಾಗಿ ಮಂಗಳವಾರದ ಪಂದ್ಯ ತಂಡ ಗೆಲ್ಲೋದಕ್ಕಿಂತ ಹೆಚ್ಚಾಗಿ ರಾಹುಲ್​ರ ಸೋಲು ಗೆಲುವನ್ನ ನಿರ್ಧರಿಸಲಿದೆ.

ಎಲ್​ಎಸ್​ಜಿಯಲ್ಲಿ ಗೋಯೆಂಕಾ ವರ್ತನೆ ಬಳಿಕ ತುಂಬಾ ಚರ್ಚೆಯಾದ ವಿಚಾರ ಅಂದ್ರೆ ಅದು ಕ್ಯಾಪ್ಟನ್ಸಿ. 2025ರಲ್ಲಿ ನಡೆಯಲಿರುವ ಮೆಗಾ ಹರಾಜಿಗೂ ಮೊದ್ಲೇ ಕೆ.ಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲು  ಎಲ್​ಎಸ್​ಜಿ ನಿರ್ಧರಿಸಿದೆ. ಅಲ್ಲದೆ, ಎಲ್​ಎಸ್​ಜಿ ತಂಡದ ಉಳಿದಿರುವ ಎರಡು ಪಂದ್ಯಗಳಿಗೆ ರಾಹುಲ್ ನಾಯಕತ್ವದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಮೇ 14ರಂದು ಡೆಲ್ಲಿ ವಿರುದ್ಧ, ಮೇ 17ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಎರಡು ಕೊನೆಯ ಪಂದ್ಯಗಳನ್ನಾಡಲಿದೆ. ಈ ಎರಡೂ ಪಂದ್ಯಗಳಿಗೆ ಎಲ್​ಎಸ್​ಜಿ ನೂತನ ಕ್ಯಾಪ್ಟನ್​ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದ್ರೆ ನಾಯಕತ್ವದ ಬಗ್ಗೆ ತಲೆಕೆಡಿಸಿಕೊಳ್ಳದ ರಾಹುಲ್ ಉಳಿದ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಕಡೆಗೆ ಮಾತ್ರ ಗಮನ ಕೊಡಲಿದ್ದಾರೆ.

 

Sulekha